Divorce: ಕಿರುತೆರೆಯ ಖ್ಯಾತ ದಂಪತಿ ಬಾಳಲ್ಲಿ ಬಿರುಕು; ಡಿವೋರ್ಸ್‌‌ ಬಗ್ಗೆ ಸ್ಪಷ್ಟನೆ ಕೊಟ್ಟ ಸೂಪರ್‌ ಜೋಡಿ

ಸಿನಿಮಾ ಹಾಗೂ ಕಿರುತೆರೆ ತಾರೆಯರ ನಡುವೆ ಎಷ್ಟು ಬೇಗ ಲವ್ ಆಗುತ್ತದೋ ಅಷ್ಟೇ ಬೇಗ ಬ್ರೇಕಪ್ ಆಗಿಬಿಡುತ್ತದೆ. ಈಗಂತೂ ಮದುವೆ, ಡಿವೋರ್ಸ್ ಕೂಡ ಸರ್ವೇ ಸಾಮಾನ್ಯವಾಗಿವೆ. ಹಲವು ಕಾರಣಗಳನ್ನ ಬಹಿರಂಗ ಪಡಿಸಿ ಕೆಲವರು ಡಿವೋರ್ಸ್ ಪಡೆದರೇ, ಇನ್ನೂ ಕೆಲ ಜೋಡಿಗಳು ಯಾವುದೇ ಕಾರಣಗಳನ್ನು ನೀಡದೇ ವಿಚ್ಚೇದನ ಪಡೆಯುತ್ತಾರೆ. ಡಿವೋರ್ಸ್‌ ಪಡೆದಷ್ಟೇ ಬೇಗ ಮತ್ತೊಂದು ಮದುವೆ ಕೂಡ ಆಗಿಬಿಡುತ್ತಾರೆ. ಕೆಲವರು ಡಿವೋರ್ಸ್‌ ಪಡೆದು ಕಾನೂನಾತ್ಮಕವಾಗಿ ದೂರಾದರೂ ಸಹ ಸ್ನೇಹಿತರಂತೆಯೇ ಇರುವವರು ಇದ್ದಾರೆ. ಇದೀಗ ಮತ್ತೊಂದು ಸೂಪರ್‌ ಜೋಡಿಯ ಬಾಳಲಿ ಬಿರುಕು ಮೂಡಿರುವ ಬಗ್ಗೆ ಅನುಮಾನ ಮೂಡಿದೆ.

ಕಳೆದ ಕೆಲವು ವರ್ಷಗಳಲ್ಲಿ ಅನೇಕ ಕಲಾವಿದರು ವಿಚ್ಛೇದನ ಪಡೆದಿದ್ದಾರೆ. ಸದ್ಯ ಸೆಲೆಬ್ರಿಟಿಗಳ ಮದುವೆ ಹಾಗೇ ಅವರ ವಿಚ್ಛೇದನಗಳು ಸಾಕಷ್ಟು ಚರ್ಚೆಗಳು ಆಗುತ್ತಲೇ ಇರುತ್ತವೆ. ಈ ಮಧ್ಯೆ, ಮತ್ತೊಂದು ಪ್ರಸಿದ್ಧ ಜೋಡಿ ಬೇರೆಯಾಗಲಿದ್ದಾರೆ ಎಂಬ ವದಂತಿಗಳು ಈಗ ಹರಡಿವೆ. 9 ವರ್ಷಗಳ ದಾಂಪತ್ಯದ ನಂತರ ದಂಪತಿ ವಿಚ್ಛೇದನ ಪಡೆಯುತ್ತಾರೆ ಎಂದು ವರದಿಯಾಗಿದ್ದು, ಅವರಿಬ್ಬರ ಅಭಿಮಾನಿಗಳು ಈ ಸುದ್ದಿ ಬಿಗ್‌ ಶಾಕ್‌‌ ಕೊಟ್ಟಂತಾಗಿದೆ.

Divyanka Tripathi Vivek Dahiya Head For Divorce 9 Years After Marriage

ಕಿರುತೆರೆಯ ಅತ್ಯಂತ ಪ್ರೀತಿಪಾತ್ರ ದಂಪತಿ ಎಂದೇ ಖ್ಯಾತಿ ಪಡೆದ ದಿವ್ಯಾಂಕ ತ್ರಿಪಾಠಿ ಮತ್ತು ವಿವೇಕ್ ದಹಿಯಾ ಕಳೆದ ಕೆಲವು ದಿನಗಳಿಂದ ಸುದ್ದಿಯಲ್ಲಿದ್ದಾರೆ. ದಿವ್ಯಾಂಕ ತ್ರಿಪಾಠಿ ಮತ್ತು ವಿವೇಕ್ ದಹಿಯಾ ಅವರ ವಿಚ್ಚೇಧನದ ಬಗ್ಗೆ ಸಾಕಷ್ಟು ವಂದತಿಗಳು ಕೇಳಿ ಬರುತ್ತಿವೆ. ದಿವ್ಯಾಂಕ ತ್ರಿಪಾಠಿ ಅವರ ಪತಿ ವಿವೇಕ್ ದಹಿಯಾ ದಂಪತಿಗಳ ವಿಚ್ಛೇದನದ ವದಂತಿಗಳ ಬಗ್ಗೆ ಮೌನ ಮುರಿದಿದ್ದಾರೆ. ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ, ವಿಚ್ಛೇದನದ ವರದಿಗಳ ಕುರಿತು ಸ್ಪಷ್ಟ ಪಡಿಸಿದ್ದಾರೆ. ಕೆಲ ದಿನಗಳಿಂದ ಈ ಸೂಪರ್ ಜೋಡಿಯ ಬಗ್ಗೆ ವಿಚ್ಛೇದನದ ಕುರಿತು ವದಂತಿಗಳು ಕೇಳಿ ಬರುತ್ತಿದ್ದು, ವಿವೇಕ್ ಸ್ವತಃ ಮುಂದೆ ಬಂದು ಈ ಚರ್ಚೆಗಳಿಗೆ ಸ್ಪಷ್ಟ ಉತ್ತರವನ್ನು ನೀಡಿದ್ದಾರೆ.

ಸಂದರ್ಶನವೊಂದರಲ್ಲಿ ವಿವೇಕ್ ದಹಿಯಾ ವಿಚ್ಛೇದನದ ಬಗ್ಗೆ ಮಾತನಾಡಿದ್ದು, ನಾನು ಮತ್ತು ದಿವ್ಯಾಂಕ ಈ ವದಂತಿಗಳನ್ನು ಕೇಳಿ ತುಂಬಾ ನಕ್ಕಿದ್ದೇವೆ. ನಾವು ಐಸ್ ಕ್ರೀಮ್ ತಿಂದು, ಇನ್ನೂ ಹೆಚ್ಚಿನ ವದಂತಿಗಳಿದ್ದರೆ, ಪಾಪ್‌ಕಾರ್ನ್ ಅನ್ನು ಸಹ ಆರ್ಡರ್ ಮಾಡೋಣ ಎಂದು ಯೋಚಿಸುತ್ತಿದ್ದೆವು ಎಂದು ವಿವೇಕ್ ಹೇಳಿದರು.

ದಿವ್ಯಾಂಕ ತ್ರಿಪಾಠಿ ಮತ್ತು ವಿವೇಕ್ ದಹಿಯಾ ಅವರ ಮಾತುಗಳಿಂದ ಅವರಿಬ್ಬರೂ ಅಂತಹ ಚರ್ಚೆಗಳಿಗೆ ಹೆಚ್ಚು ಗಮನ ಕೊಡದೆ, ಬದಲಿಗೆ ಅವುಗಳನ್ನು ಆನಂದಿಸುತ್ತಾರೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ವಿವೇಕ್ ಕೂಡ ಒಬ್ಬ ಯೂಟ್ಯೂಬ್ ವ್ಲಾಗರ್, ಮತ್ತು ಆದ್ದರಿಂದ ಕ್ಲಿಕ್‌ಬೈಟ್ ಶೀರ್ಷಿಕೆಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂದು ಅವರಿಗೆ ತಿಳಿದಿದೆ. ಜನರು ಏನಾದರೂ ಆಸಕ್ತಿದಾಯಕ ವಿಚಾರ ನೋಡಲು ಬರುತ್ತಾರೆ ಎಂದು ನನಗೆ ಅರ್ಥವಾಗಿದೆ. ಅದು ಕ್ಲಿಕ್‌ಬೈಟ್ ಆಗಿದ್ದರೆ, ಅದು ವೀಕ್ಷಣೆಗಳನ್ನು ಪಡೆಯುತ್ತದೆ, ಆದರೆ ಮುಖ್ಯವಾದ ವಿಷಯವೆಂದರೆ ಅದರಲ್ಲಿ ಎಷ್ಟು ಸತ್ಯವಿದೆ ಎಂದು ನೋಡುವುದು. ನಾವು ಅಂತಹ ವಿಷಯಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲು ಬಯಸುವುದಿಲ್ಲ ಎಂದು ವಿವೇಕ್‌ ದಹಿಯಾ ಅವರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+