Darshan Thoogudeepa: ದರ್ಶನ್ ತೂಗುದೀಪ್ ಆರೋಗ್ಯದಲ್ಲಿ ಏರುಪೇರು, ದರ್ಶನ್ ಜೀವಕ್ಕೆ ಕಂಟಕ?
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಬಳ್ಳಾರಿ ಜೈಲಲ್ಲಿ ಒದ್ದಾಡುತ್ತಿದ್ದಾರೆ ದರ್ಶನ್ ತೂಗುದೀಪ್. ದರ್ಶನ್ ತೂಗುದೀಪ್ ಬಳ್ಳಾರಿ ಜೈಲಿನಲ್ಲಿ ಊಟ ಹಿಡಿಸದೆ, ಆರೋಗ್ಯ ಕೈಕೊಟ್ಟು ಪ್ರತಿದಿನ ಪರದಾಡುವ ಪರಿಸ್ಥಿತಿ ಬಂದಿದೆ. ಬಳ್ಳಾರಿ ಜೈಲಿನ ವಿಶೇಷ ಭದ್ರತೆ ಇರುವ ಕೋಣೆಯ ಒಳಗೆ ದರ್ಶನ್ ತೂಗುದೀಪ್ ಜೈಲಿನ ಊಟ ಹಿಡಿಸದೆ ಒದ್ದಾಡುತ್ತಿದ್ದಾರೆ. ಇದೇ ಸಮಯದಲ್ಲಿ ಇಂದು ತಮ್ಮ ಹೆಂಡತಿ & ತಮ್ಮನ ಜೊತೆಗೆ ಭೇಟಿ ಮಾಡಿ ಮಾತನಾಡಿರುವ ದರ್ಶನ್ ತೂಗುದೀಪ್, ಆರೋಗ್ಯದಲ್ಲಿ ಏರುಪೇರಾಗಿ...
ದರ್ಶನ್ ತೂಗುದೀಪ್ ಇಂದು ತಮ್ಮ ಕುಟುಂಬದ ಸದಸ್ಯರನ್ನು ಭೇಟಿ ಮಾಡಲು ನಡೆದು, ಹೊರಗೆ ಬರುವ ಸಮಯದಲ್ಲಿ ತುಂಬಾ ಸೊರಗಿ ಹೋಗಿರುವ ರೀತಿ ಕಂಡುಬಂದರು. ಇದೇ ಸಮಯದಲ್ಲಿ ದರ್ಶನ್ ತೂಗುದೀಪ್ ಅವರ ಆರೋಗ್ಯದಲ್ಲಿ ಏರುಪೇರು ಆಗಿರುವ ರೀತಿಯೇ ಅವರ ಮುಖದಲ್ಲಿ ಕಂಡುಬಂತು, ಎನ್ನುತ್ತಾ ದರ್ಶನ್ ಅವರ ಅಭಿಮಾನಿಗಳು ಈಗ ಭಾರಿ ಆತಂಕ ಹೊರ ಹಾಕುತ್ತಿದ್ದಾರೆ. ಹಾಗೇ ಮತ್ತೊಂದು ಕಡೆ ದರ್ಶನ್ ತೂಗುದೀಪ್ ಆರೋಗ್ಯದಲ್ಲಿ ಭಾರಿ ಏರುಪೇರು ಆಗಿದ್ದು, ಜೀವಕ್ಕೂ ಕಂಟಕ ಎದುರಾಗಿದೆ ಎಂದು ಸುದ್ದಿ ಹಬ್ಬಿಸುತ್ತಿದ್ದಾರೆ ಕೆಲವರು.

ಚಿಂತೆ.. ಚಿಂತೆ.. ಚಿಂತೆ!
ದರ್ಶನ್ ತೂಗುದೀಪ್‌ಗೆ ಬೇಕಾದ ಎಲ್ಲಾ ವಸ್ತುಗಳು ಸುಲಭವಾಗಿ ಸಿಗುತ್ತಿತ್ತು, ಇದರ ಜೊತೆ ವರ್ಷಕ್ಕೆ ಕನಿಷ್ಠ ಹತ್ತು ಸಾರಿ ವಿದೇಶಿ ಪ್ರವಾಸಗಳಿಗೂ ಹೋಗಿ ಬರುತ್ತಿದ್ದರು ನಟ ದರ್ಶನ್ ತೂಗುದೀಪ್. ಹೀಗಿದ್ದಾಗಲೇ ನಟ ದರ್ಶನ್ ತೂಗುದೀಪ್ ಅವರಿಗೆ ಇದೀಗ ಚಿಂತೆ ಕಾಡ್ತಿದ್ದು, ಇಡೀ ಜಗತ್ತಿನಲ್ಲೇ ಇದನ್ನು ಅತ್ಯಂತ ಭಯಾನಕ ರೋಗ ಎನ್ನುತ್ತಾರೆ ವೈದ್ಯರು.
ಯಾಕಂದ್ರೆ ಮನುಷ್ಯನ ಮನಸ್ಸು & ದೇಹ ಎರಡನ್ನು ಒಟ್ಟಿಗೆ ಹಾಳು ಮಾಡುವ ಶಕ್ತಿ ಇರುವುದು ಚಿಂತೆ ಎಂಬ ರೋಗಕ್ಕೆ ಮಾತ್ರ. ಈಗ ದರ್ಶನ್ ತೂಗುದೀಪ್ ಕೂಡ ತಾನು ಜೈಲಿಗೆ ಬಂದಿದ್ದು ಮತ್ತು ಜೈಲಿನ ಕೋಣೆಗಳಲ್ಲಿ ವಿಲವಿಲ ಒದ್ದಾಡುತ್ತಿರುವುದು ಸೇರಿದಂತೆ ಈ ಪರಿಸ್ಥಿತಿ ನೆನಪು ಮಾಡಿಕೊಂಡು ನರಳುತ್ತಿದ್ದಾರೆ. ಹೀಗಾಗಿ ದರ್ಶನ್ ತೂಕ ಕೂಡ ಭಾರಿ ಪ್ರಮಾಣದಲ್ಲಿ ಈಗ ಕುಸಿದು ಹೋಗಿದೆ.
ಚಿಂತೆಯಲ್ಲಿ ನರಳುತ್ತಿರುವ ಡಿ-ಬಾಸ್?
ದರ್ಶನ್ ತೂಗುದೀಪ್ ತಮ್ಮ ಕುಟುಂಬದ ಸದಸ್ಯರನ್ನು ಭೇಟಿ ಮಾಡೋದಕ್ಕೆ ನಡೆದು ಹೊರಗೆ ಬರುವ ಸಮಯದಲ್ಲಿ ತುಂಬಾ ಸೊರಗಿ ಹೋಗಿರುವ ರೀತಿ ಕಂಡುಬಂದರು. ಈ ಸಮಯದಲ್ಲೇ ದರ್ಶನ್ ತೂಗುದೀಪ್ ಅವರ ಆರೋಗ್ಯದಲ್ಲಿ ಏರುಪೇರು ಆಗಿರುವ ರೀತಿಯೆ ಅವರ ಮುಖದಲ್ಲಿ ಕಂಡುಬಂತು ಎನ್ನುತ್ತಾ ದರ್ಶನ್ ಅಭಿಮಾನಿಗಳು ಈಗ ಆತಂಕ ಹೊರ ಹಾಕುತ್ತಿದ್ದಾರೆ. ಹಾಗೇ ಮತ್ತೊಂದು ಕಡೆ ದರ್ಶನ್ ತೂಗುದೀಪ್ ಆರೋಗ್ಯದಲ್ಲಿ ಭಾರಿ ಏರುಪೇರು ಆಗಿದ್ದು, ಜೀವಕ್ಕೂ ಕಂಟಕ ಎದುರಾಗಿದೆ ಎಂದು ಸುದ್ದಿ ಹಬ್ಬಿಸುತ್ತಿದ್ದಾರೆ ಕೆಲವರು. ಆದರೆ ದರ್ಶನ್ ತೂಗುದೀಪ್ ಆರೋಗ್ಯ ಚನ್ನಾಗಿದ್ದು, ಚಿಂತೆ ಅವರನ್ನ ಕಾಡುತ್ತಿದೆ ಎನ್ನಲಾಗಿದೆ.
ಡಿ-ಬಾಸ್ ಸೈಲೆಂಟ್ ಆಗಿದ್ದು ಏಕೆ?
ದರ್ಶನ್ ತೂಗುದೀಪ್‌ಗೆ ಅಹಂಕಾರ & ಕೋಪವೇ ಮುಳ್ಳಾಗಿ ಪರಿಣಮಿಸಿದೆ ಎನ್ನುವ ಆರೋಪ ಇದೆ. ರೇಣುಕಾಸ್ವಾಮಿ ಕಿಡ್ನಾಪ್ ಮಾಡಲು ಸ್ವತಃ ದರ್ಶನ್ ತೂಗುದೀಪ್ ಸುಪಾರಿ ಕೊಟ್ಟು, ನಂತರ ಬೆಂಗಳೂರಿನ ಪಟ್ಟಣಗೆರೆ ಶೆಡ್‌ಗೆ ಕರೆದುಕೊಂಡು ಬಂದು ಮರ್ಮಾಂಗಕ್ಕೆ ಒದ್ದಿದ್ದೂ ಇದೆ ಎಂಬ ಆರೋಪ ಇದೆ. ಅದರಲ್ಲೂ ದರ್ಶನ್ ತೂಗುದೀಪ್ ಈ ರೀತಿ ರೇಣುಕಾಸ್ವಾಮಿಗೆ ಹಿಂಸೆ ಕೊಟ್ಟಿರುವುದಕ್ಕೆ & ಕಿಡ್ನಾಪ್ ಮಾಡಿಕೊಂಡು ಚಿತ್ರದುರ್ಗದಿಂದ ಕರೆದುಕೊಂಡು ಬರಲು ಆರ್ಡರ್ ಮಾಡಿದ್ದಕ್ಕೂ ಸಾಕ್ಷ್ಯಗಳು ಸಿಕ್ಕಿವೆ. ಪರಿಸ್ಥಿತಿ ಹೀಗಿದ್ದಾಗ ರೇಣುಕಾಸ್ವಾಮಿಯ ಬರ್ಬರ ಕೊಲೆ ಕೇಸ್‌ನಲ್ಲಿ ದರ್ಶನ್ ತೂಗುದೀಪ್ ಪ್ರಮುಖ ಆರೋಪಿ ಆಗಿದ್ದಾನೆ. ಇಷ್ಟಾದರೂ ಈಗ ಮೀಡಿಯಾಗಳಿಗೆ ಬೆರಳು ತೋರಿಸಿ ತನ್ನ ಬುಡಕ್ಕೆ ತಾನೆ ಬೆಂಕಿ ಹಚ್ಚಿಕೊಂಡಿದ್ದಾನೆ ಎನ್ನುವ ಅಭಿಪ್ರಾಯ ದರ್ಶನ್ ವಿರೋಧಿಗಳದ್ದು. ಹೀಗಿದ್ದಾಗಲೇ ಬಳ್ಳಾರಿ ಜೈಲಿನ ಅಧಿಕಾರಿಗಳಿಂದ ಕೂಡ ಎಚ್ಚರಿಕೆ ಪಡೆದಿದ್ದಾನೆ ಕೊಲೆ ಆರೋಪಿ ದರ್ಶನ್ ತೂಗುದೀಪ!












Click it and Unblock the Notifications