Bigg Boss: ಬಿಗ್‌ಬಾಸ್ ವಿನ್ನರ್ ಆಗಿದ್ದಕ್ಕೆ ನನಗೆ ತುಂಬಾ ಖುಷಿ ಆಗಿದೆ- ಮೋಕ್ಷಿತಾ ಪೈ
ಬಿಗ್‌ಬಾಸ್ ವಿನ್ನರ್ ಆಗಿದ್ದಕ್ಕೆ ನನಗೆ ಖುಷಿ ಆಗಿದೆ. ನನಗೆ ಓಟ್ ಮಾಡಿ ಗೆಲ್ಲಿಸಿದ್ದಕ್ಕೆ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು. ನಿಮ್ಮ ಆಶೀರ್ವಾದ ಸದಾ ನನ್ನ ಮೇಲೆ ಹೀಗೆ ಇರಲಿದೆ ಎಂದು ಮೋಕ್ಷಿತಾ ಪೈ ಹೇಳಿದ್ದಾರೆ. ಇಂದು ಬಿಗ್‌ಬಾಸ್ ಕನ್ನಡ ಸೀಸನ್ 11ರ ಗ್ರ್ಯಾಂಡ್ ಫಿನಾಲೆ ಆರಂಭವಾಗಿದೆ. ಮೋಕ್ಷಿತಾ ಪೈ ತಮಗೆ ಓಟ್ ಮಾಡಿದವರಿಗೆಲ್ಲಾ ಧನ್ಯವಾದಗಳನ್ನು ತಿಳಿಸಿದ್ದಾರೆ. ಹಾಗಾದರೆ ಮೋಕ್ಷಿತಾ ಪೈ ವಿಜೇತರಾದ್ರಾ? ಮೋಕ್ಷಿತಾ ಹೇಳಿದ್ದೇನು?
ಬಿಗ್‌ಬಾಸ್ ಗ್ರ್ಯಾಂಡ್ ಫಿನಾಲೆ ಆರಂಭವಾಗಿದ್ದು ಸ್ಪರ್ಧಿಗಳ ಆತ್ಮೀಯರು ವೇದಿಕೆ ಮೇಲೆ ನೃತ್ಯ ಮಾಡಿ ಸ್ಪರ್ಧಿಗಳನ್ನು ಖುಷಿ ಪಡಿಸಿದ್ದಾರೆ. ಇದೇ ವೇಳೆ ಬಿಗ್‌ಬಾಸ್ ಮನೆಯ ಎಲ್ಲಾ ಸ್ಪರ್ಧಿಗಳಲ್ಲಿ ಅದ್ಭುತ ನೃತ್ಯಗಾರರು, ಹೆಚ್ಚು ಕಣ್ಣೀರು ಹಾಕಿದವರು, ಕೆಡಿ ಜೋಡಿಗೆ ಪ್ರಶಸ್ತಿಗಳನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಕಿಚ್ಚ ಸುದೀಪ್ ಮನೆಯಲ್ಲಿ ಉಳಿದ ಆರು ಸ್ಪರ್ಧಿಗಳಿಗೆ ನೀವು ಗೆದ್ದರೆ ನಿಮ್ಮ ಮೊದಲ ಪ್ರತಿಕ್ರಿಯೆ ಹೇಗಿರುತ್ತದೆ ಒಂದು ಪ್ರಶ್ನೆ ಮಾಡಿದರು. ಈ ವೇಳೆ ಮೋಕ್ಷಿತಾ ಪೈ ಅವರು, 'ಬಿಗ್‌ಬಾಸ್ ವಿನ್ನರ್ ಆಗಿದ್ದಕ್ಕೆ ನನಗೆ ಖುಷಿ ಆಗಿದೆ. ನನಗೆ ಓಟ್ ಮಾಡಿ ಗೆಲ್ಲಿಸಿದ್ದಕ್ಕೆ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು. ನಿಮ್ಮ ಆಶೀರ್ವಾದ ಸದಾ ನನ್ನ ಮೇಲೆ ಹೀಗೆ ಇರಲಿದೆ' ಎಂದು ಹೇಳಿದ್ದಾರೆ.
ಇನ್ನೂ ರಜತ್ ಅವರಿಗೆ ಮಂಜು ಅವರು ಗೆದ್ದರೆ ಮೊದಲ ಪ್ರತಿಕ್ರಿಯೆ ಹೇಗಿರುತ್ತದೆ ಎಂದು ಕಿಚ್ಚ ಸುದೀಪ್ ಕೇಳುತ್ತಾರೆ. ಆಗ ರಜತ್ ಕಾಮಿಡಿಯಾಗಿ ಮಂಜು ಹೇಗೆ ಪ್ರತಿಕ್ರಿಯೆ ನೀಡುತ್ತಾರೆ ಎಂದು ಆಕ್ಟ ಮಾಡಿ ತೋರಿಸಿದ್ದಾರೆ. ಅಲ್ಲದೆ ಭವ್ಯಾ ಗೌಡ ಅವರು ಗೆದ್ದರೆ ಯಾವ ರೀತಿ ರಿಯಾಕ್ಟ್ ಮಾಡುತ್ತಾರೆ ಎನ್ನುವುದನ್ನೂ ರಜತ್ ಹಾಗೂ ತ್ರಿವಿಕ್ರಮ್ ಆಕ್ಟ್ ಮಾಡಿ ತೋರಿಸಿದ್ದಾರೆ.
ಜೊತೆಗೆ ರಜತ್ ಅವರು ಮೋಕ್ಷಿತಾ ಗೆದ್ದರೆ ಹೇಗೆ ರಿಯಾಕ್ಟ್ ಮಾಡುತ್ತಾರೆ ಅನ್ನೋದನ್ನು ತೋರಿಸಿ ಸಖತ್ ಕಾಮಿಡಿ ಮಾಡಿದ್ದಾರೆ. ಒಟ್ಟಿನಲ್ಲಿ ಬಿಗ್‌ಬಾಸ್ ಮನೆ ಇಷ್ಟು ದಿನ ಭಯದ ವಾತಾವರಣದಲ್ಲಿ, ಆತಂಕದಲ್ಲಿ, ಗೊಂದಲದಲ್ಲಿ ಇತ್ತು. ಆದರಿಂದ ಹೊರಬಂದು ಎಲ್ಲಾ ಸ್ಪರ್ಧಿಗಳು ಮಸ್ತ್ ಮಜಾ ಮಾಡಿದ್ದು ಕಂಡು ಬಂದಿದೆ.
ಮನೆಯಿಂದ ಹೊರ ಬಂದ ಸ್ಪರ್ಧಿಗಳು ಹಾಗೂ ಮನೆ ಒಳಗೆ ಉಳಿದಿರುವ ಸ್ಪರ್ಧಿಗಳಿಗೆ ಪ್ರಶ್ನೆ ಕೇಳುತ್ತಾ ನಗಿಸುತ್ತಾ ಕಿಚ್ಚ ಸುದೀಪ್ ಶೋಗೆ ಹೊಸ ಕಳೆ ತಂದಿದ್ದಾರೆ. ಮನೆಯಲ್ಲಿ ಎಲ್ಲಾ ಸ್ಪರ್ಧಿಗಳು ಈ ಗ್ರ್ಯಾಂಡ್ ಫಿನಾಲೆಯನ್ನು ಸಿಕ್ಕಾಪಟ್ಟೆ ಎಂಜಾಯ್ ಮಾಡಿದ್ದಾರೆ.
ಬಿಗ್‌ಬಾಸ್ ಮನೆಯಲ್ಲಿ ಒಟ್ಟು ಆರು ಜನ ಸ್ಪರ್ಧಿಗಳು ಉಳಿದುಕೊಂಡಿದ್ದರು. ಈ ಸ್ಪರ್ಧಿಗಳಲ್ಲಿ ಒಬ್ಬರು ವಿನ್ನರ್ ಮತ್ತೊಬ್ಬರು ರನ್ನರ್ ಅಪ್ ಆಗುತ್ತಾರೆ. ಈ ವಿನ್ನರ್ ರೇಸ್‌ನಲ್ಲಿ ತ್ರಿವಿಕ್ರಮ್ ಹಾಗೂ ಹನುಮಂತ ಇದ್ದಾರೆ. ಇನ್ನೂ ಇಂದು ಭವ್ಯಾ ಗೌಡ ಅವರು ಬಿಗ್‌ಬಾಸ್ ಮನೆಯಿಂದ ಹೊರಬಂದಿದ್ದಾರೆ. ಬಿಗ್‌ಬಾಸ್ ಮನೆಯಿಂದ ಹೊರಬರುವ ಮುಂದಿನ ಸ್ಪರ್ಧಿ ಯಾರು ಎನ್ನುವ ಕುತೂಹಲ ಹೆಚ್ಚಾಗಿದೆ.
ಇಂದಿನ ಸಂಚಿಕೆಯಲ್ಲಿ ಮತ್ತೊಬ್ಬ ಸ್ಪರ್ಧಿ ಹೊರಬರುತ್ತಾರಾ? ಅಥವಾ ನಾಳಿನ ಸಂಚಿಕೆಯಲ್ಲಿ ಹೊರಬರುತ್ತಾರಾ? ಹೊರ ಬಂದರೆ ಯಾವ ಸ್ಪರ್ಧಿ ಹೊರ ಬರುತ್ತಾರೆ ಎಮದು ಕಾದು ನೋಡಬೇಕಿದೆ. ಒಟ್ಟಿನಲ್ಲಿ ಇಂದಿನ ಸಂಚಿಕೆ ಮಾತ್ರ ವೀಕ್ಷಕರಿಗೆ ಹಾಗೂ ಸ್ಪರ್ಧಿಗಳಿಗೆ ಭಾರೀ ಖುಷಿಯನ್ನು ತಂದಿದೆ.












Click it and Unblock the Notifications