Kannada Films: ಕನ್ನಡ ಸಿನಿಮಾ ರಂಗಕ್ಕೆ ಕಳೆ ತಂದ ಡಿಸೆಂಬರ್ ತಿಂಗಳು, ಎಷ್ಟು ಕೋಟಿ ರೂಪಾಯಿ ಹರಿದು ಬಂತು?
ಕನ್ನಡ ಸಿನಿಮಾ ರಂಗ ಜಗತ್ತಿನ ಮೂಲೆ ಮೂಲೆಯಲ್ಲಿ ಕೂಡ ಸದ್ದು ಮಾಡುವ ಹಂತಕ್ಕೆ ಇದೀಗ ಬೆಳೆದು ನಿಂತಿದೆ. ಕನ್ನಡ ಸಿನಿಮಾಗಳ ಈ ಬೆಳವಣಿಗೆ ಇಂಡಸ್ಟ್ರಿಗೆ ಹೊಸ ಶಕ್ತಿ ತುಂಬುವ ಜೊತೆಗೆ ಕನ್ನಡದ ಕಲಾವಿದರಿಗೆ ಬೇರೆ ಬೇರೆ ಭಾಷೆಗಳಲ್ಲಿ ಭರ್ಜರಿ ಡಿಮ್ಯಾಂಡ್ ಕೂಡ ಕ್ರಿಯೇಟ್ ಮಾಡಿ ಗಮನ ಸೆಳೆಯುತ್ತಿದೆ. ಅದರಲ್ಲೂ ಡಿಸೆಂಬರ್ ತಿಂಗಳು ಕನ್ನಡ ಸಿನಿಮಾ ರಂಗಕ್ಕೆ ಸಖತ್ ಸ್ಪೆಷಲ್ ಆಗಿದ್ದು, ಘಟಾನುಘಟಿ ಹೀರೋಗಳ ಸಿನಿಮಾ ರಿಲೀಸ್ ಆಗಿದೆ. ಅಭಿಮಾನಿಗಳು ಕೂಡ ಈ ಖುಷಿ ಸಮಯದಲ್ಲಿ ಸಾಲು ಸಾಲು ರಜೆಗಳ ಜೊತೆಗೆ ಸಿನಿಮಾ ಎಂಜಾಯ್ ಮಾಡುತ್ತಿದ್ದಾರೆ. ಹಾಗಾದರೆ ಈ ತಿಂಗಳಲ್ಲಿ ಕನ್ನಡದ ದೊಡ್ಡ ದೊಡ್ಡ ಸಿನಿಮಾಗಳು ಗಳಿಸಿದ್ದು ಎಷ್ಟು ಕೋಟಿ ರೂಪಾಯಿ?
ನಟ ದರ್ಶನ್ ತೂಗುದೀಪ್ ಅವರ ಬಹು ನಿರೀಕ್ಷಿತ ಸಿನಿಮಾ ಡೆವಿಲ್ ಅದ್ಧೂರಿಯಾಗಿ ರಿಲೀಸ್ ಆಗಿ ಸೌಂಡ್ ಮಾಡಿತ್ತು. ರೇಣುಕಾಸ್ವಾಮಿ ಕೊಲೆ ಕೇಸ್ ನಂತರ ರಿಲೀಸ್ ಆಗಿದ್ದ ಮೊದಲ ಸಿನಿಮಾಗೆ ಕುತೂಹಲದ ಜೊತೆಗೆ ನಿರೀಕ್ಷೆಗಳ ಭಾರ ಕೂಡ ಇತ್ತು. ಹಾಗೇ ಡೆವಿಲ್ ಸಿನಿಮಾ ನಂತರ ಕಿಚ್ಚ ಸುದೀಪ್ ಹಾಗೂ ನಟ ಶಿವರಾಜ್ಕುಮಾರ್ ಅವರ ಸಿನಿಮಾಗಳು ರಿಲೀಸ್ ಆಗಿವೆ.

ಕೋಟಿ ಕೋಟಿ ರೂಪಾಯಿ ಕಲೆಕ್ಷನ್
ರಿಯಲ್ ಸ್ಟಾರ್ ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ಕೂಡ ಶಿವಣ್ಣ ಜೊತೆಗೆ ನಟಿಸಿದ್ದರು. ಹೀಗಾಗಿ ಡೆವಿಲ್ ನಂತರ ಸುದೀಪ್ ಅವರ ಮಾರ್ಕ್ & ಶಿವರಾಜ್ಕುಮಾರ್ ಹಾಗೂ ಉಪೇಂದ್ರ ಜೊತೆಗೆ ರಾಜ್ ಬಿ ಶೆಟ್ಟಿ ಅವರು ನಟಿಸಿರುವ 45 ಸಿನಿಮಾ ಅಬ್ಬರಿಸಿದ್ದವು. ಈ ಎಲ್ಲಾ ಸಿನಿಮಾಗಳು ಇಲ್ಲಿಯವರೆಗೆ ಕೋಟಿ ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಅಭಿಮಾನಿಗಳ ಮನಸ್ಸು ಗೆದ್ದುಬಿಟ್ಟಿವೆ. ಈ ಮೂಲಕ ಮತ್ತೊಮ್ಮೆ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಬಲ ತುಂಬಿದಂತಾಗಿದೆ.
ಯಾವ ಸಿನಿಮಾಗೆ ಎಷ್ಟು ಕೋಟಿ ರೂಪಾಯಿ?
ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ್ ಅವರ ಬಹು ನಿರೀಕ್ಷಿತ ಸಿನಿಮಾ ಡೆವಿಲ್ 30 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿದೆ ಈವರೆಗೆ ಎನ್ನಲಾಗಿದೆ. ಇದರ ಜೊತೆಗೆ ಸುದೀಪ್ ಅವರ ಮಾರ್ಕ್ ಸಿನಿಮಾ ಕಲೆಕ್ಷನ್ ಕೂಡ 30 ಕೋಟಿ ರೂಪಾಯಿ ಗಡಿ ದಾಟಿದ್ದು, ವಾರಾಂತ್ಯದಲ್ಲಿ ಈ ಮೊತ್ತ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆ ಇದೆ.
ಇನ್ನುಳಿದಂತೆ ನಟ ಶಿವರಾಜ್ಕುಮಾರ್, ಉಪೇಂದ್ರ & ರಾಜ್ ಬಿ ಶೆಟ್ಟಿ ಅವರ 45 ಸಿನಿಮಾ ಕಲೆಕ್ಷನ್ ಈಗಾಗಲೇ 10 ಕೋಟಿ ದಾಟಿದ್ದು ಅಭಿಮಾನಿ ಬಳಗದಿಂದ ಒಳ್ಳೇ ರೆಸ್ಪಾನ್ಸ್ ಸಿಕ್ಕಿದೆ. ಆದರೆ ಡೆವಿಲ್, ಮಾರ್ಕ್, 45 ಸಿನಿಮಾಗಳ ಬಾಕ್ಸ್ ಆಫಿಸ್ ಕಲೆಕ್ಷನ್ ಬಗ್ಗೆ ಇನ್ನೂ ಅಧಿಕೃತ ಹೇಳಿಕೆ ಮತ್ತು ಮಾಹಿತಿ ಹೊರಬಿದ್ದಿಲ್ಲ. ಹೀಗಾಗಿ ಕುತೂಹಲ ಕೂಡ ಹೆಚ್ಚಾಗಿದೆ...
-
Vasudhendra: ಬರಹಗಾರ ವಸುಧೇಂದ್ರಗೆ ಹಿಂಗೇ ಮಾಡಿದ್ರೆ ನಿಮ್ ಪುಸ್ತಕ ಓದೋಕು ಯಾರು ಸಿಗಲ್ಲ ಎಂದ ನೆಟ್ಟಿಗರು -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ












Click it and Unblock the Notifications