Chandan Shetty: ಅಣ್ಣಮ್ಮ ದೇವಿಯ ಮುಂದೆ ಕಣ್ಣೀರಿಟ್ಟ ಚಂದನ್ ಶೆಟ್ಟಿ: ಏನಾಯ್ತು?
ಕನ್ನಡದ ರ‍್ಯಾಪರ್ ಚಂದನ್ ಶೆಟ್ಟಿ ಎಲ್ಲಾರಿಗೂ ಗೊತ್ತೆ ಇದೆ. ಬಿಗ್‌ಬಾಸ್ ರಿಯಾಲಿಟಿ ಶೋ ಮೂಲಕ ಮನೆಮಾತಾಗಿದ್ದ ಚಂದನ್ ಶೆಟ್ಟಿ ಅವರು ನಿವೇದಿತಾ ಗೌಡ ಜೊತೆ ಪ್ರೀತಿ ಮಾಡಿ ಮದುವೆಯಾಗುವ ಮೂಲಕ ಅಭಿಮಾನಿಗಳಿಗೆ ದೊಡ್ಡ ಸರ್‌ಪ್ರೈಸ್ ನೀಡಿದ್ದರು. ಕೆಲ ವರ್ಷಗಳ ಸುಂದರವಾಗಿದ್ದ ಈ ಮುಂದಾದ ಜೋಡಿ ಪರಸ್ಪರ ಒಪ್ಪಿಗೆಯ ಮೇಲೆಗೆ ಡಿವೋರ್ಸ್ ಘೋಷಿಸಿ ಎಲ್ಲರಿಗೂ ಶಾಕ್ ಕೊಟ್ಟಿದ್ದರು.
ಬಿಗ್ ಬಾಸ್ ಮೂಲಕ ಸಾಕಷ್ಟು ಅಭಿಮಾನಿಗಳನ್ನ ಗಳಿಸಿದ್ದ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಅವರು ಕಾರಣಾಂತರಗಳಿಂದ ಹಾಗೂ ಇಬ್ಬರ ಸಂಬಂಧ ಮುರಿದುಬಿದ್ದಿತ್ತು. ಡಿವೋರ್ಸ್ ವಿಚಾರವಾಗಿ ಹಲವು ವದಂತಿ ಕೂಡ ಹಬ್ಬಿತ್ತು. ಡಿವೋರ್ಸ್ ಆದರೂ ಸಹ ಒಬ್ಬರನ್ನ ಒಬ್ಬರು ದೂರದೆ. ಒಳ್ಳೆಯ ಸ್ನೇಹಿತರಂತೆ ಇದ್ದಾರೆ. ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಅವರು ಮೂರನೆಯವರ ಎಂಟ್ರಿಯಿಂದ ಡಿವೋರ್ಸ್ ನೀಡುತ್ತಿದ್ದಾರೆ. ಹೀಗೆ ಹಲವು ವದಂತಿಗಳು ಈ ಇಬ್ಬರ ಬಗ್ಗೆ ಕೇಳಿ ಬಂದಿದ್ದು, ಇದೀಗ ಚಂದನ್ ಶೆಟ್ಟಿ ಅವರು ಅಣ್ಣಮ್ಮ ದೇವಿಯ ಮುಂದೆ ನಿಂತು ಕಣ್ಣೀರಿದ್ದಾರೆ.

ನಾವು ಡಿವೋರ್ಸ್ ಪಡೆದಿರುವ ವಿಚಾರ ನಮ್ಮ ವೈಯಕ್ತಿಕ. ನನ್ನ ನಿರ್ಧಾರದ ಬಗ್ಗೆ ಸ್ಪಷ್ಟವಾಗಿದ್ದೇನೆ. ಏಕೆಂದರೆ ಇದು ಮಕ್ಕಳ ಆಟ ಅಲ್ಲ, ಇಬ್ಬರೂ ಯೋಚಿಸಿಯೇ ಡಿವೋರ್ಸ್ ತಗೊಂಡಿದ್ದೇವೆ. ನಾನು ಮತ್ತೆ ನಿವೇದಿತಾ ಮತ್ತೆ ಒಂದಾಗಲ್ಲ. ನಮ್ಮ ನಿರ್ಧಾರ ಸರಿಯಿದೆ. ಸೋಶಿಯಲ್ ಮೀಡಿಯಾದಲ್ಲಿ ನಿವೇದಿತಾಗೆ ಕೆಟ್ಟ ಕಾಮೆಂಟ್ ಮಾಡಬೇಡಿ, ನಿಂದಿಸಬೇಡಿ ಎಂದು ಚಂದನ್ ಕೇಳಿಕೊಂಡಿದ್ದರು. ದಿಢೀರ್ ಇಬ್ಬರೂ ಡಿವೋರ್ಸ್ ನಿರ್ಧಾರ ಮಾಡಿದ್ದು ಅಭಿಮಾನಿಗಳಿಗೆ ಅರಗಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಎಲ್ಲವೂ ಚೆನ್ನಾಗೇ ಇತ್ತು, ಡಿವೋರ್ಸ್ ಯಾಕೆ? ಎಂಬ ಪ್ರಶ್ನೆ ಮುಂದಿಟ್ಟಗ. ಹೊಂದಾಣಿಕೆ ಸಮಸ್ಯೆಯಿಂದ ಹಾಗೂ ಇಬ್ಬರ ಕೆರಿಯರ್ ದೃಷ್ಟಿಯಿಂದ ಪರಸ್ಪರ ಡಿವೋರ್ಸ್ ಪಡೆಯುತ್ತಿರುವುದಾಗಿ ಇಬ್ಬರೂ ಮಾಧ್ಯಮಗಳ ಮುಂದೆ ಬಂದು ಸ್ಪಷ್ಟನೆ ನೀಡಿದ್ದರು. ಇದೀಗ ಚಂದನ್ ಶೆಟ್ಟಿ ಅವರು ಹೊಸ ಜೀವನ ಶುರು ಮಾಡಿದ್ದೇನೆ ಎನ್ನುವ ಮೂಲಕ ಮತ್ತೊಂದು ಮಹತ್ವದ ವಿಚಾರವನ್ನು ಬಹಿರಂಗಪಡಿಸಿದ್ದಾರೆ.
ಸದ್ಯ ಹಲವು ಕನ್ನಡದ ರ‍್ಯಾಪರ್ ಸಾಂಗ್ ಗಳಿಂದ ಹೆಚ್ಚು ಹೆಸರುವಾಸಿಯಾಗಿರುವ ಚಂದನ್ ಶೆಟ್ಟಿ ಅವರು ಸೂತ್ರಧಾರಿ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ನಾಯಕನಾಗಿ ಎಂಟ್ರಿ ಕೊಟ್ಟಿದ್ದಾರೆ. ನಾನು ನಟನಾಗಬೇಕು ಎನ್ನುವುದು ನಮ್ಮ ತಂದೆಯ ಕನಸು. ಚಿಕ್ಕಂದಿನಿಂದಲೂ ನೀನು ಸಿನಿಮಾ ಹೀರೋ ಆಗಬೇಕು ಅಂತಿದ್ರು. ಆದರೆ ನಾನು ಕನ್ನಡಿ ಮುಂದೆ ನಿಂತು ನೋಡಿದ್ರೆ ನಾನು ಯಾವಾಗ ಹೀರೋ ಆಗ್ತೀನಿ ಅಂತ ನಗು ಬರುತ್ತೆ. ಆದರೆ ನನ್ನ ತಂದೆ ಆವತ್ತು ಹೇಳಿದ್ದ ಒಂದು ಮಾತು ಇದೇ ಮೇ 9ರಂದು ನಿಜ ಆಗುತ್ತಿದೆ. ನನ್ನ ತಂದೆಯ ಕನಸು ಈಡೇರುತ್ತಿದೆ ಎಂದು ಚಂದನ್ ಸಂತಸ ಹಂಚಿಕೊಂಡಿದ್ದಾರೆ.
ಇಂದು(ಮೇ 09) ಸೂತ್ರಧಾರಿ ಸಿನಿಮಾ ರಿಲೀಸ್ ಆಗಿದ್ದು, ಸೂತ್ರಧಾರಿ ಸಿನಿಮಾ ಮೂಲಕ ಚಂದನ್ ಶೆಟ್ಟಿ ಅವರು ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ನಾನು ಅಂಡರ್‌ಕವರ್ ಪೊಲೀಸ್ ಪಾತ್ರ ಮಾಡಿದ್ದೀನಿ. ಈ ಸಿನಿಮಾ ಮೂಲಕ ನಾನು ಹೊಸ ಜೀವನ ಶುರು ಮಾಡಿದ್ದೇನೆ. ಈ ಸಿನಿಮಾ ಒಪ್ಪಿಕೊಳ್ಳಲು ನಿರ್ಮಾಪಕ ನವರಸನ್ ಅವರೇ ಕಾರಣ. ದಯವಿಟ್ಟು ಎಲ್ಲರೂ ಈ ಸಿನಿಮಾಗೆ ಸಪೋರ್ಟ್ ಮಾಡಿ ಎಂದು ಚಂದನ್ ಮನವಿ ಮಾಡಿದ್ದಾರೆ. ಇಂದು ಸೂತ್ರಧಾರಿ ಸಿನಿಮಾ ಬಿಡುಗಡೆಯಾಗ ಹಿನ್ನಲೆಯಲ್ಲಿ ಅಣ್ಣಮ್ಮ ದೇವಿಗೆ ನಟ ಚಂದನ್ ಶೆಟ್ಟಿ ಅವರು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಅಣ್ಣಮ್ಮ ದೇವಿಯ ಮುಂದೆ ಕೈ ಮುಗಿದು ನಿಂತು ಕಣ್ಣೀರು ಹಾಕಿದ್ದಾರೆ.












Click it and Unblock the Notifications