Bigg Boss: ಬಿಗ್‌ಬಾಸ್ ಮನೆಯಲ್ಲಿ ದೆವ್ವದ ಕಾಟ: ಬೆಚ್ಚಿಬಿದ್ದ ಮನೆ ಮಂದಿ
ಬಿಗ್‌ಬಾಸ್ ಮನೆಯಲ್ಲಿ ಪ್ರಸ್ತುತ ದೆವ್ವದ ಕಾಟ ಶುರುವಾಗಿದೆ. ದೆವ್ವವನ್ನು ನೋಡಿದ ಮನೆ ಸದಸ್ಯರು ಬೆಚ್ಚಿಬಿದ್ದಿದ್ದಾರೆ. ಕೇವಲ ಹುಡುಗಿರು ಮಾತ್ರವಲ್ಲ ಹುಡುಗರು ಕೂಡ ಹೆದರಿ ಕೂಗಾಡಿದ್ದಾರೆ. ಈ ವೀಡಿಯೋವನ್ನು ಕಲರ್ಸ್ ಕನ್ನಡ ವಾಹಿನಿ ಇಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಇದೀಗ ಈ ವೀಡಿಯೋ ಭಾರೀ ವೈರಲ್ ಅಗುತ್ತಿದೆ. ಅಷ್ಟಕ್ಕು ದೆವ್ವ ಕಾಣಿಸಿಕೊಂಡಿದ್ದು ಎಲ್ಲಿ? ಯಾರಿಗೆ? ಏನಾಯ್ತು?
ಬಿಗ್‌ಬಾಸ್ ಕನ್ನಡ ಸೀಸನ್ 11 ಮುಗಿಯುವ ಹಂತವನ್ನು ತಲುಪುತ್ತಿದೆ. ಸ್ಪರ್ಧಿಗಳಿಗೆ ಆಟ ಕಠಿಣವಾಗುತ್ತಿದೆ. ವೀಕ್ಷಕರು ಸ್ಪರ್ಧಿಗಳ ಆಟದ ವೈಖರಿಯನ್ನು ಸೂಕ್ಷ್ಮವಾಗಿ ಅಳಿಯಲು ಆರಂಭಿಸಿದ್ದಾರೆ. ಹೊರಗಡೆ ಸೋಲು ಗೆಲುವಿನ ಲೆಕ್ಕಾಚಾರ ಆರಂಭವಾಗಿದೆ. ಬಿಗ್‌ಬಾಸ್‌ನ ಈ ಬಾರಿಯ ವಿನ್ನರ್ ಯಾರಾಗಲಿದ್ದಾರೆನ್ನುವ ಸುಳಿವನ್ನ ಹಳೆಯ ಸ್ಪರ್ಧಿಗಳು ನೀಡುತ್ತಿದ್ದಾರೆ. ಈ ನಡುವೆ ಬಿಗ್‌ಬಾಸ್ ಮನೆಯಲ್ಲಿ ದೆವ್ವವೊಂದು ಕಾಣಿಸಿಕೊಂಡಿದೆ. ಇದನ್ನು ನೋಡಿ ಮನೆ ಮಂದಿಯೆಲ್ಲಾ ತಂಡಾ ಹೊಡೆದಿದ್ದಾರೆ.

ಹೌದು... ಇಂದು ಬಿಗ್‌ಬಾಸ್ ಅಡುಗೆ ಮನೆಯಲ್ಲಿ ಭೂತ ಕಾಣಿಸಿಕೊಂಡಿದೆ. ಮೊದಲು ಇದನ್ನು ನೋಡಿದ ಗೌತಮಿ ಏನೋ ಕಾಣಿಸುತ್ತಿದೆ ಎಂದು ಮೋಕ್ಷಿತಾಗೂ ತೋರಿಸುತ್ತಾರೆ. ಮತ್ತೊಮ್ಮೆ ದೆವ್ವ ಕಾಣಿಸಿಕೊಂಡಾಗ ಗೌತಮಿ ಜೋರಾಗಿ ಕಿರುಚಾಡಿದ್ದಾರೆ. ಜೊತೆಗೆ ಗೌತಮಿ ಚೈತ್ರಾ ಅವರಿಗೆ ಏನಾದ್ರೂ ಕಾಣಿಸ್ತಾಯಿದಿಯಾ ಎಂದು ಕರೆದು ಕೇಳುತ್ತಾರೆ. ಆಗ ಚೈತ್ರಾ 'ನನಗೇನು ಕಾಣಿಸುತ್ತಿಲ್ಲ' ಎನ್ನುತ್ತಾರೆ. ಗೌತಮಿ ಮನೆಯ ಎಲ್ಲಾ ಸದಸ್ಯರನ್ನು ಕರೆಯುತ್ತಾರೆ.
ಮನೆಯ ಎಲ್ಲಾ ಸದಸ್ಯರು ಕೂಡ ಅಡುಗೆ ಮನೆಗೆ ಬಂದು ದೆವ್ವವನ್ನು ಹುಡುಕುತ್ತಾರೆ. ಆದರೆ ಆ ದೆವ್ವ ಯಾರಿಗೂ ಕಾಣಿಸುವುದಿಲ್ಲ. ಕೊಂಚ ಸಮಯವಾದ ಬಳಿಕ ಎಲ್ಲರಿಗೂ ಕೂಡ ದೆವ್ವ ಕಾಣಿಸಿಕೊಳ್ಳುತ್ತದೆ. ಆಗ ರಜತ್ ಜೋರಾಗಿ ಕೂಗಾಡುತ್ತಾರೆ. ಧನ್‌ರಾಜ್ ನೆಲಕ್ಕೆ ಬಿದ್ದು ಉರುಳಾಡಿ ಕೂಗಾಡುತ್ತಾರೆ. ಚೈತ್ರಾ, ಭವ್ಯಾ ಕೂಡ ಜೋರಾಗಿ ಕಿರುಚುತ್ತಾರೆ. ಅಷ್ಕ್ಕೂ ಆಗಿದ್ದೇನು ಗೊತ್ತಾ?
ಬಿಗ್‌ಬಾಸ್ ಮನೆಗೆ ಕಾಲಿಟ್ಟ ಸೀರಿಯಲ್ ತಾರೆಯರು:-
ದೆವ್ವ ಕಾಣಿಸಿಕೊಂಡ ನಂತರ ಬಿಗ್‌ಬಾಸ್ ಮನೆಗೆ ಹೊಸ ಧಾರಾವಾಹಿಯ ತಾರೆಯರು ಎಂಟ್ರಿ ಕೊಟ್ಟಿದ್ದಾರೆ. ಅವರನ್ನು ಕಂಡು ಮನೆಯ ಎಲ್ಲಾ ಸ್ಪರ್ಧಿಗಳು ಸಿಕ್ಕಾಪಟ್ಟೆ ಆತಂಕದಲ್ಲೇ ಮಾತನಾಡಿಸಿದ್ದಾರೆ. ದೆವ್ವವನ್ನು ನೋಡಿ ಹೆದರಿದ್ದ ಭವ್ಯಾ ಗೌಡ ಕಿರು ತೆರೆ ನಟ ಧನುಷ್ ಅವರನ್ನು ತಬ್ಬಿಕೊಳ್ಳುತ್ತಾರೆ. ಇಲ್ಲಿ ದೆವ್ವ ಕಾಣಿಸುವುದಕ್ಕೂ ಕಿರುತೆರೆ ತಾರೆಗಳು ಮನೆಗೆ ಎಂಟ್ರಿ ಕೊಡುವುದಕ್ಕೂ ಒಂದು ಸಂಬಂಧ ಇದೆ. ಆದರೆ ಇದು ಬಿಗ್‌ಬಾಸ್ ಸ್ಪರ್ಧಿಗಳಿಗೆ ಗೊತ್ತಿಲ್ಲ. ಹೀಗಾಗಿ ಗೊಂದಲದಲ್ಲೇ ಬಿಗ್‌ಬಾಸ್ ಸ್ಪರ್ಧಿಗಳು ಕಿರುತೆರೆ ನಟ ನಟಿಯರನ್ನು ಮಾತನಾಡಿಸಿದ್ದಾರೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ 'ನೂರು ಜನ್ಮಕೂ' ಎನ್ನುವ ಹೊಸ ಧಾರಾವಾಹಿ ತೆರೆ ಕಾಣಲು ಸಿದ್ಧವಾಗಿದೆ. ಇದರ ಪ್ರೋಮೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಈ ಧಾರಾವಾಹಿ ಕಥೆ ದೆವ್ವದ್ದಾಗಿದೆ. ಅಂದರೆ ಈ ಧಾರಾವಾಹಿಯಲ್ಲಿನ ನಟನ ಮೇಲೆ ದೆವ್ವವೊಂದು ದ್ವೇಷ ಇಟ್ಟುಕೊಂಡಿರುತ್ತದೆ. ಆದರೆ ನಟನ ಮೇಲಿರುವ ನಟಿಯ ಪ್ರೀತಿಯಿಂದ, ಆಕೆಗೆ ಇರುವ ದೇವರ ಮೇಲಿನ ಭಕ್ತಿಯಿಂದ ಆ ದೆವ್ವಕ್ಕೆ ನಟನಿಗೆ ಏನೂ ಕೂಡ ಮಾಡಲು ಸಾಧ್ಯವಾಗುತ್ತಿರುವುದಿಲ್ಲ. ಧಾರಾವಾಹಿಯಲ್ಲಿ ನಟಿ ನಟನನ್ನು ದೇವರ ಹೆಸರನ್ನು ಹೇಳುವ ಮೂಲಕ ದೆವ್ವದಿಂದ ಕಾಪಾಡುತ್ತಾಳೆ. ಇದು ಈ ಧಾರಾವಾಹಿಯ ಸಾರಾಂಶ.
ಈ ಧಾರಾವಾಹಿಯಲ್ಲಿ ನಟನಾಗಿ ಧನುಷ್, ನಟಿಯಾಗಿ ಶಿಲ್ಪಾ ಕಾಮತ್ ಹಾಗೂ ಆತ್ಮವಾಗಿ ಚಂದನಾ ಅಭಿನಯಿಸುತ್ತಿದ್ದಾರೆ. ಈ ಮೂರು ಜನ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟು ಮುಂಬರುವ ಧಾರಾವಾಹಿಯ ಬಗ್ಗೆ ಮನೆಯ ಸ್ಪರ್ಧಿಗಳಿಗೆ ಪರಿಚಯಿಸಿದ್ದಾರೆ. ಹೀಗಾಗಿ ಬಿಗ್‌ಬಾಸ್ ಮನೆಯಲ್ಲಿ ಹೊಸ ಧಾರಾವಾಹಿಯಲ್ಲಿ ಆತ್ಮವಾಗಿ ನಟಿಸಿರುವ ಚಂದನಾ ಅವರ ಮುಖವನ್ನು ದೆವ್ವದ ರೀತಿಯಲ್ಲಿ ತೋರಿಸಲಾಗಿದೆ. ಈ ವಿಚಾರ ತಿಳಿದ ಬಳಿಕ ಮನೆಯ ಎಲ್ಲಾ ಸದಸ್ಯರು ನಿಟ್ಟುಸಿರು ಬಿಟ್ಟಿದ್ದಾರೆ.












Click it and Unblock the Notifications