Megha Shetty: ಬಹುಭಾಷಾ ನಟನ ಜತೆ ನಟಿ ಮೇಘಾ ಶೆಟ್ಟಿ ಫೋಟೋ ವೈರಲ್, ಏನಿದು ಸುದ್ದಿ?
ಕನ್ನಡದಲ್ಲಿ ಹಿಟ್ ಸಿನಿಮಾಗಳನ್ನು ನೀಡುತ್ತಿದ್ದಂತೆ ಬೇರೆ ಭಾಷೆಯ ಸಿನಿಮಾಗಳತ್ತ ಮುಖ ಮಾಡುತ್ತಿರುವ ನಟಿ ಮಣಿಯರು ಹೆಚ್ಚಾಗಿದ್ದಾರೆ. ಈ ನಡುವೆ ಕಿರುತೆರೆಯಲ್ಲಿ ಮಿಂಚಿ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ ಮೇಘಾ ಶೆಟ್ಟಿಯವರು ಸಹ ಇದೇ ಹಾದಿ ಹಿಡಿದರಾ? ಎಂದು ಅಭಿಮಾನಿಗಳಲ್ಲಿ ಪ್ರಶ್ನೆಯೊಂದು ಮೂಡಿಸಿದೆ. ಇದಕ್ಕೆ ನಟಿ ಹಾಗೂ ಬಹುಭಾಷಾ ನಟನ ಜೊತೆಗಿನ ತೆಗೆದುಕೊಂಡ ಸೆಲ್ಫಿ ಕಾರಣವಾಗಿದೆ.
ಹೌದು, ಕಿರುತೆರೆಯಿಂದ ಬೆಳ್ಳಿ ತೆರೆಗೆ ಬಂದು ಕೆಲವು ಸಿನಿಮಾಗಳನ್ನು ಮಾಡಿದ್ದ ನಟಿ ಮೇಘಾ ಶೆಟ್ಟಿಯವರು ಒಂದು ದೊಡ್ಡ ಸಕ್ಸಸ್‌ಗಾಗಿ ಕಾಯುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಈ ನಟಿ ತಮ್ಮ ನಟನೆ, ಸೌಂದರ್ಯದ ಮೂಲಕ ಅಪಾರ ಅಭಿಮಾನಿಗಳು ಸಂಪಾದಿಸಿದ್ದಾರೆ.

ವೈರಲ್ ಆಗುತ್ತಿದೆ ಮೇಘಾ ಶೆಟ್ಟಿ ಪೋಸ್ಟ್
ಬುಧವಾರ ನಟಿ ಮೇಘಾ ಶೆಟ್ಟಿಯವರು ಇನ್‌ಸ್ಟಾಗ್ರಾಮ್ ನಲ್ಲಿ ಬಹುಭಾಷಾ ನಟ ಆರ್. ಮಾಧವನ್ ಅವರೊಂದಿಗಿನ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಈ ಇಬ್ಬರು ನಟ-ನಟಿಯರ ಸೆಲ್ಫಿ ಫೋಟೋ ಸಖತ್ ವೈರಲ್ ಆಗುತ್ತಿದ್ದಂತೆ, ನೀವು ಪರಭಾಷೆ ಚಿತ್ರಗಳತ್ತ ಆಸಕ್ತಿ ಹೊಂದಿದ್ದೀರಾ? ಎಂದೆಲ್ಲ ಅಭಿಮಾನಿಗಳು ನಟಿಗೆ ಪ್ರಶ್ನೆ ಮಾಡಿದ್ದಾರೆ.
ಪರಭಾಷಾ ಸಿನಿಮಾಗೆ ಆಯ್ಕೆ ಆದ್ರಾ ಮೇಘಾ ಶೆಟ್ಟಿ?
ಈ ಬಗ್ಗೆ ಪೋಸ್ಟ್‌ನಲ್ಲಿ ಬರೆದುಕೊಂಡಿರುವ ನಟಿ ಮೇಘಾ ಶೆಟ್ಟಿಯವರು, ''ಅದ್ಭುತ ನಟನೊಂದಿಗೆ ಮತನಾಡುತ್ತಾ ಸಮಯ ಕಳೆದಿದ್ದೇನೆ. ಇದು ಒಳ್ಳೆಯ ಕಲಿಕೆಯ ಅನುಭವ'' ಎಂದು ಮಾತ್ರವೇ ತಿಳಿಸಿದ್ದಾರೆ. ನಟ ಆರ್ ಮಾಧವ್ ಅವರು ತಮಗೆ ಸಿಕ್ಕಿದ್ದೆಲ್ಲಿ?, ವಿಷಯವೇನು, ಯಾವುದಾದರೂ ಪರಭಾಷಾ ಸಿನಿಮಾಗೆ ಆಯ್ಕೆಯಾದರಾ? ಎಂಬ ಯಾವ ಮಾಹಿತಿ ಬಗ್ಗೆ ನಟಿ ಹೇಳಿಕೊಂಡಿಲ್ಲ.
ಕುತೂಹಲಗಳ ಮಧ್ಯೆ ಅಭಿಮಾನಿಗಳಿಂದ ನಟಿಗೆ ವಿಶ್
ಹೀಗಾಗಿ ಮೇಘಾ ಶೆಟ್ಟಿ ಅಭಿಮಾನಿಗಳು ತಲೆಯಲ್ಲಿ ಸದ್ಯ ಹುಳ ಬಿಟ್ಟಂತಾಗಿದೆ. ಅಲ್ಲದೇ ನಟಿಯ ಪೋಸ್ಟ್‌ಗೆ ಶುಭಾಷಯ ತಿಳಿಸಿರುವ ಅಭಿಮಾನಿಗಳು ನೀವು ಬೇರೆ ಚಿತ್ರರಂಗದಲ್ಲಿ ಮಿಂಚಬೇಕು. ಆರ್. ಮಾಧವನ್ ಜೊತೆಗೆ ಸಿನಿಮಾ ಮಾಡುತ್ತಿರಬಹುದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ನೀವು ತಮಿಳು, ತೆಲುಗು ಚಿತ್ರರಂಗದ ಬದಲಾಗಿ ನೇರವಾಗಿ ಬಾಲಿವುಡ್ ಹೋಗಬೇಕು ಎಂದು ತಮ್ಮ ನೆಚ್ಚಿನ ನಟಿಗೆ ವಿಶ್ ಮಾಡಿದ್ದಾರೆ.

ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟಿ ಬ್ಯೂಸಿ
ಈಗಾಗಲೇ ಗೋಲ್ಡನ್ ಸ್ಟಾರ್ ಗಣೇಶ್ ಅವರ ಜೊತೆ 'ತ್ರಿಬಲ್ ರೈಡಿಂಗ್', ಡಾಲಿಂಗ್ ಕೃಷ್ಣ ಜೊತೆ 'ದಿಲ್ ಪಸಂದ್' ಹಾಗೂ 'ಕೈವ 'ಮೊದಲಾದ ಸಿನಿಮಾಗಳನ್ನು ಮೇಘಾ ಶೆಟ್ಟಿ ಮಾಡಿದ್ದಾರೆ. ಸದ್ಯ ಅವರು ಹೊಸ ಪ್ಯಾನ್ ಇಂಡಿಯಾ ಸಿನಿಮಾ 'ಆಪರೇಷನ್ ಲಂಡನ್ ಕೆಫೆ' ಯಲ್ಲಿ ಬಣ್ಣ ಹಚ್ಚಿದ್ದಾರೆ. ಪ್ರಜ್ವಲ್ ದೇವರಾಜ್ ಅಭಿನಯದ 'ಚೀತಾ' ಸಿನಿಮಾಗೂ ಮೇಘಾ ಶೆಟ್ಟಿ ಆಯ್ಕೆ ಆಗಿದ್ದಾರೆ.
ಇದೆಲ್ಲದರ ಮಧ್ಯೆ ಅವರು ನಟ ಆರ್.ಮಾಧವನ್ ಜೊತೆಗಿನ ಫೋಟೋ ಹಂಚಿಕೊಳ್ಳುವ ಮೂಲಕ ಸುದ್ದಿಯಾಗಿದ್ದಾರೆ. ಇವರ ಪೋಸ್ಟ್‌ಗೆ ಕೇವಲ 17 ಗಂಟೆಗಳಲ್ಲಿ 39 ಸಾವಿರಕ್ಕೂ ಹೆಚ್ಚು ಲೈಕ್ಸ್‌ಗಳು ಬಂದಿವೆ. 65 ಮಂದಿ ಕಾಮೆಂಟ್ ಮಾಡಿದ್ದಾರೆ.












Click it and Unblock the Notifications