Puneeth Rajkumar: ಈ ವಿಚಾರದಲ್ಲಿ ಇಂದಿಗೂ ರೋಲ್‌ ಮಾಡಲ್‌ ಆದ ನಟ ಪುನೀತ್‌

ಸ್ಯಾಂಡಲ್‌ವುಡ್‌ ಪವರ್‌ ಸ್ಟಾರ್‌ ನಟ ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನಗಲಿ ಕೆಲವು ವರ್ಷಗಳು ಕಳೆದಿವೆ. ಇವರ ಸಾವು ಎಲ್ಲರಿಗೂ ಶಾಕ್‌ ನೀಡಿದ್ದು, ಇಂದಿಗೂ ಮರೆಯುವಂತದ್ದಲ್ಲ. ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದ ರಾಜ್‌ ಕುಟುಂಬದ ನಡೆಯು ಇಂದು ಅನೇಕರಿಗೆ ಮಾದರಿಯಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ನಟ ಪುನೀತ್‌ ರಾಜ್‌ಕುಮಾರ್‌ ಅವರು ನಿಧನರಾದ ನಂತರ ನೇತ್ರದಾನ ಮಾಡುವವರ ಸಂಖ್ಯೆ ಕೂಡ ದಿಢೀರನೆ ಏರಿಕೆ ಕಂಡಿದೆ ಎಂದು ವರದಿಯಾಗಿದೆ.

ಬೆಂಗಳೂರಿನ ನಾರಾಯಣ ನೇತ್ರಾಲಯವು ಪುನೀತ್‌ ಅವರು ನಿಧನರಾದಾಗ ಅವರ ನೇತ್ರದಾನ ಪ್ರಕ್ರಿಯೆಯಲ್ಲಿ ಮಹತ್ವದ ಪಾತ್ರ ವಹಿಸಿತ್ತು. ಅಲ್ಲದೆ ಈ ನೇತ್ರಾಲಯವು ಡಾ.ರಾಜ್‌ಕುಮಾರ್‌ ಅವರ ಹೆಸರಿನಲ್ಲಿ ಕಣ್ಣಿನ ಬ್ಯಾಂಕ್‌ ಕೂಡ ನಡೆಸುತ್ತಿದೆ. ಅಂಕಿಅಂಶಗಳ ಪ್ರಕಾರ ನಟ ಪುನೀತ್‌ ರಾಜ್‌ಕುಮಾರ್‌ ಅವರು ನಿಧನರಾದ ನಂತರ ನೇತ್ರದಾನಕ್ಕೆ ಹೆಚ್ಚು ಮಂದಿ ಆಸಕ್ತಿ ತೋರಿದ್ದಾರೆ ಎನ್ನಲಾಗಿದೆ.

Eye Donations Surge After Kannada Actor Puneeth Rajkumar Demise

2021ರಲ್ಲಿ ಪುನೀತ್‌ ಅವರು ಅಕಾಲಿಕ ನಿಧನ ಹೊಂದಿದ್ದರು. ಬಳಿಕ ರಾಜ್‌ ಕುಟುಂಬವು ಪುನೀತ್‌ ಅವರ ನೇತ್ರದಾನದ ಮೂಲಕ ಮಾದರಿಯಾಗಿತ್ತು. ಇದನ್ನೇ ಫಾಲೋ ಮಾಡಿರುವ ಅನೇಕರು ನೇತ್ರದಾನದ ಪ್ರತಿಜ್ಞೆಯೂ ಹೆಚ್ಚಾಗಿ ಮಾಡುತ್ತಿದ್ದಾರಂತೆ. ದಶಕಗಳಿಂದಲೂ ಈ ಆಸ್ಪತ್ರೆಯು ಕಣ್ಣಿನ ಬ್ಯಾಂಕ್‌ ನಡೆಸುತ್ತಿದೆ.

ಇದು ಅಂದಾಜು 30 ವರ್ಷಗಳಲ್ಲಿ 75,000ದಷ್ಟು ನೇತ್ರದಾನದ ಪ್ರತಿಜ್ಞೆಗಳನ್ನು ಹೊಂದಿತ್ತು. ಆದರೆ, ಪುನೀತ್‌ ರಾಜ್‌ಕುಮಾರ್‌ ಅವರು ನಿಧನರಾದ ಬಳಿಕ ಕೇವಲ ನಾಲ್ಕೇ ವರ್ಷಗಳಲ್ಲಿ ಸುಮಾರು 1.3 ಲಕ್ಷ ಮಂದಿ ನೇತ್ರದಾನ ಪ್ರತಿಜ್ಞೆಗಳನ್ನು ಮಾಡಿದ್ದಾರೆ ಎಂದು ತಿಳಿದುಬಂದಿದೆ. ಪುನೀತ್‌ ಅವರ ನಿಧನದ ನಂತರ ಈ ಕಣ್ಣಿನ ಬ್ಯಾಂಕ್‌ ಸುಮಾರು 3,989 ಕಣ್ಣುಗಳನ್ನು ಕೂಡ ಸಂಗ್ರಹಿಸಿದ್ದು, ಇದರಲ್ಲೂ ಗಣನೀಯ ಏರಿಕೆ ಕಂಡಿದೆ.

Eye Donations Surge After Kannada Actor Puneeth Rajkumar Demise

ಈ ಹಿಂದೆ ಪುನೀತ್‌ ರಾಜ್‌ಕುಮಾರ್‌ ಅವರ ತಂದೆ ಡಾ.ರಾಜ್‌ಕುಮಾರ್‌ ಅವರು ಕೂಡ ನೇತ್ರದಾನ ಮಾಡಿದ್ದರು. ಅದೇ ಹಾದಿಯಲ್ಲಿ ಪುನೀತ್‌ ಅವರು ಕೂಡ ನಡೆದಿದ್ದರು. ಪುನೀತ್‌ ರಾಜ್‌ಕುಮಾರ್‌ ಅವರ ನಿಧನದ ನಂತರವೂ ನೇತ್ರದಾನ ಮಾಡಿದ್ದರು. ಅದರಂತೆ ಪುನೀತ್‌ ಅವರಿಂದ ಇಬ್ಬರ ಬಾಳಲ್ಲಿ ಬೆಳಕು ಮೂಡಿದೆ. ಪುನೀತ್‌ ರಾಜ್‌ಕುಮಾರ್‌ ಅವರ ಕಣ್ಣುಗಳನ್ನು ಇಬ್ಬರು ಅಂಧರಿಗೆ ಅಳವಡಿಸಲಾಗಿತ್ತು.

ಆಗ ಇದೇ ನಾರಾಯಣ ನೇತ್ರಾಲಯದಲ್ಲಿ ಇಬ್ಬರು ಅಂಧರಿಗೆ ಪುನೀತ್ ರಾಜ್‌ಕುಮಾರ್ ಅವರ ಕಣ್ಣುಗಳನ್ನು ಜೋಡಿಸಲಾಗಿತ್ತು. ಈ ಶಸ್ತ್ರಚಿಕಿತ್ಸೆ ಕೂಡ ಯಶಸ್ವಿಯಾಗಿ ಇಬ್ಬರಿಗೆ ದೃಷ್ಟಿ ಭಾಗ್ಯ ಕೂಡ ಸಿಕ್ಕಿತ್ತು. ಬಳಿಕ ಪುನೀತ್‌ ರಾಜ್‌ಕುಮಾರ್‌ ಹಾದಿಯಲ್ಲೇ ಅವರ ಅಭಿಮಾನಿಗಳು ಸೇರಿ ಹಲವರು ಹೆಜ್ಜೆ ಇಟ್ಟಿದ್ದರು. ಸ್ವಯಂಪ್ರೇರಿತರಾಗಿ ನೇತ್ರದಾನಕ್ಕೆ ಒಲವು ತೋರಿಸಿದ್ದರು. ಈ ಹಿನ್ನೆಲೆ ಕಳೆದ ನಾಲ್ಕು ವರ್ಷಗಳಲ್ಲಿ ನೇತ್ರದಾನ ಮಾಡುವವರ ಸಂಖ್ಯೆ ಕೂಡ ಹೆಚ್ಚಾಗತೊಡಗಿದೆ.

ಪುನೀತ್ ರಾಜ್‌ಕುಮಾರ್ ಅವರ ಪ್ರೇರಣೆಯಿಂದ ಆಗಲೇ ಚನ್ನರಾಯಪಟ್ಟಣದ 165 ಮಂದಿ ನೇತ್ರದಾನ ಸಂಕಲ್ಪ ಮಾಡಿದ್ದರು. ರಾಜಕಾರಣಿಗಳು ಸೇರಿದಂತೆ 165 ಮಂದಿ ನೇತ್ರದಾನ ಮಾಡಲು ಸಹಿ ಹಾಕಿದ್ದರು. ಸದ್ಯ ರಾಜ್ಯಾದ್ಯಂತ ಪುನೀತ್‌ ಅವರ ಪ್ರೇರಣೆಯಿಂದ ಹಲವರು ನೇತ್ರದಾನಕ್ಕೆ ಮುಂದಾಗಿದ್ದು, ಅಪ್ಪು ಇಂದಿಗೂ ರೋಲ್‌ ಮಾಡಲ್‌ ಆಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+