ನನಗೆ ತಕ್ಕ ವರ ಸಿಕ್ತಿಲ್ಲ, ಎರಡನೇ ಮದುವೆ ವಿಚಾರದ ಬಗ್ಗೆ ಗಿಚ್ಚಿ-ಗಿಲಿಗಿಲಿ ಜಾಹ್ನವಿ ಹೇಳಿದ್ದೇನು?
ಕನ್ನಡದ ಖ್ಯಾತ ನಿರೂಪಕಿ ಹಾಗೂ ಕಿರುತೆರೆಯಲ್ಲಿ ಸದ್ದು ಮಾಡುತ್ತಿರುವ ನಟಿ ಜಾಹ್ನವಿ ಅವರು ಶಾಕಿಂಗ್ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ. ನನ್ನಮ್ಮ ಸೂಪರ್‌ಸ್ಟಾರ್ ಹಾಗೂ ಗಿಚ್ಚಿ-ಗಿಲಿಗಿಲಿ ಶೋಗಳಲ್ಲಿ ಜಾಹ್ನವಿ ಮಿಂಚಿದ್ದರು. ಈ ಹಿಂದೆ ಅವರು ಸುದ್ದಿ ನಿರೂಪಕಿಯಾಗಿಯೂ ಪ್ರಸಿದ್ಧಿ ಪಡೆದಿದ್ದರು. ಆದರೆ ಈ ಹಿಂದೆ ಅವರು ತಮ್ಮ ಪತಿಗೆ ಡಿವೋರ್ಸ್ ನೀಡಿದ್ದ ವಿಚಾರವೂ ದೊಡ್ಡ ಸುದ್ದಿಯಾಗಿತ್ತು. ಈ ಬಗ್ಗೆ ನೇರವಾಗಿಯೇ ಜಾಹ್ನವಿ ಅವರು ಹಲವು ವೇದಿಕೆಗಳಲ್ಲಿ ಹೇಳಿಕೊಂಡಿದ್ದರು. ಬಳಿಕ ಜಾಹ್ನವಿ ಅವರ ಎರಡನೇ ಮದುವೆ ಬಗ್ಗೆಯೂ ಹಲವಾರು ಸುದ್ದಿಗಳು ಹರಿದಾಡಿದ್ದವು. ಈ ಬಗ್ಗೆ ಜಾಹ್ನವಿ ಅವರೇ ಕ್ಲಾರಿಟಿ ಕೊಟ್ಟಿದ್ದಾರೆ.
ಸೋಷಿಯಲ್ ಮೀಡಿಯಾಗಳಲ್ಲಿ ಜಾಹ್ನವಿ ಅವರಿಗೆ ತಕ್ಕ ವರ ಸಿಕ್ತಿಲ್ಲ, ಐಷಾರಾಮಿ ಬಿಎಂಡಬ್ಲ್ಯೂ ಕಾರು ಬೇಕು, ರಾಜಕಾರಣಿಯಾಗಿದ್ರೆ ಒಳ್ಳೆಯದು, ಬೆಂಗಳೂರಿನಲ್ಲಿ ದೊಡ್ಡ ಮನೆ ಇರಬೇಕು ಎಂದು ಹೇಳಿದ್ದಾಗಿ ಸುದ್ದಿಯೊಂದು ಹರಿದಾಡಿತ್ತು. ಇದನ್ನು ನೋಡಿದವರು ಮೊದಲಿಗೆ ಜಾಹ್ನವಿ ಅವರೇ ಈ ಮಾತು ಹೇಳಿದ್ದಾರೆ ಎಂದು ನಂಬಿದ್ದರು. ಆರಂಭದಲ್ಲಿ ಈ ವಿಚಾರವನ್ನು ಅವರು ಜಾಹ್ನವಿ ಅವರು ಕೂಡ ನಿರ್ಲಕ್ಷ್ಯಿಸಿದ್ದರು. ಆದರೆ ಇದೇ ಸುದ್ದಿ ನಿಜ ಎಂದು ಹಲವರು ಭಾವಿಸಿದ್ದರಿಂದ ಜಾಹ್ನವಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು.

ಇತ್ತೀಚಿನ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಜಾಹ್ನವಿ, ಒಂದು ಸೋಷಿಯಲ್ ಮೀಡಿಯಾ ಪೇಜ್‌ನಲ್ಲಿ ಜಾಹ್ನವಿಯ ಡಿವೋರ್ಸ್, ಬಿಎಂಡಬ್ಲ್ಯೂ ಕಾರು, ಐಷಾರಾಮಿ ಮನೆ ಹಾಗೂ ರಾಜಕಾರಣಿ ವರ ಬೇಕು ಎಂಬರ್ಥದಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ್ದರು. ಈ ಪೋಸ್ಟ್ ವೈರಲ್ ಆದ ಬಳಿಕ, ಹಲವರು ಅದನ್ನು ನಂಬಿ ಕಾಮೆಂಟ್ ಮಾಡಿದ್ದರು ಎಂದಿದ್ದಾರೆ.
'ರಾಜಕಾರಣಿ ವರ ಬೇಕು ಅಂದಿದ್ರು'
'ಡಿವೋರ್ಸ್ ಮುಂಚೆಯೇ ನನ್ನ ಮಾಜಿ ಗಂಡನಿಗೆ ಮಗು ಇತ್ತು ಎಂದು ನಾನು ಇತ್ತೀಚೆಗಷ್ಟೇ ಹೇಳಿದ್ದೆ. ಆ ವಿಷಯದ ಜೊತೆಗೆ ನನಗೆ ಸೂಕ್ತ ವರ ಸಿಕ್ತಿಲ್ಲ, ಬಿಎಂಡಬ್ಲ್ಯು ಕಾರು ಬೇಕು, ರಾಜಕಾರಣಿ ಆಗಿರಬೇಕು, ಐಷಾರಾಮಿ ಮನೆ ಇರಬೇಕು ಎಂದೆಲ್ಲ ಸುಳ್ಳುಸುದ್ದಿ ಹಾಕಿದ್ದರು. ಆ ಪೇಜ್‌ನಲ್ಲಿ ಸುಳ್ಳು ಸುದ್ದಿಗಳೇ ಹೆಚ್ಚಾಗಿದ್ದವು. ಮೊದಲಿಗೆ ನಾನು ಸುಮ್ಮನಾಗಿದ್ದೆ. ಆದರೆ ತುಂಬಾ ಕಡೆ ಶೇರ್ ಆಗಿ ಎಲ್ಲರೂ ನನ್ನ ಕೇಳೋಕೆ ಶುರು ಮಾಡಿದರು. ಕೊನೆಗೆ ಇದಕ್ಕೆಲ್ಲ ಫುಲ್‌ಸ್ಟಾಪ್ ಇಡಬೇಕು ಅಂತಾ ದೂರು ಕೊಟ್ಟೆ' ಎಂದಿದ್ದಾರೆ.
'ನನ್ನ ಬಗ್ಗೆ ತಿಳಿದವರಿಗೆ ಸತ್ಯ ಏನು ಎಂದು ಗೊತ್ತಿರುತ್ತೆ. ಅವರು ಇಂತಹ ಸುದ್ದಿಗಳನ್ನ ನಂಬಲ್ಲ. ಆದರೆ ನಮ್ಮ ಊರಿನವರು ಕೂಡ ಈ ಸುದ್ದಿ ನೋಡಿ ಫೋನ್ ಮಾಡಿದ್ರು, ಜಾಹ್ನವಿ ಮದುವೆ ಅಂತೆ ನಿಜಾನಾ ಎಂದೆಲ್ಲ ಕೇಳಿದರು. ಮದುವೆಗೆ ಅಷ್ಟೊಂದು ದುಡ್ಡು ಇರುವವರು ಬೇಡ, ಒಳ್ಳೆಯ ಮನಸ್ಸು ಹೊಂದಿರುವವರನ್ನೇ ಮದುವೆಯಾಗು ಎಂದು ಕೆಲವರು ಕಾಮೆಂಟ್‌ಗಳಲ್ಲಿ ಸಲಹೆಯೂ ಕೊಟ್ಟಿದ್ರು'.
'ಈ ಸುದ್ದಿಯನ್ನ ಎಷ್ಟೋ ಜನ ನೋಡ್ತಾರೆ. ಅನೇಕರು ಇದನ್ನೇ ನಿಜ ಎಂದು ನಂಬ್ತಾರೆ. ಇದನ್ನ ನಿಲ್ಲಿಸಬೇಕು ಎಂದು ಪೊಲೀಸರಿಗೆ ದೂರು ಕೊಟ್ಟೆ. ಇದಾದ ನಂತರ ಆ ಪೋಸ್ಟ್ ಡಿಲೀಟ್ ಆಗಿತ್ತು. ಇರುವ ವಿಚಾರವನ್ನು ಹೇಳಿದರೆ ಪರವಾಗಿಲ್ಲ. ಆದ್ರೆ ವ್ಯೂವ್ಸ್, ಲೈಕ್ಸ್‌ಗೋಸ್ಕರ ಈ ರೀತಿ ಸುಳ್ಳು ಸುದ್ದಿ ಹಾಕ್ತಾರೆ' ಎಂದು ಜಾಹ್ನವಿ ಬೇಸರ ಹಂಚಿಕೊಂಡಿದ್ದಾರೆ.












Click it and Unblock the Notifications