Duniya Vijay: ಸಿಎಂ ಆಫೀಸ್‌ನಲ್ಲಿ ಮೀಟಿಂಗ್ ಸೀಕ್ರೆಟ್ ಬಿಚ್ಚಿಟ್ಟ ನಟ ದುನಿಯಾ ವಿಜಯ

ಬೆಂಗಳೂರು, ಸೆಪ್ಟೆಂಬರ್‌ 19: ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೆಪ್ಟೆಂಬರ್ 18ರಂದು ಸುದ್ದಿಗೋಷ್ಠಿ ನಡೆಸಿ ಡ್ರಗ್ಸ್ ನಿರ್ಮೂಲನೆಗೆ ಟಾಸ್ಕ್​ ಫೋರ್ಸ್ ಮಾಡುವ ಘೋಷಣೆ ಮಾಡಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿ ನಟ ದುನಿಯಾ ವಿಜಯ್ ಧನ್ಯವಾದ ಹೇಳಿದ್ದಾರೆ.

ಡ್ರಗ್ಸ್ ನಿರ್ಮೂಲನೆಗೆ ಸಂಬಂಧಿಸಿ ಮುಖ್ಯಮಂತ್ರಿಗಳ ಕಚೇರಿಯಲ್ಲಿ ಮೀಟಿಂಗ್ ನಡೆದಿದೆ. ಡ್ರಗ್ಸ್ ನಿರ್ಮೂಲನೆಗೆ ಸರ್ಕಾರ ದಿಟ್ಟ ಕ್ರಮ ಕೈಗೊಳ್ಳುತ್ತಿದೆ. ಸಿಎಂಗೆ ನನ್ನ ಧನ್ಯವಾದ ಎಂದು ನಟ ದುನಿಯಾ ವಿಜಯ್ ತಿಳಿಸಿದ್ದಾರೆ. ನಾನು ಭೀಮಾ ಚಿತ್ರದಲ್ಲೂ ಕೂಡ ಇದೇ ರೀತಿಯಾದ ಹೋರಾಟ ಮಾಡಿದ್ದೆ. ಇವತ್ತು ನನಗೆ ಖುಷಿ ವಿಷಯ ಅಂದ್ರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಚೇರಿಯಲ್ಲಿ ಸಭೆ ನಡೆಸಿದ್ದಾರೆ. ಆ ಸಭೆಯಲ್ಲಿ ಡ್ರಗ್ಸ್‌ ನಿರ್ಮೂಲನೆ ಮಾಡಬೇಕು ಎಂದು ತಿರ್ಮಾನ ಮಾಡಿದ್ದಾರೆ. ಹೀಗಾಗಿ ನಾನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಧನ್ಯವಾದವನ್ನ ತಿಳಿಸುತ್ತೇನೆ.

Duniya Vijay Convey Thanks to CM Siddaramaiah

ಈ ತರದ ಸಿನಿಮಾಗಳು ಸರ್ಕಾರದ ಗಮನಕ್ಕೆ ಬಂದು ಕೇಲವು ಬದಲಾವಣೆಗಳಾಗಬೇಕು. ಕಾಲೋನಿಗಳು ಇಲ್ಲದಿರ ಯಾವುದೇ ನಗರಗಳು ಆಗೋಕೆ ಆಗಲ್ಲ. ಕಾಲೋನಿ ಶಕ್ತಿನೇ ಶಕ್ತಿ, ಕಾಲೋನಿಗಳಾದರೆನೆ ನಗರಗಳಾಗೋದು ಮಾಲ್‌ಗಳಾಗೋದು ಮತ್ತೊಂದು ಬೆಳೆಯುವುದೇ ಕಾಲೋನಿಯಿಂದ. ಕಾಲೋನಿಯಲ್ಲಿ ಇರುವವರೆಲ್ಲರೂ ಕಾಲಗೆ ಸಮ ಅಲ್ಲಾ ಅವರಿಂದಲೇ ಎಲ್ಲಾ ನಡೆಯುವುದು ಅಂತ ಬಹುಶಃ ಈ ಸಿನಿಮಾ ಹೇಳುತ್ತದೆ ಅನ್ಕೋತೀನಿ ನಾನು. ನನಗೂ ಗೊತ್ತಿಲ್ಲ ಅದು ಅದನ್ನ ಅನು ಕೂಡ ಸಪೋರ್ಟ್‌ ಮಾಡ್ತೀನಿ ಎಂದು ದುನಿಯಾ ವಿಜಯ್‌ ಅವರು ಹೇಳಿದ್ದಾರೆ.

ಡ್ರಗ್ಸ್‌ ಹಾವಳಿ ತಡೆಗಟ್ಟಲು ಸಮಿತಿ ರಚಿಸಿದ ಸಿಎಂ ಸಿದ್ದರಾಮಯ್ಯ

ರಾಜ್ಯದಲ್ಲಿ ಮಾದಕ ವಸ್ತುಗಳ ಹಾವಳಿ ತಡೆಗಟ್ಟಲು ಸಮಿತಿಯೊಂದನ್ನು ರಚಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶಿಸಿದ್ದಾರೆ ಎಂದು ವಿಪ ಶಾಸಕರಾದ ದಿನೇಶ ಗೂಳಿಗೌಡ ತಿಳಿಸಿದ್ದಾರೆ. ಪತ್ರಿಕಾ ಹೇಳಿಕೆ ನೀಡಿರುವ ಅವರು, ತಮ್ಮ ಮನವಿಗೆ ಸ್ಪಂದಿಸಿ ಕ್ರಮ ವಹಿಸಿದ ಸಿಎಂ ಸಿದ್ದರಾಮಯ್ಯ ಅವರಿಗೆ ಪೋಶಕರ ಪರವಾಗಿ, ವಿದ್ಯಾರ್ಥಿಗಳ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.

ಇದೇ ವರ್ಷ ಜನವರಿ 16 ರಂದು ಶಾಸಕರಾದ ದಿನೇಶ ಗೂಳಿಗೌಡ ಅವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದು, ರಾಜ್ಯದಲ್ಲಿ ಮಾದಕ ದ್ರವ್ಯದ ಹಾವಳಿ ಹೆಚ್ಚುತ್ತಿದೆ. ಕಾಲೇಜ್‌ಗಳ ಸುತ್ತಲಿನ ಪ್ರದೇಶದಲ್ಲಿ ಗಾಂಜಾ ಮಾರಾಟ ನಡೆಯುತ್ತಿದೆ. ಭವಿಷ್ಯದ ಭಾರತದ ಕನಸುಗಳಾದ ಯುವ ಜನರು ದಾರಿ ತಪ್ಪುತ್ತಿದ್ದಾರೆ. ಇದನ್ನು ತಡೆಯಲು ಪೊಲೀಸ್‌ ಇಲಾಖೆ ಕ್ರಮ ವಹಿಸಬೇಕು. ಜಾಗೃತಿ ಕಾಯಕ್ರಮಗಳನ್ನು ಆಯೋಜಿಸಬೇಕು ಎಂದು ಮನವಿ ಮಾಡಿದ್ದರು. ಈ ಸಂಬಂಧ ಕ್ರಮ ವಹಿಸುವಂತೆ ಸಿಎಂ ಸಿದ್ದರಾಮಯ್ಯ ಅವರು ಪೊಲೀಸ್‌ ಮಹಾ ನಿರ್ದೇಶಕರಿಗೆ ಪತ್ರ ಬರೆದಿದ್ದರು.

ಪತ್ರದ ಭಾಗವಾಗಿ ಬುಧವಾರ ವಿಧಾನ ಸೌಧದಲ್ಲಿ ಹಿರಿಯ ಪೊಲೀಸ್‌ ಅಧಿಕಾರಿಗಳ ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ ಅವರು ಈ ಮಾದಕ ದ್ರವ್ಯ ಹಾವಳಿ ತಡೆಯಲು ಉನ್ನತ ಮಟ್ಟದ ಸಮಿತಿಯನ್ನು ರಚಿಸಿದ್ದಾರೆ. ಮಾತ್ರವಲ್ಲದೇ, ಕ್ರಮ ವಹಿಸಲು ಪೊಲೀಸ್‌ ಮಹಾ ನಿರ್ದೇಶಕರಿಗೆ ಆದೇಶಿಸಿದ್ದಾರೆ. ಯುವ ಜನತೆಯ ಬಗ್ಗೆ ಕಾಳಜಿ ವಹಿಸಿದ ಮುಖ್ಯಮಂತ್ರಿಗಳಿಗೆ ಅಭಿನಂದನೆಗಳು ಎಂದು ದಿನೇಶ ಗೂಳಿಗೌಡ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+