Meghana Raj: ಎರಡನೇ ಮದುವೆ ಬಗ್ಗೆ ಮಾತನಾಡಿದ ಮೇಘನಾ ರಾಜ್
ನಟಿ ಮೇಘನಾ ರಾಜ್ ಸದ್ಯ ಪುತ್ರ ರಾಯನ್ ಜೊತೆಗೆ ಯೂಟ್ಯೂಬ್, ಸೋಶಿಯಲ್ ಮೀಡಿಯಾದಲ್ಲಿ ಬ್ಯುಸಿಯಾಗಿದ್ದಾರೆ. ಪದೇ ಪದೇ ನಟಿ ಮೇಘನಾ ರಾಜ್ ಅವರ ಎರಡನೇ ಮದುವೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿರುತ್ತದೆ. ನಟಿ ಮೇಘನಾ ರಾಜ್ ಹಾಗೂ ಚಿರು ಪ್ರೀತಿಸಿ, ಅದ್ದೂರಿಯಾಗಿ ಮದುವೆಯಾಗಿದ್ದರು. ಆದರೆ, ನಟಿ ಮೇಘನಾ ರಾಜ್ ಅವರು ಗರ್ಭಿಣಿಯಿದ್ದಾಗಲೇ ದೈಹಿಕವಾಗಿ ಪತಿ ಚಿರಂಜೀವಿ ಸರ್ಜಾ ಅವರನ್ನು ಕಳೆದುಕೊಂಡರು.
ಯಾರ ಕೆಟ್ಟ ದೃಷ್ಟಿ ಬಿತ್ತೋ ಏನೋ ಚಿರಂಜೀವಿ ಸರ್ಜಾ ಅಗಲಿದರು. ಸದ್ಯ ಮುದ್ದಾದ ಮಗನಿಗೆ ತಾಯಿ, ತಂದೆಯಾಗಿ ನಟಿ ಮೇಘನಾ ರಾಜ್ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ, ಆಗಾಗ ಅವರಿಗೆ ಎರಡನೇ ಮದುವೆ ಆಗ್ತಿದೆ, ಆ ನಟನ ಜೊತೆ ಈ ನಟನ ಜೊತೆಗೆ ಮದುವೆ ಆಗುವುದು ಎಂಬ ಮಾತು ಸೋಶಿಯಲ್ ಮೀಡಿಯಾದಲ್ಲಿ ಕೇಳಿ ಬರುತ್ತದೆ. ಅದಕ್ಕೆ ಈಗಾಗಲೇ ಮೇಘನಾ ಉತ್ತರ ನೀಡಿದ್ದಾರೆ. ನಾನು ನನ್ನ ಜೀವನದಲ್ಲಿ ಎರಡನೇ ಮದುವೆ ಆಗುವ ಬಗ್ಗೆ ಸಂದರ್ಶನದಲ್ಲಿ ಮಾತನಾಡಿದ್ದೆ. ಅದು ಎಲ್ಲರಿಗೂ ಅರ್ಥ ಆಗಿಲ್ಲ. ಹೀಗಿದ್ದರೂ ಕೆಲವರು ನೆಗೆಟಿವ್ ಕಾಮೆಂಟ್ ಮಾಡಿದ್ದಾರೆ. ಅರ್ಥವಾಗದೆ ಜನರು ಮಾತನಾಡಿದ್ದಾರೆ. ಹೀಗಾಗಿ ಮತ್ತೆ ನಾನು ಈ ಬಗ್ಗೆ ಮಾತಾಡಿ, ಅವರು ಇನ್ನೊಂದಿಷ್ಟು ಮಾತನಾಡೋಕೆ ಆಹಾರ ಕೊಡೋದಿಲ್ಲ. ಬೇರೆ ನಟರ ಜೊತೆ ನನ್ನ ಮದುವೆ ಆಗತ್ತೆ ಎನ್ನೋದು ಕೇಳಿದೆ. ಎಷ್ಟು ಖುಷಿಯಾಗತ್ತೋ ಅಷ್ಟು ಮಾತನಾಡಲಿ ಎಂದು ಹೇಳಿದ್ದರು.

ಇದೀಗ ಮಿರ್ಚಿ ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿ ನಟಿ ಮೇಘನಾರಾಜ್ ಅವರು ಮಾತನಾಡಿ, ಸೋಶಿಯಲ್ ಮೀಡಿಯಾದಲ್ಲೂ ನನ್ನ ಬಗ್ಗೆ ಡಿಸೈನ್ ಡಿಸೈನ್ ಆಗಿ ಟ್ರೋಲ್ ಮಾಡುತ್ತಾರೆ.ನಾನು ಪ್ರೆಗ್ನೆಂಟ್ ಆಗಿದ್ದೆ, ಇನ್ನೂ ಡೆಲಿವರಿ ಆಗಿರಲಿಲ್ಲ. ನನಗೆ ಅವಳಿ ಜವಳಿ ಮಕ್ಕಳಾಗುತ್ತದೆ ಅಂತ ಟ್ರೋಲ್ ಮಾಡುವವರೆ ಡಿಸೈಡ್ ಮಾಡಿ ಬಿಟ್ಟಿದ್ದರು.ಅವಳಿ ಜವಳಿ ಮಕ್ಕಳು ಅನ್ನೋದರ ಜೊತೆಗೆ ಅವರಿಬ್ಬರಿಗೂ ಹೆಸರು ಇಟ್ಟುಬಿಟ್ಟಿದ್ದರು. ಹೌದು.. ಅಂಜನ್ ಮತ್ತು ಅಂಜನಿ ಅಂತ ಅವರೇ ಹೆಸರಿಟ್ಟು ಬಿಟ್ಟಿದ್ದರು. ಮತ್ತು ನನ್ನನ್ನ ತುಂಬಾ ಜನರಿಗೆ ಮದುವೆ ಮಾಡಿಸಿದ್ದಾರೆ. ಒಂದೊಂದು ವಾರ ಒಬ್ಬೊಬ್ಬರ ಹೆಸರು, ಇಷ್ಟೊಂದು ಪ್ರಪೋಸಲ್ ಕೂಡ ನನಗೆ ಬಂದಿಲ್ವಲ್ಲಾ ಅಂತ ಅಂದುಕೊಳ್ಳುತ್ತಿದ್ದೆ ಎಂದು ನಟಿ ಮೇಘನಾ ರಾಜ್ ತಮಾಷೆಯಾಗಿ ಉತ್ತರಿಸಿದ್ದಾರೆ.
ಈ ಸಂದರ್ಶನದಲ್ಲಿಯೇ ಪ್ರಜ್ವಲ್ ದೇವರಾಜ್ ಅವರ ಪತ್ನಿ ರಾಗಿಣಿ ಅವರು ಮಾತನಾಡಿ, ರೂಮರ್ಸ್‌ಗಿಂತ ಜಾಸ್ತಿ ನಾನು ತುಂಬಾ ಎದುರಿಸುತ್ತಿದ್ದೇನೆ. ಪರ್ಸನಲ್ ಆಗಿ ನನ್ನ ತಂಗಿ ಮತ್ತು ನಾನು ಹೆಚ್ಚು ಅಸಹ್ಯಕರ ಮೆಸೇಜ್‌ಗಳನ್ನ ಎದುರಿಸುತ್ತಿದ್ದೇವೆ. ಇದು ನಿರಂತರವಾಗಿ ಎದುರಿಸಿದ್ದೇವೆ. ನಾವು ಡ್ಯಾನ್ಸ್ ಕ್ಲಾಸ್ ನಡೆಸುತ್ತೀವಿ, ನನ್ನ ತಂಗಿಗೆ ಸ್ಟೂಡೆಂಟ್ ಎನ್‌ಕ್ವೈರಿ ಕಾಲ್ಸ್ ಬರುತ್ತೆ, ಆಫೀಸ್ ನಂಬರ್‌ಗೆಲ್ಲಾ ತುಂಬಾ ಅಸಹ್ಯಕರ ಸಂದೇಶಗಳು ಬರುತ್ತೆ. ಎಫೆಕ್ಟ್ ಆಗಲ್ಲ ಅಂತಲ್ಲ, ಎಫೆಕ್ಟ್ ಆಗುತ್ತದೆ. ಆದರೆ ರಿಯಾಕ್ಟ್ ಮಾಡಬಾರದು, ಆಕ್ಷನ್ ತೆಗೆದುಕೊಳ್ಳಬೇಕು ಎಂದು ಖಡಕ್ ಆಗಿ ಹೇಳಿದ್ದಾರೆ.
ಇನ್ನೂ ನಾನು ನನ್ನ ಅತ್ತೆ ಜೊತೆ ಜಗಳ ಮಾಡಿ ಮನೆ ಬಿಟ್ಟು ಹೋಗಿದ್ದೇನೆ ಅಂತೆ. ನಮ್ಮ ಅತ್ತೆಯವರ ಸಹೋದರಿಯರು ಹಾಗೂ ಅವರ ಫ್ಯಾಮಿಲಿಯವರೆಲ್ಲ ಕಾಲ್ ಮಾಡಿ ಏನಾಯ್ತು ಏನಾಯ್ತು ಅಂತ ಕೇಳಿದ್ದರು. ನಾನು ಒಂದು ಪ್ರಾಪರ್ಟಿಗೆ ಆಡ್ ಮಾಡಿದ್ದೆ, ಆಗ ಬೇರೆ ಮನೆ ಮಾಡಿಕೊಂಡು ಬಿಟ್ಟಿದ್ದಾರೆ. ಇದರಿಂದ ಪ್ರಾಬ್ಲಂ ಅದರಿಂದ ಪ್ರಾಬ್ಲಂ ಅಂತ ಫುಲ್ ಕಾಮೆಂಟ್ಸ್ ಹಾಕಿದ್ದರು. ಇದು ಫನ್ನಿಯಾಗಿತ್ತು ಎಂದು ಸಂದರ್ಶನದಲ್ಲಿ ರಾಗಿಣಿ ಪ್ರಜ್ವಲ್ ದೇವರಾಜ್ ಹೇಳಿಕೊಂಡಿದ್ದಾರೆ.












Click it and Unblock the Notifications