ದೊಡ್ಮನೆ ಮೊಮ್ಮಗ ‘ಯುವ’ಗೆ ದರ್ಶನ್ ಅಭಿಮಾನಿಗಳ ಬೆಂಬಲ!
ಯುವ ಸಿನಿಮಾ ಇಂದು ಅದ್ಧೂರಿಯಾಗಿ ರಿಲೀಸ್ ಆಗಿದ್ದು, ಅಭಿಮಾನಿಗಳು ಯುವರಾಜ್ ನಟನೆಗೆ ಫುಲ್ ಫಿದಾ ಆಗಿದ್ದಾರೆ. ಸಿಲ್ವರ್ ಸ್ಕ್ರೀನ್ ಮೇಲೆ, ಯುವರಾಜ್ ಅಬ್ಬರ ನೋಡಿದ ಅಭಿಮಾನಿಗಳು ಇದೀಗ ಖುಷಿ ಖುಷಿಯಾಗಿ ಕುಣಿದಾಡಿದ್ದಾರೆ. ಇದೇ ಸಮಯದಲ್ಲಿ ಯುವ ಅವರಿಗೆ ನಟ ದರ್ಶನ್ ಅವರ ಅಭಿಮಾನಿಗಳಿಂದ ಕೂಡ ಭರ್ಜರಿ ಬೆಂಬಲ ಸಿಗುತ್ತಿದೆ!
ಹೌದು, ಯುವರಾಜ್ ಅವರ ಮೊದಲನೇ ಸಿನಿಮಾ 'ಯುವ' ನೋಡಿದ ಅಭಿಮಾನಿಗಳು ಇದೀಗ ಪೋಸ್ಟ್ ಹಾಕುತ್ತಿದ್ದಾರೆ. ಟ್ವಿಟ್ಟರ್‌ನಿಂದ ಹಿಡಿದು ಎಲ್ಲಾ ಸೋಷಿಯಲ್ ಮೀಡಿಯಾ ತುಂಬಾ ಯುವ ಅವರ ವಿಚಾರವೇ ಟ್ರೆಂಡ್ ಹುಟ್ಟುಹಾಕಿದೆ. ಅಭಿಮಾನಿಗಳು ದೊಡ್ಮನೆಯ ಮೊಮ್ಮಗನ ಸಿನಿಮಾ ನೋಡಿ ಖುಷಿ ಖುಷಿಯಾಗಿದ್ದಾರೆ. ಅದ್ರಲ್ಲೂ ಅಭಿಮಾನಿಗಳ ಪಾಲಿನ ಪ್ರೀತಿಯ 'ಡಿ-ಬಾಸ್' ದರ್ಶನ್ ಅವರ ಫ್ಯಾನ್ಸ್ ಕೂಡ ಯುವರಾಜ್ ಅವರಿಗೆ ಭರ್ಜರಿಯಾಗಿ ಬೆಂಬಲ ಸೂಚಿಸಿದ್ದಾರೆ. ಹಾಗಾದರೆ ದರ್ಶನ್ ಅವರ ಫ್ಯಾನ್ಸ್ ಏನ್ ಹೇಳ್ತಿದ್ದಾರೆ? ಮುಂದೆ ಓದಿ.

ಸಿನಿಮಾ ಸ್ಕ್ರೀನ್ ಮೇಲೆ ಯುವ ಹವಾ!
ಕರ್ನಾಟಕದ ಮೂಲೆ ಮೂಲೆಯಲ್ಲೂ 'ಯುವ' ಸಿನಿಮಾ ಹವಾ ಜೋರಾಗಿದೆ. ಅದರಲ್ಲೂ ಯುವರಾಜ್ ಅವರ ಮೊದಲ ಸಿನಿಮಾಗೆ ಸಿಕ್ಕಾಪಟ್ಟೆ ಬೆಂಬಲ ಕೂಡ ಸಿಗುತ್ತಿದೆ. ಅಭಿಮಾನಿ ಬಳಗ ಕೂಡ ಯುವ ಅವರ ಈ ಅಬ್ಬರ ನೋಡಿ ಬೆರಗಾಗಿದ್ದಾರೆ. ಹಾಗೇ, ನಟ ದರ್ಶನ್‌ರ ಫ್ಯಾನ್ಸ್ ಕೂಡ ಯುವರಾಜ್ ಅವರ ಮೊದಲ ಸಿನಿಮಾಗೆ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಈ ಬಗ್ಗೆ ಹೆಮ್ಮೆಯಿಂದ ಪೋಸ್ಟ್ ಕೂಡ ಹಾಕಿಕೊಂಡಿದ್ದಾರೆ. ಈ ಹಿಂದೆ 'ಯುವ' ಸಿನಿಮಾದ ಶೂಟಿಂಗ್ ಸ್ಪಾಟ್‌ಗೆ ನಟ ದರ್ಶನ್ ಅವರು ಕೂಡ ಭೇಟಿ ನೀಡಿದ್ದರು. ಅಲ್ಲದೆ ಈ ವೇಳೆ, ಯುವ ಅವರನ್ನು ಭೇಟಿ ಮಾಡಿ ನಟ ದರ್ಶನ್ ಅವರು ಮಾತುಕತೆ ನಡೆಸಿದ್ದರು.
As a Darshan fan I agree 💯 one of best debutant in kannada industry
— Sunil (@Sunil862786) March 29, 2024
Dance . fight . Acting ✨✨✨
Movie ⭐⭐⭐⭐#YuvaRajkumar #yuva pic.twitter.com/WDkBwIDSuM
ಬಾಕ್ಸ್ ಆಫಿಸ್ ಶೇಕ್ ಗ್ಯಾರಂಟಿ?
ಒಟ್ನಲ್ಲಿ ಯುವರಾಜ್ ಅವರಿಗೆ ದೊಡ್ಡ ಮಟ್ಟದಲ್ಲಿ ಇಂದು ಓಪನಿಂಗ್ ಸಿಕ್ಕಿದ್ದು, ಫ್ಯಾನ್ಸ್ ಈ ಸಿನಿಮಾ ನೋಡಿ ಸಖತ್ ಖುಷಿ ವ್ಯಕ್ತಪಡಿಸಿದ್ದಾರೆ. ಹಾಗೇ, ಯುವ ಸಿನಿಮಾ ಮೂಲಕ ಪುನೀತ್ ರಾಜ್‌ಕುಮಾರ್ ಅವರನ್ನು ಮತ್ತೊಮ್ಮೆ ಕಣ್ತುಂಬಿಕೊಳ್ಳುತ್ತಿದ್ದೇವೆ ಎಂಬ ಮಾತು ಹೇಳುತ್ತಿದ್ದಾರೆ ಫ್ಯಾನ್ಸ್. ಇದೇ ಕಾರಣಕ್ಕೆ ಯುವ ಸಿನಿಮಾ ಈಗ ಫುಲ್ ಟ್ರೆಂಡ್ ಆಗುತ್ತಿದೆ. ಹಾಗೇ ಹಲವು ಥಿಯೇಟರ್‌ಗಳು ಹೌಸ್‌ಫುಲ್ ಪ್ರದರ್ಶನ ಕಾಣುವ ಮೂಲಕ ಯುವ ಅವರ ಚಿತ್ರ ಭರ್ಜರಿ ಗಳಿಕೆ ಕೂಡ ಮಾಡುತ್ತಿದೆ. ಈ ಮೂಲಕ ಬಾಕ್ಸ್ ಆಫಿಸ್‌ನಲ್ಲೂ ದಾಖಲೆಗಳನ್ನು ನಿರ್ಮಾಣ ಮಾಡುವ ಸಾಧ್ಯತೆ ದಟ್ಟವಾಗಿದೆ.
ಥಿಯೇಟರ್‌ಗಳು ಹೌಸ್‌ಫುಲ್!
'ಹೊಂಬಾಳೆ ಫಿಲ್ಮ್ಸ್' ಯುವ ಅವರ ಮೊದಲ ಸಿನಿಮಾಗೆ ಬಂಡವಾಳ ಹೂಡಿದೆ. ಮೊದಲ ಸಿನಿಮಾಗೆ ಯುವ ಸಾಕಷ್ಟು ಕಷ್ಟಪಟ್ಟಿದ್ದಾರೆ. ಅದರಲ್ಲೂ ಸಂತೋಷ್ ಆನಂದ್ ರಾಮ್ ಮತ್ತೆ ದೊಡ್ಮನೆ ನಟನಿಗೆ ನಿರ್ದೇಶನ ಮಾಡಿದ್ದಾರೆ. ಹೀಗೆ ಸಿನಿಮಾ ಸಿಕ್ಕಾಪಟ್ಟೆ ಕುತೂಹಲ ಕೆರಳಿಸಿತ್ತು ಇದೀಗ ಆ ಕುತೂಹಲ ನಿಜವಾಗಿದೆ. ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಈಗ ಯುವ ಅವರ ಗುಣಗಾನ ಮಾಡುತ್ತಿದ್ದಾರೆ. ಹಾಗೇ ಥಿಯೇಟರ್‌ಗಳು ತುಂಬಿ ತುಳುಕುತ್ತಿವೆ.
ಥಿಯೇಟರ್ ಸಂಖ್ಯೆ ಏರಿಕೆ?
ಯುವ ರಾಜ್‌ಕುಮಾರ್ ಸಿನಿಮಾ ನೋಡಲು ಅಭಿಮಾನಿಗಳು ಕಾಯುತ್ತಿದ್ದರು. ಈಗ ಅವರ ನಿರೀಕ್ಷೆಗಳು ನಿಜವಾಗಿದ್ದು, ಯುವ ಮೊದಲ ಎಂಟ್ರಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಹೀಗಾಗಿ ಈಗ ಎಲ್ಲೆಲ್ಲೂ ಯುವ ಸಿನಿಮಾ ಬಗ್ಗೆಯೇ ಮಾತು ಕೇಳಿಬರುತ್ತಿದೆ. ಹಾಗೇ ಅಭಿಮಾನಿಗಳು ಸಿನಿಮಾ ನೋಡಿ ಖುಷಿಯಾಗಿದ್ದಾರೆ. ಇನ್ನು ಶನಿವಾರ & ಭಾನುವಾರ ಅಭಿಮಾನಿ ಬಳಗದ ಎಂಟ್ರಿ ಮತ್ತಷ್ಟು ಭರ್ಜರಿಯಾಗಿ ಇರಲಿದೆ ಎನ್ನಲಾಗಿದ್ದು. ಹಾಗೇ ಥಿಯೇಟರ್‌ಗಳು ತುಂಬಿ ತುಳುಕುತ್ತಿರುವ ಹಿನ್ನೆಲೆ ಥಿಯೇಟರ್ ಮಾಲೀಕರು ಕೂಡ ಖುಷಿಯಾಗಿದ್ದಾರೆ. ಈಗಾಗಲೇ ಈ ಹಿನ್ನೆಲೆ ಮತ್ತಷ್ಟು ಥಿಯೇಟರ್‌ಗಳ ಸಂಖ್ಯೆ ಏರಿಕೆ ಆಗುವ ಸಾಧ್ಯತೆ ಕೂಡ ದಟ್ಟವಾಗಿದೆ.
ಸೋಷಿಯಲ್ ಮೀಡಿಯಾದಲ್ಲಿ ಹವಾ!
ಯುವ ರಾಜ್‌ಕುಮಾರ್ ಹೋಲಿಕೆಯಲ್ಲಿ ಕೂಡ ಪುನೀತ್ ಅವರನ್ನು ನೆನಪು ಮಾಡುತ್ತಾರೆ. ಹಾಗೇ ಯುವ ಮಾಡುವ ಸ್ಟಂಟ್ & ಡಾನ್ಸ್ ಕೂಡ ಪುನೀತ್ ರಾಜ್‌ಕುಮಾರ್ ಅವರ ನೆನಪು ಮರುಕಳಿಸುತ್ತೆ. ಹೀಗಿದ್ದಾಗ ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆ ಶುರುವಾಗಿ ಯುವ ಅವರನ್ನು ಫ್ಯಾನ್ಸ್ ಹೊಗಳುತ್ತಿದ್ದಾರೆ. ಸಿನಿಮಾ ನೋಡಿ ಎಂಜಾಯ್ ಮಾಡಿದ್ದಾರೆ. ಹಾಗೇ ಗಲ್ಲಾಪೆಟ್ಟಿಗೆ ತುಂಬಾ ಈ ಸಿನಿಮಾ ಒಳ್ಳೆಯ ಕಾಸು ಕೂಡ ಮಾಡಿದೆ.
ಐತಿಹಾಸಿಕ ಸಿನಿಮಾ ಯಾವಾಗ ಬರುತ್ತೆ?
ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಈ ಹಿಂದೆಯೇ ಯುವ ರಾಜ್‌ಕುಮಾರ್ ಅವರನ್ನು ಕನ್ನಡ ಸಿನಿಮಾ ಇಂಡಸ್ಟ್ರಿಗೆ ಪರಿಚಯ ಮಾಡಬಹುದಿತ್ತು. ಇದಕ್ಕಾಗಿ, ಐತಿಹಾಸಿಕ ಸಿನಿಮಾ ಕಥೆ ಕೂಡ ರೆಡಿಯಾಗಿತ್ತು. ಆದರೆ ಅನಿವಾರ್ಯ ಕಾರಣದಿಂದ ಆ ಸಿನಿಮಾ ತೆರೆಗೆ ಬರಲೇ ಇಲ್ಲ. ಹೀಗಾಗಿ ಆ ಸಿನಿಮಾ ಪ್ರಾಜೆಕ್ಟ್ ಬಿಟ್ಟು ಯುವ ಸಿನಿಮಾ ಒಪ್ಪಿಕೊಂಡಿದ್ದ ದೊಡ್ಡನೆ ಮೊಮ್ಮಗ ಯುವರಾಜ್ ಇದೀಗ ಅಬ್ಬರಿಸುದ್ದಾರೆ.












Click it and Unblock the Notifications