ಯುವ ರಾಜ್‌ಕುಮಾರ್ ಬಗ್ಗೆ ಪತ್ನಿ ಶ್ರೀದೇವಿ ಹೇಳಿದ್ದು ಏನು?

ಯುವ ರಾಜ್‌ಕುಮಾರ್ & ಶ್ರೀದೇವಿ ಭೈರಪ್ಪ ಅವರ ಡಿವೋರ್ಸ್ ವಿಚಾರ ಈಗ ದೇಶಾದ್ಯಂತ ಸದ್ದು ಮಾಡುತ್ತಿದ್ದು. ಇದೇ ಸಮಯದಲ್ಲಿ ಇಬ್ಬರ ನಡುವೆ ಸಂಧಾನ ನಡೆಸುವ ಪ್ರಯತ್ನ ಕೂಡ ನಡೆಯುತ್ತಿದೆ. ಹೀಗಿದ್ದಾಗಲೇ ಈ ವಿಚಾರದ ಬಗ್ಗೆ ಯುವ ರಾಜ್‌ಕುಮಾರ್ ಅವರ ಪತ್ನಿ ಶ್ರೀದೇವಿ ಭೈರಪ್ಪ ಮಹತ್ವದ ಹೇಳಿಕೆ ನೀಡಿದ್ದಾರೆ.

ದೊಡ್ಮನೆ ಮೊಮ್ಮಗನ ಮದುವೆ ಅದ್ಧೂರಿಯಾಗಿ ಬೆಂಗಳೂರಿನಲ್ಲಿ ನೆರವೇರಿಸಿತ್ತು ಕುಟುಂಬ. ಅಷ್ಟಕ್ಕೂ ಯುವ ರಾಜ್‌ಕುಮಾರ್ & ಶ್ರೀದೇವಿ ಅವರು 2018ರ ಜುಲೈ 5 ರಂದು ಮೈಸೂರಿನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ರು. ಹಾಗೇ 2019ರ ಮೇ 26 ರಂದು ಯುವ ರಾಜ್‌ಕುಮಾರ್​ ಮತ್ತು ಶ್ರೀದೇವಿ ಭೈರಪ್ಪ ಅವರ ಮದುವೆ ಆಗಿತ್ತು. ರಾಜಧಾನಿ ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್‌ನಲ್ಲಿ, ಅದ್ಧೂರಿಯಾಗಿ ಯುವ ರಾಜ್‌ಕುಮಾರ್ & ಶ್ರೀದೇವಿ ಅವರ ಮದುವೆ ಸಮಾರಂಭ ನಡೆದಿತ್ತು. ಹೀಗಿದ್ದಾಗ ದಿಢೀರ್, ಇಬ್ಬರು ಬೇರೆ ಆಗುತ್ತಿದ್ದಾರೆ ಎಂಬ ಸುದ್ದಿ ಅಭಿಮಾನಿಗಳಿಗೆ ಆಘಾತ ನೀಡಿದೆ. ಈಗ ಈ ಬಗ್ಗೆ ಯುವ ರಾಜ್‌ಕುಮಾರ್ ಅವರ ಪತ್ನಿ ಶ್ರೀದೇವಿ ಭೈರಪ್ಪ ಮಹತ್ವದ ಹೇಳಿಕೆ ಕೊಟ್ಟಿದ್ದಾರೆ.

Discover What Sridevi Byrappa Said About Yuva Rajkumar Divorce

'ನಾನು ಬೇರೇನೂ ಮಾತನಾಡುವ...'

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶ್ರೀದೇವಿ ಭೈರಪ್ಪ, 'ವಿಷಯ ಏನೆಂದು ಚಿತ್ರರಂಗ ಹಾಗೂ ಮಾಧ್ಯಮದಲ್ಲಿ ಅನೇಕರಿಗೆ ತಿಳಿದಿದೆ. ನಾನು ಈಗಾಗಲೇ legal ನೋಟಿಸ್‌ಗೆ ಉತ್ತರಿಸಿದ್ದೇನೆ. ವಿಚ್ಛೇದನದ ಅರ್ಜಿಯು ಇನ್ನೂ ನನಗೆ ತಲುಪಿಲ್ಲ, ಸಿಕ್ಕಾಗ ನ್ಯಾಯಾಲಯಕ್ಕೆ ಉತ್ತರಿಸುತ್ತೇನೆ. ಸದ್ಯಕ್ಕೆ ನಾನು ಬೇರೇನೂ ಮಾತನಾಡುವ ಮಾನಸಿಕ ಪರಿಸ್ಥಿತಿಯಲ್ಲಿ ಇಲ್ಲ.' ಎಂದಿದ್ದಾರೆ. ಈ ಮೂಲಕ ಯುವರಾಜ್ ಅವರ ಪತ್ನಿಯಿಂದ ಮೊದಲ ಬಾರಿಗೆ ಪ್ರತಿಕ್ರಿಯೆ ಸಿಕ್ಕಂತಾಗಿದೆ.

5 ವರ್ಷದಲ್ಲಿ ಬಿರುಕು ಯಾಕೆ?

ಇಡೀ ರಾಜ್ಯವೇ ತಿರುಗಿ ನೋಡುವಂತೆ ಮ್ಯಾರೇಜ್ ಆಗಿದ್ದ, ಯುವ ರಾಜ್‌ಕುಮಾರ್ ಅವರ ಬಾಳಲ್ಲಿ ಕೇವಲ 5 ವರ್ಷ ಕಳೆಯುವ ಒಳಗೆ ಬಿರುಗಾಳಿ ಎದ್ದಿದೆ. ಈ ಸಮಯದಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಯುವ ರಾಜ್ ವಿಚಾರದ ಬಗ್ಗೆ ಚರ್ಚಿಸುತ್ತಿದ್ದಾರೆ. ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವ್ರು ಯುವ ರಾಜ್‌ಕುಮಾರ್ ಸಂಸಾರ ಸರಿ ಮಾಡ್ತಾರಾ? ಡಿವೋರ್ಸ್ ನಿರ್ಧಾರದಿಂದ ಯುವ ರಾಜ್‌ಕುಮಾರ್ ಹಿಂದೆ ಸರಿಯುತ್ತಾರಾ? ಎಂಬ ಪ್ರಶ್ನೆ ಅಭಿಮಾನಿಗಳನ್ನ ಇದೀಗ ಕಾಡುತ್ತಿದೆ.

ಯುವ ಬಗ್ಗೆ ಶಿವರಾಜ್‌ಕುಮಾರ್ ಅವರು...

ಅಂದಹಾಗೆ ಯುವ ರಾಜ್‌ಕುಮಾರ್ ಅವರ ವಿಚ್ಛೇದನ ಅಂದ್ರೆ ಡಿವೋರ್ಸ್ ಸುದ್ದಿ ಕುರಿತಾಗಿ ಮಾತನಾಡಿರುವ ನಟ ಶಿವರಾಜ್‌ಕುಮಾರ್ ಅವರು, ಯುವ ರಾಜ್‌ಕುಮಾರ್​ ಮತ್ತು ಶ್ರೀದೇವಿ ಅವರ ವಿಚ್ಛೇದನದ ಕುರಿತು ಈವರೆಗೆ ಯಾವುದೇ ಮಾಹಿತಿ ಇಲ್ಲ ಎಂದಿದ್ದಾರೆ ಶಿವಣ್ಣ. ಹಾಗೇ ಮಾಹಿತಿ ಇಲ್ಲದೆ ಮಾತನಾಡುವುದು ಸರಿ ಅಲ್ಲ ಈ ಬಗ್ಗೆ ಮೊಬೈಲ್‌ನಲ್ಲಿ ತಿಳಿದುಕೊಂಡೆ. ಹೀಗೆ ಏನಾದರೂ ಆಗಿದ್ದರೆ ನನ್ನ ಮನಸ್ಸಿಗೆ ಬೇಜಾರಾಗುತ್ತೆ ಎಂದಿದ್ದಾರೆ ನಟ ಶಿವಣ್ಣ.

ಡಾ. ರಾಜ್ ಕುಟುಂಬದಲ್ಲಿ ಮೌನ

ಯುವ ರಾಜ್‌ಕುಮಾರ್ ಮತ್ತು ಶ್ರೀದೇವಿ ಭೈರಪ್ಪ ಅವರ ವಿಚ್ಛೇದನ ವಿಚಾರ ಈಗ ಎಲ್ಲೆಲ್ಲೂ ಸಂಚಲನ ಎಬ್ಬಿಸಿದೆ. ಅದರಲ್ಲೂ ಡಾ. ರಾಜ್‌ಕುಮಾರ್ ಅವರ ಕುಟುಂಬದಲ್ಲಿ ಈ ಕುರಿತು ಮೌನ ಆವರಿಸಿದೆ. ಅಭಿಮಾನಿಗಳು ಕೂಡ ಈ ಸುದ್ದಿ ಕೇಳಿ ನೋವು ಪಟ್ಟಿದ್ದಾರೆ. ಹೀಗಾಗಿ ಈ ಘಟನೆಗಳಿಗೆ ಆದಷ್ಟು ಬೇಗ ಬ್ರೇಕ್ ಬೀಳಬೇಕು, ನಾವು ಕೇಳಿದ ಸುದ್ದಿ ಸುಳ್ಳಾಗಲಿ ಅಂತಾ ಅಭಿಮಾನಿಗಳು ಪ್ರಾರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಈ ಬೆನ್ನಲ್ಲೇ ದೊಡ್ಮನೆ ಹಿರಿಯರು, ಈ ವಿಚಾರವನ್ನ ಗಂಭೀರವಾಗಿ ಪರಿಗಣನೆಗೆ ತೆಗೆದುಕೊಂಡು ಸಮಸ್ಯೆ ಸರಿ ಮಾಡೋದಕ್ಕೆ ಪ್ರಯತ್ನ ಮಾಡುತ್ತಿದ್ದಾರೆ. ಈಗಲಾದರೂ ಈ ಸಮಸ್ಯೆ ಸರಿ ಆಗುತ್ತಾ? ಅಥವಾ ಮತ್ತಷ್ಟು ಜಟಿಲವಾಗಿ ಮುಂದುವರಿಯುತ್ತಾ? ಅನ್ನೋದನ್ನ ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+