ಡಿ-ಬಾಸ್ VS ಕಿಂಗ್ ಖಾನ್ VS ಪ್ರಭಾಸ್ ಸಿನಿ ಫೈಟ್‌ನಲ್ಲಿ ಜಯ ಯಾರಿಗೆ?
ಕನ್ನಡ ಸಿನಿಮಾಗಳು ಒಂದು ಜಮಾನದಲ್ಲಿ ಪರಭಾಷೆ ಸಿನಿಮಾಗಳ ಎದುರು ರಿಲೀಸ್ ಆಗಲು ಹೆದರುತ್ತಿದ್ದವು. ಆದ್ರೆ ಈಗ ಸೀನ್ ಕಂಪ್ಲೀಟ್ ಉಲ್ಟಾ ಆಗೋಗಿದೆ. ಅದು ಹೇಗಪ್ಪಾ ಅಂದರೆ ಕನ್ನಡ ಸಿನಿಮಾಗಳ ಎದುರು, ಬಾಲಿವುಡ್ ಸೇರಿದಂತೆ ಬೇರೆ ಬೇರೆ ಭಾಷೆ ಸಿನಿಮಾ ರಿಲೀಸ್ ಮಾಡೋದಕ್ಕೆ ಪರಭಾಷಿಗರು ಈಗ ಹಿಂದೆ & ಮುಂದೆ ಯೋಚನೆ ಮಾಡುವ ಸ್ಥಿತಿ ನಿರ್ಮಾಣ ಆಗೋಗಿದೆ! ಈ ಮಾತನ್ನು ಕನ್ನಡಿಗರ 'ಕಾಟೇರ' ಮತ್ತೆ ನಿಜ ಮಾಡಿ ತೋರಿಸಿದೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 'ಕಾಟೇರ' ಸಿನಿಮಾ ರಿಲೀಸ್ ಆಗುವುದಕ್ಕಿಂತ ಮುನ್ನ 'ಸಲಾರ್' ಹಾಗೂ 'ಡಂಕಿ' ಸಿನಿಮಾಗಳು ರಿಲೀಸ್ ಆಗಿದ್ದವು. ಹೀಗಾಗಿ ಫೈಟಿಂಗ್ ತುಂಬಾ ಜೋರಾಗಿತ್ತು. 'ಕಾಟೇರ' ಸಿನಿಮಾ ತಂಡ ಈ ಸವಾಲನ್ನ ಸವಾಲಿನಿಂದಲೇ ಸ್ವೀಕರಿಸಿತ್ತು. ಹಾಗೇ ಸಲಾರ್ & ಡಂಕಿ ದೊಡ್ಡ ಸಿನಿಮಾ ಆಗಿದ್ದರೂ, ಅದರ ಎದುರು ಕನ್ನಡ ಸಿನಿಮಾ ಕಾಟೇರ ರಿಲೀಸ್ ಮಾಡಿದ್ದರು. ಇದೀಗ ಈ ಸಿನಿಮಾ ಫೈಟ್‌ನಲ್ಲಿ, ಗೆದ್ದಿದ್ದು ಯಾರು ಗೊತ್ತಾ? ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ.

ಡಂಕಿ & ಸಲಾರ್ ಗಳಿಸಿದ್ದು ಎಷ್ಟು ಕೋಟಿ?
'ಡಂಕಿ' ಸಿನಿಮಾ ರಿಲೀಸ್ ಆಗಿ 13 ದಿನಗಳೆ ಕಳೆದಿದೆ ಡಿಸೆಂಬರ್ 21 ಕ್ಕೆ ಈ ಸಿನಿಮಾ ರಿಲೀಸ್ ಆಗಿತ್ತು. ದಿನದಿಂದ ದಿನಕ್ಕೆ ಈ ಸಿನಿಮಾ ಬಾಕ್ಸ್ ಆಫಿಸ್ ಕಲೆಕ್ಷನ್ ಹೆಚ್ಚಿಸಿಕೊಂಡಿದ್ದು, ಇದೀಗ 410 ಕೋಟಿ ರೂ. ಕ್ಲಬ್ ಸೇರಿದೆ. ಅದರಲ್ಲೂ ಭಾರತದಲ್ಲಿ ಈ ಸಿನಿಮಾ ಭರ್ಜರಿ 200 ಕೋಟಿ ಬಾಚಿದೆ ಎನ್ನಲಾಗಿದೆ. ಹಾಗಾದರೆ ಸಲಾರ್ ಸಿನಿಮಾ ಈವರೆಗೂ ಗಳಿಕೆ ಮಾಡಿರುವ ಮೊತ್ತ ಎಷ್ಟು ನೂರು ಕೋಟಿ? ಬನ್ನಿ ತಿಳಿಯೋಣ.
'ಸಲಾರ್' ಸಿನಿಮಾ ಬಾಕ್ಸ್ ಆಫಿಸ್‌ನಲ್ಲಿ 650 ಕೋಟಿ ರೂ. ಗಡಿ ದಾಟಿದ್ದು ಸಿನಿಮಾ ರಿಲೀಸ್ ಆಗಿ 12 ದಿನ ಕಳೆದಿದ್ದು, ಈಗಲೂ ಗಳಿಕೆ ಮೊತ್ತ ಹೆಚ್ಚಿಸಿಕೊಳ್ಳುತ್ತಿದೆ. ಆರಂಭದ ದಿನವೇ 175 ಕೋಟಿ ರೂಪಾಯಿ ಹಣ ಗಳಿಸಿದ್ದ ಸಲಾರ್, ನಂತರದ ದಿನಗಳಲ್ಲಿ ಅಬ್ಬರಿಸಿತ್ತು. ಈ ಮೂಲಕ ಸಾಲು, ಸಾಲು ಸೋಲಿನಿಂದ ಕಂಗೆಟ್ಟಿದ್ದ ನಟ ಡಾರ್ಲಿಂಗ್ ಪ್ರಭಾಸ್ ಅವರಿಗೆ 'ಸಲಾರ್' ಬಿಗ್ ಬ್ರೇಕ್ ನೀಡಿದೆ. ದಕ್ಷಿಣ ಭಾರತದ ಸಿನಿಮಾ ಕೀರ್ತಿಯನ್ನ ಕೂಡ ಮತ್ತಷ್ಟು ಮೇಲಕ್ಕೇರಿಸಿದೆ.
ಕಾಟೇರ 5 ದಿನದಲ್ಲಿ ಗಳಿಸಿದ್ದು ಎಷ್ಟು?
ಅಷ್ಟಕ್ಕು ಕಳೆದ 5 ದಿನದಲ್ಲಿ ಕಾಟೇರ ಸಿನಿಮಾ ಅಬ್ಬರಿಸಿ ಬೊಬ್ಬಿರಿದಿದೆ. ಹೀಗೆ ಈ ಸಿನಿಮಾ ಕಳೆದ 5 ದಿನದಲ್ಲಿ ಹಲವು ದಾಖಲೆಗಳನ್ನ ನಿರ್ಮಾಣ ಮಾಡಿದೆ. ಮೊದಲ ದಿನವೇ 19.79 ಕೋಟಿ ರೂಪಾಯಿ ಬಾಚಿ ಬಳಿಕ 2ನೇ ದಿನವೂ ಅಬ್ಬರಿಸಿ 17.35 ಕೋಟಿ ಕಲೆಕ್ಷನ್ ಮಾಡಿತ್ತು. ಹಾಗೇ ಮುಂದೆ ಮತ್ತಷ್ಟು ಅಬ್ಬರಿ ಸಾಗಿದ್ದ ಕಾಟೇರ ದಾಖಲೆಗಳ ಮೇಲೆ ದಾಖಲೆ ಬರೆದಿತ್ತು.

ಅಭಿಮಾನಿಗಳ ಸಂಭ್ರಮ ಕೂಡ ಡಬಲ್
ಈ ನಡುವೆ 3ನೇ ದಿನ 'ಕಾಟೇರ' ಸಿನಿಮಾ ಬರೋಬ್ಬರಿ 20.94 ರೂಪಾಯಿ ಗಳಿಸಿತ್ತು. 4ನೆಯ ದಿನ 18.26 ಕೋಟಿ ರೂಪಾಯಿ ಗಳಿಸಿದ್ದ ಕಾಟೇರ 5ನೇ ದಿನ 9 ಕೋಟಿ ರೂಪಾಯಿ ಗಳಿಸಿದೆ. ಈ ಮೂಲಕ ಈವರೆಗೂ 86.84 ಕೋಟಿ ರೂಪಾಯಿ ಗಳಿಸಿದೆ ಕನ್ನಡಿಗರ ಕಾಟೇರ ಸಿನಿಮಾ. ಇನ್ನೇನು 100 ಕೋಟಿ ರೂ. ಕ್ಲಬ್ ಸೇರಲು ಅತ್ಯಂತ ಸಮೀಪ ಇದೆ. ಹೀಗಾಗಿ ಅಭಿಮಾನಿಗಳ ಸಂಭ್ರಮ ಕೂಡ ಡಬಲ್ ಆಗುತ್ತಿದೆ.
ಮತ್ತಷ್ಟು ದಾಖಲೆಗಳು ಗ್ಯಾರಂಟಿ!
ಒಟ್ನಲ್ಲಿ ಈ ಮೂರು ಸಿನಿಮಾಗಳು ಕೆಲವೇ ದಿನಗಳ ಅಂತರದಲ್ಲಿ ರಿಲೀಸ್ ಆಗಿದ್ದರೂ, ಈ ನಮ್ಮ ನೆಲದ ಅಂದರೆ ಕನ್ನಡಿಗರ ಸಿನಿಮಾ 'ಕಾಟೇರ' ಅಬ್ಬರ ತಡೆಯಲು ಯಾರಿಂದಲೂ ಸಾಧ್ಯ ಆಗಿಲ್ಲ. ಈ ಸಿನಿಮಾ ಈಗ ಹೊಸ ಇತಿಹಾಸ ನಿರ್ಮಿಸಲು ಮುನ್ನುಗ್ಗುತ್ತಿದೆ. ಇದಕ್ಕೆ ತಕ್ಕ ವೇದಿಕೆಯೂ ನಿರ್ಮಾಣ ಆಗಿದ್ದು ಕಾಟೇರ ಸಿನಿಮಾ ಇನ್ನೇನು 100 ಕೋಟಿ ರೂಪಾಯಿ ಕ್ಲಬ್‌ಗೆ ಗ್ರ್ಯಾಂಡ್ ಎಂಟ್ರಿ ಕೊಡೋದು ಪಕ್ಕಾ ಅಂತಿದ್ದಾರೆ ಫ್ಯಾನ್ಸ್.












Click it and Unblock the Notifications