ಕನ್ನಡ ಮಹಿಳಾ ಕಿರುಚಿತ್ರೋತ್ಸವ 2025: ಸ್ಪರ್ಧೆಗೆ ಅರ್ಜಿ ಸಲ್ಲಿಸಿ, ₹1 ಲಕ್ಷ ನಗದು ಬಹುಮಾನ ಗೆಲ್ಲಿ

ಬೆಂಗಳೂರು, ಏಪ್ರಿಲ್ 21: ಈ ವರ್ಷ ಜೂನ್ 14 ರಂದು ಬೆಂಗಳೂರಿನಲ್ಲಿ ನಡೆಯಲಿರುವ ''ಅವಳ ಹೆಜ್ಜೆ' ಮಹಿಳಾ ಕಿರುಚಿತ್ರೋತ್ಸವ-2025'' ಕ್ಕೆ ಕಿರುಚಿತ್ರ ನಡೆಯಲಿದೆ. ಈ ಸಂಬಂಧ ಕನ್ನಡ ನಿರ್ಮಾಪಕಿ, ನಿರ್ದೇಶಕಿಯರಿಂದ ಸ್ಫರ್ಧೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿ ಸಲ್ಲಿಸಲು ಸಲ್ಲಿಸಲು ಇನ್ನು ಕೆಲವೇ ದಿನಗಳ ಅವಕಾಶವಿದೆ. ಮಹಿಳೆಯರೇ ತಯಾರಿಸಿದ ಕಿರುಚಿತ್ರಗಳ ಸ್ಪರ್ಧೆಯನ್ನು ಮೊಟ್ಟ ಮೊದಲ ಬಾರಿಗೆ ಏರ್ಪಡಿಸಲಾಗಿದೆ.

ಈ ಸ್ಪರ್ಧೆಯಲ್ಲಿ ಭಾಗವಹಿಸಿ ತಾವೇ ನಿರ್ಮಿಸಿದ, ನಿರ್ದೇಶಿಸಿ ಕಿರುಚಿತ್ರ ಪ್ರದರ್ಶನಕ್ಕೆ ಅವಕಾಶ ಇದೆ. ಅತ್ಯುತ್ತಮ ಕಿರುಚಿತ್ರಕ್ಕೆ ₹1,00,000 (ಒಂದು ಲಕ್ಷ) ನಗದು ಬಹುಮಾನ ಗೆಲ್ಲಲು ಅವಕಾಶವಿದೆ. ಇದರೊಂದಿಗೆ ಸಾಕ್ಷ್ಯಚಿತ್ರಗಳೂ ಸೇರಿದಂತೆ ಅನೇಕ ವಿಶೇಷ ವರ್ಗಗಳಲ್ಲಿ ತಲಾ ಒಂದು ಚಿತ್ರಕ್ಕೆ ಮೆಚ್ಚುಗೆಯ ಬಹುಮಾನ ನಗದು ₹10,000 (ಹತ್ತು ಸಾವಿರ) ಗೆಲ್ಲಬಹುದಾಗಿದೆ.

Entries Open for Avalahejje Kannada Women s Short Film Festival 2025 On June

ಅರ್ಜಿ ಸಲ್ಲಿಕೆಗೆ ಕೊನೆಯ ದಿನ ಇದೇ ತಿಂಗಳು ಏಪ್ರಿಲ್ 30. ಕಿರುಚಿತ್ರದ ಗುಪ್ತ ಲಿಂಕ್ ಮತ್ತು ಪ್ರವೇಶ ಶುಲ್ಕ ₹1000 ಸಹಿತ ಅರ್ಜಿಯನ್ನು www.avalahejje.net ಮೂಲಕ ಸಲ್ಲಿಸಬೇಕು. ಕೆಲವು ವಿಶೇಷ ಸಂದರ್ಭಗಳಲ್ಲಿ ಪ್ರವೇಶ ಶುಲ್ಕಕ್ಕೆ ವಿನಾಯಿತಿ ಮತ್ತು ಕೆಲವು ದಿನಗಳ ಗಡುವು ವಿಸ್ತರಣೆ ನೀಡಲು ಸಾಧ್ಯವಿದೆಯಾದರೂ ಈ ಬಗ್ಗೆ ಮನವಿಯನ್ನು ವೆಬ್ಸೈಟ್ ಮೂಲಕ ಏಪ್ರಿಲ್ 30 ರೊಳಗೆ ಸಲ್ಲಿಸಿದಲ್ಲಿ ಮಾತ್ರ ಪರಿಗಣಿಸಲಾಗುವುದು. ಈ ಸಂಬಂಧ ನಿಮ್ಮ ಯಾವುದೇ ಪ್ರಶ್ನೆಗಳು ಇದ್ದಲ್ಲಿ ನೀವು ಕೂಡಲೇ 8867747236 ಗೆ ವಾಟ್ಸಾಪ್ ಅಥವಾ [email protected] ಗೆ ಈಮೇಲ್ ಮಾಡಬೇಕು.

ಕ್ಯಾಮೆರಾದ ಹಿಂದೆ ಮಹಿಳೆ ಇಲ್ಲದಿದ್ದರೆ, ಸಿನಿಮಾ ಪರದೆಯ ಮೇಲಿನ ಮಹಿಳಾ ಪಾತ್ರಗಳು ಕೇವಲ ಗ್ಲಾಮರ್ ಗೆ ಸೀಮಿತವಾಗುವ ಅಪಾಯವಿದೆ. ಮಹತ್ವಾಕಾಂಕ್ಷಿ ಚಿತ್ರ ನಿರ್ದೇಶಕಿಯರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು, ತಮ್ಮ ಗುರುತನ್ನು ಮೂಡಿಸಲು ಮತ್ತು ಲಿಂಗ ಸಮಾನತೆಯ ನಿಟ್ಟಿನಲ್ಲಿ ಕೊಡುಗೆ ನೀಡಲು ಈ ಅವಕಾಶವನ್ನು ಬಳಸಿಕೊಳ್ಳಬೇಕೆಂದು 'ಅವಳ ಹೆಜ್ಜೆ'ಯ ಸ್ಥಾಪಕಿ ಶಾಂತಲಾ ದಾಮ್ಲೆ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

Take a Poll

'ಅವಳ ಹೆಜ್ಜೆ' ಸಂಸ್ಥೆ ಕುರಿತು..

'ಅವಳ ಹೆಜ್ಜೆ' ಹೆಣ್ಣಿನ ಹೆಜ್ಜೆಗುರುತು ಆಟದ ಮೈದಾನದಿಂದ ಬೋರ್ಡ್ ರೂಂವರೆಗೂ ಎಲ್ಲೆಡೆ ಕಾಣುವ ಆಶಯದೊಂದಿಗೆ ಶಾಂತಲಾ ದಾಮ್ಲೆಯವರು ಆರಂಭಿಸಿದ ಸಾಮಾಜಿಕ ಸಂಕಲ್ಪ. ಕಳೆದ ಎಂಟು ವರ್ಷಗಳಲ್ಲಿ ಅವಳ ಹೆಜ್ಜೆ ಹಲವಾರು ವಿನೂತನ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಿ ಕಳೆದ ವರ್ಷ ಗುಬ್ಬಿವಾಣಿ ಟ್ರಸ್ಟ್ ನೊಂದಿಗೆ ವಿಲೀನವಾಗಿದೆ.

ಜೂನ್ ನಲ್ಲಿ ನಡೆಯಲಿರುವ 'ಅವಳ ಹೆಜ್ಜೆ ಕಿರುಚಿತ್ರೋತ್ಸವ' ಕೇವಲ ಕಿರುಚಿತ್ರ ಸ್ಪರ್ಧೆಯಲ್ಲ. ಮಹಿಳಾ ಮುಖ್ಯಪಾತ್ರಗಳಿಗೆ, ಮಹಿಳೆಯರ ಅನುಭವ ಮತ್ತು ದೃಷ್ಟಿಕೋನಗಳಿಗೆ ವೇದಿಕೆ ಸೃಷ್ಟಿಸುವುದರ ಮೂಲಕ ಸಮಾನತೆಯತ್ತ ಇಡುತ್ತಿರುವ ದಿಟ್ಟ ಹೆಜ್ಜೆ. ಸಲ್ಲಿಕೆ ಮಾರ್ಗಸೂಚಿಗಳಿಗಾಗಿ, www.avalahejje.net ಗೆ ಭೇಟಿ ನೀಡಿ. ಹೆಚ್ಚಿನ ಮಾಹಿತಿಗೆ ಪ್ರಶ್ನೆಗಳಿದ್ದಲ್ಲಿ, [email protected] ಗೆ ಈಮೇಲ್ ಅಥವಾ 8867747236 ವಾಟ್ಸಾಪ್ ಮಾಡುವ ಮೂಲಕ ಸಂಪರ್ಕಿಸಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+