ನಟ ಪ್ರಭಾಸ್-ರಿಷಬ್ ಕಾಂಬಿನೇಷನ್‌ನಲ್ಲಿ ಸಿನಿಮಾ, ಏನಿದು ಹೊಸ ಸಮಾಚಾರ?
ಸ್ಯಾಂಡಲ್‌ವುಡ್ ನಟ ಹಾಗು ನಿರ್ದೇಶಕ ರಿಷಬ್ ಶೆಟ್ಟಿ ಅವರು ಕಾಂತಾರ ಸಿನಿಮಾದ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಖತ್ ಹವಾ ಕ್ರಿಯೇಟ್ ಮಾಡಿದ್ದಾರೆ. ಇನ್ನು ಕಾಂತಾರ ಸೀಕ್ವೆಲ್ ಕೂಡ ಸದ್ದಿಲ್ಲದೆ ರೆಡಿಯಾಗುತ್ತಿದೆ. ಇದರಿಂದ ರಿಷಬ್ ಶೆಟ್ಟಿ ಅಂದ್ರೆ ಭಾರತೀಯ ಚಿತ್ರರಂಗದಲ್ಲಿ ಒಂದು ಬ್ರ್ಯಾಂಡ್ ಎನ್ನುವಂತಾಗಿದೆ.
ಇನ್ನು ತಾವೇ ನಿರ್ದೇಶಿಸಿ, ನಾಯಕನಾಗಿ ನಟಿಸಿದ್ದ ಕಾಂತಾರ ಸಿನಿಮಾ ಎಲ್ಲ ಭಾಷೆಗಳ ಸಿನಿಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಇದೇ ಕಾರಣಕ್ಕೆ ರಿಷಬ್ ಜೊತೆ ಸಿನಿಮಾ ಮಾಡಬೇಕು ಎನ್ನುವ ಕನಸು ಕೂಡ ಹಲವರಲ್ಲಿದೆ. ಇದೀಗ ಹೊಸ ವಿಚಾರವೊಂದು ರಿಷಬ್ ಅವರ ಕುರಿತು ಹರಿದಾಡುತ್ತಿದೆ.

ಸ್ಯಾಂಡಲ್‌ವುಡ್‌ನಲ್ಲಿ ಮಿಂಚಿರೋ ರಿಷಬ್ ಸದ್ದಿಲ್ಲದೆ, ಟಾಲಿವುಡ್‌ನತ್ತ ಹಾರುತ್ತಿದ್ದಾರಾ ಎಂಬ ಚರ್ಚೆಗಳು ಜೋರಾಗಿ ನಡೆಯುತ್ತಿವೆ. ಟಾಲಿವುಡ್ ನಟ ಡಾರ್ಲಿಂಗ್ ಪ್ರಭಾಸ್ ಅವರ ಸಿನಿಮಾಗೆ ರಿಷಬ್ ಕೂಡ ಸಾಥ್ ನೀಡುತ್ತಿದ್ದಾರೆ ಎಂಬ ವಿಚಾರ ಎಲ್ಲೆಡೆ ಕೇಳಿಬರುತ್ತಿದೆ. ಆದರೆ, ರಿಷಬ್ ಈ ಸಿನಿಮಾದಲ್ಲಿ ನೇರವಾಗಿ ಪ್ರಭಾಸ್ ಅವರೊಂದಿಗೆ ತೆರೆ ಹಂಚಿಕೊಳ್ಳುತ್ತಿಲ್ಲ. ಬದಲಿಗೆ ರಿಷಬ್ ಅವರೇ ಈ ಸಿನಿಮಾಗೆ ಸ್ಕ್ರಿಪ್ಟ್ ರೆಡಿ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.
ಈಗಾಗಲೇ ಪ್ರಭಾಸ್ ನಟನೆಯ ಸಲಾರ್ ಸಿನಿಮಾವನ್ನು ಕನ್ನಡದ ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡಿದೆ. ಇದರೊಂದಿಗೆ ಸಲಾರ್-2 ಜೊತೆಗೆ ಮತ್ತಷ್ಟು ಸಿನಿಮಾಗಳನ್ನು ಹೊರತರುವುದಾಗಿ ಹೇಳಿದೆ. ಹಾಗಾಗಿ ಕಾಂತಾರ ಕೂಡ ಹೊಂಬಾಳೆ ಬ್ಯಾನರ್‌ನಲ್ಲೇ ಬಂದಿರುವುದರಿಂದ ಪ್ರಭಾಸ್ ಅವರ ಮುಂದಿನ ಸಿನಿಮಾವೊಂದಕ್ಕೆ ರಿಷಬ್ ಅವರಿಗೇ ಸ್ಕ್ರಿಪ್ಟ್ ಬರೆದುಕೊಡುವಂತೆ ಕೇಳಿದೆಯಂತೆ.

ಇನ್ನು ನಟ ಪ್ರಭಾಸ್ ಅವರ ವ್ಯಕ್ತಿತ್ವಕ್ಕೆ ಸೂಕ್ತವಾದ ಕಥೆಯೊಂದನ್ನು ಹೆಣೆಯುವಂತೆ ರಿಷಬ್ ಅವರನ್ನು ಕೇಳಿಕೊಂಡಿದ್ದು, ಇದಕ್ಕೆ ರಿಷಬ್ ಕೂಡ ಒಪ್ಪಿಕೊಂಡಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ರಿಷಬ್ ಅವರು ಕೇವಲ ಸಿನಿಮಾಗೆ ಸ್ಕ್ರಿಪ್ಟ್ ಬರೆದುಕೊಡುತ್ತೇನೆ, ಆದರೆ ನಿರ್ದೇಶನ ಮಾಡುವುದಿಲ್ಲ ಎಂದೂ ಕಂಡೀಷನ್ ಹಾಕಿದ್ದಾರೆ ಎನ್ನಲಾಗಿದೆ. ಶೀಘ್ರದಲ್ಲೇ ಈ ಸಿನಿಮಾದ ಬಗ್ಗೆಯೂ ಅಪ್‌ಡೇಟ್ ಹೊರಬೀಳಲಿದೆ ಎಂದು ಹೇಳಲಾಗುತ್ತಿದೆ.
ರಿಷಬ್ ಅವರ ಶಿವಾಜಿ ಪಾತ್ರಕ್ಕೆ ಭಾರಿ ವಿರೋಧ
ಇತ್ತೀಚೆಗಷ್ಟೇ ರಿಷಬ್ ಶೆಟ್ಟಿ ಅವರು ತಾವು ನಟಿಸುತ್ತಿರುವ ಮುಂದಿನ ಸಿನಿಮಾದ ಬಗ್ಗೆ ಅಪ್‌ಡೇಟ್ ಕೊಟ್ಟಿದ್ರು. ಇದರಲ್ಲಿ ಐತಿಹಾಸಿಕ ಪಾತ್ರ ಮಾಡುತ್ತಿದ್ದು, ದಿ ಪ್ರೈಡ್ ಆಫ್ ಭಾರತ್: ಛತ್ರಪತಿ ಶಿವಾಜಿ ಮಹಾರಾಜ್' ಚಿತ್ರದಲ್ಲಿ ರಿಷಬ್ ಶೆಟ್ಟಿ ಲೀಡ್ ರೋಲ್‌ನಲ್ಲಿ ಕಾಣಿಸಿಕೊಳ್ಳುವುದಾಗಿ ಅನೌನ್ಸ್ ಮಾಡಿದ್ದರು.

ಆದರೆ, ಶಿವಾಜಿ ಪಾತ್ರದಲ್ಲಿ ರಿಷಬ್ ನಟಿಸುತ್ತಿದ್ದಾರೆ ಎಂಬ ವಿಚಾರಕ್ಕೆ ಅನೇಕರಿಂದ ವಿರೋಧ ವ್ಯಕ್ತವಾಗುತ್ತಿದೆ. ರಿಷಬ್ ಶೆಟ್ಟಿ ಅವರು ಛತ್ರಪತಿ ಶಿವಾಜಿ ಪಾತ್ರದಲ್ಲಿ ನಟಿಸುವುದಕ್ಕೆ ಕರ್ನಾಟಕದಲ್ಲೇ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಿರ್ಮಾಪಕ ಸಂದೀಪ್ ಸಿಂಗ್ ಸಿನಿಮಾಗಳು ವಿವಾದಕ್ಕೆ ಒಳಗಾಗಿದ್ದು, ಶಿವಾಜಿಯನ್ನು ಕರ್ನಾಟಕದ ವಿರೋಧಿ ಎಂಬರ್ಥದಲ್ಲಿ ಪರಿಗಣಿಸಿದ್ದಾರೆ. ಇಂತಹ ಪಾತ್ರವನ್ನು ರಿಷಬ್ ಮಾಡುವುದು ಸರಿಯಲ್ಲ ಎಂದೂ ಹಲವರು ಕಾರಣ ನೀಡಿದ್ದಾರೆ.












Click it and Unblock the Notifications