Gauthami Jadav: ಗೌತಮಿ ಕುಟುಂಬದಲ್ಲಿ ಬಿರುಗಾಳಿ? ಅನುಮಾನ ಹುಟ್ಟಿಸಿದ ಮಾವನ ಪೋಸ್ಟ್!

ಬಿಗ್‌ ಬಾಸ್‌ ಕನ್ನಡ ಸೀಜನ್‌ 11ರ ಸ್ಪರ್ಧಿ ಗೌತಮಿ ಜಾದವ್‌ ಕುಟುಂಬದಲ್ಲಿ ಎಲ್ಲವೂ ಸರಿ ಇಲ್ವಾ? ಎನ್ನುವ ಪ್ರಶ್ನೆಯೊಂದು ಈಗ ಉದ್ಭವವಾಗಿದೆ. ಇದಕ್ಕೆ ಕಾರಣ ಕೂಡ ಇದೆ. ಕುಟುಂಬ ಅಂದರೆ ಗೌತಮಿ ಜಾದವ್‌ ಹಾಗೂ ಅವರ ಪತಿ ಅಭಿಷೇಕ್‌ ನಡುವೆಯಲ್ಲ. ಬದಲಿಗೆ ಅಭಿಷೇಕ್‌ ಅವರ ತಂದೆ-ತಾಯಿ ಜೊತೆಗೆ. ಇದಕ್ಕೆ ಕಾರಣವಾಗಿರುವುದು ಆ ಒಂದು ಪೋಸ್ಟ್‌. ಗೌತಮಿ ಜಾದವ್‌ ಅಭಿಮಾನಿಗಳಲ್ಲಿ ಹಾಗೂ ಬಿಗ್‌ ಬಾಸ್‌ ಪ್ರೇಕ್ಷಕರಲ್ಲಿ ಈ ಅನುಮಾನ ಮೂಡಲು ಕಾರಣವಾದ ಆ ಪೋಸ್ಟ್‌ನಲ್ಲಿ ಏನಿದೆ?. ಸಾಮಾಜಿಕ ಜಾಲತಾಣದಲ್ಲಿ ಆ ಪೋಸ್ಟ್‌ ಅನ್ನು ಹಾಕಿದವರು ಯಾರು? ಉತ್ತರ ಇಲ್ಲಿದೆ.

ಸತ್ಯ ಧಾರಾವಾಹಿ ಮೂಲಕ ಖ್ಯಾತಿ ಪಡೆದಿದ್ದ ಗೌತಮಿ ಜಾದವ್‌ ಬಿಗ್‌ ಬಾಸ್‌ ಕನ್ನಡ ಸೀಜನ್‌ 11ರ ಸ್ಪರ್ಧಿಯಾಗಿ ಬಂದು ಇನ್ನಷ್ಟು ಜನಪ್ರಿಯತೆ ಪಡೆದುಕೊಂಡರು. ನಗು ಮುಖ, ಪಾಸಿಟಿವ್‌ ಮಾತುಗಳು, ಸ್ನೇಹ, ವ್ಯಕ್ತಿತ್ವ ಸೇರಿದಂತೆ ಎಲ್ಲದರಲ್ಲಿಯೂ ಉತ್ತಮ ಪಡೆದು ನೂರು ದಿನಗಳನ್ನು ಬಿಗ್‌ ಬಾಸ್‌ ಮನೆಯಲ್ಲಿ ಪೂರೈಸಿದ ಗೌತಮಿ ಜಾದವ್‌ ಕೊನೆಯ ಹಂತದಲ್ಲಿ ಬಿಗ್‌ ಬಾಸ್‌ ಫಿನಾಲೆ ವಾರದ ಪ್ರವೇಶವನ್ನು ಕೂದಲೆಳೆ ಅಂತರದಲ್ಲಿ ಕಳೆದುಕೊಂಡರು.

Gouthami Jadav Father In Law Director Ganesh Kasaragod Post Goes Viral In Social Media

ಗೌತಮಿ ಜಾದವ್‌ ಬಿಗ್‌ ಬಾಸ್‌ ಮನೆಯಿಂದ ಹೊರ ಬರುತ್ತಿದ್ದಂತೆ ಅವರ ಕುಟುಂಬಸ್ಥರು ಅಂದರೆ ಪತಿ ಅಭಿಷೇಕ್‌, ಗೌತಮಿ ತಂದೆ-ತಾಯಿ, ಹಾಗೂ ಆತ್ಮೀಯ ಸ್ನೇಹಿತರು ಬಹಳ ಅದ್ಧೂರಿಯಾಗಿ ಸ್ವಾಗತಿಸಿಕೊಂಡರು. ಇದೇ ಸಮಯದಲ್ಲಿ ಗೌತಮಿ ಅವರಿಗೆ ಸಂಬಂಧಿಸಿದ ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ವೊಂದನ್ನು ಹಾಕುತ್ತಾರೆ. ಅದರಿಂದ ಹಲವು ಅನುಮಾನಗಳು ಜನರಲ್ಲಿ ಹುಟ್ಟಿಕೊಂಡಿದೆ.

ಗೌತಮಿ ಜಾದವ್‌ ಪತಿ ಅಭಿಷೇಕ್‌ ಅವರ ತಂದೆ ಕನ್ನಡ ಚಿತ್ರರಂಗ ನಿರ್ದೇಶಕ ಗಣೇಶ್‌ ಕಾಸರಗೋಡು ತಮ್ಮ ಸಾಮಾಜಿಕ ಜಾಲತಾಣದಲ್ಲಿ 'ಅನ್ಯಾಯದ ಬೇಡಿಕೆಯ ಪ್ರಾರ್ಥನೆಯನ್ನು ಮುಲಾಜಿಲ್ಲದೇ ಧಿಕ್ಕರಿಸುವ, ತಿರಸ್ಕರಿಸುವ ನಮ್ಮಮ್ಮ ವನದುರ್ಗೆಗೆ ನಮೋ ನಮಃ' ಎಂದು ಪೋಸ್ಟ್‌ ಮಾಡಿದ್ದರು. ಈ ಒಂದು ಪೋಸ್ಟ್‌ ಬಹಳ ಅರ್ಥಗಳನ್ನು ಹೇಳುತ್ತಿದೆ. ಗೌತಮಿ ಆರಾಧಿಸುವ ವನದುರ್ಗೆ ತಾಯಿ ಗೌತಮಿ ಅವರ ಫಿನಾಲೆ ಆಸೆಯನ್ನು ತಿರಸ್ಕರಿಸದರಾ? ಇದರಿಂದ ಅವರ ಮಾವನಿಗೆ ಸಂತೋಷವಾಯ್ತಾ? ನಿರ್ದೇಶಕ ಗಣೇಶ್‌ ಕಾಸರಗೋಡು ಸೊಸೆಯ ಸೋಲನ್ನು ಸಂಭ್ರಮಿಸಿದರಾ? ಎನ್ನುವ ಪ್ರಶ್ನೆಗಳು ಅನೇಕರಲ್ಲಿ ಹುಟ್ಟಿಕೊಂಡಿದೆ.

Gouthami Jadav Father In Law Director Ganesh Kasaragod Post Goes Viral In Social Media

ಈ ಒಂದು ಪೋಸ್ಟ್‌ನ ಬಗ್ಗೆ ನ್ಯಾಷನಲ್ ಟಿವಿ ಜೊತೆ ಮಾತನಾಡಿದ ಗೌತಮಿ ಜಾದವ್‌, 'ಅವರು ಈ ರೀತಿ ಪೋಸ್ಟ್‌ ಹಾಕಿರುವುದು ನನಗೂ ಆಶ್ಚರ್ಯ ಆಗಿದೆ. ನಮ್ಮ ಮತ್ತು ಅವರ ಸಂಬಂಧ ಹೇಗಿದೆ ಎನ್ನುವುದರ ಬಗ್ಗೆ ನಾನು ಮಾತನಾಡುವುದಿಲ್ಲ. ಈ ರೀತಿಯ ಪ್ರಶ್ನೆಗಳು ಬರಬಹುದು ಎನ್ನುವುದು ನನಗೂ ಗೊತ್ತಿತ್ತು. ಕುಟುಂಬದ ಕೆಲವು ವಿಚಾರಗಳು ನಾಲ್ಕು ಗೋಡೆ ಮಧ್ಯೆ ಇರಬೇಕು ಎಂದು ನಾನು ನಂಬುತ್ತೇನೆ. ನಾನು ಅದನ್ನು ನಾಲ್ಕು ಗೋಡೆ ಮಧ್ಯೆ ಇಟ್ಟುಕೊಳ್ಳುತ್ತೇನೆ' ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+