Puneeth Rajkumar: ಅಪ್ಪುಗೆ ಕೋಪ ಬಂದರೆ ಹೇಗಿರುತ್ತಿದ್ದರು ಗೊತ್ತೇ?
ಕೋಟ್ಯಂತರ ಅಭಿಮಾನಿಗಳ ಪಾಲಿನ ಪ್ರೀತಿಯ ನಟ, ದಿವಂಗತ ಪುನೀತ್ ರಾಜ್‌ಕುಮಾರ್ ಕನ್ನಡಿಗರನ್ನ ಅಗಲಿ ಇನ್ನೇನು 2 ವರ್ಷ ತುಂಬಲಿದೆ. ಅಪ್ಪು ಕಳೆದುಕೊಂಡಿರುವ ಕನ್ನಡ ಸಿನಿಮಾ ಜಗತ್ತು ಬಡವಾಗಿದೆ. ಇದೆಲ್ಲವನ್ನ ಮೀರಿ ಪುನೀತ್ ರಾಜ್‌ಕುಮಾರ್ ಇಲ್ಲದೆ ಅವರ ಅಭಿಮಾನಿ ಬಳಗ ನಿತ್ಯವೂ ಕಣ್ಣೀರಲ್ಲಿ ಕೈತೊಳೆಯುತ್ತಿದೆ. ಹೀಗಿದ್ದಾಗಲೇ ಅಪ್ಪುಗೆ ಕೋಪ ಬಂದರೆ ಹೇಗಿರುತ್ತಿದ್ದರು ಅನ್ನೋದನ್ನ ಅವರ ಆತ್ಮೀಯರೇ ಹೇಳಿದ್ದಾರೆ.
ಪವರ್ ಸ್ಟಾರ್ ಎಂದು ಬಿರುದು ಪಡೆದು, ಕುಟುಂಬ ಸಮೇತ ಕಣ್ತುಂಬಿಕೊಳ್ಳುವ ಸಿನಿಮಾ ನೀಡುತ್ತಿದ್ದ ಪುನೀತ್ ರಾಜ್‌ಕುಮಾರ್ ಅಂದ್ರೆ ಎಲ್ಲರಿಗು ಪ್ರೀತಿ. ಕೋಟಿ ಕೋಟಿ ಕನ್ನಡಿಗರು ಅಪ್ಪುಗೆ ಫ್ಯಾನ್ ಆಗಿದ್ದರು. ಕನ್ನಡಿಗರು ಮಾತ್ರವಲ್ಲ ದೇಶದ ವಿವಿಧ ರಾಜ್ಯದಲ್ಲೂ ನಮ್ಮ ನೆಲದ ನಟನಿಗೆ ಪ್ರಾಣ ಕೊಡುವ ಅಭಿಮಾನಿಗಳು ಇದ್ದಾರೆ. ಹೀಗೆ ಎಲ್ಲರ ಮನಸ್ಸು ಗೆದ್ದು ಬೀಗಿದ್ದ ಪುನೀತ್ ರಾಜ್‌ಕುಮಾರ್ ಕೋಪ ಮಾಡಿಕೊಂಡರೆ ಹೇಗಿರುತ್ತಿದ್ರು? ಅಪ್ಪುಗೆ ಸಿಟ್ಟು ಬಂದ್ರೆ ಏನ್ ಮಾಡ್ತಿದ್ರು? ಅದರ ಪೂರ್ಣ ಮಾಹಿತಿ ಇಲ್ಲಿ ತಿಳಿಯೋಣ, ಮುಂದೆ ಓದಿ.

ಹಂಗಿದ್ದ ಮನುಷ್ಯ ಹಿಂಗಾಗಿದ್ದು ಯಾವಾಗ?
ಅಂದಹಾಗೆ ಅಪ್ಪು ಅಂದರೆ ಪುನೀತ್ ರಾಜ್‌ಕುಮಾರ್ ಅವರಿಗೆ ಕೋಪ ಬರೋದೆ ಇಲ್ಲವಾ? ಅನ್ನೋ ಪ್ರಶ್ನೆ ಎಲ್ಲರನ್ನೂ ಕಾಡುತ್ತಿತ್ತು. ಎಲ್ಲವನ್ನೂ ಕೂಲ್ ಆಗಿ ನಿಭಾಯಿಸುತ್ತಿದ್ದ ಈ ನಟನನ್ನ ಕಂಡರೆ ಎಲ್ಲರಿಗೂ ಪ್ರೀತಿ. ಆದ್ರೆ ಚಿಕ್ಕ ವಯಸ್ಸಿನಲ್ಲಿ ಅಪ್ಪುಗೆ ಇಷ್ಟು ತಾಳ್ಮೆಯೇ ಇರಲಿಲ್ಲವಂತೆ. ಸಣ್ಣ ವಿಚಾರಕ್ಕೂ ಕೋಪ ಮಾಡಿಕೊಳ್ಳುತ್ತಿದ್ದರು ಪುನೀತ್ ರಾಜ್‌ಕುಮಾರ್ ಅಂತಾ ಡಾ.ರಾಜ್‌ಕುಮಾರ್‌ರ ಕುಟುಂಬಕ್ಕೆ ಹತ್ತಿರವಾಗಿದ್ದ ವ್ಯಕ್ತಿ ಹೇಳಿದ್ದಾರೆ. ಹಾಗಾದರೆ ಚಿಕ್ಕ ವಯಸ್ಸಲ್ಲಿ ಕೋಪ ಬಂದಾಗ ಅಪ್ಪು ಏನ್ ಮಾಡ್ತಿದ್ರು ಗೊತ್ತಾ? ಅಪ್ಪು ಕೋಪದ ಬಗ್ಗೆ ಮಾಹಿತಿ ನೀಡಿದ ಆ ವ್ಯಕ್ತಿ ಯಾರು?
ಊಟ ತಡವಾದರೂ ಬೈಯುತ್ತಿದ್ದರಂತೆ ಅಪ್ಪು!
ಹೌದು, ವರನಟ ರಾಜ್‌ಕುಮಾರ್ ಅವರ ಕುಟಂಬಕ್ಕೆ ಹತ್ತಿರವಾಗಿದ್ದ ಕೆಲವೇ ಕೆಲ ವ್ಯಕ್ತಿಗಳ ಪೈಕಿ ಆದಿತ್ಯ ಚಿಕ್ಕಣ್ಣ ಕೂಡ ಒಬ್ಬರು. ಹಿರಿಯ ವ್ಯಕ್ತಿ ಆದಿತ್ಯ ಚಿಕ್ಕಣ್ಣ ಅಪ್ಪು ಅವರನ್ನು ಮಗುವಾಗಿದ್ದಾಗಲೇ ನೋಡಿದ್ದರು. ಹಾಗೇ ಪುನೀತ್ ರಾಜ್‌ಕುಮಾರ್ ಅವರ ಜೊತೆ ಆದಿತ್ಯ ಚಿಕ್ಕಣ್ಣಗೆ ಉತ್ತಮ ಒಡನಾಟ ಇತ್ತು. ಹೀಗೆ ಅಪ್ಪುರನ್ನ ಚಿಕ್ಕ ವಯಸ್ಸಿನಲ್ಲೇ ನೋಡಿರುವ ಆದಿತ್ಯ ಚಿಕ್ಕಣ್ಣಗೆ ಪುನೀತ್ ಅವರ ಕೋಪ ಏನು ಅನ್ನೋದು ಗೊತ್ತಂತೆ. ಆದಿತ್ಯ ಚಿಕ್ಕಣ್ಣ ನೋಡಿದಂತೆ ಅಪ್ಪು ಚಿಕ್ಕವರಿದ್ದಾಗ ಯಾರಿಗೂ ಕೇರ್ ಮಾಡುತ್ತಿರಲಿಲ್ಲ, ಯಾರಾದರೂ ಅವರಿಗೆ ಕೋಪ ತರಿಸಿದರೆ ಅಲ್ಲೋಲ ಕಲ್ಲೋಲ ಪಕ್ಕಾ! ಊಟ ಬಡಿಸುವುದು ತಡವಾದರೆ ಪುನೀತ್ ಅವರು ಸಿಟ್ಟಾಗುತ್ತಿದ್ದು ಗ್ಯಾರಂಟಿ ಅಂತೆ.
ಹಂಗಿದ್ದ ಮನುಷ್ಯ ಹಿಂಗೆ ಆಗಿದ್ದೇಕೆ?
ಖಾಸಗಿ ಸಂದರ್ಶನದಲ್ಲಿ ಮಾತನಾಡಿ ಅಪ್ಪು ಅವರ ವಿಚಾರ ಹೇಳಿರುವ ಆದಿತ್ಯ ಚಿಕ್ಕಣ್ಣ, ನಮಗೆ ಅಪ್ಪು ಅವರನ್ನ ದೊಡ್ಡವರಾದ ನಂತರ ನೋಡಿದಾಗ ಆಶ್ಚರ್ಯವಾಗಿತ್ತು. ನಾವು ಕುಟುಂಬ ಸಮೇತ ಅವರ ಮನೆಗೆ ಹೋದಾಗ, ಅಪ್ಪು ಅವರ ಸತ್ಕಾರ ನೋಡಿ ಮನಸ್ಸು ತುಂಬಿ ಬಂತು. ಅದರೆ ಚಿಕ್ಕ ವಯಸ್ಸಿನಲ್ಲಿ ಅಷ್ಟು ಕೋಪಿಷ್ಠರಾಗಿದ್ದ ಅಪ್ಪು ಇಷ್ಟೊಂದು ಬದಲಾಗಿದ್ದು ಹೇಗೆ? ಎಂಬ ಪ್ರಶ್ನೆ ನನ್ನನ್ನು ಈಗಲೂ ಕಾಡುತ್ತಿದೆ. ಅದಕ್ಕೆಲ್ಲಾ ವರನಟ ಡಾ.ರಾಜ್‌ಕುಮಾರ್ ಅವರೇ ಕಾರಣ ಇರಬಹುದು ಎಂದಿದ್ದಾರೆ. ಹಾಗಾದರೆ ಡಾ.ರಾಜ್ ಅವರು ಅಪ್ಪು ಅವರ ಬದಲಾವಣೆಗೆ ಹೇಗೆ ಕಾರಣ? ಬನ್ನಿ ತಿಳಿಯೋಣ.

ಅಪ್ಪನ ಹೆಸರನ್ನೂ ಮೀರಿಸಿದ ಅಪ್ಪು!
ಆದಿತ್ಯ ಚಿಕ್ಕಣ್ಣ ಅವರೇ ಹೇಳಿರುವಂತೆ, ಪವರ್ ಸ್ಟಾರ್ ತಮ್ಮ ಸಿಟ್ಟಿನಲ್ಲಿ ಬದಲಾವಣೆಯ ತಂಗಾಳಿ ತರುವುದಕ್ಕೆ ಹಲವು ಕಾರಣ ಇದೆ. ಅದರಲ್ಲಿ ವರನಟ ಡಾ.ರಾಜ್‌ಕುಮಾರ್‌ರ ಪ್ರಭಾವ ಕೂಡ ಇದೆ ಎನ್ನುತ್ತಾರೆ. ತಮ್ಮ ತಂದೆಯ ಜೊತೆ ಬೆರೆಯುವಾಗ ಅಪ್ಪುಗೆ ಸತ್ಯದ ಹಾಗೂ ಪ್ರಪಂಚದ ಅರಿವಾಗಿತ್ತು ಅನಿಸುತ್ತದೆ. ಹೀಗಾಗಿ ಅವರು ಬದಲಾಗುತ್ತಾ ಬಂದರು, ಕೊನೆಗೆ ದೇವರೇ ಆದರು. ಅಪ್ಪು ಅವರು ನಿಜವಾಗಿಯೂ ದೇವತಾ ಮನುಷ್ಯ, ಕೊನೆಗೆ ತಮ್ಮ ತಂದೆಯ ಹೆಸರನ್ನೂ ಮೀರಿಸಿ ಎಲ್ಲರಿಗೂ ಹತ್ತಿರವಾದರು ಎಂದು ದೊಡ್ಮನೆಯ ಆ ದಿನಗಳನ್ನ ಮೆಲುಕು ಹಾಕಿಕೊಂಡಿದ್ದಾರೆ.
ಪನೀತ್ ಸಮಾಧಿ ಈಗ ದೇಗುಲ
ಅಷ್ಟಕ್ಕೂ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಹೆಸರು ಕೇಳುತ್ತಿದ್ದಂತೆ ಕನ್ನಡ ಕುಲಕೋಟಿ ರೋಮಾಂಚನಗೊಳ್ಳುತ್ತದೆ. ಇನ್ನು ದಿವಂಗತ ಪುನೀತ್ ಸಮಾಧಿ ಸ್ಥಳವನ್ನ ದೇಗುಲದಂತೆ ಜನ ಪೂಜೆಸುತ್ತಾರೆ. ಕನ್ನಡಿಗರು ಮಾತ್ರವಲ್ಲ ದೇಶದ ಮೂಲೆ ಮೂಲೆಯಲ್ಲೂ ಅಪ್ಪು ಅಭಿಮಾನಿ ಬಳಗ ಇದೆ. ಕರ್ನಾಟಕ ರತ್ನ ಅಪ್ಪು ಕೋಟ್ಯಂತರ ಅಭಿಮಾನಿಗಳನ್ನ ಅಗಲಿ ಹೋಗಿದ್ದಾರೆ. ಆದರೆ ಅವರು ಮಾಡಿರುವ ಸಮಾಜಮುಖಿ ಕೆಲಸ ಇಂದಿಗೂ ಅವರನ್ನ ಜೀವಂತವಾಗಿ ಇಟ್ಟಿದೆ. ಹೀಗಾಗಿಯೇ ಅಪ್ಪುರ ಸಮಾಧಿ ಸ್ಥಳಕ್ಕೆ ಇಂದಿಗೂ ನಿತ್ಯ ಸಾವಿರಾರು ಫ್ಯಾನ್ಸ್ ಭಕ್ತರಂತೆ ಭೇಟಿ ನೀಡುತ್ತಾರೆ.
ಸಮಾಧಿ ಬಳಿ ಅಭಿಮಾನಿಗಳ ಕಣ್ಣೀರು
ಅಂದಹಾಗೆ ಅಪ್ಪು ನಮ್ಮನ್ನ ಅಗಲಿ ವರ್ಷಗಳೇ ಉರುಳಿದರೂ ನೋವು ಮಾತ್ರ ಮರೆಯಾಗಿಲ್ಲ. ಹೀಗಾಗಿ ಅಭಿಮಾನಿಗಳು ಇಂದಿಗೂ ಅಪ್ಪು ಅವರ ಸಮಾಧಿ ಎದುರಲ್ಲಿ ಕಣ್ಣೀರು ಹಾಕುತ್ತಾರೆ. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಮಾಡುತ್ತಿದ್ದ ಸಮಾಜ ಮುಖಿ ಕೆಲಸ ನೆನೆಯುತ್ತಾರೆ. ಅಪ್ಪು ಕೈಯಿಂದ ಸಹಾಯ ಪಡೆದವರಿಗೆ ಅವರಿಲ್ಲ ಎಂಬ ನೋವು ನಿತ್ಯ ಕಾಡುತ್ತಿದೆ. ಹಾಗೇ ದೂರದ ಊರುಗಳಿಂದ, ರಾಜ್ಯಗಳಿಂದ ಅಪ್ಪು ಅವರ ಸಮಾಧಿಗೆ ನಮಿಸಲು ಜನಸಾಗರ ಹರಿದು ಬರುತ್ತಿದೆ.

ಅಪ್ಪು ನಮ್ಮನ್ನು ಅಗಲಿ 2 ವರ್ಷ
ಅದು 2021ರ ಅಕ್ಟೋಬರ್ 29 ಇಡೀ ರಾಜ್ಯ ಮಾತ್ರವಲ್ಲ ದೇಶವೇ ಕಣ್ಣೀರಿನ ಸಾಗರದಲ್ಲಿ ಮುಳುಗಿತ್ತು. ಪವರ್ ಸ್ಟಾರ್ ನಟ ಪುನೀತ್ ರಾಜ್‌ಕುಮಾರ್ ಅವರು ಇನ್ನಿಲ್ಲವೆಂಬ ಸುದ್ದಿ ಎಲ್ಲರ ಎದೆಯಲ್ಲೂ ಕಿಚ್ಚು ಹೊತ್ತಿಸಿತ್ತು. ಕೋಟ್ಯಂತರ ಅಭಿಮಾನಿಗಳು ನೆಚ್ಚಿನ ನಟನ ಅಂತಿಮ ದರ್ಶನಕ್ಕೆ ಓಡೋಡಿ ಬಂದಿದ್ದರು. ಹೀಗೆ ನಟ ಪುನೀತ್ ದೇವರಾಗಿ ಹೋದರು. ಅಂದಿನಿಂದ ಇಂದಿನ ತನಕ ಎಲ್ಲೆಡೆ ಅಪ್ಪು ಫೋಟೋ ರಾರಾಜಿಸುತ್ತಿದೆ. ಜಾತ್ರೆಯೇ ಇರಲಿ ಅಥವಾ ಪೂಜೆಯೇ ಇರಲಿ ಅಪ್ಪು ಫೋಟೋ ಇದ್ದೇ ಇರುತ್ತದೆ. ಹೀಗೆ ಅಪ್ಪು ಎಲ್ಲರನ್ನೂ ಅಗಲಿ ಇದೇ ಅಕ್ಟೋಬರ್ 29ಕ್ಕೆ 2 ವರ್ಷ ತುಂಬಲಿದೆ.
ಒಟ್ನಲ್ಲಿ ಸಿಟ್ಟು, ಕೋಪ ಎಲ್ಲರಿಗೂ ಇದ್ದಿದ್ದೇ. ಅದ್ರಲ್ಲೂ ಸಣ್ಣ ವಯಸ್ಸಿನಲ್ಲಿ ಈ ಕೋಪ ಇಲ್ಲದೆ ಯಾರೂ ಬೆಳೆದುಬರಲ್ಲ. ಆದ್ರೆ ಜಗತ್ತು ತಿಳಿದ ನಂತರದಲ್ಲಿ ವ್ಯಕ್ತಿ ಬದುಕುವ ರೀತಿ ಅವರ ಜೀವನ ಬದಲಾಯಿಸುತ್ತದೆ. ಇದಕ್ಕೆ ಪವರ್ ಸ್ಟಾರ್ ಪುನೀತ್ ಅವರೇ ಮತ್ತೊಂದು ಸಾಕ್ಷಿ. ದೊಡ್ಮನೆ ದೀಪವಾಗಿದ್ದ ಪುನೀತ್ ರಾಜ್‌ಕುಮಾರ್ ಅಗಲಿಕೆ ಇಂದಿಗೆ ಮಾತ್ರವಲ್ಲ, ಎಂದೆಂದಿಗೂ ಅಭಿಮಾನಿಗಳನ್ನು ಕಾಡುತ್ತದೆ. ಆದರೂ ಅಪ್ಪು ಮಾಡಿದ ಸಮಾಜುಮುಖಿ ಕಾರ್ಯಗಳು ಅಭಿಮಾನಿಗಳ ಎದೆಯಲ್ಲಿ ಹೆಮ್ಮೆ ಮೂಡಿಸುತ್ತದೆ.
-
ಸೋಷಿಯಲ್ ಮೀಡಿಯಾದಲ್ಲಿ ನಕಲಿ ಖಾತೆ ತೆರೆದು ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಅಶ್ಲೀಲ ಸಂದೇಶ: 473 ಪುಟಗಳ ಚಾರ್ಜ್ಶೀಟ್ ಸಲ್ಲಿಕೆ -
Gold: ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರದ ನಿಧಿ ಮೌಲ್ಯ 8 ಕೋಟಿ ರೂ.; ನಿಧಿ ಕೊಟ್ಟ ಕುಟುಂಬದಿಂದ ಹೊಸ ಡಿಮ್ಯಾಂಡ್, ಉತ್ಖನನ ಅಂತ್ಯ -
Gas Bill: ಇಡ್ಲಿ-ವಡೆ ಜೊತೆಗೆ ಗ್ಯಾಸ್ ಶುಲ್ಕ ವಿಧಿಸಿದ ರೆಸ್ಟೋರೆಂಟ್!: ದಂಗಾದ ಗ್ರಾಹಕರು, ಇಲ್ಲಿವೆ ನೋಡಿ ದರಗಳು -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
Rashmika Mandanna: ಆ ಆಡಿಯೋ, ವಿಷಯವನ್ನ 24 ಗಂಟೆಯೊಳಗೆ ಡಿಲೀಟ್ ಮಾಡದಿದ್ದರೆ ಕಾನೂನು ಕ್ರಮ ಎಂದ ರಶ್ಮಿಕಾ ಮಂದಣ್ಣ












Click it and Unblock the Notifications