Darshan Thoogudeepa: ಬಳ್ಳಾರಿ ಜೈಲಿನಲ್ಲಿ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಭಯಾನಕ ರೋಗ?

ದರ್ಶನ್ ತೂಗುದೀಪ್ ಅವರಿಗೆ ಇದೀಗ ಸಾಲು ಸಾಲು ಆರೋಗ್ಯ ಸಮಸ್ಯೆ ಎದುರಾಗುತ್ತಿದ್ದು, ಬಳ್ಳಾರಿ ಜೈಲಿನಲ್ಲಿ ಅಭಿಮಾನಿಗಳ 'ಡಿ-ಬಾಸ್' ನರಳಾಡುತ್ತಿದ್ದಾರೆ. ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ತೂಗುದೀಪ್ & ಜೊತೆಗಾರರು ಟೀ, ಸಿಗರೇಟ್, ಬಿರಿಯಾನಿ ಅಂತಾ ಮಜಾ ಮಾಡುತ್ತಿದ್ದರು ಎಂಬ ಆರೋಪ ಕೇಳಿಬಂದಿತ್ತು. ನಟ ದರ್ಶನ್ ತೂಗುದೀಪ್ ಅವರ ವಿರೋಧಿಗಳು ಇಂತಹ ಆರೋಪ ಮಾಡಿ, ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡುವಂತೆ ಒತ್ತಡ ಹಾಕಿದ್ದರು, ಎಂಬ ಆರೋಪ ಇದೆ. ಹೀಗಿದ್ದಾಗಲೇ ಬಳ್ಳಾರಿ ಜೈಲಿನಲ್ಲಿ ನರಳುತ್ತಿರುವ ದರ್ಶನ್ ಅವರಿಗೆ ಅದೊಂದು ಭಯಾನಕ ರೋಗ ಕಾಡುತ್ತಿದೆಯಂತೆ!

ನಟ ದರ್ಶನ್ ತೂಗುದೀಪ್ ಹೊರಗೆ ಇದ್ದಾಗ ಜಿಮ್ ಮಾಡಿಕೊಂಡು, ಆರಾಮವಾಗಿ ಎಲ್ಲ ಕಡೆ ಓಡಾಡಿಕೊಂಡು ಇದ್ದರು. ದರ್ಶನ್ ತೂಗುದೀಪ್ ಆರೋಗ್ಯ ಕೂಡ ಚೆನ್ನಾಗಿಯೇ ಇತ್ತು. ಅದ್ರಲ್ಲೂ ದರ್ಶನ್ ತೂಗುದೀಪ್ ಅವರ ಹೆಲ್ತ್ ಸೀಕ್ರೆಟ್ ಬಗ್ಗೆ ಅಭಿಮಾನಿಗಳಿಗೆ ಕೂಡ ಭಾರಿ ಕುತೂಹಲ ಇತ್ತು. ಹೀಗೆ ಎಲ್ಲವೂ ಅಚ್ಚುಕಟ್ಟಾಗಿ ನಡೆದುಕೊಂಡು ಹೋಗುವ ಸಮಯಕ್ಕೇ ದಿಢೀರ್ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ಅವರು ಪರಪ್ಪನ ಅಗ್ರಹಾರಕ್ಕೆ, ಅಂದ್ರೆ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿಗೆ ಸೇರಿದರು. ಆದರೆ ಪರಪ್ಪನ ಅಗ್ರಹಾರದಲ್ಲು ಎಡವಟ್ಟು ಆಗಿ ಇದೀಗ ಬಳ್ಳಾರಿ ಜೈಲಿನಲ್ಲಿ ಪರದಾಡುತ್ತಿರುವ ನಟ ದರ್ಶನ್ ಅವರಿಗೆ ಈಗ ಕಾಡುತ್ತಿರುವ ಭಯಾನಕ ರೋಗ ಯಾವುದು ಗೊತ್ತೆ?

Kannada Actor Darshan Thoogudeepa Health Issue

ದಾಸ ದರ್ಶನ್ ತೂಗುದೀಪ್ ಆರೋಗ್ಯಕ್ಕೆ...

ದರ್ಶನ್ ತೂಗುದೀಪ್ ಅವರೇ ಒಂದು ದೊಡ್ಡ ಬ್ರಾಂಡ್ ಅನ್ನೋದು ಅವರ ಅಭಿಮಾನಿಗಳ ಪ್ರತಿಪಾದನೆ. ಹಾಗೇ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ದರ್ಶನ್ ತೂಗುದೀಪ್ ಅವರ ರೀತಿ, ಬಾಕ್ಸ್ ಆಫಿಸ್ ಕಲೆಕ್ಷನ್ ಮಾಡುವವರು ಮತ್ತೊಬ್ಬರು ಹುಟ್ಟಿಲ್ಲ ಅಂತಾರೆ ಅವರ ಫ್ಯಾನ್ಸ್. ಅಭಿಮಾನಿಗಳಿಂದ 'ಡಿ-ಬಾಸ್' ಎಂದು ಕರೆಸಿಕೊಳ್ಳುವ ದರ್ಶನ್ ತೂಗುದೀಪ್ ಅವರ ಫ್ಯಾನ್ಸ್, ಈ ವಿಚಾರದಿಂದ ವಿಚಲಿತರಾಗಿದ್ದಾರೆ. ಪರಿಸ್ಥಿತಿ ಹೀಗಿದ್ದಾಗಲೇ ಬಳ್ಳಾರಿ ಜೈಲಿನಿಂದ ಸ್ಫೋಟಕ ಸುದ್ದಿ ಹೊರ ಬಿದ್ದಿದ್ದು, ಇದೀಗ ದರ್ಶನ್ ಅವರ ಆರೋಗ್ಯದಲ್ಲಿ ಏರುಪೇರು ಆಗಿದೆಯಂತೆ.

ಮಲಗಲು & ಕುಳಿತುಕೊಳ್ಳಲು ಸಮಸ್ಯೆ?

ದರ್ಶನ್ ತೂಗುದೀಪ್ ಅವರ ಆರೋಗ್ಯದಲ್ಲಿ ಏರುಪೇರು ಆಗಲು ಕಾರಣ, ಬೆನ್ನು ಹುರಿಯ ನೋವು. ದರ್ಶನ್ ಅವರಿಗೆ ಬೆನ್ನು ಹುರಿ ನೋವು ಅಥವಾ ಬೆನ್ನು ನೋವು ತೀವ್ರವಾಗಿದೆ. ಹೀಗಾಗಿ ದರ್ಶನ್ ತೂಗುದೀಪ್ ಅವರು ಪರದಾಡುತ್ತಿದ್ದಾರೆ, ಅಲ್ಲದೆ ತಮಗೆ ಸೂಕ್ತ ವ್ಯವಸ್ಥೆ ಬೇಕಾಗಿದೆ. ಕೂರಲು, ಮಲಗಲು ಸೂಕ್ತ ವ್ಯವಸ್ಥೆ ಮಾಡಿಕೊಡಿ ಎಂದು ದರ್ಶನ್ ತೂಗುದೀಪ್ ಅವರು ಮನವಿ ಮಾಡಿದ್ದಾರಂತೆ. ಹೀಗಾಗಿ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು, ಈ ವಿಚಾರದಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.

ದರ್ಶನ್ ಬೆನ್ನಿಗೆ ಹೊಸ ಕಂಟಕ?

ಕನ್ನಡ ಸಿನಿಮಾ ರಂಗದ ಸೂಪರ್ ಸ್ಟಾರ್ ಆಗಿ ಮೆರೆದಿದ್ದ ದರ್ಶನ್ ತೂಗುದೀಪ್ ಸಾಕಷ್ಟು ಸಂಕಷ್ಟ ಎದುರಿಸುವ ಪರಿಸ್ಥಿತಿ ಬಂದಿದೆ. ಯಾಕಂದ್ರೆ ಪರಪ್ಪನ ಅಗ್ರಹಾರ ಜೈಲಿನ ಒಳಗೆ, ಮನಸ್ಸಿಗೆ ಬಂದಂತೆ ಬದುಕುತ್ತಿದ್ದ ಫೋಟೋಸ್ ಈಗ ವೈರಲ್ ಆಗುತ್ತಿವೆ. ಇದೆಲ್ಲಾ ಮಾನ್ಯ ನ್ಯಾಯಾಲಯಕ್ಕೆ ತಲುಪಿದರೆ ದರ್ಶನ್ ತೂಗುದೀಪ್‌ಗೆ ಸಂಕಷ್ಟ ಗ್ಯಾರಂಟಿ ಅಂತಾ ಹೇಳ್ತಾ ಇದ್ದಾರೆ ಕಾನೂನು ತಜ್ಞರು. ಹೀಗಾಗಿ ನಟ ದರ್ಶನ್ ತೂಗುದೀಪ್ ವಿರುದ್ಧ ಇದೀಗ ಹೊಸ ಕಂಟಕ ಎದುರಾದಂತೆ ಕಾಣುತ್ತಿದೆ. ಭವಿಷ್ಯದಲ್ಲಿ ಜಾಮೀನು ಪಡೆದು ದರ್ಶನ್ ತೂಗುದೀಪ್ ಹೊರಗೆ ಬರಲು ಇದು ಸಮಸ್ಯೆ ಮಾಡಬಹುದು ಎನ್ನಲಾಗುತ್ತಿದೆ. ಆದರೆ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳೇ ಈ ಫೋಟೋಸ್ ವೈರಲ್ ಮಾಡುತ್ತಾ, ನಮ್ಮ ಬಾಸ್ ಹಂಗೆ & ಹಿಂಗೆ ಅಂತಾ ಪೋಸ್ಟ್ ಹಾಕುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+