Sudeep Bigg Boss: 'ಬಿಗ್‌ಬಾಸ್‌ ಸೀಸನ್ 12ರಲ್ಲೂ ಸುದೀಪ್ ಇರ್ತಾರೆ' ಇದು ನನ್ನ ನಂಬಿಕೆ...

ಬಿಗ್‌ಬಾಸ್‌ ಶೋಗೆ ಕಿಚ್ಚ ಸುದೀಪ್ ವಿದಾಯ ಹೇಳುವ ವಿಚಾರ ಲಕ್ಷಾಂತರ ಬಿಗ್‌ಬಾಸ್‌ ಕನ್ನಡ ಅಭಿಮಾನಿಗಳಿಗೆ ಬೇಸರ ತಂದಿದೆ. ಈಗಾಗಲೇ ಬಿಗ್‌ಬಾಸ್ ಕನ್ನಡ ಸೀಸನ್ 11 ಆರಂಭವಾಗಿ ಯಶಸ್ವಿಯಾಗಿ ಮುಂದುವರೆದ ವೇಳೆ ಕಿಚ್ಚ ಸುದೀಪ್ ಅವರ ಟ್ವೀಟ್ ಸಂಚಲನವನ್ನೇ ಸೃಷ್ಟಿ ಮಾಡಿದೆ. ಈ ಬಗ್ಗೆ ಬಿಗ್‌ಬಾಸ್‌ ಹಳೆಯ ಸ್ಪರ್ಧಿಗಳು ಪ್ರತಿಕ್ರಿಯೆ ನೀಡಿದ್ದಾರೆ. ಈ ಪೈಕಿ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಕೂಡ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಕಿಚ್ಚಾ ಸುದೀಪ್ ಬಿಗ್‌ಬಾಸ್‌ ಶೋಗೆ ಗುಡ್‌ಬೈ ಹೇಳುತ್ತಿರುವ ಬಗ್ಗೆ ಮಾತನಾಡಿದ ಪ್ರಶಾಂತ ಸಂಬರಗಿ ಅವರು, 'ಕಿಚ್ಚ ಸುದೀಪ್ ಇಲ್ದೆ ಬಿಗ್‌ಬಾಸ್‌ ಅನ್ನು ಊಹೆ ಮಾಡಲು ಆಗಲ್ಲ. ಸುದೀಪ್ ಇಲ್ಲದ ಬಿಗ್‌ಬಾಸ್‌ ಮಹಾಭಾರತವನ್ನು ಶ್ರೀಕೃಷ್ಣನ ಕಥೆ ಇಲ್ದೆ ಬರೆದಂತೆ ಆಗುತ್ತದೆ. ಸುದೀಪ್ ಅವರು ಬಿಗ್‌ಬಾಸ್‌ಗೆ ಆಧಾರಸ್ತಂಭ ಇದ್ದಂತೆ. ಹನ್ನೊಂದು ವರ್ಷ ಯಶಸ್ವಿಯಾಗಿ ಬಿಗ್‌ಬಾಸ್‌ ಶೋಗೆ ನಿರೂಪಣೆ ಮಾಡಿದ್ದಾರೆ. ಮುಂದೆ ಕೂಡ ನಿರೂಪಣೆ ಮಾಡುತ್ತಾರೆ ಎನ್ನುವ ನಂಬಿಕೆ ನನಗಿದೆ' ಎಂದು ಬಿಗ್‌ಬಾಸ್ ಹಳೆಯ ಸ್ಪರ್ಧಿ ಪ್ರಶಾಂತ್ ಸಂಬರ್ಗಿ ಹೇಳಿದ್ದಾರೆ.

Kannada former bigg boss contestent Prashanth Sambargi revels reason behing kiccha sudeep decision

ಕನ್ನಡ ಬಿಗ್‌ಬಾಸ್‌ ಶೋನಲ್ಲಿ ಸುದೀಪ್ ಸಾಧನೆ

'ತೆಲುಗು, ತಮಿಳು, ಮಳಿಯಾಳಂ ಬಿಗ್‌ಬಾಸ್‌ನಲ್ಲಿ ನಿರೂಪಕರು ಬದಲಾಗಿದ್ದಾರೆ. ಹಿಂದಿ ಓಟಿಟಿಯಲ್ಲೂ ಬದಲಿ ನಿರೂಪಕರು ಬಂದಿರುವುದು ಇದೆ. ಆದರೆ ಕನ್ನಡ ಬಿಗ್‌ಬಾಸ್‌ ಶೋನಲ್ಲಿ ಕನ್ನಡದ ನಿರೂಪಕ ಹನ್ನೊಂದು ವರ್ಷ ಹನ್ನೊಂದು ಶೋಗಳನ್ನು ಯಥಾವತ್ತಾಗಿ, ಒಂದೇ ರೀತಿ ಒಂದೇ ದಾಟಿಯಲ್ಲಿ ಸುಮಾರು 220ರಿಂದ 250 ಸ್ಪರ್ಧಿಗಳ ವ್ಯಕ್ತಿತ್ವಗಳನ್ನು ನೋಡಿ, ಅವರ ಕುಂದು ಕೊರತೆ, ಅಳು ನಗು ಎಲ್ಲವನ್ನು ಅರ್ಥಮಾಡಿಕೊಂಡು ಯಶಸ್ವಿಯಾಗಿ ಶೋ ನಡೆಸಿದ್ದಾರೆ. ಆ ಕೀರ್ತಿ ಸುದೀಪ್‌ ಅವರಿಗೆ ಸಲ್ಲುತ್ತದೆ. ಸುದೀಪ್ ಅವರು ಇಲ್ದೆ ಬಿಗ್‌ಬಾಸ್‌ ಅನ್ನು ನಾವು ಊಹೆ ಮಾಡಲು ಆಗಲ್ಲ' ಎಂದು ಪ್ರಶಾಂತ್ ಹೇಳಿದ್ದಾರೆ.

ಸುದೀಪ್‌ ಬಿಗ್‌ಬಾಸ್‌ಗೆ ವಿದಾಯ ಹೇಳಲು ಬಲವಾದ ಕಾರಣವಿದೆ...

'ನಾನು ಬಿಗ್‌ಬಾಸ್‌ ನಿರೂಪಣೆ ಮಾಡಲ್ಲ ಅನ್ನೋದಕ್ಕೆ ಒಂದು ಗಂಭೀರವಾದ ಕಾರಣ ಇರಬೇಕು. ಅವರನ್ನು ನೋಡಿಕೊಳ್ಳುವಂತಹ ರೀತಿಯಲ್ಲಿ ಎಲ್ಲೋ ತಪ್ಪಾಗಿರಬಹುದು ಅಂತ ನನಗನಿಸುತ್ತದೆ. ಯಾಕೆಂದರೆ ಸುದೀಪ್ ಸರ್ ಹೀಗೆ ಹೇಳಲು ಕಾರಣ ಒಂದು ಆರೋಗ್ಯ ಇರಬೇಕು, ಅಥವಾ ರಿಪಿಡೆಡ್ ವರ್ಕ್ ಅಂತ ಅವರಿಗೆ ಬೇಸರ ಆಗಿರಬಹುದು ಅಥವಾ ಅವರನ್ನು ನೋಡಿಕೊಳ್ಳುವ ರೀತಿಯಲ್ಲಿ ತಪ್ಪಾಗಿರಬಹುದು ಅಂತ ನಾನು ಊಹಿಸಬಹುದು' ಎಂದು ಪ್ರಶಾಂತ್ ಹೇಳಿದ್ದಾರೆ.

'ಸುದೀಪ್ ಈ ನಿರ್ಧಾರಕ್ಕೆ ಭಾಷೆ ಕಾರಣವಲ್ಲ'

'ಮತ್ತೊಂದು ಕಡೆ ಬಿಗ್‌ಬಾಸ್ ಶೋ ಬಗ್ಗೆ ಚರ್ಚೆಯಲ್ಲಿ ಭಿನ್ನಾಭಿಪ್ರಾಯ ಇರುವ ಸಾಧ್ಯತೆ ಕೂಡ ಇದೆ. ಕನ್ನಡಿಗನಿಗೆ ಅವಮಾನ ಅನ್ನೋ ಮಾತು ನಾನು ನಂಬಲ್ಲ. ಯಾಕೆಂದರೆ ಕರ್ನಾಟಕದಲ್ಲಿ ಕನ್ನಡಿಗರಿಗೆ ಏನು ಬೇಕು ಎನ್ನುವುದು ಎಲ್ಲಾ ಭಾಷೆಯ ನಿರ್ಮಾಪಕರಿಗೂ ಗೊತ್ತಿದೆ. ಹೀಗಾಗಿ ಮಾಣಿಕ್ಯವನ್ನು ಕೈಬಿಡಲು ಸಾಧ್ಯವಿಲ್ಲ. ಅವರೇ ಮತ್ತೆ ಹೊಸ ಅವತಾರದಲ್ಲಿ ಬರ್ತಾರೆ ಅನ್ನೋ ನಂಬಿಕೆ ಇದೆ. ಇಲ್ಲಿ ಭಾಷೆ ಅನ್ನೋದು ಬರೋದೇ ಇಲ್ಲ' ಎಂದಿದ್ದಾರೆ.

ಸುದೀಪ್‌ ಬಿಗ್‌ಬಾಸ್‌ಗೆ ಗುಡ್‌ಬೈ ಹೇಳಲು ದುಡ್ಡು ಕಾರಣವಲ್ಲ...

'ದುಡ್ಡು ಇದಕ್ಕೆ ಕಾರಣ ಅಂತ ನಾನು ಹೇಳಲ್ಲ. ಯಾಕೆಂದರೆ ಸುದೀಪ್ ಸರ್ ನಾನು ನೋಡಿದಂತೆ ಒಬ್ಬ ಸೂಕ್ಷ್ಮವಾದ ವ್ಯಕ್ತಿ. ಸುದೀಪ್ ಜೊತೆ ಸರಿಯಾಗಿ ಮಾತನಾಡಿದರೆ ತುಂಬಾ ದಿನ ಅವರೊಟ್ಟಿಗೆ ಆತ್ಮೀಯರಾಗಿ ಇರಬಹುದು. ಮಾತು ಕೂಡ ತೂಕವಾಗಿ ಮಾತನಾಡಿದರೆ ಮಾತ್ರ ಅವರೊಂದಿಗೆ ಬದುಕಬಹುದು. ಹೀಗಾಗಿ ನನಗೆ ಬಿಗ್‌ಬಾಸ್‌ ಮನೆಯಲ್ಲಿ ಅವರಿಗೆ ನೀಡುವ ಗೌರವದಲ್ಲಿ ಏನೋ ಕೊರತೆ ಆಗಿದೆ ಅಂತ ಅನಿಸುತ್ತದೆ. ಅವರಿಗೆ ಪ್ರಾಮಾಣಿಕವಾಗಿ ಇದ್ದವರಿಗೆ ಮಾತ್ರ ಹೆಚ್ಚು ಹತ್ತಿರದಲ್ಲಿ ಇರ್ತಾರೆ. ಇಲ್ಲದೇ ಇದ್ದರೆ ಅವರನ್ನು ಬೇಗ ಕಳೆದುಕೊಳ್ಳಬೇಕಾಗುತ್ತದೆ' ಅಂತ ಸುದೀಪ್ ಅವರನ್ನು ಹತ್ತಿರದಿಂದ ಬಲ್ಲ ಪ್ರಶಾಂತ್ ಅವರು ಹೇಳಿದ್ದಾರೆ.

ಹತ್ತು ಸೀಸನ್ ತುಂಬಾ ಚೆನ್ನಾಗಿ ನಡೆದಿರಬೇಕಾದರೆ. ಈಗ ಆಗ್ತಾಯಿಲ್ಲ ಅಂದರೆ ಅದಕ್ಕೆ ಇದೇ ಕಾರಣ ಹಲವಾರು ಇರಬಹುದು. ನನಗೆ ಅವರನ್ನು ನಡೆಸಿಕೊಳ್ಳುವ ರೀತಿಯಲ್ಲಿ ತಪ್ಪಾಗಿರಬಹುದು ಅನಿಸುತ್ತದೆ. ಇದರಿಂದ ಬಿಗ್‌ಬಾಸ್‌ ಅನ್ನು ಬಿಡಲು ಅವರು ನಿರ್ಧರಿಸಬಹುದು. ಇದಕ್ಕೆ ಪರಿಹಾರ ಪ್ರೇಕ್ಷಕರು, ಅಭಿಮಾನಿಗಳು, ಫಿಲಂ ಇಂಡಸ್ಟ್ರಿ ಬಂದು ಇದನ್ನು ಸರಿ ಮಾಡ್ಬೇಕು. ಆಗ ಸುದೀಪ್ ಮತ್ತೆ ಬಿಗ್‌ಬಾಸ್‌ ಶೋಗೆ ನಿರೂಪಕರಾಗಿ ಬರ್ತಾರೆ. ಅವರು ಮತ್ತೆ ಬರುತ್ತಾರೆ ಎನ್ನುವ ನಂಬಿಕೆ ಕೂಡ ನನಗಿದೆ' ಎಂದು ಪ್ರಶಾಂತ್ ಸಂಬರಗಿ ಮನದಾಳದ ಮಾತು ಹಂಚಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+