Actress Lakshmi Devi: ಹಿರಿಯ ನಟಿ ಎಂ.ಎನ್. ಲಕ್ಷ್ಮಿ ದೇವಿ ಆರೋಗ್ಯವಾಗಿದ್ದಾರೆ: ಮೊಮ್ಮಗಳು ದೀಪಿಕಾ
ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಏಳು ದಶಕಗಳ ಕಾಲ ಸೇವೆ ಸಲ್ಲಿಸಿದ್ದ, ಅನೇಕ ಸಿನಿಮಾಗಳಲ್ಲಿ ನಟಿಸಿದ್ದ ಹಿರಿಯ ನಟಿ, ರಾಜ್ಯ ಪ್ರಶಸ್ತಿ ಪುರಸ್ಕೃತೆ ಲಕ್ಷ್ಮೀ ದೇವಿ (92) ಅವರು ಮಂಗಳವಾರ ನಿಧನರಾಗಿದ್ದಾರೆ ಎಂಬ ವದಂತಿ ಹರಿದಾಡುತ್ತಿದೆ.ಇದಕ್ಕೆ ಸ್ಪಷ್ಟನೆ ನೀಡಿರುವ ಲಕ್ಷ್ಮೀ ದೇವಿ ಅವರ ಮೊಮ್ಮಗಳು ದೀಪಿಕಾ ಅಜ್ಜಿ ಆರೋಗ್ಯವಾಗಿದ್ದಾರೆ. ವದಂತಿ ನಂಬಬೇಡಿ ಎಂದು ಅವರ ಕುಟುಂಬ ಸದಸ್ಯರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಬ್ಲ್ಯಾಕ್ ಆಂಡ್ ವೈಟ್ ಸಿನಿಮಾಗಳ ಕಾಲದಿಂದಲೂ ಚಿತ್ರರಂಗದಲ್ಲಿದ್ದು, ಈವರೆಗೆ ಅವರು ಸುಮಾರು 1000ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕೋಲಾರದ ಚಿಂತಾಮಣಿ ಮೂಲದವರಾದ ಲಕ್ಷ್ಮೀ ದೇವಿ ಅವರು, ಕಳ್ಳರ ಕಳ್ಳ ಸಿನಿಮಾದಲ್ಲಿನ ನಟನೆಗಾಗಿ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ. ಶ್ರೀನಿವಾಸ ಕಲ್ಯಾಣ ಚಿತ್ರದ ಮೂಲಕ ಅವರು ಅವರು ಬಣ್ಣದ ಲೋಕಕ್ಕೆ ಕಾಲಿಟ್ಟರು. ಸುಮಾರು 70 ವರ್ಷಗಳಿಂದಲೂ ಅವರು ಚಿತ್ರರಂಗದಲ್ಲಿದ್ದರು. ಕೆಲವು ವರ್ಷಗಳ ಹಿಂದೆ ತೆರೆ ಕಂಡಿದ್ದ ನಟ ಯಶ್ ಅವರ 'ರಾಜಾಹುಲಿ' ಚಿತ್ರದಲ್ಲೂ ಅವರು ನಾಯಕನಟನ ಅಜ್ಜಿಯ ಪಾತ್ರದಲ್ಲಿ ನಟಿಸಿದ್ದು, ಅವರ ನಟನೆ ಎಲ್ಲರ ಗಮನ ಸೆಳೆದಿತ್ತು.

ಸಹನಟಿಯರಾಗಿ, ಪೋಷಕ ಪಾತ್ರ, ಅಜ್ಜಿ ಪಾತ್ರದಲ್ಲೂ ಅವರು ಮಿಂಚಿದ್ದಾರೆ. ಬರುಬರುತ್ತಾ ಕಾಮಿಡಿ ಪಾತ್ರಗಳಲ್ಲೂ ನಟಿಸಿ ಸೈ ಅನ್ನಿಸಿಕೊಂಡವರು. ಲಕ್ಷ್ಮೀ ದೇವಿ ಅವರು ತಮ್ಮ ಜೀವನದ ಬಹುಪಾಲನ್ನು ಕನ್ನಡ ಚಿತ್ರರಂಗಕ್ಕೆ ಮೀಸಲಿಟ್ಟಿದ್ದರು. ಅವರು ಆರೋಗ್ಯದಲ್ಲಿ ಏರು ಪಾರಾಗಿದ್ದರಿಂದ ಈಹಿಂದೆಯು ಅವರ ಬಗ್ಗೆ ವದಂತಿ ಹಬ್ಬಿತ್ತು. ಇಂದು ಮಂಗಳವಾರ ಸಹ ಮತ್ತದೇ ಸುದ್ದಿಗಳು ಕೇಳಿ ಬರುತ್ತಿದ್ದಂತೆ ಅವರು ಕುಟುಂಬಸ್ಥರಲ್ಲಿ ಒಬ್ಬರಾದ ಮೊಮ್ಮಗಳು ದೀಪಿಕಾ ಅವರು ಸ್ಪಷ್ಟನೆ ನೀಡಿದ್ದಾರೆ. ಅಮ್ಮ ಆರೋಗ್ಯವಾಗಿದ್ದಾರೆ, ದಯವಿಟ್ಟು ಯಾರು ಸುಳ್ಳು ಸುದ್ದಿ ನಂಬದಂತೆ ಮನವಿ ಮಾಡಿದ್ದಾರೆ.
92 ವರ್ಷ ವಯಸ್ಸಿನವರಾದ ಲಕ್ಷ್ಮೀ ದೇವಿ ಅವರು ವಯೋ ಸಹಜ ಆರೋಗ್ಯ ಸಮಸ್ಯೆ ಇರುವುದು ನಿಜ. ಸದ್ಯ ಅವರು ಆರೋಗ್ಯವಾಗಿದ್ದಾರೆ ಎಂದು ಅವರು ಕುಟಂಬ ಮೂಲಗಳು ದೃಢಪಡಿಸಿವೆ.
ನಟಿ ಲಕ್ಷ್ಮಿ ದೇವಿ ನಿಧನ ಸುದ್ದಿ ಸುಳ್ಳು: ಮೊಮ್ಮಗಳು ಹೇಳಿದ್ದೇನು?
ಇಂದು ಬೆಳಗ್ಗೆಯಿಂದ ಸಾಮಾಜಿಕ ಜಾಲತಾಣದಲ್ಲಿ ಹಿರಿಯ ನಟಿ ಎಂ.ಎನ್. ಲಕ್ಷ್ಮೀದೇವಿ ಅವರು ನಿಧನವಾಗಿದ್ದಾರೆ ಎಂಬ ಸುಳ್ಳು ಸುದ್ದಿಗಳು ಹರಿದಾಡುತ್ತಿವೆ. ನಮ್ಮ ಮನೆಗೂ ಸಾಕಷ್ಟು ಕರೆಗಳು ಬರುತ್ತಿವೆ. ಸದ್ಯ ನಮ್ಮ ಅಜ್ಜಿ ಅವರು ಆರೋಗ್ಯವಾಗಿದ್ದಾರೆ ಎಂದು ಮೊಮ್ಮಗಳು ದೀಪಿಕಾ ಶರಣ್ ಸ್ಪಷ್ಟನೆ ನೀಡಿದ್ದಾರೆ. ಈ ಮೂಲಕ ಸುಳ್ಳು ಸುದ್ದಿಗಳಿಗೆ ಬ್ರೇಕ್ ಹಾಕಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಹರಡಿದ್ದ ಸುಳ್ಳು ವದಂತಿಗಳಿಗೆ ಬ್ರೇಕ್ ಹಾಕಬೇಕಿದೆ. "ದಯವಿಟ್ಟು ಸುಳ್ಳು ಸುದ್ದಿ ಹಬ್ಬಿಸಬೇಡಿ" ಎಂದು ಕುಟುಂಬದ ಪರವಾಗಿ ಮನವಿ ಮಾಡಿದರು.
ಹಿರಿಯ ನಟಿ ಎಂ.ಎನ್. ಲಕ್ಷ್ಮೀದೇವಿ ಕ್ಷೇಮ!: ನಿಧನದ ಸುದ್ದಿಗೆ ಬ್ರೇಕ್ ಹಾಕಿದ ಮೊಮ್ಮಗಳು ದೀಪಿಕಾ ಶರಣ್! #MNLakshmiDevi #KannadaCinema #ViralWatch #OIKannada #OIReels #SandalwoodLegend #FakeNewsAlert pic.twitter.com/946D8W8TX2
— oneindiakannada (@OneindiaKannada) September 8, 2026


Click it and Unblock the Notifications
