ಜಯಮಾಲಾ ಪುತ್ರಿ ವಿವಾಹ: ಈ ವಿಚಾರದ ಬಗ್ಗೆ ಕನ್ನಡಿಗರಿಂದ ಪರ - ವಿರೋಧ ಚರ್ಚೆ!
ಕನ್ನಡ ಚಿತ್ರರಂಗದ ಖ್ಯಾತ ನಟಿ ಹಾಗೂ ರಾಜಕಾರಣಿ ಜಯಮಾಲಾ ಅವರ ಪುತ್ರಿ ಸೌಂದರ್ಯ ಅವರ ವಿವಾಹ ಅದ್ಧೂರಿಯಾಗಿ ನಡೆದಿದೆ. ಆದರೆ ವಿವಾಹದಲ್ಲಿ ನಡೆದಿರುವ ಕೆಲವು ಬೆಳವಣಿಗೆಗೆ ಕನ್ನಡಿಗರಿಂದ ವಿರೋಧ ವ್ಯಕ್ತವಾಗಿದೆ. ಆದರೆ, ಕೆಲವರು ಕನ್ನಡಿಗರು ಇದರ ಪರವಾಗಿಯೂ ಮಾತನಾಡಿದ್ದಾರೆ. ಸೌಂದರ್ಯ ಅವರು ರುಷಭ್ ಎನ್ನುವವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ವಿವಾಹದಲ್ಲಿ ಕನ್ನಡ ಚಿತ್ರರಂಗದ ನಟ - ನಟಿಯರು ಹಾಗೂ ರಾಜಕಾರಣಿಗಳು ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದಾರೆ. ಆದರೆ ವಿವಾಹ ಕಾರ್ಯಕ್ರಮದಲ್ಲಿ ಕನ್ನಡವನ್ನು ಕಡೆಗಣಿಸಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ. ಇದರಲ್ಲಿ ಪರ - ವಿರೋಧ ಚರ್ಚೆ ನಡೆದಿದೆ. ಅಷ್ಟಕ್ಕೂ ವಿವಾಹ ಕಾರ್ಯಕ್ರಮದಲ್ಲಿ ಆಗಿದ್ದೇನು ಎನ್ನುವ ವಿವರ ನೋಡೋಣ..
ಕನ್ನಡ ಚಿತ್ರರಂಗದಲ್ಲಿ ಈಗ ಸಾಲು.. ಸಾಲು ಮದುವೆಗಳು ನಡೆಯುತ್ತಿವೆ. ಆದರೆ ಮದುವೆ ಸಮಾರಂಭದಲ್ಲಿ ಗಣ್ಯರು ಹಾಗೂ ಕನ್ನಡ ಸಿನಿಮಾ ನಟ ಹಾಗೂ ನಟಿಯರು ಬೇರೆ ಭಾಷೆಯನ್ನು ಬಳಸುವುದು. ಇಂಗ್ಲಿಷ್ ಹಾಗೂ ಹಿಂದಿ ಹಾಡುಗಳಿಗೆ ಡ್ಯಾನ್ಸ್ ಮಾಡುವುದಕ್ಕೆ ವಿರೋಧ ವ್ಯಕ್ತವಾಗುತ್ತಿದೆ. ಅಲ್ಲದೆ ನಟ - ನಟಿಯರು ಕೇವಲ ಇಂಗ್ಲಿಷ್‌ನಲ್ಲಿಯೇ ಮಾತನಾಡುವುದಕ್ಕೂ ವಿರೋಧ ವ್ಯಕ್ತವಾಗುತ್ತಿದೆ. ಆದರೆ, ಕೆಲವರು ಇದು ಸಾರ್ವಜನಿಕ ಕಾರ್ಯಕ್ರಮ ಎಂದೂ ವಾದ ಮಾಡಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ನಡೆಯುತ್ತಿರುವ ಚರ್ಚೆ ಏನು ಅಂತ ನೋಡೋಣ..

ಜಯಮಾಲಾ ಅವರ ಪುತ್ರಿ ಸೌಂದರ್ಯ ಅವರ ವಿವಾಹವು ಅತ್ಯಂತ ಅದ್ಧೂರಿಯಾಗಿ ನೆರವೇರಿದೆ. ಆದರೆ ವಿವಾಹ ಪೂರ್ವ ಹಾಗೂ ವಿವಾಹ ಕಾರ್ಯಕ್ರಮದಲ್ಲಿ ಕನ್ನಡವನ್ನು ಕಡೆಗಣಿಸಲಾಗಿದೆ. ಇವರು ಕನ್ನಡದಿಂದಲೇ ಬೆಳೆದವರು ಕನ್ನಡವನ್ನು ಕಡೆಗಣನೆ ಮಾಡಿದರೆ ಹೇಗೆ ಎಂದು ಕೆಲವು ಕನ್ನಡಿಗರು ಪ್ರಶ್ನೆ ಮಾಡಿದ್ದಾರೆ.
ರವಿ ಆಲದಮರ ಎನ್ನುವ ಖಾತೆಯಿಂದ ಈ ಸಂಬಂಧ ಸೋಷಿಯಲ್ ಮೀಡಿಯಾದಲ್ಲಿ ಮಾಡಿರುವ ಟ್ವೀಟ್ ಪರ - ವಿರೋಧ ಚರ್ಚೆಗೆ ಕಾರಣವಾಗಿದೆ. ಶ್ರೀಮಂತ ಕನ್ನಡಿಗರಿಂದ ನಮ್ಮ ಸಂಸ್ಕೃತಿ ಹಾಳಾದಷ್ಟು ಬೇರೆ ಯಾರಿಂದಲೂ ಆಗಿಲ್ಲ. ಅದರಲ್ಲೂ ಕನ್ನಡ ಚಿತ್ರರಂಗವರಿಗೆ ನಾಚಿಕೆ ಮಾನ ಮರ್ಯಾದೆ ಇಲ್ಲವೇನೋ ಅನಿಸುತ್ತೆ ಎಂದಿದ್ದಾರೆ.

ಮುಂದುವರಿದು ಯಾವ ವಿಷಯಗಳಿಗೆ ನಾವು ಡಾ. ರಾಜ್‌ಕುಮಾರ್ ಹಾಗೂ ಹಲವರನ್ನು ಮೆಚ್ಚುತ್ತಿದ್ದೆವೋ ಅದೇ ಕಾರಣಗಳಿಗೆ ಇವರನ್ನು ಟೀಕಿಸುವ, ತಿದ್ದುವ ಪ್ರಯತ್ನ ಮಾಡುತ್ತಿದ್ದೇವೆ. ನಾಳೆ ಇವರೇ ಬಂದು ನಮ್ಮ ಕನ್ನಡ ಸಿನಿಮಾ ಯಾರೂ ನೋಡ್ತಾ ಇಲ್ಲ ಅಂತ ಗೋಳಾಡಿ ಕನ್ನಡಿಗರು ಸರಿ ಇಲ್ಲ ಅಂತಾರೆ ಎಂದು ಹೇಳಿದ್ದಾರೆ.
ಹಿಂದಿ ಇಂಗ್ಲಿಷ್ ಹಾಡುಗಳಿಗೆ ರೀಲ್ಸ್ ಮಾಡ್ಕೊಂಡು ಅವರ ಟ್ಯೂನ್‌ಗಳಿಗೆ ರೀಚ್ ಕೊಟ್ಟು. ಕನ್ನಡಿಗರು ಸರಿ ಇಲ್ಲ ಅಂದ್ರೆ ಹೇಗೆ. ಅವರು ಕುಣಿಯುವ ಹಾಡು, ತಿನ್ನುವ ಊಟ ತಿಂಡಿ, ಹಾಕುವ ಬಟ್ಟೆ ಬರೆ ಎಲ್ಲವೂ ಕನ್ನಡದ ಪೀಳಿಗೆಯ ಮೇಲೆ ಪರಿಣಾಮ ಬೀರುತ್ತೆ. ಇದು ತೀರಾ ಸಣ್ಣ ವಿಷಯವಾಗಿ ಕಾಣಬಹುದು. ಆದರೆ, ಈಗಾಗಲೇ ಅರಿಶಿನ ಹೋಗಿ ಹಲ್ದಿ ಆಗಿದೆ. ಗೋರಂಟಿ ಹೋಗಿ ಮೆಹೆಂದಿ ಆಗಿದೆ. ಮದುವೆಗಳಲ್ಲಿ ಚಪ್ಪರ ಅಂತ ಕೇಳೋಕೆ ಸಿಗಲ್ಲ, ಅದೇನೋ ಸಂಗೀತ್ ಅಂತಾರೆ. ಮದುವೆಗಳಲ್ಲಿ ಕನ್ನಡದ ಪದ ಹೇಳೋರೆ ಇಲ್ಲ. ಪದ ಬೇಡ ಕನ್ನಡದ ಹಾಡುಗಳೇ ಬಳಸಲ್ಲ ಎಲ್ಲವೂ ಹಿಂದಿ ಆಗಲೇಬೇಕು. ಊಟ - ಕುಲ್ಚಾ, ಬಟರ್ ನಾನ್, ಚನ್ನ ಮಸಾಲಾ ಹೀಗೆ ಒಂದೋ ಎರಡೋ ಎಂದು ಅವರು ವಿವರಣೆ ಕೊಟಿದ್ದಾರೆ.
ಕೋಸಂಬರಿ, ಅಪ್ಪಳ, ಅನ್ನ ಸಾರು, ಮುದ್ದೆ ಸಾರು, ಹೋಳಿಗೆ, ಅಕ್ಕಿ ರೊಟ್ಟಿ , ತಿಳಿಸಾರು ಇಂತಹ ಪದ ಬಳಸೋಕೆ ನಮ್ಮವರು ಹಿಂಜರಿಯುತ್ತಿದ್ದಾರೆ. ಈ ಅಡುಗೆ ಮಾಡುವವರಿಗೆ ಬೆಲೆಯೇ ಇಲ್ಲ. ಊಟ, ಬಟ್ಟೆ ಹಾಗೂ ಹಾಡು ಎಲ್ಲವೂ ಹೊರಗಿನವೇ ಆಗಬೇಕು. ನಮ್ಮ ಸಂಸ್ಕೃತಿ ಹಾಳಾಗಿ ಹೋಗುವುದನ್ನು ನಾವು ಸಹಿಸಿಕೊಂಡರೆ. ಆದಷ್ಟು ಬೇಗ ನಾವು ಹಿಂದಿಯವರ ಗುಲಾಮರಾಗುತ್ತೀವಿ. ಹೀಗಾಗಿ ನಾವು ಕನ್ನಡದ ಸಂಸ್ಕೃತಿ ಉಳಿಯಬೇಕೆಂದರೆ ದನಿ ಎತ್ತಲೇಬೇಕು ಎಂದು ಹೇಳಿದ್ದಾರೆ. ಈ ಟ್ವೀಟ್‌ಗೆ ಪರ - ವಿರೋಧ ಅಭಿಪ್ರಾಯ ವ್ಯಕ್ತವಾಗಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಅಮರನಾಥ್ ಶಿವಶಂಕರ್ ಎನ್ನುವವರು, ನಿಜ ಆದರೆ ಅವರಿಂದ ಸಮಾಜಕ್ಕೆ ಯಾವುದೇ ಪಾಸಿಟಿವ್ ಪರಿಣಾಮವಿಲ್ಲ ಅನ್ನುವುದನ್ನು ಜನರು ಅರಿತುಕೊಳ್ಳಬೇಕು. ಅವರಿಂದ ನೋಡಿ ಕಲಿಯುವುದೇನು ಇಲ್ಲ. ಅವರನ್ನು ದೂರವಿಡಿ ಅನ್ನುವ ಜಾಗೃತಿ ಜನರಲ್ಲಿ ಮೂಡಿಸಬೇಕು. ಅದಕ್ಕೆ ಅವಕಾಶ ಸಿಕ್ಕಾಗೆಲ್ಲ ಡಾ.ರಾಜಕುಮಾರ್ ಹೇಗೆ ಜನಪರವಾದ ಕೆಲಸಗಳನ್ನು ತಮ್ಮ ನಡೆ ನುಡಿಯ ಮೂಲಕ ಮಾಡಿದರು ಅಂತ ಬರೆಯುತ್ತೇನೆ ಎಂದಿದ್ದಾರೆ.
ಮುಂದುವರಿದು ಕನ್ನಡ ಚಿತ್ರರಂಗದ ನಟಿಯರು ಒಂದು ಮದುವೆ ಕಾರ್ಯಕ್ರಮದಲ್ಲಿ ಹಿಂದಿ ಹಾಡುಗಳಿಗೆ ನೃತ್ಯ ಮಾಡಿದ್ದಾರೆ. ಅವರೇಕೆ ಕನ್ನಡ ಹಾಡುಗಳಿಗೆ ಕುಣಿದಿಲ್ಲ ಅಂತ ಅನೇಕರು ಕೇಳುತಿದ್ದಾರೆ. ಕನ್ನಡ ಚಿತ್ರರಂಗದ ಒಳಗಿನ ಜನರ ಇಬ್ಬಂದಿತನ ನಮಗೆಲ್ಲ ತಿಳಿದೇ ಇದೆ. ಅವರಿಂದ ಕನ್ನಡದ ಬಗ್ಗೆ ಏನನ್ನೂ ನೀರಿಕ್ಷಿಸಬಾರದು. ಮೇಲಾಗಿ ಖಾಸಗಿ ಕಾರ್ಯಕ್ರಮದಲ್ಲಿ ಅವರಿಗೆ ಇಷ್ಟ ಬಂದ ಹಾಡುಗಳನ್ನು ಬಳಸುವ ಅಧಿಕಾರ ಅವರಿಗಿದೆ.
ಕನ್ನಡ ಯುವಕರು ಇಂತಹ ಸಣ್ಣ ವಿಚಾರಗಳನ್ನು ತಲೆಗೆ ಹಚ್ಚಿಕೊಳ್ಳುವುದು ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪರ - ವಿರೋಧ ಚರ್ಚೆ ಮುಂದುವರಿದಿದೆ.
ಜಯಮಾಲಾ ಅವರ ಪುತ್ರಿ ಅವರ ವಿವಾಹವು ಅದ್ಧೂರಿಯಾಗಿ ನೆರವೇರಿದೆ. ಆದರೆ, ವಿವಾಹ ಕಾರ್ಯಕ್ರಮದಲ್ಲಿನ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
-
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
Sensex crash: ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ; ಸೆನ್ಸೆಕ್ಸ್ 2100 ಅಂಕ ಕುಸಿತ -
E-Bus: ಕರ್ನಾಟಕದ ಹೊಸ ಯೋಜನೆಯಡಿ ಗ್ರಾಮೀಣ ಭಾಗಗಳಲ್ಲೂ ಓಡಾಡಲಿವೆ 1950 ಎಲೆಕ್ಟ್ರಿಕ್ ಬಸ್ಗಳು -
Prediction on Donald Trump: ಟ್ರಂಪ್ ಗೆಲುವು, ಇರಾನ್ ಯುದ್ಧ ಭವಿಷ್ಯ: 3 ಭವಿಷ್ಯವಾಣಿಯಲ್ಲಿ 2 ನಿಜ, ಮತ್ತೊಂದೇನು












Click it and Unblock the Notifications