Dwapara Song: ಟೊಮೆಟೊ ಅಲ್ಲ ಸೌತೆಕಾಯಿ & ಕ್ಯಾರೆಟ್ ಕದಿಯುತ್ತಿದ್ದರಂತೆ ದುನಿಯಾ ವಿಜಯ್: ಗೋಲ್ಡನ್ ಸ್ಟಾರ್ ಗಣೇಶ್ ಶಾಕಿಂಗ್ ಸತ್ಯ
ಗೋಲ್ಡನ್ ಸ್ಟಾರ್ ಗಣೇಶ್ & ದುನಿಯಾ ವಿಜಯ್ ಹತ್ತಾರು ವರ್ಷಗಳಿಂದ ಸ್ನೇಹಿತರು. ಈ ಇಬ್ಬರೂ ನಟರು ಕನ್ನಡ ಸಿನಿಮಾ ರಂಗಕ್ಕೆ ಒಟ್ಟೊಟ್ಟಿಗೆ ಬಂದವರು. 'ಮುಂಗಾರು ಮಳೆ' & 'ದುನಿಯಾ' ರೀತಿಯ ಸಿನಿಮಾಗಳನ್ನು ಒಂದೇ ಬಾರಿಗೆ ನೀಡಿ ಕನ್ನಡ ಸಿನಿಮಾ ರಂಗಕ್ಕೆ ಹೊಸ ಮೆರಗು ತಂದವರು. ಇಂತಿಪ್ಪ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ದುನಿಯಾ ವಿಜಯ್ 18 ವರ್ಷಗಳ ನಂತರ ಮತ್ತೆ ಒಂದಾಗುತ್ತಿದ್ದು, ಒಟ್ಟೊಟ್ಟಿಗೆ ಸೇರಿ ತಮ್ಮ ಜೀವನದ ಎಲ್ಲಾ ಕಹಿ ಸತ್ಯಗಳನ್ನು ಜನರ ಎದುರು ಬಿಚ್ಚಿಟ್ಟಿದ್ದಾರೆ.
ಗೋಲ್ಡನ್ ಸ್ಟಾರ್ ಗಣೇಶ್ ಈಗ ಫುಲ್ ಬ್ಯುಸಿ ಆಗಿದ್ದಾರೆ, ವರ್ಷಕ್ಕೆ 2-3 ಸಿನಿಮಾ ರಿಲೀಸ್ ಮಾಡುತ್ತಿದ್ದಾರೆ. ಹೀಗಿದ್ದಾಗಲೇ ಇದೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ 'ಕೃಷ್ಣಂ ಪ್ರಣಯ ಸಖಿ' ಸಿನಿಮಾ ರಿಲೀಸ್ ಮಾಡಲು ಗೋಲ್ಡನ್ ಸ್ಟಾರ್ ಗಣೇಶ್ ಸಿದ್ಧರಾಗಿದ್ದಾರೆ. ಆಗಸ್ಟ್ 15 ರಂದು 'ಕೃಷ್ಣಂ ಪ್ರಣಯ ಸಖಿ' ಸಿನಿಮಾ ದೇಶಾದ್ಯಂತ ರಿಲೀಸ್ ಆಗಲಿದೆ. ಹಾಗೇ ದುನಿಯಾ ವಿಜಯ್ ಅಭಿನಯಿಸಿರುವ 'ಭೀಮ' ಸಿನಿಮಾ ಕೂಡ ಆಗಸ್ಟ್ 9ಕ್ಕೆ ಅಂದ್ರೆ ನಾಳೆ ಅಲ್ಲ ನಾಡಿದ್ದು ರಿಲೀಸ್ ಆಗಲಿದೆ.

18 ವರ್ಷಗಳ ನಂತರ ಗಣಿ & ವಿಜಿ!
ಹೀಗಿದ್ದಾಗ ಇಬ್ಬರು ಕ್ಲೋಸ್ ಫ್ರೆಂಡ್‌ಗಳ ನಡುವೆ ಸಿನಿಮಾ ಜಿದ್ದು ಕೂಡ ಶುರುವಾಗುತ್ತೆ ಅಂತಾ ಗಾಂಧಿನಗರದ ಕೆಲವು ಹರಕು ಬಾಯಿಗಳು ಮಾತನಾಡುತ್ತಿದ್ದವು. ಹೀಗಿದ್ದಾಗ ಎಲ್ಲರ ಬಾಯಿ ಮುಚ್ಚಿಸುವ ರೀತಿ ಗೋಲ್ಡನ್ ಸ್ಟಾರ್ ಗಣೇಶ್ & ದುನಿಯಾ ವಿಜಯ್ ಒಟ್ಟೊಟ್ಟಾಗಿ ಮಾತುಕತೆ ನಡೆಸಿದ್ದಾರೆ. ಸಿನಿಮಾ ಬಗ್ಗೆ ಮಾತುಕತೆ ನಡೆಸುವ ಜೊತೆಗೆ 18 ವರ್ಷಗಳ ಹಿಂದೆ ತಮ್ಮಿಬ್ಬರ ಜೀವನ ಎಷ್ಟು ಕಷ್ಟದಿಂದ ಕೂಡಿತ್ತು? ಹೇಗೆಲ್ಲಾ ಹಸಿವು ನೀಗಿಸಿಕೊಳ್ಳುತ್ತಿದ್ದೆವು? ಎನ್ನುವ ಬಗ್ಗೆ ಇಂಚಿಂಚು ಮಾಹಿತಿ ಬಿಚ್ಚಿಟ್ಟಿದ್ದಾರೆ.
ಟೊಮೆಟೊ ಅಲ್ಲ ಸೌತೇಕಾಯಿ & ಕ್ಯಾರೆಟ್...
ಗೋಲ್ಡನ್ ಸ್ಟಾರ್ ಗಣೇಶ್ & ದುನಿಯಾ ವಿಜಯ್ ಅವರು, ಒಂದೇ ರೂಮ್‌ನಲ್ಲಿ ಎಷ್ಟೋ ದಿನ ಕಾಲ ಕಳೆದಿದ್ದರು. ಅದರಲ್ಲೂ ಸಿನಿಮಾದಲ್ಲಿ ಬರುತ್ತಿದ್ದ ಪುಡಿಗಾಸು ಅವರ ಊಟಕ್ಕೂ ಸರಿ ಹೊಂದುತ್ತಿರಲಿಲ್ಲ. ಜೀವನ ಅನ್ನೋದು ಕಷ್ಟದ ಹಾದಿಯಲ್ಲಿ ಇದ್ದಾಗ ನಟ ಗಣೇಶ್ & ದುನಿಯಾ ವಿಜಯ್ ಇಬ್ಬರೂ ಒಂದಾಗಿ ಕಷ್ಟ ಎದುರಿಸಿದ್ದರಂತೆ. ಅದರಲ್ಲೂ ಸಿನಿಮಾಗಳ ಶೂಟಿಂಗ್ ಮುಗಿಸಿ ರಾತ್ರಿ ಮನೆಗೆ ಹೋಗುವುದು ತಡವಾದರೆ, ಸಿಟಿ ಮಾರ್ಕೆಟ್‌ನಲ್ಲಿ ಸಿಗುತ್ತಿದ್ದ ಸೌತೆಕಾಯಿ & ಕ್ಯಾರೆಟ್, ಬಿಟ್ರೊಟ್ ಬಳಸಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರಂತೆ.
ಕಷ್ಟಗಳು ಇದ್ದಾಗ ಇಬ್ಬರಿಗೂ ಒಂದೊಂದು ಸೌತೆಕಾಯಿ & ಕ್ಯಾರೆಟ್ ಸಿಕ್ಕರೆ ಸಾಕು ಹೊಟ್ಟೆ ತುಂಬುತ್ತಿತ್ತು ಎಂದು ಜೀವನದ ಕಷ್ಟದ ಸಮಯವನ್ನ ಹೀಗೆ ಮೆಲುಕು ಹಾಕಿಕೊಂಡಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ದುನಿಯಾ ವಿಜಯ್ ಅವರ ಈ ಭೇಟಿ ಇದೀಗ ಸಾಕಷ್ಟು ವೈರಲ್ ಆಗುತ್ತಿದ್ದು, ಇಬ್ಬರ ಗೆಳತನ ನೋಡಿ ಕನ್ನಡಿಗರು ಫುಲ್ ಖುಷ್ ಆಗಿದ್ದಾರೆ. ಹಾಗೇ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಜಂಗ್ಲಿ ವಿಜಯ್ ಅವರು ಒಬ್ಬರನ್ನು ಮತ್ತೊಬ್ಬರು ಮಚ್ಚಾ ಅಂತಾ ಕರೆಯುತ್ತಾರೆ. ಹೀಗೆ ಅವರಿಬ್ಬರ ನಡುವೆ ಆತ್ಮೀಯತೆ ಎಷ್ಟಿದೆ ಅನ್ನೋದು ತಿಳಿಯುತ್ತೆ.












Click it and Unblock the Notifications