ಆಸೆ ಸೀರಿಯಲ್‌ನಲ್ಲಿ ರೋಚಕ ತಿರುವು: ರೋಹಿಣಿ ಕಳ್ಳಾಟಕ್ಕೆ ಬ್ರೇಕ್ ?!
ಒಂದೊಂದು ಸೀರಿಯಲ್‌ಗಳು ಜನರಿಗೆ ತುಂಬಾ ಹತ್ತಿರವಾಗುತ್ತವೆ ಅದಕ್ಕೆ ಕಾರಣವೇ ಬೇಕಿಲ್ಲ. ಇದೀಗ ಕನ್ನಡದ ಸೀರಿಯಲ್ ದುನಿಯಾದಲ್ಲಿ ಆಸೆ ಸೀರಿಯಲ್ ಜನರಿಗೆ ಸಿಕ್ಕಾಪಟ್ಟೆ ಇಷ್ಟವಾಗಿ ಹೋಗಿದೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ
ವಾಗುತ್ತಿರುವ 'ಆಸೆ' ಧಾರಾವಾಹಿ ಹಲವು ಕಾರಣಕ್ಕೆ ಜನರಿಗೆ ಇಷ್ಟವಾಗಿದೆ. ಅದರಲ್ಲೂ ರೋಹಿಣಿ ಗುಟ್ಟು ಬಯಲಾಗುವ ರೋಚಕ ಘಟ್ಟದಲ್ಲಿ ಸೀರಿಯಲ್ ತಲುಪಿದೆ. ಕೂಡು ಕುಟುಂಬದ ಕತೆಯನ್ನು ಈ ಸೀರಿಯಲ್ ಒಳಗೊಂಡಿದೆ. ಅದರಲ್ಲೂ ಸೀರಿಯಲ್‌ನಲ್ಲಿ ಬರುವ ಮುಖ್ಯ ಪಾತ್ರಗಳಾದ ಮೀನಾ ಹಾಗೂ ಸೂರ್ಯ ಪಾತ್ರ ಜನರಿಗೆ ಆತ್ಮೀಯವೆನಿಸುತ್ತಿದೆ.
ಇತ್ತೀಚಿನ ದಿನಗಳಲ್ಲಿ ಜಗಳ ಸ್ವಲ್ಪ ಜಾಸ್ತಿಯಾದರೂ ಹಲವು ಕಾರಣಕ್ಕೆ ಜನರಿಗೆ ಆಸೆ ಸೀರಿಯಲ್ ಇಷ್ಟವಾಗುತ್ತಿದೆ. ವಿನೂತನ ಕತೆಯ ಮೂಲಕ ಕಿರುತೆರೆ ಪ್ರೇಕ್ಷಕರ ಮನಸ್ಸಿಗೆ ಈ ಸೀರಿಯಲ್ ಹತ್ತಿರವಾಗುತ್ತಿದೆ. ಜನ ಬೇರೆ ಸೀರಿಯಲ್‌ಗಳನ್ನು ಬಿಟ್ಟು ಈ ಸೀರಿಯಲ್ ನೋಡುವುದಕ್ಕೆ ಶುರು ಮಾಡಿಕೊಂಡಿದ್ದಾರೆ ಎನ್ನುವಷ್ಟು ಒಳ್ಳೆಯ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ಈ ಸೀರಿಯಲ್‌ನ ಬಗ್ಗೆ ಕೇಳಿ ಬರುತ್ತಿದೆ. ಇದೀಗ ಈ ಸೀರಿಯಲ್‌ನ ರೋಹಿಣಿ ಗುಟ್ಟುಗಳನ್ನು ಬಯಲು ಮಾಡುವುದಕ್ಕೆ ಮೀನಾ - ಸೂರ್ಯ ಒಂದಾಗಿದ್ದಾರೆ.

ಮೀನಾ ಅವರು, ಪೂಜಾ ಅವರು ಆಗ ಹೇಳಿದ್ದಕ್ಕೂ ಈಗ ಹೇಳುತ್ತಿರುವುದಕ್ಕೂ ಒಂದಕ್ಕೊಂದು ಸಂಬಂಧವೇ ಇಲ್ಲ. ರೋಹಿಣಿ ಪರಿಚಯವಾಗಿದ್ದು ಕಾಲೇಜಿನಲ್ಲಿ ಅಂತ ಹೇಳಿ, ಮೀನಾ ಮತ್ತೆ ಪ್ರಶ್ನೆ ಮಾಡುತ್ತಿದ್ದಂತೆಯೇ ಪೂಜಾ ಅವರು ಮಾತು ಬದಲಾಯಿಸಿದ್ದಾರೆ. ಇಲ್ಲ ಇಲ್ಲ ಮಲೇಷ್ಯಾದಲ್ಲಿ ಎಂದಿದ್ದಾರೆ. ರೋಹಿಣಿ ಅವರು ಮಲೇಷ್ಯಾದಿಂದ ಬಂದೇ ಇಲ್ಲ ಅನಿಸುತ್ತಿದೆ ಎಂದು ಮೀನಾ - ಸೂರ್ಯ ಅವರು ಮಾತನಾಡಿಕೊಂಡಿದ್ದಾರೆ. ಇವರಿಬ್ಬರೂ ಸೇರಿ ಡಿಟೆಕ್ಟಿವ್ ಕೆಲಸ ಶುರು ಮಾಡಿಕೊಂಡಿದ್ದಾರೆ.
ಡಿಟೆಕ್ಟಿವ್ ಆಗಿ ಮೀನಾ & ಸೂರ್ಯ ಬದಲಾಗಿದ್ದಾರೆ. ರೋಹಿಣಿ ಗುಟ್ಟು ಬಯಲಾಗುತ್ತಾ? ನಿಮ್ಮ ಒಪೀನಿಯನ್ ಏನು? ಕಾಮೆಂಟ್ ಮಾಡಿ ಎಂದು ಸ್ಟಾರ್ ಸುವರ್ಣದಿಂದ ಪೋಲ್‌ವೊಂದನ್ನು ಕ್ರಿಯೇಟ್ ಮಾಡಲಾಗಿದೆ. ಇದಕ್ಕೆ ಜನ ಆಸಕ್ತಿದಾಯಕ ಕಮೆಂಟ್‌ಗಳನ್ನು ಮಾಡಿದ್ದಾರೆ. ರೋಹಿಣಿ ಗುಟ್ಟು ಬದಲಾದರೆ ಧಾರವಾಹಿಗೆ ಒಂದು ಅರ್ಥ ಬರುತ್ತದೆ ಎಂದು ಪ್ರೇಕ್ಷಕರು ಅಭಿಪ್ರಾಯಪಟ್ಟಿದ್ದಾರೆ. ಓ ಭ್ರಮೆ... ಈ ಕಾಲಕ್ಕೆ ಆ ಗುಟ್ಟು ಬಯಲಾಗಲ್ಲ ಬಿಡಿ ಎಂದು ಹಲವರು ಹೇಳಿದ್ದಾರೆ. ಬಹಳಷ್ಟು ಜನ ಈ ಸೀರಿಯಲ್‌ನಲ್ಲಿ ರೋಹಿಣಿ ಅವರ ಗುಟ್ಟು ಅಷ್ಟೊಂದು ಸುಲಭವಾಗಿ ಬಯಲಾಗುವುದಿಲ್ಲ ಬಿಡಿ. ಬಯಲಾಗುವುದಕ್ಕೆ ನಿರ್ದೇಶಕರು ಬಿಡಬೇಕಲ್ಲವಾ ಅಂತ ಕೇಳುತ್ತಿದ್ದಾರೆ.
ರೋಹಿಣಿ ಇಂದಾನೆ ಈ ಸೀರಿಯಲ್‌ಗೆ ಒಂದು ಕಳೆ ಇನ್ನೂ ಅವಳ ವಿಷ್ಯ ಗೊತ್ತಾದರೆ, ಈ ಸೀರಿಯಲ್ ಟಿಆರ್‌ಪಿ ಕಡಿಮೆ ಆಗಬಹುದು ಅಂತಲೂ ಕೆಲವರು ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications