Darshan Thoogudeepa: ನಟ ದರ್ಶನ್‌ ಸಿಗರೇಟ್‌ ಹಿಡಿದಿರುವ ಫೋಟೋ ಹೊರಗಡೆ ಬಂದಿದ್ದೇಗೆ?-ಇಲ್ಲಿದೆ ಮಾಹಿತಿ

Actor Darshan: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್‌ ರೌಡಿ ಶೀಟರ್‌ ವಿಲ್ಸನ್‌ ಗಾರ್ಡನ್‌ ನಾಗನ ಜೊತೆ ಕುಳಿತು ಆರಾಮಾಗಿ ಒಂದು ಕೈಯಲ್ಲಿ ಕಾಫಿ ಮಗ್‌, ಮತ್ತೊಂದು ಕೈಯಲ್ಲಿ ಸಿಗರೇಟ್‌ ಹಿಡಿದಿರುವ ಫೋಟೋ ಇದೀಗ ಭಾರೀ ವೈರಲ್‌ ಆಗುತ್ತಿದೆ. ಹಾಗಾದರೆ ಈ ಫೋಟೋ ಹೊರಗಡೆ ಬಂದಿದ್ದೇಗೆ ಎಂದು ಇಲ್ಲಿ ತಿಳಿಯಿರಿ.

ನಿಯಮದ ಪ್ರಕಾರ ಜೈಲಿನಲ್ಲಿ ಯಾವುದೇ ಸಿಗರೇಟ್‌, ಮಾದಕ ವಸ್ತಗಳಿಗೆ ಅವಕಾಶ ಇರುವುದಿಲ್ಲ. ಒಂದು ವೇಳೆ ಅಡಿಕ್ಟ್‌ ಆಗಿದ್ದರೆ, ವೈದ್ಯರ ಮಾಹಿತಿಯ ಮೇರೆಗೆ ಮಾತ್ರ ಸಿಗರೇಟ್‌ಗೆ ಅವಕಾಶವಿದೆ ಎಂದು ಕೆಲವರು ಹೇಳುತ್ತಾರೆ. ಆದರೆ ಇದೀಗ ನಟ ದರ್ಶನ್‌ ನಿಯಮ ಮೀರಿ ಅದರಲ್ಲೂ ರೌಡಿ ವಿಲ್ಸನ್‌ ಗಾರ್ಡನ್‌ ಜೊತೆ ಕುಳಿತು ಯಾವುದೇ ಭಯವಿಲ್ಲದೆ ಸಿಗರೇಟ್‌ ಹಿಡಿದಿರುವ ಫೋಟೋ ಭಾರೀ ವೈರಲ್‌ ಆಗುತ್ತಿದೆ. ಹಾಗಾದರೆ ಇದು ಹೊರಗಡೆ ಬಂದಿದ್ದೇಗೆ ಎಂದು ತಿಳಿಯಿರಿ.

How is actor Darshan and Wilson garden naga s photo goes viral Know details

ಇಷ್ಟು ದಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಿಗರೇಟ್‌, ಮಾದಕ ವಸ್ತುಗಳು, ಮೊಬೈಲ್‌ ಫೋನ್‌ಗಳು ಸಫ್ಲೈ ಆಗುತ್ತಿವೆ ಎನ್ನುವ ಆರೋಪಗಳು ಕೇಳಿಬಂದಿದ್ದವು. ಇದೀಗ ಇದಕ್ಕೆ ಪುಷ್ಟಿ ನೀಡುವಂತೆ ನಟ ದರ್ಶನ್ ಕೈಯಲ್ಲಿ ಸಿಗರೇಟ್ ಹಿಡಿದಿರುವ ಫೋಟೋ ಭಾರೀ ಚರ್ಚೆಗೆ ಕಾರಣವಾಗಿದೆ. ಹಾಗಾದರೆ ಜೈಲು ಅಧಿಕಾರಿಗಳು ಏನು ಕಡ್ಲೆಪುರಿ ತಿಂತಿದ್ದಾರಾ? ಅವರದ್ದೇ ಇದರಲ್ಲಿ ಕೈವಾಡ ಇದ್ಯಾ ಎನ್ನುವ ಶಂಕೆಗಳು ವ್ಯಕ್ತವಾಗಿವೆ.

ಇನ್ನೂ ಈ ಫೋಟೋ ಹೇಗೆ ಹೊರಗಡೆ ಬಂತು ಎನ್ನುವ ಕೂತೂಹಲ ಎಲ್ಲರಲ್ಲೂ ಇದ್ದೇ ಇರುತ್ತದೆ. ವೇಲು ಎಂಬ ಖೈದಿ ಈ ಫೋಟೋವನ್ನು ತೆಗೆದಿದ್ದು, ತನ್ನ ಹೆಂಡತಿಗೆ ಆತ ಜೈಲಿನಿಂದ ಕಳುಹಿಸಿದ್ದು, ಇದೀಗ ಇದು ಭಾರೀ ವೈರಲ್‌ ಆಗುತ್ತಿದೆ ಎಂದು ಸುವರ್ಣ ನ್ಯೂಸ್‌ ವರದಿ ಮಾಡಿದೆ. ಜೈಲಿನಲ್ಲಿ ನಿಯಮಗಳನ್ನು ಮೀರಿ ಕೈದಿಗಳಿಗೆ ಮದ್ಯ, ಸಿಗರೇಟ್ ಸಪ್ಲೈ ಮಾಡಲಾಗುತ್ತಿದೆ ಎಂದು ಹಲವು ಬಾರಿ ಆರೋಪ ಕೇಳಿಬಂದಿದ್ದು, ಇದಕ್ಕೆ ಪುಷ್ಟಿ ನೀಡುವಂತೆ ಈ ಫೋಟೋ ಸಾಕ್ಷ್ಯ ಹೇಳುತ್ತಿದೆ.

ಮತ್ತೊಂದೆಡೆ ಕೈದಿ ಕೈಗೆ ಮೊಬೈಲ್‌ ಕೊಟ್ಟಿದ್ದು ಯಾರು ಎನ್ನುವ ಅನುಮಾನಗಳು ಕೂಡ ವ್ಯಕ್ತವಾಗುತ್ತಿವೆ. ಇದನ್ನೆಲ್ಲ ಗಮನಿಸಿದರೆ, ಪರಪ್ಪನ ಅಗ್ರಹಾರದಲ್ಲಿ ಕೊಲೆ ಮಾಡಿದ ಆರೋಪಿಗಳಿಗೆ ಇಷ್ಟೊಂದು ರಾಜತಿಥ್ಯಾ ಯಾಕೆ ಎನ್ನುವ ಪ್ರಶ್ನೆಗಳು ಕೂಡ ಎದ್ದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+