Ajay Rao: ನಟ ಅಜಯ್ ರಾವ್ ಬಾಳಲ್ಲಿ ಬಿರುಗಾಳಿ, ಡಿವೋರ್ಸ್ - ಕಾರಣವೇನು ?!

ಕನ್ನಡ ಚಿತ್ರರಂಗದ ಪ್ರಸಿದ್ಧ ನಟ ಅಜಯ್ ರಾವ್ ಅವರ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ. ಕನ್ನಡದಲ್ಲಿ ಉತ್ತಮ ಸಿನಿಮಾಗಳನ್ನು ನೀಡುತ್ತಿದ್ದ ಹಾಗೂ ನಿರ್ದೇಶನದಲ್ಲೂ ತೊಡಗಿಸಿಕೊಂಡಿರುವ ಅಜಯ್ ರಾವ್ ಅವರ ಬದುಕಲ್ಲಿ ಬಿರುಗಾಳಿ ಸೃಷ್ಟಿಯಾಗಿದೆ. ಅಜಯ್ ರಾವ್ ಮತ್ತು ಅವರ ಪತ್ನಿ ಸ್ವಪ್ನ ಅವರು ಡಿವೋರ್ಸ್‌ಗೆ ಮುಂದಾಗಿದ್ದಾರೆ. ಈ ಮೂಲಕ 11 ವರ್ಷಗಳ ದಾಂಪತ್ಯ ಜೀವನಕ್ಕೆ ವಿದಾಯ ಹೇಳಿದ್ದಾರೆ. ಅಜಯ್ ರಾವ್ ಮತ್ತು ಸ್ವಪ್ನ ಅವರು 2014ನೇ ವರ್ಷದಲ್ಲಿ ಹೊಸೇಪಟೆಯಲ್ಲಿ ಸರಳವಾಗಿ ವಿವಾಹವಾಗಿದ್ದರು. ಒಂದು ಹೆಣ್ಣು ಮಗು ಇದೆ. ಈ ವಿಷಯ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಕನ್ನಡ ಚಿತ್ರರಂಗದಲ್ಲಿ ಏನಾದರೂ ಕೆಟ್ಟ ಘಟನೆಗಳು ಸಂಭವಿಸಿದರೆ ಒಂದರೆ ಹಿಂದೆಯೇ ಒಂದು ಘಟನೆಗಳು ಸಂಭವಿಸುವುದು ಇದೆ. ಇದೀಗ ಕನ್ನಡದ ಪ್ರಸಿದ್ಧ ನಟ ಅಜಯ್ ರಾವ್ ಅವರ ಡಿವೋರ್ಸ್ ಸುದ್ದಿ ಬಂದಿದೆ. ಈಚೆಗೆ ಅಜಯ್ ರಾವ್ ಮತ್ತು ಅವರ ಪತ್ನಿ ಈಚೆಗೆ ಹೊಸ ಮನೆಗೆ ಗೃಹಪ್ರವೇಶ ಮಾಡಿದ್ದರು. ಯುದ್ಧಕಾಂಡ ಸಿನಿಮಾ ಸಾಕಷ್ಟು ಸುದ್ದಿ ಮಾಡಿತ್ತು. ಇನ್ನು ಇಬ್ಬರು ಪ್ರೀತಿಸಿ ಮನೆಯವರನ್ನೆಲ್ಲರನ್ನೂ ಒಪ್ಪಿಸಿ ವಿವಾಹವಾಗಿದ್ದರು. ಆದರೆ ಅವರ ಒಂದು ದಶಕದ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿರುವುದು ಅವರ ಅಭಿಮಾನಿಗಳಿಗೂ ಶಾಕ್ ಆಗಿದೆ.

Kannada Actor Ajay Rao Divorce Shock What Led to the Turmoil in the Actor s Life

ಅಜಯ್ ರಾವ್ ಅವರು ಕನ್ನಡ ಚಿತ್ರರಂಗದಲ್ಲಿ ಕೃಷ್ಣ ಅಂತಲೇ ಖ್ಯಾತಿ ಗಳಿಸಿದ್ದಾರೆ. ಅವರ ಅಭಿನಯವನ್ನು ಕನ್ನಡಿಗರು ಮೆಚ್ಚಿಕೊಂಡಿದ್ದಾರೆ. ನಿರ್ಮಾಣದಲ್ಲೂ ಅಜಯ್ ರಾವ್‌ ಅವರು ಪ್ರಯತ್ನ ಮಾಡಿದ್ದರು. 2003ರಲ್ಲಿ ಬಿಡುಗಡೆ ಆಗಿದ್ದ ಎಕ್ಸ್ಕ್ಯೂಸ್ ಮೀ ಸಿನಿಮಾದ ಮೂಲಕ ಅಜಯ್ ರಾವ್ ಅವರು ನಾಯಕ ನಟನಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ನಟ ಸುದೀಪ್ ಅವರ ಕಿಚ್ಚ ಸಿನಿಮಾನಲ್ಲಿ ಸುದೀಪ್ ಅವರ ಗೆಳೆಯನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ತಾಜ್ ಮಹಲ್, ಪ್ರೇಮ್ ಕಹಾನಿ, ಕೃಷ್ಣನ್ ಲವ್ ಸ್ಟೋರಿ, ಕೃಷ್ಣನ್ ಮ್ಯಾರೇಜ್ ಸ್ಟೋರಿ, ಕೃಷ್ಣ-ಲೀಲಾ ಹಾಗೂ ಯುದ್ಧಕಾಂಡ ಸೇರಿದಂತೆ ಹಲವು ಸೂಪರ್ ಹಿಟ್‌ ಸಿನಿಮಾಗಳನ್ನು ಕೊಟ್ಟಿದ್ದಾರೆ. ಕೃಷ್ಣ ಎನ್ನುವ ಹೆಸರು ಅಜಯ್ ರಾವ್ ಅವರಿಗೆ ಲಕ್ಕಿ ಎನ್ನುವ ಮಾತಿದೆ. ಆದರೆ ದುರಂತವೆನ್ನುವಂತೆ ಕೃಷ್ಣ ಜನ್ಮಾಷ್ಟಮಿಯ ದಿನವೇ ಅವರ ದಾಂಪತ್ಯದಲ್ಲಿ ಬಿರುಕು ಮೂಡಿರುವ ಸುದ್ದಿ ಬಂದಿದೆ.

ಇನ್ನು ಕನ್ನಡ ಚಿತ್ರರಂಗದ ಜನಪ್ರಿಯ ನಟರಾಗಿರುವ ಅಜಯ್ ರಾವ್ ಅವರ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದ್ದು. ನಟ ಅಜಯ್ ರಾವ್ ವಿರುದ್ಧ ಅವರ, ಪತ್ನಿ ಸಪ್ನಾ ಅವರು ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯಡಿ ದೂರು ನೀಡಿದ್ದಾರೆ ಎಂದು ಹೇಳಲಾಗಿದೆ. ಅಲ್ಲದೇ ಪತ್ನಿ ಸ್ವಪ್ನ ಅವರೊಂದಿಗೆ ದಂಪತಿ ಮಗಳು ಚರಿಷ್ಮಾ ಸಹ ಅಜಯ್ ರಾವ್ ವಿರುದ್ಧ ದೂರು ನೀಡಿದ್ದಾರೆ ಎಂದು ಹೇಳಲಾಗಿದೆ. ಈ ವಿಷಯಗಳ ಬಗ್ಗೆ ಇನ್ನಷ್ಟೇ ಅಜಯ್ ರಾವ್‌ ಮತ್ತು ಸ್ವಪ್ನ ಅವರು ಹೆಚ್ಚಿನ ಮಾಹಿತಿ ಹಾಗೂ ಸ್ಪಷ್ಟನೆ ನೀಡಬೇಕಿದೆ. ಈ ವಿಚಾರದ ಬಗ್ಗೆ ಇನ್ನಷ್ಟೇ ನಿಖರ ಮಾಹಿತಿ ಲಭ್ಯವಾಗಬೇಕಿದೆ.

ಜೊತೆಯಾಗಿ ಪ್ರಚಾರ: ಇನ್ನು ಯುದ್ಧಕಾಂಡ -2 ಸಿನಿಮಾದ ಪ್ರಚಾರದಲ್ಲೂ ನಟ ಅಜಯ್‌ರಾವ್ ಅವರು ಹಾಗೂ ಸ್ವಪ್ನ ದಂಪತಿ ಈಚೆಗೆ ಯುದ್ಧಕಾಂಡ ಸಿನಿಮಾದ ಪ್ರಚಾರದಲ್ಲೂ ಭಾಗವಹಿಸಿದ್ದರು. ಆದರೆ ಸೆಲೆಬ್ರಿಟಿ ಪಾರ್ಟಿಗಳಲ್ಲಿ ಅಜಯ್ ಅವರ ಪತ್ನಿ ಸ್ವಪ್ನ ಅವರು ಕಾಣಿಸಿಕೊಳ್ಳುವುದು ಅಪರೂಪದಲ್ಲಿ ಅಪರೂಪವಾಗಿತ್ತು.

ಜ್ಯೋತಿಷಿ ಭವಿಷ್ಯ: ಇನ್ನು ಈ ಹಿಂದೆ ಅಜಯ್ ರಾವ್ ಅವರೇ ಜ್ಯೋತಿಷಿಯೊಬ್ಬರು ಹೇಳಿದ್ದ ಮಾತನ್ನು ಹೇಳಿದ್ದರು. ನಾನು ಜ್ಯೋತಿಷ್ಯದಲ್ಲಿ ನಂಬುವುದಿಲ್ಲ. ಮುಹೂರ್ತಗಳನ್ನು ನೋಡುವುದಿಲ್ಲ ಎಂದಿದ್ದರು. ಇನ್ನು ಅಜಯ್ ಅವರಿಗೆ ಜ್ಯೋತಿಷಿಯೊಬ್ಬರು ಒಂದೇ ವರ್ಷದಲ್ಲಿ ಡಿವೋರ್ಸ್ ಆಗಲಿದೆ ಎಂದಿದ್ದನ್ನು ಸಹ ಅಜಯ್ ರಾವ್ ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಸಿನಿಮಾಗಳ ಮುಹೂರ್ತಕ್ಕೂ ಅಜಯ್‌ ಅವರು ಮುಹೂರ್ತ, ಶಾಸ್ತ್ರ ನೋಡುತ್ತಿರಲಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+