'ದರ್ಶನ್‌ ಹೊರಗೆ ಬರೋದಾದ್ರೆ ಕೈ, ಕಾಲು, ಕಣ್ಣು ಏನು ಬೇಕಾದ್ರೂ ಕಡಿದು ಕೊಡ್ತೀನಿ'

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್‌ ತೂಗುದೀಪ ಅವರಿಗೆ ಒಂದಾದ ಮೇಲೆ ಒಂದರಂತೆ ಸಂಕಷ್ಟ ಎದುರಾಗುತ್ತಲೇ ಇದೆ. ಹಲವು ತಿಂಗಳ ಕಾಲ ಜೈಲು ದರ್ಶನವಾಗಿ ಜಾಮೀನಿನ ಮೇಲೆ ಹೊರಬಂದಿದ್ದ ದರ್ಶನ್‌ ಅವರಿಗೆ ಸುಪ್ರೀಂಕೋರ್ಟ್‌ ಬಿಗ್‌ಶಾಕ್‌ ನೀಡಿತ್ತು. ಜಾಮೀನು ರದ್ದಾಗಿ ಮತ್ತೆ ಜೈಲು ಸೇರಿರುವ ಅವರು ಕೋರ್ಟ್‌ನಲ್ಲಿ ವಿಚಾರಣೆ ವೇಳೆ ನನಗೆ ಸ್ವಲ್ಪ ವಿಷ ಕೊಡಿ ಎಂದು ಅಳಲು ತೋಡಿಕೊಂಡಿದ್ದಾರೆ. ಇನ್ನು ದರ್ಶನ್‌ ಅವರು ಹಿರಿಯ ನಟ ಸುಧೀರ್‌ ಅವರ ಕುಟುಂಬಕ್ಕೆ ತೀರಾ ಆಪ್ತರು. ದರ್ಶನ್‌ಗೆ ಈ ರೀತಿ ಆಯ್ತಲ್ಲಾ? ಎಂದು ಸುಧೀರ್‌ ಪತ್ನಿ ಮಾಲತಿ ಸುಧೀರ್‌ ಭಾವುಕರಾಗಿದ್ದಾರೆ.

ನಟಿ ಮಾಲತಿ ಸುಧೀರ್‌ ಅವರು ದರ್ಶನ್‌ ಅವರನ್ನ ಸ್ವಂತ ಮಗ ಎಂದೇ ಹಲವು ಬಾರಿ ಹೇಳಿಕೊಂಡಿದ್ದರು. ಪುತ್ರ ತರುಣ್‌ ಸುಧೀರ್‌ ಅವರೊಂದಿಗೂ ದರ್ಶನ್‌ ಸಿನಿಮಾ ಮಾಡಿದ್ದಾರೆ. ದರ್ಶನ್‌ಗಾಗಿ ತರುಣ್‌ ನಿರ್ದೇಶಿಸಿದ್ದ ಕಾಟೇರ ಸಿನಿಮಾ ಸಖತ್‌ ಹಿಟ್‌ ಕಂಡಿತ್ತು. ಅಲ್ಲದೆ ತರುಣ್‌ ಸುಧೀರ್‌ ಹಾಗೂ ನಟಿ ಸೋನಲ್‌ ಮೊಂಥೆರೋ ಅವರ ಮದುವೆ ವಿಚಾರದಲ್ಲೂ ದರ್ಶನ್‌ ಅವರೇ ಮಧ್ಯಸ್ಥಿಕೆ ವಹಿಸಿದ್ದರು. ಆದರೆ ದರ್ಶನ್‌ ಅವರು ಜೈಲಿನಲ್ಲಿದ್ದ ಕಾರಣ ತರುಣ್‌ ಅವರ ವಿವಾಹಕ್ಕೆ ಬರಲು ಸಾಧ್ಯವಾಗಿರಲಿಲ್ಲ.

i-will-cut-off-my-body-organs-if-needed-for-actor-darshan-release-malathi-sudheer

'ದರ್ಶನ್‌ ನನ್ನ ಸ್ವಂತ ಮಗ'

ಈಗ ಮತ್ತೆ ದರ್ಶನ್‌ ಅವರು ಜೈಲು ಸೇರಿರುವ ಬಗ್ಗೆ ಮಾಲತಿ ಸುಧೀರ್‌ ಅವರು ಸಂಕಟ ಹೊರಹಾಕಿದ್ದಾರೆ. 'ದರ್ಶನ್‌ ನನ್ನ ಮಗ ಇದ್ದಂಗೆ ಅಲ್ಲ, ಅವನು ನನ್ನ ಮಗಾನೇ. ಅದರಲ್ಲಿ ಎರಡು ಮಾತಿಲ್ಲ. ಮೀನಾ ಅವರು ದರ್ಶನ್‌ನ ಹೆತ್ತಿದ್ದಾರೆ. ಆದರೆ ನಾವು ದರ್ಶನ್‌ನ ಮಗ ಅಂತ ಎದೆಯಲ್ಲೇ ಇಟ್ಟುಕೊಂಡಿದ್ದೇವೆ, ಅಷ್ಟೇ ವ್ಯತ್ಯಾಸ. ಹಾಗಾಗಿ ದರ್ಶನ್‌ ನನಗೆ ಮಗನೇ..' ಎಂದು ಭಾವುಕರಾಗಿದ್ದಾರೆ.

'ದರ್ಶನ್‌ಗೆ ಹೀಗಾಗಿದ್ದು ಕೇಳಿ ಬಹಳ ನೋವಾಗಿದೆ. ಆ ವಿಷಯವಾಗಿ ನಾನೇನೂ ಮಾತನಾಡಲ್ಲ. ನಮ್ಮ ಆಯಸ್ಸನ್ನೂ ಅವನಿಗೇ ಕೊಡಪ್ಪ ಎಂದು ಆ ದೇವರಲ್ಲಿ ಕೇಳಿಕೊಳ್ತೀನಿ, ಎನ್ನುವಷ್ಟರ ಮಟ್ಟಿಗೆ ನೋವಾಗಿದೆ. ಅವನಿಗೋಸ್ಕರ ಏನಾದ್ರೂ ಕಡಿದು ಕೊಡು ಅಂದ್ರು ನಾನು ಸಿದ್ಧಳಿದ್ದೀನಿ. ಆ ದೇವರು ಏನಾದ್ರೂ ನಿಮ್ಮ ಮಗ ದರ್ಶನ್‌ ಜೈಲಿಂದ ಹೊರಗೆ ಬರ್ತಾನೆ ಅಂದ್ರೆ ಕೈ, ಕಾಲು, ಕಣ್ಣು ಏನು ಕೊಡು ಅಂದ್ರೂ ಕೊಡೋಕೆ ರೆಡಿ ಇದ್ದೀನಿ, ನನಗೆ ಅಷ್ಟು ನೋವಾಗಿದೆ' ಎಂದು ಬೇಸರದ ಮಾತುಗಳನ್ನಾಡಿದ್ದಾರೆ.

ತರುಣ್-ಸೋನಲ್‌ ಜೊತೆ ಮಾತು ಕಡಿಮೆ

ತಮ್ಮ ಮಗ ಹಾಗೂ ಸೊಸೆಯ ಬಗ್ಗೆಯೂ ಮಾತನಾಡಿರುವ ಮಾಲತಿ ಸುಧೀರ್‌, 'ಸೋನಲ್‌ ತುಂಬಾ ಒಳ್ಳೆಯವಳು. ನಮ್ಮಿಬ್ಬರಿಗೂ ಮಾತನಾಡೋಕೆ ಬಿಡುವೇ ಇಲ್ಲ. ರಾತ್ರಿ ಬಂದು ಅಮ್ಮ ಶೂಟಿಂಗ್‌ ಹೇಗಾಯ್ತು, ಡೈಲಾಗ್‌ ಹೇಗೆ ಹೇಳಿದ್ರಿ ಅಂತ ಕುತೂಹಲದಿಂದ ಕೇಳ್ತಾಳೆ. ನಾವಿಬ್ಬರೂ ಮಾತನಾಡೋದು ಇಷ್ಟೇ. ಇನ್ನು ಮಗ ತರುಣ್‌ಗೆ ಇನ್ನೂ ಏನಾದರೂ ಹೊಸದು ಮಾಡಬೇಕು, ಜನಗಳಿಗೆ ಇನ್ನೂ ಏನೋ ಕೊಡಬೇಕು ಅನ್ನೋ ಹಠ ಇದೆ. ಅವನು ಅದೇ ಯೋಚನೆಯಲ್ಲಿರ್ತಾನೆ. ಅಮ್ಮ ಊಟ ಮಾಡಿದ್ರಾ? ಅಮ್ಮ ಊಟ ಬಡಿಸ್ತೀರಾ? ಅನ್ನೋ ಎರಡು ಮಾತು ಬಿಟ್ರೆ ಬೇರೆ ಏನೂ ಮಾತನಾಡಲ್ಲ' ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+