Golden Star Ganesh: ಗೋಲ್ಡನ್ ಸ್ಟಾರ್ ಗಣೇಶ್ ಒಟ್ಟು ಆಸ್ತಿ ಎಷ್ಟು ಕೋಟಿ? ಸಿನಿಮಾ ಬಿಟ್ಟು ಬೇರೆ ಸಂಪಾದನೆ ಏನಿದೆ?
'ಗೋಲ್ಡನ್ ಸ್ಟಾರ್' ಎಂಬ ಬಿರುದು ಪಡೆದ ನಟ ಗಣೇಶ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ನಟ ಗಣೇಶ್ ಹುಟ್ಟಿದ್ದು 1980ರ ಜುಲೈ 2ರಂದು, ಬೆಂಗಳೂರಿನ ನೆಲಮಂಗಲದ ಅಡಕಮರನ ಹಳ್ಳಿಯಲ್ಲಿ. ಒಂದು ಬಡ ಕುಟುಂಬದಲ್ಲಿ ಜನಿಸಿದ್ದ ಗಣೇಶ್ ಬಾಲ್ಯದಲ್ಲೂ & ಯವ್ವನದಲ್ಲೂ ಸಾಕಷ್ಟು ಸಮಸ್ಯೆ ಎದುರಿಸಿದ್ದರು. ಆದರೆ ಸಿನಿಮಾ ರಂಗ ಅವರನ್ನ ಕೈಹಿಡಿದು ನಿಲ್ಲಿಸಿತು. ಹಾಗಾದ್ರೆ ನಟ ಗಣೇಶ್ ಅವರ ಒಟ್ಟು ಆಸ್ತಿ ಎಷ್ಟು ಕೋಟಿ ರೂಪಾಯಿ ಗೊತ್ತೆ?
'ಗುಟ್ಟು' ಸಾಕ್ಷ್ಯ ಚಿತ್ರದ ಮೂಲಕ ಗಣೇಶ್ ಕ್ಯಾಮೆರಾ ಮುಂದೆ ಬಂದರು. ಇದೇ ಆಧಾರದಲ್ಲಿ ನಟ ಗಣೇಶ್ ಅವರಿಗೆ ಧಾರಾವಾಹಿ & ಕಾಮಿಡಿ ಶೋಗಳಲ್ಲಿ ನಟನೆ ಮಾಡಲು ಅವಕಾಶಗಳ ಮಹಾಪೂರವೇ ಹರಿದು ಬಂತು. ಇಷ್ಟೆಲ್ಲಾ ಮಾಡುತ್ತಿದ್ದರೂ ನಟ ಗಣೇಶ್ ಇನ್ನೂ ಗೋಲ್ಡನ್ ಅವಕಾಶ ಪಡೆಯಲು ಪರದಾಡುತ್ತಿದ್ದರು. ಪರಿಸ್ಥಿತಿ ಹೀಗಿದ್ದಾಗಲೇ, ನಟ ಗಣೇಶ್ ಅವರಿಗೆ ಚಿನ್ನದಂತಹ ಅವಕಾಶ ಹುಡುಕಿಕೊಂಡು ಬಂದಿತ್ತು. ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ 'ಕಾಮಿಡಿ ಟೈಮ್' ಮೊಟ್ಟ ಮೊದಲಿಗೆ ನಟ ಗಣೇಶ್ ಅವರನ್ನ ಕರ್ನಾಟಕದ ಪ್ರತಿ ಮನೆ & ಮನದಲ್ಲಿ ನೆಲೆಯೂರುವಂತೆ ಮಾಡಿತ್ತು.

ಗಣೇಶ್ ಆಸ್ತಿ ಎಷ್ಟು ಕೋಟಿ?
ಹೀಗೆ 2005ರ ತನಕ ಉದಯ ಟಿವಿಯ 'ಕಾಮಿಡಿ ಟೈಮ್' ಶೋ ನಡೆಸಿಕೊಂಡು ಜೀವನದ ಬಂಡಿ ಸಾಗಿಸುತ್ತಿದ್ದ ನಟ ಗಣೇಶ್ ಅವರಿಗೆ ಭರ್ಜರಿ ಅವಕಾಶ ಸಿಕ್ಕಿದ್ದು 2006 ರಲ್ಲಿ. ಇದೇ ವರ್ಷ ಗಣೇಶ್ ಹೀರೋ ಆಗಿ ನಟನೆ ಮಾಡಿದ್ದ 'ಚೆಲ್ಲಾಟ' ಸಿನಿಮಾ ಅದ್ಧೂರಿಯಾಗಿ ರಿಲೀಸ್ ಆಗಿತ್ತು. 'ಚೆಲ್ಲಾಟ' ಗಣೇಶ್ ಅವರ ಬದುಕಿನಲ್ಲಿ ಬ್ಲಾಕ್ ಬಸ್ಟರ್ ಆಗದೇ ಇದ್ದರೂ, ಭಾರಿ ದೊಡ್ಡ ಹೆಸರು ತಂದುಕೊಟ್ಟಿತ್ತು. ಅಲ್ಲದೆ ಮುಂದೆ ಗಣೇಶ್‌ಗೆ 'ಮುಂಗಾರು ಮಳೆ' ಚಾನ್ಸ್ ಹುಡುಕಿಕೊಂಡು ಬರುವಂತೆ ಮಾಡಿತ್ತು. ಹಾಗಾದ್ರೆ ಇಷ್ಟುವರ್ಷ ಸಿನಿಮಾ ಇಂಡಸ್ಟ್ರಿಯಲ್ಲಿ ಮಿಂಚಿರುವ ಗಣೇಶ್ ಮಾಡಿರುವ ಆಸ್ತಿ ಎಷ್ಟು ಕೋಟಿ ರೂಪಾಯಿ ಗೊತ್ತೆ? ಮುಂದೆ ಓದಿ.
80 ಕೋಟಿ ಆಸ್ತಿಯ ಒಡೆಯ ಗಣೇಶ್?
ನಟ ಗಣೇಶ್ ಒಂದೊಂದು ಸಿನಿಮಾಗೂ ಕೋಟಿ ಕೋಟಿ ರೂಪಾಯಿ ಸಂಭಾವನೆ ಪಡೆದು ನಟನೆ ಮಾಡುತ್ತಾರೆ ಎಂಬ ಮಾತು ಇದೆ. ಇದರ ಜೊತೆಗೆ ಹಲವು ಬ್ಯುಸಿನೆಸ್ ಕೂಡ ನಟ ಗಣೇಶ್ ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಹೀಗಾಗಿ ಗಣೇಶ್ ಅವರ ಒಟ್ಟು ಆಸ್ತಿ ಕೋಟಿ, ಕೋಟಿ ಇದೆ ಎನ್ನಲಾಗುತ್ತಿದೆ. ಕೆಲವು ಮಾಹಿತಿಗಳ ಪ್ರಕಾರ ಗೋಲ್ಡನ್ ಸ್ಟಾರ್ ಗಣೇಶ್ ಅವರ ಬಳಿ ಬರೋಬ್ಬರಿ 80 ಕೋಟಿ ಆಸ್ತಿ ಇದೆ ಎನ್ನಲಾಗುತ್ತಿದೆ. ಆದರೆ ಇದ್ಯಾವುದೂ ಅಧಿಕೃತ ಅಲ್ಲ, ಯಾಕಂದ್ರೆ ಈ ಬಗ್ಗೆ ಅಧಿಕೃತವಾಗಿ ಗಣೇಶ್ ಅವರಾಗಲಿ ಅಥವಾ ಇನ್ಯಾರೇ ಆಗಲಿ ಮಾಹಿತಿ ನೀಡಿಲ್ಲ. 80 ಕೋಟಿ ಆಸ್ತಿ ಇದೆ ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
ಪ್ಯಾನ್ ಇಂಡಿಯಾ ಲೆವೆಲ್ ಹವಾ!
ಗಣೇಶ್ ಅಂದ್ರೆ ಒಂದು ಹವಾ ಇದೆ, ಹಾಗೇ ಗೋಲ್ಡನ್ ಸ್ಟಾರ್ ಗಣೇಶ್ ಅವರ ಸಿನಿಮಾಗಳಿಗೆ ಭಾರತದಲ್ಲಿ ಭಾರಿ ಕ್ರೇಜ್ ಇದೆ. ಪ್ಯಾನ್ ಇಂಡಿಯಾ ಸಿನಿಮಾ ಮಾಡದೇ ಇದ್ದರೂ, ಗೋಲ್ಡನ್ ಸ್ಟಾರ್ ಗಣೇಶ್ ಮಾತ್ರ ಪ್ಯಾನ್ ಇಂಡಿಯಾ ಹೀರೋ ಸಮಾನ. ಯಾಕಂದ್ರೆ ಗಣೇಶ್‌ಗೆ ಭಾರತದ ಮೂಲೆ ಮೂಲೆಯಲ್ಲೂ ಅಭಿಮಾನಿಗಳು ಇದ್ದಾರೆ. ಅದ್ರಲ್ಲೂ 'ಮುಂಗಾರು ಮಳೆ' ಸಿನಿಮಾ ಮೂಲಕ ಗೋಲ್ಡನ್ ಸ್ಟಾರ್ ಗಣೇಶ್ ಸಾಧಿಸಿದ ರೀತಿ ಎಲ್ಲರಿಗೂ ಇಷ್ಟವಾಗಿತ್ತು.
ದೊಡ್ಡ ಸಿನಿಮಾ ನೀಡಿರುವ ನಟ!
ಗೋಲ್ಡನ್ ಸ್ಟಾರ್ ಗಣೇಶ್ ಅವರು ಸಾಕಷ್ಟು ಹಿಟ್ ಸಿನಿಮಾಗಳನ್ನ ನೀಡಿದ್ದಾರೆ. ಅದರಲ್ಲೂ ಕೆಲವೇ ವರ್ಷಗಳಲ್ಲಿ ದೊಡ್ಡ ಮಟ್ಟಿಗೆ ಹೆಸರು ಸಂಪಾದನೆ ಮಾಡಿದ್ದ ನಟ ಗಣೇಶ್, ಭಾರಿ ಗೆಲುವಿನ ನಡುವೆ ಸೋಲುಗಳನ್ನ ಕೂಡ ಕಂಡಿದ್ದಾರೆ. ಅಲ್ಲದೆ ಆ ಸೋಲುಗಳೇ ಗಣೇಶ್‌ಗೆ ಪಾಠ ಕೂಡ ಕಲಿಸಿದೆ, ಈ ಮಾತನ್ನ ಸ್ವತಃ ಅವರೇ ಅನೇಕ ಸಂದರ್ಶನಗಳ ವೇಳೆ ಹೇಳಿದ್ದು ವೈರಲ್ ಆಗಿತ್ತು. ಈಗಲೂ ಗೋಲ್ಡನ್ ಸ್ಟಾರ್ ಗಣಿ ಸಿನಿಮಾಗಳು ಬಿಸಿ ದೋಸೆಯಂತೆ ಸೇಲ್ ಆಗುತ್ತವೆ. ಹಾಗೇ ಸಾಲು ಸಾಲು ಸಿನಿಮಾಗಳನ್ನ ತೆರೆಗೆ ತರಲು ಗಣೇಶ್ ಅವರು ಎಲ್ಲಾ ರೀತಿ ಸಿದ್ಧತೆ ನಡೆಸುತ್ತಿದ್ದಾರೆ. ಹೀಗಾಗಿ ಗಣೇಶ್ ಅಭಿಮಾನಿ ಬಳಗ ಮತ್ತಷ್ಟು ಸಿನಿಮಾ ನೋಡಲು ಈಗ ಕಾಯುತ್ತಿದೆ.
ನಟ ಗಣೇಶ್ ವಿರುದ್ಧ ಇದೇನಿದು?
ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಹೊಸ ಗತ್ತು ಪ್ರದರ್ಶಿಸುತ್ತಿದ್ದರು. ಹೀಗಿದ್ದಾಗ ಗಣೇಶ್ ಅವರ ವಿರೋಧಿಗಳು ಸೇರಿ ಗಣೇಶ್ ವಿರುದ್ಧ ಹಲವು ರೀತಿಯ ಕುತಂತ್ರ ಮಾಡಿದ್ದರು. ಕೊನೆಗೆ ಇದು ದೊಡ್ಡ ಸಂಚಲನ ಕೂಡ ಸೃಷ್ಟಿ ಮಾಡಿತ್ತು. ಹೇಗೆ ನೋಡಿದ್ರು ಕೊನೆಗೆ ಗಣೇಶ್ ಅವರೇ ಟಾರ್ಗೆಟ್ ಆಗುತ್ತಿದ್ದರು.
ಹೀಗಿದ್ದಾಗ ನಟ ಗಣೇಶ್ ಮೇಲೆ ಹಲ್ಲೆ ಮಾಡಿ, ಹಿಂಸೆ ನೀಡಲಾಗಿದೆ ಎಂಬ ಸುದ್ದಿ ಸಂಚಲನ ಸೃಷ್ಟಿ ಮಾಡಿತ್ತು. ಅದೂ, ಕನ್ನಡ ಸಿನಿಮಾ ರಂಗದ ದೊಡ್ಡ ಹೀರೋ ವಿರುದ್ಧ ಗಂಭೀರ ಆರೋಪ ಕೇಳಿಬಂದಿತ್ತು. ಕೊನೆಗೂ ಅದೇ ಹೀರೋ ಬಹಿರಂಗವಾಗಿ ಗಣೇಶ್ ನನ್ನ ತಮ್ಮನಂತೆ ಅಂತಾ ಹೇಳಿಕೆ ನೀಡಿದ್ದರು. ಈ ಹೇಳಿಕೆ ಬಳಿಕ ಎಲ್ಲವೂ ತಣ್ಣಗಾಗಿ ಹೋಗಿತ್ತು! ಹಾಗೂ ಗಣೇಶ್ ಅವರ ವಿರುದ್ಧ ನಡೆದಿದ್ದ ಕುತಂತ್ರದ ಸುಳ್ಳು ಸುದ್ದಿ ಇದು ಎಂಬುದು ಖಚಿತವಾಗಿತ್ತು.












Click it and Unblock the Notifications