ಮದುವೆ ಆಗಿ 10 ವರ್ಷವಾದ್ರೂ ಈ ಕಾರಣಕ್ಕೆ ಮಕ್ಕಳು ಮಾಡಿಕೊಂಡಿಲ್ವಾ ರಾಗಿಣಿ: ಪ್ರಜ್ವಲ್ ದೇವರಾಜ್ ಖಡಕ್ ಉತ್ತರ!
ಪ್ರಜ್ವಲ್ ದೇವರಾಜ್ ನಟನೆಯ ಕರಾವಳಿ ಸಿನಿಮಾ ಭಾರಿ ನಿರೀಕ್ಷೆ ಮೂಡಿಸಿದೆ. ಸದ್ಯ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಶೀಘ್ರದಲ್ಲಿಯೇ ಬಿಡುಗಡೆ ಆಗಲಿದ್ದು, ಈ ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ಅವರೂ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವುದು ತುಂಬ ವಿಶೇಷವಾಗಿದೆ. ಗುರುದತ್ ಗಾಣಿಗ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬರುತ್ತಿದ್ದು, ಇತ್ತೀಚಿಗಷ್ಟೆ ಮಾಧ್ಯಮದ ಮುಂದೆ ಹಾಜರಾಗಿದ್ದ ಸಿನಿಮಾತಂಡ ಚಿತ್ರೀಕರಣ ಮುಗಿದ ಖುಷಿಯನ್ನು ಹಂಚಿಕೊಡಿದೆ. ಈ ವೇಳೆ ವೈಯಕ್ತಿಕ ಬದುಕಿನ ಬಗ್ಗೆಯೂ ನಟ ಪ್ರಜ್ವಲ್ ದೇವರಾಜ್ ಅವರು ಪ್ರತಿಕ್ರಿಯಿಸಿದ್ದಾರೆ.
ಸದ್ಯ ಪ್ರಜ್ವಲ್ ದೇವರಾಜ್ ಹಾಗೂ ರಾಗಿಣಿ ಪ್ರೀತಿಸಿ ಮದುವೆಯಾಗಿದ್ದಾರೆ. ನಟ ಪ್ರಜ್ವಲ್ ದೇವರಾಜ್ ಹಾಗೂ ಅವರ ಪತ್ನಿ ರಾಗಿಣಿ ಮದುವೆಯಾಗಿ ಸರಿಸುಮಾರು 10 ವರ್ಷಗಳಾಗುತ್ತಾ ಬರುತ್ತಿದೆ. ಆದರೆ, ಸೋಶಿಯಲ್ ಮೀಡಿಯಾದಲ್ಲಿ ಅವರನ್ನ ಟ್ರೋಲ್ ಮಾಡುವವರು ಕಡಿಮೆಯಾಗಿಲ್ಲ. ಇತ್ತ ಸಿನಿಮಾಗಳಲ್ಲಿ ಪ್ರಜ್ವಲ್ ದೇವರಾಜ್ ಬ್ಯುಸಿಯಾಗಿದ್ದರೆ, ಪತ್ನಿ ರಾಗಿಣಿ ಅವರು ಕ್ಯಾಸಿಕಲ್ ಡ್ಯಾನ್ಸರ್, ಫ್ಯಾಶನ್ ಇನ್‌ಫ್ಲುಯೆನ್ಸರ್, ಫಿಟ್‌ನೆಸ್ ಟ್ರೈನರ್ ಹಾಗೂ ನಟಿಯಾಗಿ ಗುರುತಿಸಿಕೊಂಡಿದ್ದಾರೆ.

ನಟ ಪ್ರಜ್ವಲ್ ದೇವರಾಜ್ ಹಾಗೂ ಅವರ ಪತ್ನಿ ರಾಗಿಣಿ ದಂಪತಿಗಳು ತಮ್ಮ ವೃತ್ತಿ ಬದುಕು ಹಾಗೂ ವೈಯಕ್ತಿಕ ಜೀವನದಲ್ಲಿ ಸಂತಸದಿಂದ ಇದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಇಬ್ಬರು ಸಹ ಸಖತ್ ಆಕ್ಟೀವ್ ಆಗಿದ್ದು, ಮದುವೆಯಾಗಿ 10 ವರ್ಷಗಳಾಗುತ್ತಾ ಬರುತ್ತಿದೆ, ಯಾಕಿನ್ನೂ ಮಕ್ಕಳಾಗಿಲ್ಲ? ಫಿಟ್‌ನೆಸ್‌ಗಾಗಿ ರಾಗಿಣಿ ಅವರು ಮಕ್ಕಳು ಮಾಡಿಕೊಂಡಿಲ್ವಾ? ಅನ್ನೋ ಕಾಮೆಂಟ್‌ಗಳು ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಹರಿದಾಡುತ್ತಿವೆ. ಈ ಬಗ್ಗೆ ನಟ ಪ್ರಜ್ವಲ್ ದೇವರಾಜ್ ಅವರು ಖಡಕ್ ಆಗಿ ಉತ್ತರ ಕೊಟ್ಟಿದ್ದಾರೆ.
ಫಸ್ಟ್ ಡೇ ಫಸ್ಟ್ ಶೋ ಯೂಟ್ಯೂಬ್ ಚಾನೆಲ್‌ಗೆ ನೀಡದ ಸಂದರ್ಶನದಲ್ಲಿ ಪ್ರಜ್ವಲ್ ದೇವರಾಜ್ ಮಾತನಾಡಿ, ನಾನು ಜಾಸ್ತಿ ತಲೆಕೆಡಿಸಿಕೊಳ್ಳುವುದಿಲ್ಲ. ಹಾಗ್ನೋಡಿದ್ರೆ ಎಲ್ಲದರ ಬಗ್ಗೆಯೂ ತಲೆಕೆಡಿಸಿಕೊಳ್ಳಬೇಕಾಗುತ್ತದೆ. ಅದು ಯಾರು ಟ್ರೋಲ್ ಮಾಡುತ್ತಾರೆ ಅನ್ನೋದು ನಮಗೆ ಗೊತ್ತಿರುವುದಿಲ್ಲ. ಹಿಂದೆ ಬಚ್ಚಿಟ್ಟುಕೊಂಡು ಟ್ರೋಲ್ ಮಾಡುವವರ ಬಗ್ಗೆ ಏನು ಹೇಳೋದು? ಪ್ರತಿಯಬ್ಬರೂ ಮೂಲಭೂತ ಸಾಮಾಜಿಕ ಜವಾಬ್ದಾರಿಯನ್ನು ಹೊಂದಿರಬೇಕು. ಎಲ್ಲರಿಗೂ ಒಂದು ಫ್ಯಾಮಿಲಿ ಇರುತ್ತದೆ. ಅವರದ್ದೇ ಆದ ಕಷ್ಟಗಳು ಇರುತ್ತದೆ. ಆದರೆ, ಇವರಿಗೆ ಇಷ್ಟ ಬಂದಹಾಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಳ್ಳುತ್ತಾರೆ ಎಂದು ಕಿಡಿಕಾರಿದ್ದಾರೆ.
ಇನ್ನೂ ಈ ಬಗ್ಗೆ ಏನು ನಮ್ಮ ಬಗ್ಗೆ ಹೀಗೆ ಬರೀತಾರೆ ಅಂತ ರಾಗಿಣಿ ಬೇಜಾರ್ ಮಾಡಿಕೊಂಡರೆ, ತಲೆ ಕೆಡಿಸಿಕೊಳ್ಳಬೇಡ, ಅವನು ಯಾವನೋ, ಎಲ್ಲೋ ಕೂತುಕೊಂಡು ಟ್ರೋಲ್ ಮಾಡುತ್ತಾನೆ. ಅದಕ್ಕೆ ನೀನು ಯಾಕೆ ತಲೆಕೆಡಿಸಿಕೊಳ್ಳುತ್ತೀಯಾ? ಎಂದು ಹೇಳ್ತೀನಿ. ನಾವು ಫ್ಯಾಮಿಲಿಯಲ್ಲಿ ಖುಷಿಯಾಗಿದ್ದೇವೆ, ನಮ್ಮ ಜೀವನ ಸಖ್ಖತ್ತಾಗಿ ನಡೆಯುತ್ತಿದೆ. ಅಪ್ಪ-ಅಮ್ಮನ ಜೊತೆಗಿದ್ದೇವೆ. ಅವರು ಖುಷಿಯಾಗಿದ್ದಾರೆ. ಮತ್ಯಾಕೆ ತಲೆಕೆಡಿಸಿಕೊಳ್ಳಬೇಕು? ಎಂದು ನಟ ಪ್ರಜ್ವಲ್ ದೇವರಾಜ್ ಪ್ರಶ್ನಿಸಿದ್ದಾರೆ.
ಇನ್ನೊಬ್ಬರ ಬಗ್ಗೆ ಮಾತನಾಡುವುದಕ್ಕೂ ಮುಂಚೆ ಮೊದಲು ನೀನು ನಿನ್ನ ಜೀವನ ಸರಿ ಮಾಡಿಕೋ ಗುರು. ನೀನು ಏನ್ ಮಾಡುತ್ತಿದ್ದೀಯಾ ಅನ್ನೋದನ್ನ ನೋಡಿಕೋಳ್ಳಿ ಎಂದು ಟ್ರೋಲ್ ಹಾಗೂ ಕಾಮೆಂಟ್ ಮಾಡುವವರಿಗೆ ಪ್ರಜ್ವಲ್ ದೇವರಾಜ್ ಖಡಕ್ ಆಗಿ ಉತ್ತರ ಕೊಟ್ಟಿದ್ದಾರೆ. ಸೋಶಿಯಲ್ ಮೀಡಿಯಾ ಅನ್ನೋದು ಪವರ್. ಇದರಿಂದ ನೀವು ಒಳ್ಳೆಯದು ಮಾಡಬಹುದು, ಕೆಟ್ಟದ್ದು ಮಾಡಬಹುದು. ನೀವು ಏನು ಮಾಡುತ್ತೀರಾ ಅನ್ನೋದು ನಿಮ್ಮ ಜವಾಬ್ದಾರಿಯಾಗಿರುತ್ತದೆ. ಅವರ ಬಗ್ಗೆ ನಾವು ಮಾತನಾಡುತ್ತಿರುವುದು ಸಮಯ ವ್ಯರ್ಥ. ಪ್ರತಿಯಬ್ಬರೂ ಮೂಲಭೂತ ಸಾಮಾಜಿಕ ಜವಾಬ್ದಾರಿಯನ್ನು ಕಲಿಯಬೇಕು. ಇನ್ನೊಬ್ಬರ ಜೀವನದ ಬಗ್ಗೆ ಮಾತನಾಡುವುದಕ್ಕೆ ಯಾರಿಗೂ ಅಧಿಕಾರ ಇಲ್ಲ. ಎಲ್ಲರಿಗೂ ಅವರದ್ದೇ ಹಾದಿ ಇರುತ್ತದೆ ಎಂದು ಪ್ರಜ್ವಲ್ ಹೇಳಿದ್ದಾರೆ.












Click it and Unblock the Notifications