ಲಕ್ಷ್ಮಿ ನಿವಾಸ & ಅಣ್ಣಯ್ಯ ಸೀರಿಯಲ್‌ನಲ್ಲಿ ಡಬಲ್ ಟ್ವಿಸ್ಟ್!
ಕನ್ನಡದಲ್ಲಿ ಕೆಲವೊಂದು ಪ್ರಮುಖ ಸೀರಿಯಲ್‌ಗಳು ಒಂದಕ್ಕೊಂದು ಪೈಪೋಟಿ ನೀಡುವಂತೆ ಮೂಡಿ ಬರುತ್ತಿವೆ. ಅದರಲ್ಲೂ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಹಾಗೂ ಲಕ್ಷ್ಮಿ ನಿವಾಸ ಸೀರಿಯಲ್‌ಗಳು ರೋಚಕ ತಿರುವು ಪಡೆದುಕೊಂಡಿದೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಮೃತಧಾರೆ ಸಹ ಹೊಸ ತಿರುವು ಪಡೆದುಕೊಂಡಿದೆ. ಆದರೆ ಅಮೃತಧಾರೆಯಲ್ಲಿನ ಬದಲಾವಣೆಯನ್ನು ಜನ ಮೆಚ್ಚಿಕೊಂಡಿಲ್ಲ.
ಇನ್ನುಳಿದಂತೆ ಅಣ್ಣಯ್ಯ ಹಾಗೂ ಲಕ್ಷ್ಮಿ ನಿವಾಸ ಜನರಿಗೆ ಇಷ್ಟವಾಗುತ್ತಿದೆ. ಲಕ್ಷ್ಮಿ ನಿವಾಸದಲ್ಲಿ ಮಕ್ಕಳು ಮಾಡುವ ಮೋಸವನ್ನೇ ವಿಜೃಂಭಣೆಯಿಂದ ತೋರಿಸಲಾಗುತ್ತಿದೆ. ಇದು ಬದಲಾಗಬೇಕು ಈ ರೀತಿ ಮಾಡುವ ಮಕ್ಕಳಿಗೆ ಸರಿಯಾಗಿ ಬುದ್ಧಿಕಲಿಸಬೇಕು ಎಂದು ವೀಕ್ಷಕರು ಸಹ ಒತ್ತಾಯ ಮಾಡುತ್ತಿದ್ದರು. ಅದರಂತೆ ಇದೀಗ ಲಕ್ಷ್ಮಿ ನಿವಾಸದಲ್ಲಿ ಹೊಸ ತಿರುವು ಸಿಕ್ಕಂತೆ ಆಗಿದೆ.

ಲಕ್ಷ್ಮಿ ನಿವಾಸ: ಭಾವನಾ ಮೇಲೆ ಅವರ ಅತ್ತೆ ಮನೆಯಲ್ಲಿ ಕೋಪಗೊಂಡಿದ್ದು, ಭಾವನಾಗೆ ತರಾಟೆಗೆ ತೆಗೆದುಕೊಂಡಿರುವುದು ಇದೆ. ಭಾವನಾ ಅವರ ಅತ್ತೆ ನನ್ನ ಮಗಳು ಗರ್ಭಿಣಿ ಅವಳಿಗೆ ಸಮಸ್ಯೆ ಆಗಬಾರದು. ನಿಮ್ಮ ಮನೆಯಲ್ಲಿ ಏನೇ ಸಮಸ್ಯೆಯಾದರೂ ಅದು ಅಲ್ಲೇ ಇತ್ಯಾರ್ಥವಾಗಬೇಕು ಎಂದು ತಾಕೀತು ಮಾಡಿದ್ದಾರೆ. ಇದರ ನಡುವೆ ಸಿದ್ದೇಗೌಡ್ರು ಸಹ ಶಾಕ್ ಕೊಟ್ಟಿದ್ದಾರೆ.
ನನ್ನ ಮಗ ನಿನ್ನನ್ನು ಮದುವೆ ಆಗಿರುವುದು ನಮಗೂ ಇಷ್ಟವಿಲ್ಲ. ಆದರೆ, ನಾವು ನಿನಗೆ ಊಟ - ತಿಂಡಿ ಕೊಡದೆ ಆಚೆ ಕಳುಹಿಸಿದ್ದೀವಾ ಎಂದು ಪ್ರಶ್ನೆ ಮಾಡಿದ್ದಾರೆ. ಅದೇ ಸಂದರ್ಭದಲ್ಲಿ ಸಿದ್ದೇಗೌಡ್ರು ಏನಾಯ್ತಮ್ಮಾ ಎಂದು ಪ್ರಶ್ನೆ ಮಾಡಿದ್ದು, ಭಾವನಾ ಮೇಲೆ ಕೋಪಗೊಂಡಿದ್ದಾರೆ. ಎಲ್ಲರ ಮುಂದೆಯೂ ಭಾವನಾ ಮೇಲೆ ಕೋಪಗೊಂಡಿರುವ ಸಿದ್ದೇಗೌಡ್ರು ಕೆಂಡಾಮಂಡಲಾಗಿದ್ದಾರೆ.
ರೀ ಭಾವನಾ ಏನ್ರೀ ನಡಿತಾ ಇದೆ ಅಲ್ಲಿ. ಏನಾಗಿದೆ ನಿಮ್ಮ ಅಪ್ಪ - ಅಮ್ಮಗೆ ವಸಿನಾದ್ರೂ ಜ್ಞಾನ ಬೇಡ್ವೇ ಏನು ನಮ್ಮ ಮನೆ ಅಂದ್ರೆ ಹುಡುಗಾಟ ಅಂತಾ ಅಂದುಕೊಂಡು ಬಿಟ್ಟಿದ್ದೀರಾ ನೀವೆಲ್ಲಾ ಎಂದು ಪ್ರಶ್ನಿಸಿದ್ದಾರೆ. ಕೋಪದಿಂದಲೇ ಭಾವನಾ ಅವರನ್ನು ರೂಮ್‌ಗೆ ಎಳೆದುಕೊಂಡು ಹೋಗಿದ್ದಾರೆ. ಆದರೆ ರೂಮ್‌ನಲ್ಲಿ ಭಾವನಾ ಅವರ ಮುಂದೆ ನಕ್ಕೊಂಡು ಮಾತನಾಡುತ್ತಿರುವುದು ಇದೆ. ಸಾರಿ ಮೇಡಂ ಅವರೇ ಕ್ಷಮಿಸಿಬಿಡಿ ಅಂತಾ ಹೇಳಿದ್ದು. ಎಲ್ಲರ ಮುಂದೆ ಸಿದ್ದೇಗೌಡ್ರು ಕಿರುಚಾಡಿದ್ದು ನಾಟಕ ಎನ್ನುವುದು ಗೊತ್ತಾಗಿದೆ.
ಅಣ್ಣಯ್ಯ: ಇನ್ನು ಅಣ್ಣಯ್ಯ ಸೀರಿಯಲ್‌ನಲ್ಲೂ ರೋಚಕ ತಿರುವು ಇದೆ. ಅಣ್ಣಯ್ಯ ಸೀರಿಯಲ್‌ನಲ್ಲಿ ರಾಣಿ ಆಸ್ತಿ ಪತ್ರಗಳಿಗೆ ಸರಿಯಾಗಿ ಸಹಿ ಹಾಕಿಲ್ಲ. ಮದುವೆ (ಮ್ಯಾರೇಜ್ ಸರ್ಟಿಫಿಕೇಟ್) ವೊಂದಕ್ಕೆ ಸಹಿ ಹಾಕಿದ್ದು, ಇನ್ನುಳಿದ ಆಸ್ತಿ ಪತ್ರಗಳಿಗೆ ತಪ್ಪಾಗಿ ಸಹಿ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ. ನಿಮ್ಮ ಆಸ್ತಿನ ಈ ನಾಯಿ - ನರಿಗಳಿಗೆ ಸಿಗದಂತೆ ನಾನು ಮಾಡ್ತೀನಿ ಅಂತಾ ರಾಣಿ ಹೇಳಿದ್ದಾರೆ. ಇನ್ನು ಅಣ್ಣಯ್ಯ ಅವರ ತಾಯಿಯನ್ನು ಅವರ ಮನೆಗೇ ಚಿಕಿತ್ಸೆಗೆ ಕರೆದುಕೊಂಡು ಬಂದಿದ್ದು ಅಣ್ಣಯ್ಯ ಅವರ ತಾಯಿಯನ್ನು ಕಂಡು ಹಿಡಿಯುವ ಸುಳಿವು ನೀಡಲಾಗಿದೆ.












Click it and Unblock the Notifications