Jani Master Arrested: ಲೈಂಗಿಕ ಕಿರುಕುಳ ಆರೋಪ: ಜಾನಿ ಮಾಸ್ಟರ್ ಬಂಧನ
ಲೈಂಗಿಕ ಕಿರುಕುಳ ಆರೋಪದ ಮೇಲೆ ಖ್ಯಾತ ನೃತ್ಯ ನಿರ್ದೇಶಕ ಜಾನಿ ಮಾಸ್ಟರ್ ಅವರನ್ನು ಬಂಧಿಸಲಾಗಿದೆ. ಬೆಂಗಳೂರಿನ ಸೈಬರಾಬಾದ್ ಎಸ್‌ಒಟಿ ಪೊಲೀಸರು ಜಾನಿ ಮಾಸ್ಟರ್ ಅವರನ್ನು ಬಂಧಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. 21 ವರ್ಷದ ಮಹಿಳಾ ನೃತ್ಯ ಸಂಯೋಜಕಿಯೊಬ್ಬರಿಗೆ ಜಾನಿ ಮಾಸ್ಟರ್ ಲೈಂಗಿಕ ಕಿರುಕುಳ ನೀಡಿದ್ದಾರೆನ್ನುವ ಆರೋಪ ಕೇಳಿ ಬಂದಿದೆ.
ಮಹಿಳೆ ದೂರು ನೀಡಿದ ಬಳಿಕ ತಲೆ ಮರೆಸಿಕೊಂಡಿದ್ದ ಜಾನಿ ಮಾಸ್ಟರ್ ಹೈದರಾಬಾದ್‌ನಲ್ಲಿರುವ ತನ್ನ ಸ್ನೇಹಿತನ ಮನೆಯಲ್ಲಿದ್ದಾನೆಂಬ ಸೂಕ್ತ ಮಾಹಿತಿ ಮೇರೆಗೆ ಪೊಲೀಸರು ಹುಡುಕಾಟ ನಡೆಸಿದ್ದರು. ಒಟ್ಟು ನಾಲ್ಕು ತಂಡಗಳು ಜಾನಿ ಮಾಸ್ಟರ್‌ಗಾಗಿ ಹುಡುಕಾಟ ನಡೆಸಿದ್ದರು.

ಈ ಹಿಂದೆಯೇ ಇದೇ ರೀತಿಯ ಆರೋಪದ ಮೇಲೆ ಜಾನಿ ಮಾಸ್ಟರ್ ಆರು ತಿಂಗಳು ಜೈಲಿನಲ್ಲಿದ್ದರು. ಆದರೀಗ ಮತ್ತೆ ಅದೇ ರೀತಿ ಆರೋಪ ಕೇಳಿ ಬಂದಿದೆ. ಮಹಿಳೆ ಜಾನಿ ಮಾಸ್ಟರ್ ಮೇಲೆ ಗಂಭೀರ ಆರೋಪ ಮಾಡಿದ್ದು ಪ್ರಕರಣ ದಾಖಲಾಗಿದೆ. ರಾಯದುರ್ಗಂ ಪೊಲೀಸರು ಪ್ರಕರಣ ದಾಖಲಿಸಿದ್ದರು. ಆರೋಪಿಗಾಗಿ ಹುಡುಕಾಟ ಶುರು ಮಾಡಿದ್ದರು. ಇಂದು ಅವರನ್ನು ಬಂಧಿಸಲಾಗಿದೆ.
ಜಾನಿ ಮಾಸ್ಟರ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ
ಜಾನಿ ಮಾಸ್ಟರ್ ಜೊತೆ ಕೆಲಸ ಮಾಡುತ್ತಿದ್ದ ಮಹಿಳಾ ನೃತ್ಯ ನಿರ್ದೇಶಕಿ ಪೊಲೀಸರಿಗೆ ದೂರು ನೀಡಿದ್ದಾರೆ. ಜಾನಿ ಮಾಸ್ಟರ್ ತನ್ನ ಮೇಲೆ ಅನೇಕ ಬಾರಿ ಅತ್ಯಾಚಾರವೆಸಗಿದ್ದಾನೆ ಎಂದು ಆಕೆ ಹೇಳಿದ್ದಾಳೆ. ಆಕೆ ಮೊದಲು ರಾಯದುರ್ಗ ಪೊಲೀಸರಿಗೆ ದೂರು ನೀಡಿದ್ದಳು. ಆದರೆ ಆಕೆ ವಾಸವಿದ್ದ ಮನೆ ನರಸಿಂಗ್ ಪೊಲೀಸ್ ಠಾಣೆ ವ್ಯಾಪ್ತಿಗೆ ಬಂದಿದ್ದರಿಂದ ರಾಯದುರ್ಗ ಪೊಲೀಸರು ಶೂನ್ಯ ಎಫ್‌ಐಆರ್ ದಾಖಲಿಸಿ ಪ್ರಕರಣವನ್ನು ನರಸಿಂಗ್ ಠಾಣೆಗೆ ವರ್ಗಾಯಿಸಿದ್ದರು.
ಹೀಗಾಗಿ ಪೊಲೀಸರು ಜಾನಿ ಮಾಸ್ಟರ್ ವಿರುದ್ಧ ಅತ್ಯಾಚಾರದ ಸೆಕ್ಷನ್ 376, 506, 323 (2) ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಬುಧವಾರವೂ ಫೋಕ್ಸೋ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಾದ ಬಳಿಕ ಜಾನಿ ಮಾಸ್ಟರ್ ಪರಾರಿಯಾಗಿದ್ದನು. ಐದು ದಿನಗಳಿಂದ ಪೊಲೀಸರು ಆತನಿಗಾಗಿ ಹುಡುಕಾಟ ನಡೆಸಿದ್ದರು. ಕೊನೆಗೆ ಆತನನ್ನು ಬಂಧಿಸಲಾಗಿದ್ದು ಇಂದು ಸಂಜೆ ಅಥವಾ ರಾತ್ರಿ ಆತನನ್ನು ಹೈದರಾಬಾದ್‌ಗೆ ಕರೆತರುವ ಸಾಧ್ಯತೆ ಇದೆ.
ಬಳಿಕ ವೈದ್ಯಕೀಯ ಪರೀಕ್ಷೆ ನಡೆಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ನ್ಯಾಯಾಲಯ ಜಾನಿ ಮಾಸ್ಟರ್‌ನನ್ನು ಪೊಲೀಸ್ ಕಸ್ಟಡಿಗೆ ನೀಡುವ ಸಾಧ್ಯತೆಯೂ ಇದೆ. ಜಾನಿ ಮಾಸ್ಟರ್ ವಿರುದ್ಧ ಪ್ರಕರಣ ದಾಖಲಾಗಿರುವ ವಿಚಾರ ತಿಳಿದು ವೈಟ್ ಫಿಲ್ಮ್ ಚೇಂಬರ್ ಆಫ್ ಕಾಮರ್ಸ್ ಸಮಿತಿ ಕೂಡ ಈ ಬಗ್ಗೆ ತನಿಖೆ ನಡೆಸುತ್ತಿದೆ.











Click it and Unblock the Notifications