Sapthami Gowda: ‘ಕಾಂತಾರ’ ಚೆಲುವೆ ಸಪ್ತಮಿ ಗೌಡಗೆ ‘ಪ್ರೇತ’ದ ಕಾಟ!

'ಕಾಂತಾರ' ಚೆಲುವೆ ಸಪ್ತಮಿ ಗೌಡ ಈಗ ನ್ಯಾಷನಲ್ ಸ್ಟಾರ್ ಆಗಿದ್ದಾರೆ. ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಸಾಕಷ್ಟು ವರ್ಷಗಳಿಂದ ಸಿನಿಮಾ ಮಾಡುತ್ತಿದ್ರೂ, ನಟಿ ಸಪ್ತಮಿ ಅವರಿಗೆ ದೊಡ್ಡ ಬ್ರೇಕ್ ಸಿಕ್ಕಿರಲಿಲ್ಲ. ಆದ್ರೆ 'ಕಾಂತಾರ' ಚಿತ್ರ ದೊಡ್ಡ ಮಟ್ಟಿಗಿನ ಬ್ರೇಕ್ ಕೊಟ್ಟು ಸಾಲು ಸಾಲು ಸಿನಿಮಾಗಳಲ್ಲಿ ಈಗ ಸಪ್ತಮಿ ಬ್ಯುಸಿ ಆಗಿದ್ದಾರೆ. ಹೀಗಿದ್ದಾಗ ಈಗ ಯಾಕೋ ನಟಿ ಸಪ್ತಮಿ ಗೌಡಗೆ 'ಪ್ರೇತ'ದ ಕಾಟ ಶುರುವಾಗಿದೆಯಂತೆ!

ಹೌದು ಸಪ್ತಮಿ ಗೌಡ ತಮ್ಮ ಆಕ್ಟಿಂಗ್ ಮೂಲಕ ಭಾರತೀಯ ಸಿನಿಮಾ ಪ್ರೇಕ್ಷಕರ ಹೃದಯ ಗೆದ್ದಿದ್ದಾರೆ. ಅಬ್ಬರವಿಲ್ಲದ, ಅತ್ಯಲ್ಪ ಪ್ರತಿಕ್ರಿಯೆಯ ಅದ್ಭುತ ನಟನೆಗೆ ಸಪ್ತಮಿ ಇಷ್ಟವಾಗಿ ಕೋಟ್ಯಂತರ ಅಭಿಮಾನಿಗಳನ್ನು ಗಳಿಸಿದ್ದಾರೆ. ಹೀಗೆ ಮುದ್ದು ಮುದ್ದಾಗಿ ನಟನೆ ಮಾಡ್ತಾ, ಕೋಟಿ ಕೋಟಿ ಫ್ಯಾನ್ಸ್ ಗಳಿಸಿರುವ ನಟಿ ಸಪ್ತಮಿಗೆ 'ಪ್ರೇತ'ದ ಕಾಟ ಶುರುವಾಗಿದ್ದು ಹೇಗೆ ಗೊತ್ತಾ? ಬನ್ನಿ ತಿಳಿಯೋಣ.

Find Why Kantara Movie Heroine Attracts Fans Once Again

'ಪ್ರೇತ' ಬರ್ತಿದೆ.. ಪ್ರೇತ..

ಅಷ್ಟಕ್ಕೂ ಹರೀಶ್ ರಾಜ್ ಮತ್ತೆ ಡೈರೆಕ್ಟರ್ ಹ್ಯಾಟ್ ಹಾಕಿ, ಕನ್ನಡ ಸಿನಿಮಾ ಪ್ರಿಯರಿಗೆ ಈಗ ಇನ್ನೊಂದು ಸರ್ಪ್ರೈಸ್ ಕೊಡಲು ಬರುತ್ತಿದ್ದಾರೆ. 'ಪ್ರೇತ' ಸಿನಿಮಾ ಮೂಲಕ ಹರೀಶ್ ರಾಜ್ ಮತ್ತೆ ನಿರ್ದೇಶನ ಮಾಡಲು ಸಜ್ಜಾಗಿದ್ದಾರೆ. ಫಸ್ಟ್ ಲುಕ್ ಮೂಲಕವೇ ನಿರೀಕ್ಷೆ ಹೆಚ್ಚಿಸಿದ್ದ ಈ ಚಿತ್ರದ ಆಡಿಯೋ ಲಾಂಚ್, ಇತ್ತೀಚೆಗೆ ನೆರವೇರಿದೆ. ಆದರೆ ಈ ಸಮಾರಂಭದ ವೇಳೆ ಗಮನ ಸೆಳೆದಿರೋದು ಮಾತ್ರ ನಟಿ ಸಪ್ತಮಿ. ಬೆಂಗಳೂರಿನ ಜೆಸಿ ನಗರದಲ್ಲಿ ನಡೆದ ಕಾರ್ಯಕ್ರಮದ ವೇಳೆ ನಟಿ ಸಪ್ತಮಿ ಕೂಡ ಪ್ರತ್ಯಕ್ಷ್ಯವಾಗಿದ್ದು, ಅಭಿಮಾನಿಗಳಿಗೆ ಸರ್ಪ್ರೈಸ್ ಸಿಕ್ಕಿದೆ.

ಯಾಕೆ ಬಂದರು ನಟಿ ಸಪ್ತಮಿ?

ನಟಿ ಸಪ್ತಮಿ 'ಪ್ರೇತ' ಸಿನಿಮಾ ತಂಡಕ್ಕೆ ಸಾಥ್ ನೀಡಲು, ಕಾರ್ಯಕ್ರಮಕ್ಕೆ ಸ್ಪೆಷಲ್ ಗೆಸ್ಟ್ ಆಗಿ ಬಂದಿದ್ದರು. ಈ ವೇಳೆ ಹಾಡಿಗೆ ಹೆಜ್ಜೆ ಕೂಡ ಹಾಕಿ ಗಮನ ಸೆಳೆದಿದ್ದಾರೆ. ಇನ್ನು ಈ ಪ್ರೇತ ಸಿನಿಮಾದ, 'ದೂರದ ಊರಿಗೆ' ಹಾಡು ಬಿಡುಗಡೆಯಾಗಿದೆ. ಕಾಂತಾರ ಸಿನಿಮಾದಲ್ಲಿ 'ಸಿಂಗಾರ ಸಿರಿಯೇ' ಹಾಡಿಗೆ ಸಾಹಿತ್ಯ ಬರೆದಿದ್ದ ಪ್ರಮೋದ್ ಮರವಂತೆ ಅವರು ಈ ಹಾಡು ಕೂಡ ಬರೆದಿದ್ದಾರೆ. ಪ್ರಮೋದ್ ಮರವಂತೆ ಸಾಹಿತ್ಯ ಬರೆದಿರುವ ಭಾವುಕ ಗೀತೆಗೆ, ನವೀನ್ ಸಜ್ಜು ಧ್ವನಿಯಾಗಿ & ಪ್ರವೀಣ್ ಶ್ರೀನಿವಾಸ್ ಮೂರ್ತಿ ಟ್ಯೂನ್ ಹಾಕಿದ್ದಾರೆ. ಹರೀಶ್ ರಾಜ್ & ಅಹಿರಾ ಶೆಟ್ಟಿ ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.

Find Why Kantara Movie Heroine Attracts Fans Once Again

ಒಟ್ನಲ್ಲಿ ಹರೀಶ್ ರಾಜ್ ಮತ್ತೆ ಡೈರೆಕ್ಟರ್ ಆಗುತ್ತಿರುವ ಜತೆಗೆ, ನಟಿ ಸಪ್ತಮಿ ಸ್ಪೆಷಲ್ ಎಂಟ್ರಿ ಕೂಡ 'ಪ್ರೇತ' ತಂಡದ ಕುರಿತು ಗಮನ ಸೆಳೆಯುವಂತೆ ಮಾಡಿದೆ. ಇನ್ನೂ ಈ ಸಿನಿಮಾದ ಟೈಟಲ್ ಹೇಳುವಂತೆ 'ಪ್ರೇತ' ಒಂದು ಹಾರರ್​ ಕಥೆಯುಳ್ಳ ಚಿತ್ರ. ಹರೀಶ್ ರಾಜ್​ ಅವರೇ ಕಥೆ & ಚಿತ್ರಕಥೆ ಬರೆದಿದ್ದಾರೆ. ಹರೀಶ್ ರಾಜ್​ ಜತೆಗೆ ಅಮೂಲ್ಯಾ ಭಾರದ್ವಾಜ್, ಅಹಿರಾ, ಬಿ.ಎಂ. ವೆಂಕಟೇಶ್ ಹಾಗೂ ಅಮಿತ್ ಪಾತ್ರವರ್ಗದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+