Yash: ಟಾಪ್ 100 ಸೆಲೆಬ್ರೆಟಿ ಪಟ್ಟಿಯಲ್ಲಿ ಕನ್ನಡಿಗ 'ಯಶ್': ಪ್ರಭಾಸ್,ಅಲ್ಲು ಅರ್ಜುನ್‌ಗೆ ಎಷ್ಟನೇ ಸ್ಥಾನ?
ಬೆಂಗಳೂರು, ಮೇ 30: ಕೆಜಿಎಫ್ ಸರಣಿಗಳ ಬಳಿಕ ಕನ್ನಡದ ರಾಕಿಂಗ್ ಸ್ಟಾರ್ ಯಶ್ (Actory Yash) ಅವರು ಪ್ಯಾನ್ ಇಂಡಿಯಾ ಸ್ಟಾರ್ ಗುರುತಿಸಿಕೊಂಡಿರುವುದು ಗೊತ್ತೆ ಇದೆ. ಅವರ ಮುಂದಿನ 'ಟಾಕ್ಸಿಕ್' (Toxic) ಸಿನಿಮಾ ಚಿತ್ರೀರಕಣ ನಡೆಯುತ್ತಿದೆ. ದೇಶವೇ ಯಶ್ ಸಿನಿಮಾದ ಅಪ್ಡೇಟ್‌ಗಾಗಿ ಕಾಯುತ್ತಿದೆ. ಈ ಮಧ್ಯೆ ಯಶ್ ಅವರು ಭಾರತದ 100 ಸೆಲೆಬ್ರೆಟಿಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
IMDb (ದಿ ಇಂಟರ್‌ನೆಟ್ ಮೂವಿ ಡೇಟಾಬೇಸ್) ವೆಬ್‌ಸೈಟ್ ಕಳೆದ 10 (2014 ಏಪ್ರಿಲ್-2024 ಏಪ್ರಿಲ್ ವರೆಗೆ) ವರ್ಷಗಳಲ್ಲಿ ಟಾಪ್ ಮೋಸ್ಟ್ ವಿವ್ಡ್ ನಟ-ನಟಿಯರ '100 ಸೆಲೆಬ್ರೆಟಿಗಳ ಪಟ್ಟಿ' ಬಿಡುಗಡೆ ಮಾಡಿದೆ. ಇದರಲ್ಲಿ ಕನ್ನಡದ ಸ್ಟಾರ್ ನಟ ಯಶ್ ಅವರಿಗೆ ಸ್ಥಾನ ಸಿಕ್ಕಿದೆ. ಈ ಮೂಲಕ ದೇಶಾದ್ಯಂತ 'ಯಶ್' ಅವರಿಗೆ ಕ್ರೇಜ್ ಇರುವುದು ಮತ್ತೆ ಸಾಬೀತಾಗಿದೆ.

ಸ್ಯಾಂಡಲ್‌ವುಡ್ ರಾಕಿಂಗ್ ಸ್ಟಾರ್ ನಟ ಯಶ್ ಅವರು ದೇಶದ ಅನೇಕ ಸೆಲೆಬ್ರೆಟಿಗಳಿಗೆ ಪೈಪೋಟಿ ನೀಡುತ್ತಿದ್ದಾರೆ. ಇತ್ತೀಚೆಗೆ ಬಿಡುಗಡೆ ಆದ ಐಎಂಡಿಬಿ ವೆಬ್‌ಸೈಟ್ ಟಾಪ್ ಸೆಲೆಬ್ರೆಟಿಗಳ ಪಟ್ಟಿಯಲ್ಲಿ ಪಡೆದ ಏಕೈಕ ಕನ್ನಡದ ನಟ ಯಶ್. ಇವರು ಸೇರಿದಂತೆ ಕನ್ನಡದ ಇಬ್ಬರು ಕಲಾವಿದರು ಈ ಪಟ್ಟಿಯಲ್ಲಿ ಇರುವುದು ವಿಶೇಷ.
IMDb ಪಟ್ಟಿಯಲ್ಲಿ ಮೊದಲ ಸ್ಥಾನ ಯಾರಿಗೆ?
ಸೆಲೆಬ್ರೆಟಿಗಳ ಪ್ರೋಫೈಲ್‌ಗೆ ಎಷ್ಟು ಜನರು ಭೇಟಿ ಕೊಟ್ಟಿದ್ದಾರೆ ಎಂಬುದರ ಆಧಾರದ ಮೇಲೆ ಐಎಂಡಿಬಿ ಈ ಪಟ್ಟಿಯನ್ನು ಸಿದ್ಧಪಡಿಸಿದೆ. ಇದರಲ್ಲಿ ಯಶ್ ಅವರಿಗೆ 89ನೇ ಸ್ಥಾನ ಸಿಕ್ಕಿದೆ. ಬಹುಬಾಷಾ ನಟಿ ದೀಪಿಕಾ ಪಡುಕೋಣೆ ಅವರ ಪ್ರೋಫೈಲ್ ಗೆ ಅತೀ ಹೆಚ್ಚು ಜನರು ಭೇಟಿ ನೀಡಿದ್ದಾರೆ. ಹೀಗಾಗಿ ಅವರಿಗೆ ಪಟ್ಟಿಯಲ್ಲಿ ಮೊದಲ ಸ್ಥಾನ ಸಿಕ್ಕಿದೆ.
— IMDb India (@IMDb_in) May 29, 2024

ಕನ್ನಡ ಕಲಾವಿದರು ಪಟ್ಟಿಯಲ್ಲಿ ಯಾರಿದ್ದಾರೆ ಎಂದು ನೋಡುವುದಾದರೆ, ನಟ ಯಶ್ ಹೊರತಾಗಿ, ನಟಿ ರಶ್ಮಿಕಾ ಮಂದಣ್ಣಾ ಅವರು ಪಟ್ಟಿಯಲ್ಲಿದ್ದಾರೆ. ಕನ್ನಡ ಮೂಲದ ನಟಿಯಾಗಿ ಪಟ್ಟಿಯಲ್ಲಿ ರಶ್ಮಿಕಾರನ್ನು ನೋಡಬಹುದು. ಅವರಿಗೆ ಐಎಂಡಿಬಿಯಿಂದ 78ನೇ ಸ್ಥಾನ ಲಭಿಸಿದೆ.
ಪ್ರಭಾಸ್, ಅಲ್ಲು ಅರ್ಜುನ್‌ಗೆ ಎಷ್ಟನೇ ಸ್ಥಾನ?
ನಟರಾದ ಯಶ್ ಮತ್ತು ರಶ್ಮಿಕಾ ಹೊರತು ಪಡಿಸಿದರೆ, ಪಟ್ಟಿಯಲ್ಲಿ ಬೇರೆ ರಾಜ್ಯಗಳ, ಚಿತ್ರರಂಗದ ಹಲವರು ಸ್ಥಾನ ಪಡೆದಿದ್ದಾರೆ. ತಮನ್ನಾ ಭಾಟಿಯಾ (16ನೇ ಸ್ಥಾನ), ನಯನತಾರಾ (18ನೇ ಸ್ಥಾನ), ಪ್ರಭಾಸ್ (29ನೇ ಸ್ಥಾನ), ಧನುಷ್ (30ನೇ ಸ್ಥಾನ), ರಾಮ್ ಚರಣ್ (31ನೇ ಸ್ಥಾನ), ದಳಪತಿ ವಿಜಯ್ (35ನೇ ಸ್ಥಾನ), ರಜನಿಕಾಂತ್ (42ನೇ ಸ್ಥಾನ), ವಿಜಯ್ ಸೇತುಪತಿ (43ನೇ ಸ್ಥಾನ), ಅಲ್ಲು ಅರ್ಜುನ್ (47ನೇ ಸ್ಥಾನ), ಮೋಹನ್ಲಾಲ್ (48ನೇ ಸ್ಥಾನ), ಆರ್. ಮಾಧವನ್ (50ನೇ ಸ್ಥಾನ) ಅವರು ಸಹ ಐಎಂಡಿಬಿ ಪಟ್ಟಿಯಲ್ಲಿದ್ದಾರೆ.
ಕೆಜಿಎಫ್ ಬಳಿಕ ನಟ ಯಶ್ ಅವರು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಅವರಿಗೆ ಇಡಿ ಇಂಡಿಯಾದಲ್ಲಿ ಅಭಿಮಾನಿಗಳು ಸೃಷ್ಟಿಯಾಗಿದ್ದಾರೆ. ಇದೀಗ ಯಶ್ ಅವರು ಐಎಂಡಿಬಿ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಇತ್ತೀಚೆಗೆ ಚಿತ್ರೀಕರಣದಲ್ಲಿ ಬಿಡುವು ಮಾಡಿಕೊಂಡು ಯಶ್ ಪತ್ನಿ ನಟಿ ರಾಧಿಕಾ ಪಂಡಿತ್ ಹಾಗು ಮಕ್ಕಳೊಂದಿಗೆ ಕಾಲ ಕಳೆದಿದ್ದರು. ಈ ಕುರಿತ ಒಂದಷ್ಟು ಫೋಟೋಗಳು ವೈರಲ್ ಆಗಿದ್ದವು. ಯಶ್ ಕೇವಲ ನಟ ಮಾತ್ರವಲ್ಲದೇ ಉತ್ತಮ ತಂದೆ, ಪ್ರೀತಿ ಪತಿಯಾಗಿ ತಮ್ಮ ಜವಾಬ್ದಾರಿ ನಿರ್ವಹಿಸಿದ್ದಾರೆ ಎಂದು ಅಭಿಮಾನಿಗಳು ಫೋಟೋಗಳನ್ನು ಹಂಚಿಕೊಂಡಿದ್ದಾರೆ.












Click it and Unblock the Notifications