ಮಹೇಶ್ ಬಾಬು ಕರಿಯರ್‌ಗೆ ಕಂಟಕವಾದ ‘ಗುಂಟೂರು ಖಾರ’: ಇದು ಫ್ಲಾಪ್ ಷೋ ಅಂತಿದ್ದಾರೆ ಫ್ಯಾನ್ಸ್!

ನಟ ಮಹೇಶ್ ಬಾಬು ಅಂದ್ರೆ ತೆಲುಗು ಸಿನಿಮಾ ಇಂಡಸ್ಟ್ರಿ ಮಾತ್ರವಲ್ಲ ಭಾರತದ ಮೂಲೆ ಮೂಲೆಯಲ್ಲೂ ಹವಾ ಇದೆ. ಹೀಗಿದ್ದಾಗ ಇಂತಹ ನಟ ಸಿನಿಮಾ ಮಾಡ್ತಾರೆ ಅಂದ್ರೆ ಅದಕ್ಕೆ ಕೋಟ್ಯಂತರ ಅಭಿಮಾನಿಗಳು ಕಾಯುತ್ತಾರೆ. ಆದರೆ, ಇಂದು ರಿಲೀಸ್ ಆಗಿರುವ ಮಹೇಶ್ ಬಾಬು ಅಭಿನಯದ 'ಗುಂಟೂರು ಖಾರ' ಸಿನಿಮಾಗೆ ರೆಸ್ಪಾನ್ಸ್ ಹೇಗೆ ಸಿಕ್ಕಿದೆ ಗೊತ್ತೆ? ಅದು ನೋಡಿದ್ರೆ ನೀವೆ ಶಾಕ್ ಆಗ್ತೀರ! ಯಾಕಂದ್ರೆ ಈ ಸಿನಿಮಾ ನೋಡಿ ನಿದ್ದೆ ಮಾಡಿದ ಜನರೇ ಹೆಚ್ಚಂತೆ.

ಹೌದು, ಮಹೇಶ್ ಬಾಬು & ನಿರ್ದೇಶಕ ತ್ರಿವಿಕ್ರಂ ಶ್ರೀನಿವಾಸ್ ಕಾಂಬಿನೇಷನ್ ಸಿನಿಮಾ ಎನ್ನುವ ಕಾರಣಕ್ಕೆ 'ಗುಂಟೂರು ಖಾರಂ' ಸಿಕ್ಕಾಪಟ್ಟೆ ನಿರೀಕ್ಷೆ ಮೂಡಿಸಿತ್ತು. ಆದ್ರೆ ಆಗಿದ್ದೆಲ್ಲಾ ಬರೀ ಉಲ್ಟಾ. ಯಾಕಂದ್ರೆ ಮಹೇಶ್ ಬಾಬು ಅವರ ಈ ಸಿನಿಮಾಗೆ ಸಿಕ್ಕಾಪಟ್ಟೆ ಬೇಸರದ ರಿವ್ಯೂ ಕೇಳಿಬಂದಿದೆ. ಅದರಲ್ಲೂ ಅಭಿಮಾನಿಗಳು ಮಹೇಶ್ ಬಾಬು ಅವರ ಈ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಇನ್ನೂ ಕೆಲವರು ಈ ಸಿನಿಮಾ ಸೋತಿದೆ ಅಂತೆಲ್ಲಾ ನೇರವಾಗಿಯೇ ಅನಿಸಿಕೆ ಹಂಚಿಕೊಂಡಿದ್ದಾರೆ. ಹಾಗಾದ್ರೆ ಪ್ರೇಕ್ಷಕರು ಹೇಳಿದ್ದೇನು? ವಿಡಿಯೋಗಾಗಿ ಮುಂದೆ ಓದಿ.

Guntur Kaaram Review: How is Superstar Mahesh Babus Family-Drama Movie? What do fans say?

'ಗುಂಟೂರು ಖಾರಂ'ಗೆ ಶಾಕ್?

ಹೆಸರಿನಲ್ಲೇ ಖಾರ ಖಾರ ಇಟ್ಟುಕೊಂಡು ಅಖಾಡಕ್ಕೆ ಬಂದಿದ್ದ 'ಗುಂಟೂರು ಖಾರಂ' ಚಿತ್ರ ತನ್ನ ಒಂದು ಹಾಡಿನ ಮೂಲಕ ಹಲ್‌ಚಲ್ ಎಬ್ಬಿಸಿತ್ತು. ಅದರಲ್ಲೂ, ನಿರ್ದೇಶಕ ತ್ರಿವಿಕ್ರಂ ಶ್ರೀನಿವಾಸ್ ಅವರ ಸಿನಿಮಾಗೆ ಭಾರಿ ದೊಡ್ಡ ಪ್ರಮಾಣದಲ್ಲಿ ಫ್ಯಾನ್ಸ್ ಇದ್ದಾರೆ. ಹೀಗಿದ್ದರೂ ಸಿನಿಮಾ ಅಭಿಮಾನಿಗಳ ನಿರೀಕ್ಷೆಗಳನ್ನು ತಲುಪಿಲ್ಲ ಅಂತೆ. ಹೀಗಾಗಿಯೇ ಸಿನಿಮಾ ಸೋತು ಹೋಗುತ್ತೆ ಅಂತಾ ಅಭಿಮಾನಿಗಳು ಬೇಸರ ಹೊರಹಾಕಿದ್ದಾರೆ. ಈಗ 'ಗುಂಟೂರು ಖಾರಂ' ಸಿನಿಮಾಗೆ ಫ್ಯಾನ್ಸ್ ಕೊಟ್ಟಿರುವ ರಿಯಾಕ್ಷನ್ ವೈರಲ್ ಆಗುತ್ತಿದೆ.

ಥಿಯೇಟರ್‌ನಲ್ಲಿ ಬೇಸರ ಬೇಸರ

'ಗುಂಟೂರು ಖಾರಂ' ನೋಡೋದಕ್ಕೆ ಅಭಿಮಾನಿಗಳು ಇಂದು ಬೆಳ್ಳಂಬೆಳಗ್ಗೆ ನಿದ್ದೆಯನ್ನೂ ಬಿಟ್ಟು ಬಂದಿದ್ದರು. ಹಾಗೇ ತಮ್ಮ ಕೆಲಸಗಳನ್ನ ಮರೆತು ಸಿನಿಮಾ ನೋಡಲು ಕೂತಿದ್ದರು. ಆದರೆ ಆಗಿದ್ದೆಲ್ಲಾ ಉಲ್ಟಾ. ಥಿಯೇಟರ್‌ನಲ್ಲಿ ಶಿಳ್ಳೆ ಪಡೆಯಬೇಕಿದ್ದ ಗುಂಟೂರು ಖಾರಂಗೆ, ಈಗ ಸಿಕ್ಕಿರುವುದು ಮಾತ್ರ ಬೇಸರ ರಿಯಾಕ್ಷನ್ ಅಭಿಮಾನಿಗಳು ಸಪ್ಪೆ ಮುಖ ಹಾಕಿಕೊಂಡೇ ಹೊರಗೆ ಬಂದಿದ್ದಾರೆ. ಮಹೇಶ್ ಬಾಬು ಅವರ ಸಿನಿ ಕರಿಯರ್‌ನಲ್ಲಿ, ಗುಂಟೂರು ಖಾರಂಗೆ ದೊಡ್ಡ ಸ್ಥಾನ ಸಿಗಲಿದೆ ಎನ್ನುವ ನಿರೀಕ್ಷೆ ಇತ್ತು. ಆದರೆ ಎಲ್ಲವೂ ಉಲ್ಟಾ ಆಗೋಗಿದೆ.

ಪ್ರಿನ್ಸ್ ಮಹೇಶ್ ಬಾಬುಗೆ ಶಾಕ್?

ಅಂದಹಾಗೆ ಸಂಕ್ರಾಂತಿ ಹಬ್ಬದ ಸಂಭ್ರಮಕ್ಕೆ ಈ ಬಾರಿ ಪ್ರಿನ್ಸ್ ಮಹೇಶ್ ಬಾಬು ಅವರ ಈ ಸಿನಿಮಾ ಮತ್ತಷ್ಟು ಮೆರಗು ತರುವ ನಿರೀಕ್ಷೆ ಇತ್ತು. ಆದರೆ ಈಗ ಅಭಿಮಾನಿಗಳು ನೀಡಿರುವ ಪ್ರತಿಕ್ರಿಯೆ ನೋಡುತ್ತಿದ್ದರೆ ಈ ಸಿನಿಮಾ ಗೆದ್ದಿದೆ ಅನ್ನುವಂತಿಲ್ಲ ಅಥವಾ ಸೋತಿದೆ ಅಂತಾ ಕೂಡ ಹೇಳುವಂತಿಲ್ಲ. ಯಾಕಂದ್ರೆ ಸಿನಿಮಾ ಬಗ್ಗೆ ನಿರೀಕ್ಷಿತ ಫಲಿತಾಂಶ ಬಂದಿಲ್ಲ. ಹೀಗಾಗಿ 'ಗುಂಟೂರು ಖಾರಂ'ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಒಟ್ನಲ್ಲಿ ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ 2024ರ ಹೊಸ ವರ್ಷದ ಆರಂಭದಲ್ಲೇ ಆಘಾತ ಎದುರಾದಂತೆ ಕಾಣುತ್ತಿದೆ. ಆದರೆ ಸಾಲು ಸಾಲು ರಜೆ ಇರುವ ಕಾರಣ 'ಗುಂಟೂರು ಖಾರಂ' ಸಿನಿಮಾ ಕಂಬ್ಯಾಕ್ ಮಾಡುವ ನಿರೀಕ್ಷೆ ಕೂಡ ಇದೆ. ಹೀಗಾಗಿ ಮುಂದಿನ ದಿನದಲ್ಲಿ ಯಾವ ರೀತಿ ಪ್ರತಿಕ್ರಿಯೆ ವ್ಯಕ್ತವಾಗುತ್ತೆ ಅಂತಾ ಕಾದು ನೋಡಬೇಕಿದೆ. ಆದರೆ ಇಂದು ಥಿಯೇಟರ್ ಬಳಿ ಅಭಿಮಾನಿಗಳು ಬೇಸರ ಹೊರಹಾಕಿದ್ದು ಚಿತ್ರಮಂದಿರ ತುಂಬಿ ತುಳುಕಿದರೂ ನಿರೀಕ್ಷೆ ಮುಟ್ಟಿಲ್ಲ ಎಂಬ ಬೇಸರ ಹೊರಬಿದ್ದಿದೆ. ಅದ್ರಲ್ಲೂ ಪ್ರಿನ್ಸ್ ಮಹೇಶ್ ಬಾಬು ಅವರ ಫ್ಯಾನ್ಸ್, ಈ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಹೀಗಾಗಿ ಇನ್ನಷ್ಟು ದಿನ ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+