Gold Suresh: ಬಿಗ್‌ಬಾಸ್‌ ಮನೆಯಿಂದ ಹೊರಬಂದ ಗೋಲ್ಡ್‌ ಸುರೇಶ್ ಫಸ್ಟ್ ರಿಯಾಕ್ಷನ್

ಬಿಗ್‌ಬಾಸ್‌ ಕನ್ನಡ ಸೀಸನ್ 11ರ ಮನೆಯಿಂದ ಗೋಲ್ಡ್‌ ಸುರೇಶ್ ಅವರು ಕಾರಣಾಂತರಗಳಿಂದ ಹೊರಬಂದಿದ್ದಾರೆ. ಸ್ವತ: ಕಿಚ್ಚಾ ಸುದೀಪ್ ಅವರೇ ಹೆದರುವಂತದ್ದು ಏನೂ ಇಲ್ಲ. ನಿಮ್ಮ ಮನೆಯಿಂದ ಸಂದೇಶವೊಂದು ಬಂದಿದೆ. ನಿಮ್ಮ ಮನೆಯಿಂದ ಬಂದ ಯಾವುದೇ ಸಂದೇಶವನ್ನು ನಿರ್ಧಿಷ್ಟ ಸಮಯದಲ್ಲಿ ತಿಳಿಸುವುದು ನಮ್ಮ ಕರ್ತವ್ಯ. ಈ ಸಮಯದಲ್ಲಿ ನೀವು ನಿಮ್ಮ ಮನೆಯಲ್ಲೇ ಇರುವುದು ಸೂಕ್ತ. ಹೆದರುವಂತಹದ್ದು ಏನೂ ಇಲ್ಲ ಎಂದು ಹೇಳಿದ್ದರು. ಈ ಮಾತು ಕೇಳಿದ ತಕ್ಷಣ ಗೋಲ್ಡ್ ಸುರೇಶ್ ಅವರು ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ. ಹಾಗಾದರೆ ಗೋಲ್ಡ್‌ ಸುರೇಶ್ ಮನೆಯಲ್ಲಿ ಆದ ಸಮಸ್ಯೆ ಏನು? ಅವರು ಯಾಕೆ ಬಿಗ್‌ಬಾಸ್‌ ಮನೆಯಿಂದ ಹೊರಬಂದರು? ಇದಕ್ಕೆ ಉತ್ತರ ಇಲ್ಲಿದೆ.

ಬಿಗ್‌ಬಾಸ್‌ ಮನೆಯಿಂದ ಗೋಲ್ಡ್‌ ಸುರೇಶ್ ಹೊರಬರುತ್ತಿದ್ದಂತೆ ಇತ್ತ ಸಾಮಾಜಿಕ ಜಾಲತಾಣದಲ್ಲಿ ಸುರೇಶ್ ತಂದೆ ನಿಧನರಾಗಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಗೋಲ್ಡ್‌ ಸುರೇಶ್ ತಾಯಿಗೆ ಹುಷಾರಿಲ್ಲ, ಅವರ ಕುಟುಂಬಸ್ಥರೊಬ್ಬರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದೆಲ್ಲಾ ವಿಡಿಯೋಗಳು ವೈರಲ್ ಆಗಿದ್ದವು. ಇದಾದ ನಂತರ ಸುರೇಶ್ ತಂದೆ ನಾನು ಇನ್ನೂ ಕೂಡ ಗಟ್ಟಿಯಾಗಿದ್ದೇನೆ. ನನಗೇನು ಆಗಿಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದರು. ಹಾಗಾದರೆ ಗೋಲ್ಡ್ ಸುರೇಶ್ ಅವರು ಬಿಗ್‌ಬಾಸ್‌ ಮನೆಯಿಂದ ಹೊರಬಂದಿದ್ದು ಯಾಕೆ? ಈ ಬಗ್ಗೆ ಜನರಲ್ಲಿ ಕುತೂಹಲ ಹೆಚ್ಚಾಗುತ್ತಿದೆ.

gold suresh first reaction after leaving the bigg boss house

ಗೋಲ್ಡ್ ಸುರೇಶ್ ಬಿಗ್‌ಬಾಸ್‌ ಮನೆಯಿಂದ ಹೊರಬರಲು ಕಾರಣವೇನು?

ಸುರೇಶ್ ಅವರು ಬಿಗ್‌ಬಾಸ್‌ ಮನೆಯಿಂದ ಹೊರ ಬರಲು ಕಾರಣ ಒಂದೆರೆಡಿಲ್ಲ. ಹಲವಾರು ಕಾರಣಗಳಿಂದಾಗಿ ಬಿಗ್‌ಬಾಸ್‌ ತಂಡ ಸುರೇಶ್ ಅವರನ್ನು ಮನೆಯಿಂದ ಹೊರಗೆ ಕಳುಹಿಸಿದೆ. ಗೋಲ್ಡ್‌ ಸುರೇಶ್ ಅವರು ಮನೆಯಿಂದ ಹೊರ ಬರಲು ಪ್ರಮುಖ ಕಾರಣ ಅವರ ಬ್ಯುಸಿನೆಸ್‌ನಲ್ಲಿ ಆದ ಕೆಲ ತೊಂದರೆಗಳು ಎನ್ನಲಾಗುತ್ತಿದೆ. ಐಷಾರಾಮಿ ಜೀವನ ನಡೆಸುತ್ತಿದ್ದ ಗೋಲ್ಡ್ ಸುರೇಶ್ ಕೋಟಿ ಕೋಟಿ ಸಾಲ ಮಾಡಿಕೊಂಡಿದ್ದರು ಎನ್ನಲಾಗುತ್ತಿದೆ. ಇದರಿಂದಾಗಿ ಅವರು ಬಿಗ್‌ಬಾಸ್‌ ಮನೆಯಿಂದ ಹೊರಬಂದಿದ್ದಾರೆ ಎನ್ನಲಾಗುತ್ತಿದೆ.

ಮತ್ತೊಂದು ಕಡೆ ಅವರು ಬಿಗ್‌ಬಾಸ್‌ ಮನೆಯಲ್ಲಿ ಅಷ್ಟಾಗಿ ಆಕ್ಟಿವ್ ಆಗಿ ಇರಲಿಲ್ಲ. ಕಾಲಿಗೆ ಪೆಟ್ಟಾಗಿರುವುದರಿಂದ ಯಾವುದೇ ಫಿಸಿಕಲ್ ಟಾಸ್ಕ್ ಆಡಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಅವರು ಕೇವಲ ಉಸ್ತುವಾರಿ ಮಾಡಿಕೊಂಡೇ ಇದ್ದರು. ಇದಲ್ಲದೆ ಅವರು ಜನರಿಗೆ ಮನರಂಜನೆ ನೀಡಲು ಸಹ ಸಾಧ್ಯ ಆಗಿರಲಿಲ್ಲ.

gold suresh first reaction after leaving the bigg boss house

ಜೊತೆಗೆ ಬಿಗ್‌ಬಾಸ್‌ ಮನೆಯಲ್ಲಿ ಎಲ್ಲರೂ ಕೂಡ ಒಂದು ಫ್ರೆಂಡ್ಸ್ ಝೋನ್ ಕ್ರಿಯೇಟ್ ಮಾಡಿಕೊಂಡು ಎಲ್ಲರೊಂದಿಗೆ ಮಾತನಾಡಿಕೊಂಡು ಇದ್ದರೆ ಸುರೇಶ್ ಅವರು ಯಾರೊಂದಿಗೂ ಕ್ಲೋಸ್ ಆಗದೆ ತಮ್ಮ ಪಾಡಿಗೆ ತಾವು ಇದ್ದರು. ಟಾಸ್ಕ್ ಅಲ್ಲೂ ಕೂಡ ಅವರಿಗೆ ಸಾಧ್ಯವಾದಷ್ಟು ಮಾತ್ರ ಕಾಣಿಸಿಕೊಳ್ಳುತ್ತಿದ್ದರು. ಹೀಗೆ ಬಿಗ್‌ಬಾಸ್‌ ಮನೆಯಲ್ಲಿ ತುಂಬಾ ಸೈಲೆಂಟ್ ಆಗಿದ್ದರು ಗೋಲ್ಡ್ ಸುರೇಶ್. ಇದರಿಂದಾಗಿ ಬಿಗ್‌ಬಾಸ್‌ ತಂಡ ಸುರೇಶ್ ಅವರನ್ನು ಈ ರೀತಿ ಫ್ಯಾಮಿಲಿ ಎಮರ್ಜನ್ಸಿ ಅನ್ನೋ ಕಾರಣ ಕೊಟ್ಟು ಬಿಗ್‌ಬಾಸ್‌ ಮನೆಯಿಂದ ಆಚೆ ಕಳುಹಿಸಿದ್ದಾರೆ ಅನ್ನೋ ಪ್ರಶ್ನೆ ಕೂಡ ಮೂಡಿದೆ.

ಹೊರಬಂದ ಕ್ಯಾಪ್ಟನ್ ಸುರೇಶ್

ಇನ್ನೂ ಗೋಲ್ಡ್‌ ಸುರೇಶ್ ಅವರು ಈ ವಾರ ನಾಮಿನೇಟ್ ಕೂಡ ಆಗಿರಲಿಲ್ಲ. ವಾರದ ಕ್ಯಾಪ್ಟನ್ ಕೂಡ ಆಗಿದ್ದರು. ಹೀಗಾಗಿ ಈ ವಾರ ಕೂಡ ಅವರು ಬಿಗ್‌ಬಾಸ್‌ ಮನೆಯಿಂದ ಹೊರಬರುವ ಸಾಧ್ಯತೆ ಇರಲಿಲ್ಲ. ಇನ್ನೇನು ಗ್ರ್ಯಾಂಡ್ ಫಿನಾಲೆಗೆ ಮೂರು ನಾಲ್ಕು ವಾರ ಮಾತ್ರ ಬಾಕಿ ಇದೆ. ಹೀಗಾಗಿ ಸ್ಪರ್ಧಿಗಳಿಗೆ ತುಂಬಾ ಟಫ್ ಟಾಸ್ಕ್ ಕೊಡಲಾಗುತ್ತಿದೆ.

ಆದರೆ ಗೋಲ್ಡ್‌ ಸುರೇಶ್ ಅವರು ಏನೂ ಮಾಡದೇ ಸೈಲೆಂಟ್ ಆಗಿ ಇದ್ದುಕೊಂಡು ಟಾಸ್ಕ್ ಆಡದೆ ಗ್ರ್ಯಾಂಡ್ ಫಿನಾಲೆವರೆಗೂ ಹೋಗ್ತಾರೆ ಅನ್ನೋ ಸಣ್ಣ ಯೋಚನೆ ಕೂಡ ಬಂದಿತ್ತು ಎಂದು ಕಾಣುಸುತ್ತದೆ. ಹೀಗಾಗಿ ಬಿಗ್‌ಬಾಸ್‌ ತಂಡ ಗೋಲ್ಡ್ ಸುರೆಶ್ ಅವರನ್ನು ಆಚೆ ಕಳುಹಿಸಿರಬಹುದು ಎನ್ನುವ ಅನುಮಾನ ಇದೆ.

ಗೋಲ್ಡ್ ಸುರೇಶ್ ಮತ್ತೆ ಬಿಗ್‌ಬಾಸ್‌ ಮನೆಗೆ ಹೋಗ್ತಾರಾ?

ಅಲ್ಲದೆ ಬಿಗ್‌ಬಾಸ್‌ನ ಯಾವುದೇ ಸೀಸನ್‌ನಲ್ಲೂ ಈ ರೀತಿ ಒಬ್ಬ ಸ್ಪರ್ಧಿಯನ್ನು ಮನೆಯಿಂದ ಹೊರಗೆ ಕಳುಹಿಸಿಲ್ಲ. ಹಾಗೊಂದು ವೇಳೆ ಇದ್ದರೂ ಸಹ ಒಂದೆರೆಡು ದಿನ ಆಚೆ ಕಳುಹಿಸಿ ಮತ್ತೆ ಬಿಗ್‌ಬಾಸ್‌ ಮನೆ ಒಳಗೆ ಕರೆಸಿಕೊಳ್ತಾಯಿದ್ದರು. ಸುರೇಶ್ ವಿಚಾರದಲ್ಲೂ ಸಹ ಕಾಲಿಗೆ ಪೆಟ್ಟಾದಾಗ ಆಸ್ಪತ್ರೆಗೆ ಕಳುಹಿಸಿ ಒಂದೆರೆಡು ದಿನ ಚಿಕಿತ್ಸೆ ಕೊಡಿಸಿದ ಬಳಿಕ ಮತ್ತೆ ಕರೆಸಿಕೊಂಡಿರುವುದು ಇದೆ. ಆದರೆ ಈ ಬಾರಿ ಫ್ಯಾಮಿಲಿ ಎಮರ್ಜನ್ಸಿ ಎಂದು ಹೇಳಿ ಸುರೇಶ್ ಅವರನ್ನು ಹೊರ ಕಳುಹಿಸಲಾಗಿದ್ದು ಮತ್ತೆ ಒಳಗೆ ಕರೆಸಿಕೊಳ್ಳುವುದು ಡೌಟ್ ಎನ್ನಲಾಗಿತ್ತು.

ಯಾಕೆಂದರೆ ಸುರೇಶ್ ಅವರ ಸಂಪೂರ್ಣ ಲಗೇಜ್ ಅನ್ನು ಪ್ಯಾಕ್ ಮಾಡಿಕೊಂಡು ಆಚೆ ಬನ್ನಿ ಎಂದು ಬಿಗ್‌ಬಾಸ್ ಹೇಳಿದ್ದಾರೆ. ಹೀಗಾಗಿ ಸುರೇಶ್ ಅವರು ಮತ್ತೆ ಬಿಗ್‌ಬಾಸ್‌ ಮನೆ ಒಳಗೆ ಬರುವ ಸಾಧ್ಯತೆ ಇಲ್ಲ. ಒಂದು ವೇಳೆ ವಾಪಸ್ ಬಂದರೂ ಕೂಡ ಅಷ್ಟರಲ್ಲಾಗಲೇ ಬಿಗ್‌ಬಾಸ್‌ ಗ್ರ್ಯಾಂಡ್ ಫಿನಾಲೆಗೆ ತಲುಪಿರುತ್ತದೆ. ಹೀಗಾಗಿ ಅವರು ಮತ್ತೆ ಬರುವ ಸಾಧ್ಯತೆಗಳು ಇಲ್ವೇ ಇಲ್ಲ. ಒಟ್ಟಿನಲ್ಲಿ ಈ ವಾರ ನಾಮಿನೇಟ್ ಆಗದೆ ತುಂಬಾ ಸೇಫ್ ಆಗಿದ್ದ ಸುರೇಶ್ ಅವರು ಹೊರಬಂದಾಗಿದೆ. ಆದರೆ ಅವರು ಹೊರಬಂದಿರುವುದಕ್ಕೆ ನಿಜವಾದ ಕಾರಣ ಏನು ಎನ್ನುವುದು ಮಾತ್ರ ಇನ್ನೂ ಕೂಡ ನಿಗೂಢವಾಗಿ ಇದೆ.

ಗೋಲ್ಡ್ ಸುರೇಶ್ ದುಡ್ಡು ಮಾಡಿದ್ದು ಹೇಗೆ?

'ಸುರೇಶ್ ಕ್ರಿಯಾಶೀಲತೆಯಿಂದ ದುಡ್ಡು ಮಾಡಿದ್ದಾರೆ. ದೆಹಲಿಗೆ ಹೋಗಿ ಇಂಟೀಯರ್ ಡಿಸೈನ್ ಮಾಡಿದರು. ಇವತ್ತು ಆರ್ಕಿಟಿಕ್ಚೆರ್ ಅಲ್ಲೂ ತೊಡಗಿಸಿಕೊಂಡಿದ್ದಾರೆ. ಅವರ ಬಳಿ 200-300 ಜನ ಕೆಲಸಗಾರರು ಇದ್ದಾರೆ. ಫಾರೆನ್‌ ಇಂದ ಬಂದ ಇಂಜಿನೀಯರ್‌ಗಳು ಕೂಡ ಕೆಲಸ ಮಾಡುತ್ತಿದ್ದಾರೆ. ಅವರು ಸಿಕ್ಕಾಪಟ್ಟೆ ಸ್ಟ್ರಾಂಗ್ ಇದ್ದಾರೆ. ಸುರೇಶ್ ಅವರು ಕೇವಲ 500 ರೂಪಾಯಿ ಇಟ್ಟುಕೊಂಡು ಬೆಳೆದವರು. ಕಾಟಾಚಾರಕ್ಕೆ ಯಾವುದನ್ನೂ ಮಾಡಿದವರು ಅಲ್ಲ ಸುರೇಶ್. ಅವರು ಮಾತನಾಡುವ ಸಂದರ್ಭದಲ್ಲಿ ಮಾತ್ರ ಮಾತನಾಡುತ್ತಾರೆ. ಸಿಂಹ ಸಮಯ ನೋಡಿ ಘರ್ಜಿಸುತ್ತದೆ. ಹಾಗೇ ಗೋಲ್ಡ್‌ ಸುರೇಶ್' ಎಂದು ಅವರ ಗೆಳೆಯರೊಬ್ಬರು ಹೇಳಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+