Actor Darshan: ನ್ಯಾಯ, ಘನತೆ, ಸಮಾನತೆ, ಶಾಂತಿ- ನಟ ದರ್ಶನ್‌ ಸಂದೇಶಕ್ಕೆ ನೆಟ್ಟಿಗರು ಹೇಳೋದೇನು ಗೊತ್ತಾ?

Darshan Thoogudeepa: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್‌ನನ್ನು ಇಂದು (ಆಗಸ್ಟ್‌ 29) ಬೆಳಗ್ಗೆ ಬಳ್ಳಾರಿ ಜೈಲಿಗೆ ಶಿಫ್ಟ್‌ ಮಾಡಲಾಗಿದೆ. ಇನ್ನು ಈ ವೇಳೆ ನಟ ದರ್ಶನ್‌ ಹಾಕಿಕೊಂಡು ಬಂದಿದ್ದ ಟೀ ಶರ್ಟ್‌ ಮೇಲಿನ ಸಂದೇಶ ಭಾರೀ ವೈರಲ್‌ ಆಗುತ್ತಿದೆ. ಹಾಗಾದರೆ ಏನು ಬರೆಯಲಾಗಿತ್ತು ಎಂದು ಇಲ್ಲಿ ತಿಳಿಯಿರಿ.

ಪರಪ್ಪನ ಅಗ್ರಹಾರ ಜೈಲಿನಲ್ಲೇ ರೌಡಿ ಶೀಟರ್‌ ನಾಗನ ಜೊತೆ ದರ್ಶನ್‌ ರೌಂಡ್‌ ಟೇಬಲ್‌ ಪಾರ್ಟಿಯಲ್ಲಿ ಭಾಗಿಯಾಗಿ ಒಂದು ಕೈಯಲ್ಲಿ ಕಾಫಿ ಮಗ್‌, ಮತ್ತೊಂದು ಕೈಯಲ್ಲಿ ಸಿಗರೇಟ್‌ ಹಿಡಿದಿ ಹರಟೆ ಹೊಡೆದಿರುವ ಫೋಟೋ ವೈರಲ್‌ ಆಗಿತ್ತು. ಅಲ್ಲದೆ, ರೌಡಿ ಶೀಟರ್‌ ಜೊತೆ ವಿಡಿಯೋ ಕಾಲ್‌ ಮಾಡಿ ಮಾತನಾಡಿರುವ ವಿಡಿಯೋ ಸಹ ವೈರಲ್‌ ಆಗಿದ್ದು, ಇದರಿಂದ ಕೋರ್ಟ್‌ ಆದೇಶದ ಮೇರೆಗೆ ದರ್ಶನ್‌ನನ್ನು ಬಳ್ಳಾರಿ ಜೈಲಿಗೆ ಶಿಫ್ಟ್‌ ಮಾಡಲಾಗಿದೆ.

Do you know How is netizens reaction to actor Darshan s t-shirt message

ಇನ್ನೂ ಬಳ್ಳಾರಿ ಜೈಲಿಗೆ ಎಂಟ್ರಿ ಕೊಡುವಾಗ ನಟ ದರ್ಶನ್‌ ಹಾಕಿಕೊಂಡು ಬಂದಿದ್ದ ಟೀ ಶರ್ಟ್‌ ಮೇಲಿನ ಸಂದೇಶ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ದರ್ಶನ್‌ ಧರಿಸಿದ್ದ ಟೀ ಶರ್ಟ್‌ ಮೇಲೆ Justice (ನ್ಯಾಯ), Dignity (ಘನತೆ) Equality (ಸಮಾನತೆ), Piece (ಶಾಂತಿ) ಎಂಬ ನಾಲ್ಕು ಪದಗಳು ಕಂಡುಬಂದಿದ್ದು, ಭಾರೀ ವೈರಲ್‌ ಆಗುತ್ತಿದೆ. ಅಲ್ಲದೆ ಈ ಮೂಲಕ ಅಭಿಮಾನಿಗಳಿಗೆ ಪರೋಕ್ಷವಾಗಿ ಸಂದೇಶ ನೀಡಿದ್ದೀರಾ ಎಂಬ ಪ್ರಶ್ನೆ ಕೂಡ ಹುಟ್ಟಿಕೊಂಡಿದೆ.

ಬಳ್ಳಾರಿ ಜೈಲಿಗೆ ಆಗಮಿಸುತ್ತಿದ್ದಂತೆ ನಟ ದರ್ಶನ್ ಅವರ ನೋಟ ಗಮನ ಸೆಳೆದಿದ್ದು, ಈ ವೇಳೆ ಕೈಗೆ ಬ್ಯಾಂಡೇಜ್ ಹಾಕಿಕೊಂಡಿದ್ದು, ಬ್ರಾಂಡೆಡ್​ ಟೀ ಶರ್ಟ್, ಕೂಲಿಂಗ್ ಕ್ಲಾಸ್ ಧರಿಸಿ, ನೀರಿನ ಬಾಟಲ್ ಹಾಗೂ ಕೈಯಲ್ಲಿ ಜಾಕೆಟ್‌ ಹಿಡಿದುಕೊಂಡಿದ್ದು, ಈ ಫೋಟೋಗಳು ಕೂಡ ಭಾರೀ ಚರ್ಚೆಗಳನ್ನು ಹುಟ್ಟುಹಾಕಿವೆ.

ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ್ದಾರೆ ಎನ್ನುವ ಕಾರಣಕ್ಕೆ ರೇಣುಕಾಸ್ವಾಮಿಯನ್ನು ನಟ ದರ್ಶನ್‌ & ಗ್ಯಾಂಗ್‌ ಪಟ್ಟಣಗೆರೆ ಶೆಡ್‌ಗೆ ಕರೆಸಿಕೊಂಡು ಭೀಕರವಾಗಿ ಹತ್ಯೆ ಮಾಡಿದ್ದರು ಎನ್ನುವ ಆರೋಪ ಇದೆ. ಅಲ್ಲದೆ ಇದಕ್ಕೆ ಸಾಕ್ಷಿ ಎಂಬಂತೆ ಈಗಾಗಲೇ ಎಫ್‌ಎಸ್‌ಎಲ್‌ ವರದಿಗಳು ಸಹ ಬಂದಿವೆ ಎಂಬ ಮಾಹಿತಿಯಿದೆ. ಈಗಾಗಲೇ ಈ ಪ್ರಕರಣದ ತನಿಖೆ ಮುಕ್ತಾಯದ ಹಂತದಲ್ಲಿದ್ದು, ಪೊಲೀಸರು ಚಾರ್ಜ್‌ ಶೀಟ್‌ ಸಲ್ಲಿಸಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಇನ್ನೂ ಇಂದು ಬಳ್ಳಾರಿ ಜೈಲಿಗೆ ನಟ ದರ್ಶನ್‌ ಶಿಫ್ಟ್‌ ಆಗಿದ್ದು, ಈ ವೇಳೆ ಅವರ ಟೀ ಶರ್ಟ್‌ ಮೇಲಿನ ಸಂದೇಶಗಳಿಗೆ ನೆಟ್ಟಿಗಳು ಆಕ್ರೋಶ ಹೊರಹಾಕುತ್ತಿದ್ದಾರೆ. ಟೀ ಶರ್ಟ್ ಮೇಲೆ Justice, Dignity, Equality, Piece, ಎಂಬ ನಾಲ್ಕು ಪದಗಳು ಕಂಡುಬಂದಿವೆ. ಇದಕ್ಕೆ ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ "ಇವೆಲ್ಲ ದರ್ಶನ್‌ಗೆ ಸೂಕ್ತವಾದ ಪದಗಳಲ್ಲ ಎಂದು ಹೇಳುವ ಮೂಲಕ ಆಕ್ರೊಶ ಹೊರಹಾಕುತ್ತಿದ್ದಾರೆ

"ಆತ ಮುಂಗೊಪಿಯಾಗಿದ್ದು "ಶಾಂತಿ" ಪದಕ್ಕೆ ಅರ್ಹನಲ್ಲ, ಕಾನೂನು ಕೈಗೆ ತೆಗೆದುಕೊಂಡು ಕೊಲೆ ಮಾಡಿರುವುದು "ನ್ಯಾಯ" ಎನ್ನುವ ಪದಕ್ಕೆ ಅನರ್ಹ, ರೌಡಿಗಯಂತೆ ವರ್ತಿಸುವ ಈತನಿಗೆ "ಘನತೆ" ಸೂಕ್ತ ಪದವಲ್ಲ, ಜೈಲಿನಲ್ಲೇ ಎಲ್ಲಾ ಕೈದಿಗಳ ರೀತಿ ಇರದೇ, ರಾಜಾತಿಥ್ಯ ಮೆರೆದಿರುವ ಈತ "ಸಮಾನತೆ" ಪದಕ್ಕೆ ಅರ್ಹನೇ?," ಎಂದು ಪ್ರಶ್ನೆ ಮಾಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+