ಡಾ.ರಾಜ್ ಕಪ್ ಜರ್ಸಿ ರಿಲೀಸ್‌ಗೆ ‘ಕರ್ನಾಟಕ ರತ್ನ’ ಅಪ್ಪು ಪತ್ನಿ ಸಾಥ್
ಸಿನಿಮಾ ಸ್ಟಾರ್‌ಗಳ ಕ್ರಿಕೆಟ್ ಅಂಗಳದ ಸಮಾಗಮ ಅಂದ್ರೆ ಅಭಿಮಾನಿಗಳಿಗೆ ಸಖತ್ ಖುಷಿ. ಅದ್ರಲ್ಲೂ ಡಾ.ರಾಜ್ ಕಪ್ ಅಂದರೆ ಸೆಲೆಬ್ರೇಷನ್ ಬೇರೆ ಲೆವೆಲ್‌ನಲ್ಲಿ ಇರುತ್ತೆ. ಹೀಗೆ ಇಡೀ ದೇಶಾದ್ಯಂತ ಸದ್ದು ಮಾಡಲು ಮತ್ತೆ 'ಡಾ.ರಾಜ್ ಕಪ್' ಬಂದುಬಿಟ್ಟಿದೆ. ಡಾ.ರಾಜ್ ಕಪ್ ಜರ್ಸಿ ರಿಲೀಸ್ ಮಾಡಿ, ಕ್ರಿಕೆಟ್ ಅಖಾಡಕ್ಕೆ ರಣಕಹಳೆ ಮೊಳಗಿಸಿದ್ದಾರೆ ಆಯೋಜಕರು. ಈ ಸಮಯದಲ್ಲಿ ದೊಡ್ಮನೆ ಸೊಸೆ ಕೂಡ ಡಾ.ರಾಜ್ ಕಪ್ ಜರ್ಸಿ ರಿಲೀಸ್‌ಗೆ ಸಾಥ್ ನೀಡಿದ್ರು.
ಅಂದಹಾಗೆ ಡಾ.ರಾಜ್ ಕಪ್ ಸೀಸನ್ 6ಗೆ ಮುಹೂರ್ತ ಫಿಕ್ಸ್ ಆಗಿದೆ. ಇದಕ್ಕಾಗಿ ಚಂದನವನದ ತಾರೆಯರು ತಯಾರಿ ಆರಂಭಿದ್ದಾರೆ. ಪುನೀತ್ ರಾಜ್ ಕುಮಾರ್ ಸ್ಮಾರಣಾರ್ಥವಾಗಿ ರಾಜ್ ಕಪ್ ಆಯೋಜಿಸಲಾಗಿದೆ. ಕ್ರಿಕೆಟ್ ಪಂದ್ಯಾವಳಿಗೆ ಸಂಬಂಧಿಸಿದಂತೆ ಇತ್ತೀಚೆಗೆ ಬೆಂಗಳೂರಿನ ಜ್ಞಾನ ಜ್ಯೋತಿ ಆಡಿಟೋರಿಯಂನಲ್ಲಿ ಜರ್ಸಿ ಬಿಡುಗಡೆ ಮಾಡಲಾಗಿದ್ದು, ದೊಡ್ಮನೆಯ ಸೊಸೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಕೂಡ ಈ ಕಾರ್ಯಕ್ರಮಕ್ಕೆ ಸಾಥ್ ನೀಡಿದ್ದರು.

ವಿದೇಶದ ನೆಲದಲ್ಲಿ ಕ್ರಿಕೆಟ್ ಹಬ್ಬ!
ಡಾ.ರಾಜ್ ಕಪ್ ಜರ್ಸಿ ರಿಲೀಸ್ ಕಾರ್ಯಕ್ರಮದಲ್ಲಿ ಮಾತನಾಡಿದ, ಆಯೋಜಕರಾದ ರಾಜೇಶ್ ಬ್ರಹ್ಮಾವರ 'ರಾಜ್ ಕಪ್ 6ನೆ ಸೀಸನ್ ವಿದೇಶದಲ್ಲಿ ಮಾಡ್ತಿರುವುದು ಕಷ್ಟವಾಗ್ತಿಲ್ಲ. ಯಾಕಂದ್ರೆ ನನಗೆ ಚಿನ್ನದಂತಹ ಕ್ಯಾಪ್ಟನ್ಸ್, ಓನರ್ & ಫ್ಲೇಯರ್ಸ್ ಸಿಕ್ಕಿದ್ದಾರೆ. ಎಲ್ಲ ಈಗ ಅಚ್ಚುಕಟ್ಟಾಗಿ ನಡೆಯುತ್ತಿದೆ. ಓನರ್ ಬಂದ್ಮೇಲೆ ಅವರೇ ಟೀಂ ರೆಡಿ ಮಾಡುತ್ತಿದ್ದಾರೆ ಮುಂದಿನ ವರ್ಷ ಎಷ್ಟು ದೇಶಗಳಲ್ಲಿ ಮಾಡುತ್ತೇನೆ ಗೊತ್ತಿಲ್ಲ. ದುಬೈನಲ್ಲಿ ಲೈವ್ ಸಿಗಲ್ಲ ಎಂದಿದ್ದರು. ಪ್ರಯತ್ನ ಮಾಡಿ ಮಾಡಿ ಪರ್ಮಿಷನ್ ತೆಗೆದುಕೊಂಡು ಬಂದಿದ್ದೇವೆ' ಎಂದು ತಿಳಿಸಿದರು.
ಇನ್ನು ಈ ಬಾರಿಯ ಡಾ.ರಾಜ್ ಕಪ್ ಸೀಸನ್ 6 ನವೆಂಬರ್ 28 ರಿಂದ ಡಿಸೆಂಬರ್ 10ರ ವರೆಗು ನಡೆಯಲಿದೆ. ವಿಶ್ವದ ಹಲವು ಭಾಗಗಳಲ್ಲಿ ಪಂದ್ಯಾವಳಿ ಆಯೋಜಿಸಲಾಗಿದೆ. ನವೆಂಬರ್ 28 & 29 ಶ್ರೀಲಂಕಾ, ಡಿಸೆಂಬರ್ 1 & 2 ಮಲೇಷಿಯಾ, ಡಿಸೆಂಬರ್ 3 ಹಾಗೂ 4ಕ್ಕೆ ಸಿಂಗಾಪುರ್, ಡಿಸೆಂಬರ್ 7 & 8 ಕ್ಕೆ ಮಸ್ಕತ್ ನಲ್ಲಿ ಲೀಗ್ ಮ್ಯಾಚ್ ನಡೆಯಲಿವೆ. ರಾಜ್ ಕಪ್ ಫೈನಲ್ ಪಂದ್ಯ ಕರ್ನಾಟಕದಲ್ಲಿ ನಡೆಯಲಿವೆ ಎಂದು ಮಾಹಿತಿ ನೀಡಲಾಗಿದೆ.

12 ತಂಡಗಳ ಪಟ್ಟಿ ಇಲ್ಲಿದೆ
ಸಮೃದ್ಧಿ ಫೈಟರ್ಸ್ ತಂಡ, DX ಮ್ಯಾಕ್ಸ್ ಲೈನ್ಸ್ ತಂಡ, ರಾಮನಗರ ರಾಕರ್ಸ್ ತಂಡ, ELV ಲಯನ್ ಕಿಂಗ್ಸ್ ತಂಡ, AVR ಟಸ್ಕರ್ಸ್ ತಂಡ, KKR ಕಿಂಗ್ಸ್ ತಂಡ, Rabit ರೇಸರ್ಸ್ ತಂಡ, ಮಯೂರ ರಾಯಲ್ಸ್ ತಂಡ, ರಾಯಲ್ ಕಿಂಗ್ಸ್ ತಂಡ, ಕ್ರಿಕೆಟ್ ನಕ್ಷತ್ರ ತಂಡ, ಅಶು ಸೂರ್ಯ ಸೂಪರ್ ಸ್ಟಾರ್ ತಂಡ, ರುಚಿರಾ ರೇಂಜರ್ಸ್ ಟೀಂ ಆಡಲಿವೆ. ಇನ್ನು ರಾಜ್ ಕಪ್ ಸೀಸನ್ 6 ರಲ್ಲಿ ನಟ ಡಾಲಿ ಧನಂಜಯ್, ಅನಿರುದ್ದ್, ಡಾರ್ಲಿಂಗ್ ಕೃಷ್ಣ , ಅಭಿಷೇಕ್ ಅಂಬರೀಶ್ & ನೀನಾಸಂ ಸತೀಶ್, ಯೋಗಿ, ವಶಿಷ್ಠ ಸಿಂಹ, ಪ್ರಜ್ವಲ್, ಕೋಮಲ್, ಶ್ರೀನಗರ ಕಿಟ್ಟಿ, ರಾಜುಗೌಡ ನೇತೃತ್ವದ ತಂಡಗಳು ಪಂದ್ಯದಲ್ಲಿ ಪಾಲ್ಗೊಳ್ಳಲಿವೆ.
ಕೋಟ್ಯಂತರ ಅಭಿಮಾನಿಗಳ ಪಾಲಿನ ಆರಾಧ್ಯ ದೈವವಾದ ಪುನೀತ್ ರಾಜ್‌ಕುಮಾರ್ ಕನ್ನಡಿಗರ ಎದೆಯಲ್ಲಿ ಅಚ್ಚಳಿಯದೆ ಉಳಿದಿದ್ದಾರೆ. ಹೀಗೆ ಅವರು ಬದುಕಿದ್ದಾಗ ಕನ್ನಡ ಸಿನಿಮಾ ಜಗತ್ತಿಗೆ ಸಾಕಷ್ಟು ಕೊಡುಗೆ ನೀಡಿದ್ದರು. ಹಾಗೇ ಸಾಕಷ್ಟು ಸಮಾಜ ಸೇವೆ ಮೂಲಕ, ಭಾರತೀಯರ ಎದೆಯಲ್ಲಿ ಅಚ್ಚಳಿಯದೆ ಉಳಿದಿದ್ದಾರೆ. ಈಗ ಅವರ ಸ್ಮರಣಾರ್ಥ ಕ್ರಿಕೆಟ್ ಟೂರ್ನಿಯನ್ನು ಆಯೋಜನೆ ಮಾಡಲಾಗುತ್ತಿದ್ದು, ಅಭಿಮಾನಿಗಳು ಕಾಯುತ್ತಿದ್ದಾರೆ. ಸಿನಿಮಾ ಸ್ಟಾರ್‌ಗಳನ್ನ ಕ್ರಿಕೆಟ್ ಅಖಾಡದಲ್ಲಿ ನೋಡಲು ಕೌಂಟ್‌ಡೌನ್ ಶುರುವಾಗಿದೆ.












Click it and Unblock the Notifications