ಚಂದನ್ ಶೆಟ್ಟಿ & ನಿವೇದಿತಾ ಗೌಡ ವಿಚ್ಚೇದಕ್ಕೆ ಫ್ಯಾನ್ಸ್ ಏನಂತಾರೆ?
'ಒಂದು ಮಳೆ ಬಿಲ್ಲು ಒಂದು ಮಳೆ ಮೋಡ ಸೇರಿ ಜೊತೆಯಾಗಿ ತುಂಬಾ ಹಿತವಾಗಿ..' ಅಂತ ಜೋಡಿಯೊಂದು ಕೈ ಕೈ ಹಿಡಿದು ರೊಮ್ಯಾಂಟಿಕ್ ಆಗಿ ಡ್ಯಾನ್ಸ್ ಮಾಡಿತ್ತು. ಈ ಒಂದು ಕ್ಷಣವನ್ನು ಆ ಜೋಡಿ ಮರೆತರೂ ಅಭಿಮಾನಿಗಳು ಮಾತ್ರ ಮರೆಯಲು ಸಾಧ್ಯವೇ ಇಲ್ಲ. ಯಾಕೆಂದರೆ ಆ ಜೋಡಿಯನ್ನು ಒಂದು ಮಾಡಿದ್ದೇ ಅಭಿಮಾನಿಗಳು...
ಹೌದು... ಮುದ್ದು ಮುದ್ದಾಗಿ ಮಾತನಾಡುತ್ತಾ ಮಗುವಿನ ಮನಸ್ಸಿನ ಗೊಂಬೆ ನಿವೇದಿಳನ್ನಾ ನೋಡಿ ಚಂದನವನದ ಚಂದನ್ ಮನಸೋತ್ತಿದ್ದರು. ಬಿಗ್‌ಬಾಸ್ ಸೀಸನ್ 5ರಲ್ಲಿ ಈ ಜೋಡಿಯನ್ನು ನೋಡಿ ಸಂತೋಷಪಡದವರೇ ಇಲ್ಲ. ಮನೆಯಲ್ಲಿರುವ ವಸ್ತುಗಳನ್ನು ನುಡಿಸುತ್ತಾ ಚಂದನ್ ಶೆಟ್ಟಿ ಹಾಡು ಹಾಡ್ತಾಯಿದ್ದರೆ, ನಿವೇದಿತಾ ಎಂಬ ಗೊಂಬೆಗೆ ಜೀವ ಬಂದಂತಾಗುತ್ತಿತ್ತು. ಇದನ್ನು ಕಂಡು ಅಭಿಮಾನಿಗಳು ಇವರಿಬ್ಬರ ನಡುವೆ ಪ್ರೀತಿ ಚಿಗುರೊಡೆದಿದೆ ಅಂತ ಮಾತನಾಡಲು ಶುರು ಮಾಡಿದ್ದರು.

ಸಾಮಾಜಿಕ ಜಾಲತಾಣದಲ್ಲಿ ಇವರಿಬ್ಬರ ಫೋಟೋ ಹಂಚಿಕೊಂಡು Made for each other ಅಂತ ಬರೆದುಕೊಂಡಿದ್ದರು. ಚಂದನ್‌ಗೆ ನೇರವಾಗಿ ಅಭಿಮಾನಿಗಳು ನಿವೇದಿತಾಗೆ ಯಾವಾಗ ಪ್ರಪೋಸ್ ಮಾಡ್ತೀರಾ ಅಂತ ಪ್ರಶ್ನೆ ಮಾಡಲು ಶುರು ಮಾಡಿದ್ದರು. ಬಿಗ್‌ಬಾಸ್ ಮನೆಯಲ್ಲಿ ಮೊಗ್ಗಾಗಿದ್ದ ಪ್ರೀತಿ ಹೊರ ಬಂದ ಬಳಿಕ ಹೂವಾಗಿ ಅರಳತೊಡಗಿತು.
ಜೋಡಿಯಾಗಿ ಆಟವಾಡುತ್ತಾ ಬಿಗ್‌ಬಾಸ್ ಮನೆಯಲ್ಲಿ ಬ್ಯೂಟಿಫುಲ್ ಕಪಲ್ ಎನಿಸಿಕೊಂಡಿದ್ದ ನಿವಿ ಹಾಗೂ ಚಂದು ಸಾಕಷ್ಟು ಅಭಿಮಾನಿಗಳ ಮನದ ಬಾಗಿಲು ತಟ್ಟಿದ್ದರು. ಈ ಜೋಡಿ ಚಂದನವನದ ಚಂದದ ಜೋಡಿ ಅಂತ ಬಿರುದು ಕೂಡ ಪಡೆದುಕೊಂಡಿತ್ತು. ಬಿಗ್‌ಬಾಸ್ ಮನೆಯಲ್ಲಿ ಈ ಎರಡು ಮನಸ್ಸುಗಳ ನಡುವೆ ಮೊಗ್ಗಾಗಿದ್ದ ಪ್ರೀತಿ ಹೊರಬರುತ್ತಿದ್ದಂತೆ ಅರಳತೊಡಗಿತು.

ಹೀಗಾಗಿ ಚಂದನ್ ನಿವೇದಿತಾಳಿಗೆ ಜನಸಾಗರ ನೆರೆದಿದ್ದ ವೇದಿಕೆ ಮೇಲೆ ಪ್ರಪೋಸ್ ಮಾಡಿದ್ದರು. ನಿವೇದಿತಾ ಚಂದನ್ ಪ್ರೀತಿಗೆ ಗ್ರೀನ್ ಸಿಗ್ನಲ್ ಕೊಡುತ್ತಿದ್ದಂತೆ ಇದನ್ನು ಕಂಡು ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದರು. ತಮ್ಮ ಮನೆಯಲ್ಲೇ ಜೋಡಿಯೊಂದು ಒಂದಾಗಿದೆ ಎನ್ನುವಷ್ಟು ಸಂತಸ ವ್ಯಕ್ತಪಡಿಸಿದ್ದರು.
ಸಾಮಾಜಿಕ ಜಾಲತಾಣದಲ್ಲಿ ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಜೋಡಿಗೆ ಅಭಿನಂದನೆಯ ಸುರಿಮಳೆ ಗೈದಿದ್ದರು. 'ಚಂದದ ಗೊಂಬೆ' ಒಂದಾಗಿದೆ ಅಂತ ಖುಷಿ ಹಂಚಿಕೊಂಡಿದ್ದರು. ಇದ್ದರೆ ಚಂದನ್ ಹಾಗೂ ನಿವೇದಿತಾ ಥರ ಇರಬೇಕು ಅಂತ ಹೇಳಿಕೊಂಡಿದ್ದರು. ಯುವ ಪೀಳಿಗೆಯಿಂದ ಹಿಡಿದು ವಯಸ್ಕರವರೆಗೆ ಚಂದದ ಜೋಡಿ ಬಗ್ಗೆ ಖುಷಿ ಇತ್ತು.

2020ರಲ್ಲಿ ಇವರಿಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆಯಾದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯವಾಗಿದ್ದ ನಿವಿ ಹಾಗೂ ಚಂದನ್ ಟ್ರಾವೆಲ್ ರೀಲ್ಸ್ ಮಾಡಿ ಹಂಚಿಕೊಳ್ತಾಯಿದ್ದರು. ಜೊತೆ ಜೊತೆಯಾಗಿ ಡ್ಯಾನ್ಸ್ ಮಾಡುತ್ತಾ ಹಾಡು ಹಾಡುತ್ತಾ ಖುಷಿ ಖುಷಿಯಾಗಿದ್ದರು. ನಿವೇದಿತ ರಿಯಾಲಿಟಿ ಶೋಗಳಲ್ಲಿ ಹಾಗೂ ಚಂದನ್ ಹಾಡು ಮ್ಯೂಸಿಕ್ ಅಂತ ಬ್ಯೂಸಿ ಆಗಿದ್ದರು.
ಆದರೆ ಅದ್ಯಾವ ಕೆಟ್ಟ ಕಣ್ಣು ಈ ಸುಂದರ ದಂಪತಿ ಮೇಲೆ ಬಿತ್ತೋ ಏನೂ ಗೊತ್ತಿಲ್ಲ. ವಿಚ್ಚೇದನಕ್ಕಾಗಿ ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಈ ವಿಷಯ ತಿಳಿದು ಅಭಿಮಾನಿಗಳಿಗೆ ಶಾಕ್ ಆಗಿದೆ. ಚಂದನ್ ಹಾಗೂ ನಿವೇದಿತ ವಿಚ್ಚೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ ಎನ್ನುವುದನ್ನು ಯಾರಿಗೂ ಕೂಡ ಅರಗಿಸಿಕೊಳ್ಳಲಾಗುತ್ತಿಲ್ಲ. ಯಾಕೆ ಹೀಗಾಯ್ತು ಅಂತ ಎಲ್ಲರಿಗೂ ದೊಡ್ಡ ಪ್ರಶ್ನೆ ಕಾಡತೊಡಗಿದೆ.

ಇವರಿಬ್ಬರ ನಡುವೆ ಬಿರುಕು ಮೂಡಲು ವಯಸ್ಸಿನ ಅಂತರ, ಹಣ, ಮಗುವಿನ ವಿಚಾರ ಅಂತೆಲ್ಲಾ ಊಹಾಪೋಹಗಳು ಹರಿದಾಡತೊಡಗಿವೆ. ಆದರೆ ಕಾರಣ ಏನೇ ಇರಲಿ ಮನಸ್ತಾಪಗಳು ದಾಂಪತ್ಯದಲ್ಲಿ ಬರುವುದು ಸಹಜ. ಆದರೆ ವಿಚ್ಚೇದನ ನೀಡುವಷ್ಟು ಮುಂದುವರೆಯಬಾರದಿತ್ತು ಅಂತ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ಅದೇನೇ ಆಗಲಿ ಈ ಮುದ್ದಾದ ಜೋಡಿ ಮತ್ತೆ ಒಂದಾಗಬೇಕು. ಬಿಗ್ ಬಾಸ್ ಅಭಿಮಾನಿಗಳ ಮನದಲ್ಲಿ ಅಂದಿಗೂ ಇಂದಿಗೂ ಚಂದದ ಜೋಡಿಯಾಗಿದ್ದ ಚಂದನ್ ಹಾಗೂ ನಿವೇದಿತಾ ಮತ್ತೆ ಒಂದಾಗಬೇಕು ಅನ್ನೋದೇ ಎಲ್ಲರ ಆಶಯ.












Click it and Unblock the Notifications