‘ಕಾಂತಾರ’ ರಿಷಬ್ ಶೆಟ್ಟಿ To ನಟ ಶಿವಣ್ಣ, ಕಿಚ್ಚ ಸುದೀಪ್, ಡಾಲಿ ಸಹಿತ ಹೊಸ ವರ್ಷಕ್ಕೆ ಹೀರೋಗಳ ಶುಭಾಶಯ ಹೇಗಿತ್ತು?
ಹೊಸ ವರ್ಷ ಬಂದೇ ಬಿಟ್ಟಿದೆ, 2024ಕ್ಕೆ ಹೆಜ್ಜೆ ಇಟ್ಟಾಗಿದೆ. ಇದೇ ಸಮಯದಲ್ಲಿ ಕಾಂತಾರ ನಟ ರಿಷಬ್ ಶೆಟ್ಟಿ ಅವರು ತಮ್ಮ ಫ್ಯಾನ್ಸ್‌ಗೆ ಹಾಗೂ ಕನ್ನಡಿಗರಿಗೆ ಹೊಸ ವರ್ಷದ ಶುಭಾಶಯ ಕೋರಿದ್ದಾರೆ. ಇದರ ಜೊತೆಗೆ ಹ್ಯಾಟ್ರಿಕ್ ಹೀರೋ ಶಿವಣ್ಣ, ಕಿಚ್ಚ ಸುದೀಪ್ ಅವರು ಹಾಗೂ ನಟ ರಾಕ್ಷಸ ಡಾಲಿ ಧನಂಜಯ್ ಕೂಡ ತಮ್ಮ ಅಭಿಮಾನಿಗಳಿಗೆ ಶುಭ ಕೋರಿದ್ದಾರೆ. ಅರೆರೆ ಹಾಗಾದರೆ ಯಾವ ಯಾವ ನಟರು ಏನಂದ್ರು? ಬನ್ನಿ ಪೂರ್ತಿ ಮಾಹಿತಿ ತಿಳಿಯೋಣ.
ಕನ್ನಡ ಸಿನಿಮಾ ರಂಗ 2023ರಲ್ಲಿ ಸಾಕಷ್ಟು ದೊಡ್ಡ ಬೆಳವಣಿಗೆ ಕಂಡಿದೆ. ಕಳೆದ ವರ್ಷದ ಸಮಯ ಸ್ಯಾಂಡಲ್‌ವುಡ್‌ಗೆ ದೊಡ್ಡ ಬಲವು ಸಿಕ್ಕಿದೆ. ಅದರಲ್ಲೂ ವರ್ಷದ ಕೊನೆಗೆ ಬಂದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 'ಕಾಟೇರ' ಸಿನಿಮಾ ಹೊಸ ದಾಖಲೆ ನಿರ್ಮಿಸುತ್ತಿದೆ. ಹೀಗಿದ್ದಾಗಲೇ ಹೊಸ ವರ್ಷಕ್ಕೆ ಕಾಲಿಟ್ಟಿದೆ ಕನ್ನಡ ಸಿನಿಮಾ ರಂಗ. ಇದೇ ಕಾರಣಕ್ಕೆ ಇದೀಗ ಕನ್ನಡ ಸಿನಿಮಾ ರಂಗದ ವಿವಿಧ ನಟರು ಅಂದ್ರೆ ಸಿನಿಮಾ ಹೀರೋಗಳು ಕನ್ನಡಿಗರಿಗೆ ವಿಶ್ ಮಾಡಿದ್ದಾರೆ. 'ಕಾಂತಾರ' ರಿಷಬ್ ಶೆಟ್ಟಿ To ನಟ ಶಿವಣ್ಣ, ಕಿಚ್ಚ ಸುದೀಪ್, ಡಾಲಿ ಸಹಿತ ಹೊಸ ವರ್ಷಕ್ಕೆ ಹೀರೋಗಳ ಶುಭಾಶಯ ಹೇಗಿತ್ತು? ಪೂರ್ಣ ಮಾಹಿತಿಗೆ ಮುಂದೆ ಓದಿ.

'ಕಾಂತಾರ' ರಿಷಬ್ ಶೆಟ್ಟರು ಏನಂದ್ರು?
ಕಾಂತಾರ ಸಿನಿಮಾ ಮೂಲಕ ಕಮಾಲ್ ಮಾಡಿರುವ ನಟ ಕಂ ನಿರ್ದೇಶಕರಾದ ರಿಷಬ್ ಶೆಟ್ಟರು, ಭರ್ಜರಿ ಕಂಬ್ಯಾಕ್ ಮಾಡಲು ಸಜ್ಜಾಗಿದ್ದಾರೆ. ಅದರಲ್ಲೂ ಕಾಂತಾರ ಸಿನಿಮಾ ಮುಂದುವರಿದ ಭಾಗ ಭಾರಿ ದೊಡ್ಡ ಮಟ್ಟದಲ್ಲಿ ರಿಲೀಸ್ ಆಗಲಿದೆ. ಇದಕ್ಕಾಗಿ ಎಲ್ಲಾ ರೀತಿಯ ಸಿದ್ಧತೆ ನಡೆಸಿದೆ ಸಿನಿಮಾ ತಂಡ. ಈ ಮೂಲಕ ಕನ್ನಡಿಗರ ಸಿನಿಮಾಗಾಗಿ ಇಡೀ ದೇಶ ಕಾಯುತ್ತಿದೆ. ಹೀಗಿದ್ದಾಗ ನಟ ರಿಷಬ್ ಶೆಟ್ಟಿ ಅವರು ತಮ್ಮ ಅಭಿಮಾನಿಗಳಿಗೆ ವಿಶೇಷವಾಗಿ ಹೊಸ ವರ್ಷದ ಶುಭಾಶಯ ಕೋರಿದ್ದಾರೆ. ಈ ಬಗ್ಗೆ ತಮ್ಮ ಕುಟುಂಬ ಸಮೇತ ಶುಭ ಕೋರಿದ್ದಾರೆ ರಿಷಬ್ ಶೆಟ್ಟರು.
ತಮ್ಮ ಮಗಳು ಹಾಗೂ ಮಗನ ಜೊತೆಗೆ ರಿಷಬ್ ದಂಪತಿ ಫೋಟೋ ಹಾಕಿ, ಇದೀಗ ವಿಷ್ ಮಾಡಿದ್ದಾರೆ. 'ಈ ವರ್ಷ ನಿಮ್ಮ ಜೀವನಕ್ಕೆ ಹೊಸ ಸಂತೋಷ, ಹೊಸ ಗುರಿಗಳು, ಹೊಸ ಸಾಧನೆಗಳು ಮತ್ತು ಅನೇಕ ಹೊಸ ಸ್ಫೂರ್ತಿಗಳನ್ನ ತರಲಿ. ನಿಮಗೆ ಈ ವರ್ಷ ಸಂತೋಷದಿಂದ ಕೂಡಿರಲೆಂದು ಹಾರೈಸುತ್ತೇವೆ. ಹೊಸ ವರ್ಷದ ಶುಭಾಶಯಗಳು.' ಎಂದಿದ್ದಾರೆ ಕಾಂತಾರ, ಕಿರಿಕ್ ಪಾರ್ಟಿ ಖ್ಯಾತಿಯ ರಿಷಬ್ ಶೆಟ್ಟಿ ಅವರು. ಈ ಮೂಲಕ ರಿಷಬ್ ಶೆಟ್ಟರ ಶುಭಾಶಯ ವೈರಲ್ ಆಗುತ್ತಿದೆ.
ಈ ವರ್ಷ ನಿಮ್ಮ ಜೀವನಕ್ಕೆ ಹೊಸ ಸಂತೋಷ, ಹೊಸ ಗುರಿಗಳು, ಹೊಸ ಸಾಧನೆಗಳು ಮತ್ತು ಅನೇಕ ಹೊಸ ಸ್ಫೂರ್ತಿಗಳನ್ನು ತರಲಿ.
— Rishab Shetty (@shetty_rishab) January 1, 2024
ನಿಮಗೆ ಈ ವರ್ಷ ಸಂತೋಷದಿಂದ ಕೂಡಿರಲೆಂದು ಹಾರೈಸುತ್ತೇವೆ.
ಹೊಸ ವರ್ಷದ ಶುಭಾಶಯಗಳು.
Wishing you a very HAPPY NEW YEAR.#HappyNewYear2024 #happynewyear pic.twitter.com/izcAdE0SYl
ನಟ ಶಿವಣ್ಣ ಹೇಳಿದ್ದು ಏನು?
ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರಿಗೆ ಕೂಡ 2023 ಸಿಕ್ಕಾಪಟ್ಟೆ ಸ್ಪೆಷಲ್ ಆಗಿತ್ತು. ಯಾಕಂದ್ರೆ ತಮಿಳು ಸೂಪರ್ ಸ್ಟಾರ್ ರಜನಿಕಾಂತ್‌ರ ಸಿನಿಮಾ ಸೇರಿ ಹಲವಾರು ಬಹುನೀರಿಕ್ಷಿತ ಸಿನಿಮಾಗಳನ್ನ ತೆರೆಗೆ ತಂದರು ನಟ ಶಿವಣ್ಣ, ಈಗ 2024ಕ್ಕೆ ಕಾಲಿಟ್ಟ ಖುಷಿಯಲ್ಲಿ ಯಂಗ್ & ಎನೆರ್ಜಿಟಿಕ್ ಶಿವಣ್ಣ ಏನ್ ಹೇಳಿದ್ದಾರೆ ಗೊತ್ತಾ? 'ಹೊಸ ವರ್ಷದ ಹಾರ್ದಿಕ ಶುಭಾಶಯ' ಎಂದು ತಮ್ಮ ಅಭಿಮಾನಿಗಳಿಗೆ ಶುಭ ಕೋರಿದ್ದಾರೆ. ಇದರ ಜೊತೆ 'ವೇದ' ಸಿನಿಮಾ ಬಗ್ಗೆ ಇರುವ ವಿಡಿಯೋ ಒಂದನ್ನ ಕೂಡ ಶೇರ್ ಮಾಡಿದ್ದಾರೆ.
ಹೊಸ ವರ್ಷದ ಹಾರ್ದಿಕ ಶುಭಾಶಯಗಳು #HappyNewYear pic.twitter.com/GCzXzVSUwU
— DrShivaRajkumar (@NimmaShivanna) January 1, 2024

ನಟ ಕಿಚ್ಚ ಸುದೀಪ್ ಹೇಳಿದ್ದೇನು?
ಮತ್ತೊಂದು ಕಡೆ ನಟ ಕಿಚ್ಚ ಸುದೀಪ್ ಅವರು ಕೂಡ ಅಭಿಮಾನಿಗಳಿಗೆ ವಿಶ್ ಮಾಡಿದ್ದಾರೆ. ನಟ ಸುದೀಪ್ ಅವರಿಗೆ ಕೂಡ 2023 ಸಿಕ್ಕಾಪಟ್ಟೆ ವಿಶೇಷವಾಗಿತ್ತು. ಈಗ 2024ರಲ್ಲಿ ಕೂಡ ಭಾರಿ ದೊಡ್ಡ ದೊಡ್ಡ ಪ್ರಾಜೆಕ್ಟ್‌ಗಳಿಗೆ ಕಿಚ್ಚ ಸುದೀಪ್ ಅವರು ಹೆಜ್ಜೆ ಇಟ್ಟಿದ್ದಾರೆ. ಹೀಗಾಗಿ ತಮ್ಮ ಅಭಿಮಾನಿಗಳಿಗೆ ಸ್ಪೆಷಲ್ ವಿಶ್ ಮಾಡಿದ್ದಾರೆ. ಕನ್ನಡದಲ್ಲೇ ಇರುವ ಟ್ವೀಟ್ ಇದೀಗ ಗಮನ ಸೆಳೆಯುತ್ತಿದೆ. 'ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ಉತ್ತಮ ಆರೋಗ್ಯ ಮತ್ತು ಸಂತೋಷವನ್ನು ಹಾರೈಸುತ್ತೇನೆ. Happy 2024🤗♥️' ಎಂದಿದ್ದಾರೆ ನಟ ಸುದೀಪ್ ಅವರು.
ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ಉತ್ತಮ ಆರೋಗ್ಯ ಮತ್ತು ಸಂತೋಷವನ್ನು ಹಾರೈಸುತ್ತೇನೆ.
— Kichcha Sudeepa (@KicchaSudeep) January 1, 2024
Happy 2024🤗♥️
ನಟ ರಾಕ್ಷಸನ ಅಬ್ಬರ ಜೋರು
ಕನ್ನಡ ಸಿನಿಮಾ ರಂಗದಲ್ಲಿ ನಟ ರಾಕ್ಷಸ ಎಂಬ ಬಿರುದು ಪಡೆದಿರುವ ಡಾಲಿ ಧನಂಜಯ್ ಸಾಲು ಸಾಲು ಹಿಟ್ ಸಿನಿಮಾ ನೀಡುತ್ತಿದ್ದಾರೆ. ನಟನೆಗೆ ಮಾತ್ರ ತಮ್ಮನ್ನು ತಾವು ಮೀಸಲಾಗಿ ಇರಿಸಿಕೊಳ್ಳದ ಈ ನಟ, ನಿರ್ಮಾಪಕನಾಗಿ ಕೂಡ ಮಿಂಚುತ್ತಿದ್ದಾರೆ. ಈಗ ಅಭಿಮಾನಿಗಳಿಗೆ ಹೊಸ ವರ್ಷದ ವಿಶ್ ಮಾಡಿದ್ದಾರೆ ನಟ ಡಾಲಿ ಧನಂಜಯ್. 'ಹೊಸ ವರ್ಷದ ಶುಭಾಶಯಗಳು❤️ Happy new year🎉🎉' ಎಂದು ಪೋಸ್ಟ್ ಹಾಕಿದ್ದಾರೆ ನಟ ಡಾಲಿ.
ಹೊಸ ವರ್ಷದ ಶುಭಾಶಯಗಳು❤️
— Dhananjaya (@Dhananjayaka) January 1, 2024
Happy new year🎉🎉 pic.twitter.com/OhHI4AFgRB
ಒಟ್ನಲ್ಲಿ ಕನ್ನಡ ಸಿನಿಮಾ ರಂಗ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿದೆ. ಅದೇ ರೀತಿ ನಟರು, ನಟಿಯರು ಕೂಡ ತಮ್ಮ ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗುತ್ತಿದ್ದಾರೆ. ಇದರ ಜೊತೆಗೇ ಹೊಸ ವರ್ಷ ಕೂಡ ಬಂದಿದ್ದು, ಕನ್ನಡ ಸಿನಿಮಾದ ತಾರೆಯರು ತಮ್ಮ ಅಭಿಮಾನಿಗಳನ್ನ ಮತ್ತಷ್ಟು ರಂಜಿಸಲು ಸಜ್ಜಾಗಿದ್ದಾರೆ.












Click it and Unblock the Notifications