ಚೈತ್ರಾ ಕುಂದಾಪುರ ಅವರ ಅಪ್ಪನ ಬಗ್ಗೆ ಹೇಳಿದ್ದೇನು: ಏನಿದು ಎರಡು ಕ್ವಾಟರ್ ಮ್ಯಾಟರ್ ?!
Chaitra Kundapura: ಚೈತ್ರಾಕುಂದಾಪುರ ಅವರು ಈಚೆಗೆ ಮದುವೆಯಾಗಿದ್ದು. ಹೊಸ ಜೀವನ ಪ್ರಾರಂಭಿಸುತ್ತಿದ್ದಾರೆ. ಹೊಸ ಜೀವನ ಪ್ರಾರಂಭಿಸುತ್ತಿರುವ ಹಂತದಲ್ಲೇ ಅವರ ತಂದೆಯೇ ಆಕೆಗೆ ವಿಲನ್ ಆಗಿದ್ದು. ಚೈತ್ರಾಕುಂದಾಪುರ ಕಳ್ಳಿ ಎಂದಿದ್ದರು. ಅಲ್ಲದೇ ಹಲವರಿಗೆ ಮೋಸ ಮಾಡಿದ್ದಾರೆ ಎನ್ನುವ ಗಂಭೀರ ಆರೋಪಗಳನ್ನು ಮಾಡಿದ್ದರು. ಚೈತ್ರಾಕುಂದಾಪುರ ಅವರ ತಂದೆ ಮೀಡಿಯಾದ ಜೊತೆ ಮಾತನಾಡಿದ್ದ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ ಈ ವಿಚಾರವಾಗಿ ಇನ್ಸ್ಟಾಗ್ರಾಮ್ ಪೋಸ್ಟ್‌ನ ಮೂಲಕ ಚೈತ್ರಾಕುಂದಾಪುರ ಅವರು ಟಾಂಗ್ ಕೊಟ್ಟಿದ್ದಾರೆ. ಅಪ್ಪನಿಗೆ ಹಾಕದವಳು ಎಂದೂ ಹೇಳಿದ್ದರು.ಇದೀಗ ಇದಕ್ಕೆ ಚೈತ್ರಾಕುಂದಾಪುರ ಅವರು ಅವರ ತಂದಯ ಬಗ್ಗೆ ಪೋಸ್ಟ್ ಮಾಡಿದ್ದಾರೆ. ಚೈತ್ರಾಕುಂದಾಪುರ ಹೇಳಿದ್ದೇನು ಎನ್ನುವುದನ್ನು ನೋಡೋಣ...
ಪತ್ರಕರ್ತೆ, ಹಿಂದೂ ಕಾರ್ಯಕರ್ತೆ ಹಾಗೂ ಬಿಗ್‌ಬಾಸ್ ಕನ್ನಡ ಸೀಸನ್ 11ರ ಮಾಜಿ ಸ್ಪರ್ಧಿ ಚೈತ್ರಾಕುಂದಾಪುರ ಅವರು ಕಳೆದ ಕೆಲವು ದಿನಗಳಿಂದ ವಿವಾದಗಳಿಂದ ತುಸು ಅಂತರ ಕಾಪಾಡಿಕೊಂಡಿದ್ದರು. ಕಳೆದ ಕೆಲವು ದಿನಗಳಿಂದ ರಿಯಾಲಿಟಿ ಶೋಗಳಲ್ಲಿ ಮಿಂಚಿದ್ದ ಅವರು ಹೊಸ ಜೀವನಕ್ಕೆ ಈಚೆಗೆ ಕಾಲಿಟ್ಟಿದ್ದರು. ಆದರೆ, ಇದರ ಬೆನ್ನಲ್ಲೇ ಅವರ ತಂದೆಯೇ ಅವರಿಗೆ ವಿಲನ್ ಆಗಿದ್ದು. ಇದಕ್ಕೆ ಚೈತ್ರಾಕುಂದಾಪುರ ಅವರು ಉದ್ದನೆಯ ಪೋಸ್ಟ್ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ಇನ್ಸ್ಟಾಗ್ರಾಮ್‌ನಲ್ಲಿ ಅವರ ತಂದೆಯೆ ಹೇಳಿಕೆಗೆ ರಿಯಾಕ್ಟ್ ಮಾಡಿರುವ ಚೈತ್ರಾ ಕುಂದಾಪುರ ಅವರು, ಕುಡುಕ ತಂದೆಯ ಚಿತ್ರ ಹಿಂಸೆಯನ್ನು ಅನುಭವಿಸಿರುವವರಿಗಷ್ಟೇ ಗೊತ್ತು ಎರಡು ಕ್ವಾಟರ್ ಕೊಟ್ಟರೆ ನನ್ನ ಮಕ್ಕಳು ದೇವರು ಅಂತಾರೆ ಅಂತ ಬರೆದುಕೊಂಡಿದ್ದಾರೆ.
ಇನ್ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಚೈತ್ರಾಕುಂದಾಪುರ ಹೇಳಿದ್ದೇನು ?
ಇನ್ಸ್ಟಾಗ್ರಾಮ್‌ನಲ್ಲಿ ಅವರ ತಂದೆಯೆ ಹೇಳಿಕೆಗೆ ರಿಯಾಕ್ಟ್ ಮಾಡಿರುವ ಚೈತ್ರಾ ಕುಂದಾಪುರ ಅವರು,"ಕುಡುಕ ತಂದೆಯ ಚಿತ್ರ ಹಿಂಸೆಯನ್ನು ಅನುಭವಿಸಿರುವವರಿಗಷ್ಟೇ ಗೊತ್ತು. ಎಂತಹ ಮಕ್ಕಳಿಗೂ ಈ ರೀತಿಯ ಕುಡುಕ ತಂದೆ ಸಿಗಬಾರದು.... ಎರಡು ಕ್ವಾಟರ್ ನಾನು ಕೊಟ್ಟರೆ ನನ್ನ ಮಕ್ಕಳು ದೇವರು ಅನ್ನುವವರ ಮಾತಿಗೆ ಬೆಲೆ ಕೊಡುವವರು ಮೂರ್ಖರಾಗುತ್ತಾರೆ" ಅಂತ ಅವರು ಹೇಳಿದ್ದಾರೆ.

ಮುಂದುವರಿದು, ಹೆತ್ತ ಮಕ್ಕಳನ್ನು ಸಾಕಲಿಲ್ಲ. ಫೀಸು ಕಟ್ಟಿಸಿ ಓದಿಸಲಿಲ್ಲ. ಹೆಣ್ಣು ಮಕ್ಕಳ ಜವಾಬ್ದಾರಿ ಹೊತ್ತು ಮದುವೆಯನ್ನೂ ಮಾಡಲಿಲ್ಲ. ಕಟ್ಟಿಕೊಂಡ ಹೆಂಡತಿಗೆ ಹೊಡೆದು ಚಿತ್ರ ಹಿಂಸೆ ಮಾಡಿದ್ದು ಬಿಟ್ಟರೆ ಬೇರೆ ಏನೂ ಇಲ್ಲಾ.. ಎಲ್ಲಾ ಮುಗಿದ ಮೇಲೆ ಅಪವಾದ ಹಾಕೋಕೆ ಮಾತ್ರ ತಂದೆ ಹೆಸರು ವಾವ್... ಅಂತ ಅವರು ಟಾಂಗ್ ಕೊಟ್ಟಿದ್ದಾರೆ. ಈ ನೋವಿನ ಪೋಸ್ಟ್ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಪೋಸ್ಟ್ ವೈರಲ್: ಚೈತ್ರಾ ಕುಂದಾಪುರ ಅವರು ಸೋಷಿಯಲ್ ಮೀಡಿಯಾದಲ್ಲಿ ಮಾಡಿರುವ ಸ್ಟೇಟಸ್ ಪೋಸ್ಟ್ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಇನ್ನು ಚೈತ್ರಾ ಕುಂದಾಪುರ ಅವರ ತಂದೆ ಮದುವೆ ಸಮಾರಂಭದಲ್ಲಿ ಕಾಣಿಸಿಕೊಂಡಿರಲಿಲ್ಲ. ಇದೀಗ ಈ ವಿಷಯವೂ ಚರ್ಚೆಯಾಗುತ್ತಿದೆ.
ಸೋಷಿಯಲ್ ಮೀಡಿಯಾದಲ್ಲಿ ವೈರಲ್: ಇನ್ನು ಚೈತ್ರಾಕುಂದಾಪುರ ಅವರ ಬಗ್ಗೆ ಅವರ ತಂದೆ ಮಾತನಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು. ಜನ ಪರ - ವಿರೋಧ ಕಮೆಂಟ್ ಮಾಡುತ್ತಿದ್ದಾರೆ. ತಂದೆಯೇ ಈ ರೀತಿ ಹೇಳಿದ ಮೇಲೆ ಇನ್ನೇನು ಬಾಕಿ ಉಳಿದಿದೆ ಅಂತ ಕೆಲವರು ಹೇಳಿದ್ದರೆ. ಇನ್ನೂ ಕೆಲವರು ಇವರ ಮಾತನ್ನು ನಂಬುವುದು ಹೇಗೆ ಅಂತಲೂ ಪ್ರಶ್ನೆ ಮಾಡಿದ್ದಾರೆ. ಆದರೆ, ಬಹುತೇಕರು ಚೈತ್ರಾಕುಂದಾಪುರ ಅವರ ತಂದೆಯ ಪರವಾಗಿಯೇ ಮಾತನಾಡಿದ್ದಾರೆ.
-
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
115 ರೂಪಾಯಿಯ ಪೊಂಗಲ್ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Love Mocktail 3 Row: ಕೃತಿಚೌರ್ಯ ವಿವಾದದ ನಡುವೆ ಸತ್ಯ ಮತ್ತು ನೈತಿಕತೆ ಚರ್ಚೆ: ಮಧು ವೈ.ಎನ್ ಬರಹ -
ಕರ್ನಾಟಕದ ಕರಾವಳಿಯಲ್ಲಿ ಕಾಣದ ಅಗ್ನಿಕುಂಡದ ಮೇಲೆ ಘನತ್ಯಾಜ್ಯ ವಿಲೇವಾರಿಗೆ ವೀರಾವೇಶದ ಜಿದ್ದಾಜಿದ್ದಿ: ರಾಜಾರಾಂ ತಲ್ಲೂರು ಬರಹ -
ಯುಗಾದಿ ಹಬ್ಬ - ಶಿವರಾತ್ರಿಯಂದು ನಾನು ಮಾಂಸ ತಿಂತಿನಿ, ಅದು ನನ್ನಿಷ್ಟ: ಮುಖ್ಯಮಂತ್ರಿ ಸಿದ್ದರಾಮಯ್ಯ -
Water: ಅನಂತರಪುರ ಜಿಲ್ಲೆಯ ಬರಡು ಭೂಮಿಯ ಯಶೋಗಾಥೆ: ಜಗದೀಶ್ ಕೊಪ್ಪ ಬರಹ -
IPL Tickets: ನಾವು ವಿಐಪಿಗಳು; 5 ಫ್ರೀ ಟಿಕೆಟ್ ಕೊಡಲಿ: ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ -
Tejasvi Surya: ಕೆಎಸ್ಸಿಎನಿಂದ ಐಪಿಎಲ್ ಫ್ರೀ ಟಿಕೆಟ್ ಚರ್ಚೆ: ಕಾಂಗ್ರೆಸ್ ಶಾಸಕರಿಗೆ ಸಂಸದ ತೇಜಸ್ವಿ ಸೂರ್ಯ ಕ್ಲಾಸ್ -
Rashmika Mandanna: ರಶ್ಮಿಕಾ ಮಂದಣ್ಣ - ವಿಜಯ್ ದೇವರಕೊಂಡ ಕನಸಿನ ಹನಿಮೂನ್: ವಿಶೇಷ ವಿಡಿಯೋ ಹಂಚಿಕೊಂಡ ಜೋಡಿ -
ವಂದೇ ಭಾರತ್ ರೈಲಿನ ಊಟದಲ್ಲಿ ಹುಳು: 'ಅದು ಕೇಸರಿ' ಎಂದ ಸಿಬ್ಬಂದಿ, IRCTCಗೆ 10 ಲಕ್ಷ ದಂಡ -
ಶೂಟಿಂಗ್ ವೇಳೆ ನನ್ನ ಖಾಸಗಿ ಭಾಗ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದ: ನಿರ್ದೇಶಕ ಸನೋಜ್ ಮಿಶ್ರಾ ವಿರುದ್ಧ ನಟಿ ಮೊನಾಲಿಸಾ ಆರೋಪ












Click it and Unblock the Notifications