Rajkumar: ಡಾ.ರಾಜ್‌ಕುಮಾರ್ ಯೋಗ ಮಾಡುವಾಗ 22 ಅಡಿ ಉದ್ದದ ಬಟ್ಟೆ ನುಂಗಿದ್ದು ಏಕೆ?
ವರನಟ ಡಾ.ರಾಜ್‌ಕುಮಾರ್ ಹೆಸರು ಕೇಳುತ್ತಿದ್ದಂತೆ ಭಾರತೀಯ ಚಿತ್ರರಂಗ ಎದ್ದು ನಿಂತು ಗೌರವಿಸುತ್ತೆ. ಸಾಂಪ್ರದಾಯಿಕ ಶಿಕ್ಷಣ ವ್ಯವಸ್ಥೆಯಿಂದ ವಂಚಿರಾದರೂ ಡಾ.ರಾಜ್‌ಕುಮಾರ್ ಎಲ್ಲರಿಗೂ ಮಾದರಿಯಾದರು. ಇಂಗ್ಲಿಷ್‌ಗೂ ಸೈ, ಕನ್ನಡಕ್ಕೆ ಜೈ ಎಂದು ಕನ್ನಡ ಚಿತ್ರರಂಗ & ಕನ್ನಡ ಭಾಷೆಯ ಉಳಿವಿಗಾಗಿ ಹೋರಾಡಿದವರು. ಹೀಗೆ ಡಾ.ರಾಜ್ ಅವರ ಹೆಸರಿನಲ್ಲೇ ಯೋಗ ಬೆರೆತು ಹೋಗಿದ್ದು, ಅವರ ಯೋಗ ಕಲೆಯ ರಹಸ್ಯ ಇದೀಗ ರಿವೀಲ್ ಆಗಿದೆ.
ಕನ್ನಡ ಚಿತ್ರರಂಗದಲ್ಲಿ ಜಿಮ್ ಮಾಡದೆ, ಅಚ್ಚುಕಟ್ಟಾಗಿ ಮೈಕಟ್ಟು ಬೆಳೆಸಿದ್ದ ಏಕೈಕ ನಟ ಡಾ.ರಾಜ್‌ಕುಮಾರ್. ಅದ್ರಲ್ಲೂ ತಮ್ಮ ಅಂತ್ಯಕಾಲದ ತನಕ ದೇಹವನ್ನ ಒಂದೇ ಥರವಾಗಿ ಇಟ್ಟುಕೊಂಡು ಜೀವನದಲ್ಲಿ ಶಿಸ್ತು ಪಾಲಿಸಿದ್ದರು. ಹೀಗಿದ್ದ ಡಾ.ರಾಜ್ ಅವರಿಗೆ ಆರೋಗ್ಯ ಕಾಪಾಡಿಕೊಳ್ಳಲು ಸಹಾಯ ಮಾಡಿದ್ದೇ ಯೋಗ ಕಲೆ. ಯೋಗದಲ್ಲಿ ಶ್ರದ್ಧೆ ಮತ್ತು ವಿನಯ ಹೊಂದಿದ್ದ ವರನಟ ರಾಜ್‌ಕುಮಾರ್, ಕಾಮನಬಿಲ್ಲು ಚಿತ್ರದಲ್ಲಿ ತಮ್ಮ ಯೋಗ ಶಿಕ್ಷಣದ ಝಲಕ್ ತೋರಿಸಿದ್ದಾರೆ. ಇದೀಗ ಡಾ.ರಾಜ್ ಕುಟುಂಬಕ್ಕೆ ಹತ್ತಿರವಾಗಿದ್ದ ವ್ಯಕ್ತಿ ವರನಟನ ಯೋಗದ ಬಗ್ಗೆ ರಹಸ್ಯ ಹೊರಹಾಕಿದ್ದಾರೆ.

22 ಅಡಿ ಉದ್ದದ ಬಟ್ಟೆ ನುಂಗುತ್ತಿದ್ದರು!
ಹೌದು, ಇದು ತಮಾಷೆ ಅಲ್ಲ ಸತ್ಯ. ಡಾ.ರಾಜ್‌ಕುಮಾರ್ ಯೋಗ ವಿದ್ಯೆಯಲ್ಲಿ ಬಹುತೇಕ ಎಲ್ಲಾ ಆಸನಗಳನ್ನ ಕಲಿತಿದ್ದರು, ಅದನ್ನು ಕರಗತ ಮಾಡಿಕೊಂಡಿದ್ದರು. ಹೀಗೆ ಡಾ.ರಾಜ್ ಅವರು ತಮ್ಮ ಯೋಗ ವಿದ್ಯೆಯಲ್ಲಿ ಅನೇಕ ರೀತಿಯ ಆಸನಗಳನ್ನ ಸುಲಭವಾಗಿ ಹಾಕುತ್ತಾ ಸೈ ಎನಿಸಿಕೊಂಡಿದ್ದರು. ತಮ್ಮ ಯೋಗ ಪ್ರಕ್ರಿಯೆ ಭಾಗವಾಗಿ ನಟ ರಾಜ್‌ಕುಮಾರ್ ಅವರು 22 ಅಡಿ ಉದ್ದದ ಬಿಳಿ ಬಟ್ಟೆಯನ್ನ ನೀರಿನ ಜೊತೆಗೆ ನುಂಗುತ್ತಿದ್ದರಂತೆ. ಅರೆರೆ ಅದು ಹೇಗೆ ಸಾಧ್ಯ? ಅಂದ್ರಾ, ಹಾಗಾದರೆ ಅದರ ಪೂರ್ತಿ ಮಾಹಿತಿ ಇಲ್ಲಿ ತಿಳಿಯೋಣ ಮುಂದೆ ಓದಿ.
ಡಾ.ರಾಜ್ ಬಟ್ಟೆ ನುಂಗುತ್ತಿದ್ದುದು ಏಕೆ?
ಯೋಗ ಸಾವಿರಾರು ವರ್ಷ ಇತಿಹಾಸ ಇರುವ ಕಲೆ, ಈ ಕಲೆ ಭಾರತದ ಹೆಮ್ಮೆ. ಅದ್ರಲ್ಲೂ ನಮ್ಮ ನಾಡಿನ ಹೆಮ್ಮೆ ಹಾಗೂ ಕನ್ನಡ ಚಿತ್ರರಂಗದ ವರನಟ ಡಾ.ರಾಜ್‌ಕುಮಾರ್ ಯೋಗ ಕಲೆ ಮೂಲಕ ಕನ್ನಡ ಸಿನಿ ರಂಗದ ಕೀರ್ತಿ ಪತಾಕೆಯನ್ನ ಇನ್ನಷ್ಟು ಎತ್ತರಕ್ಕೆ ಏರಿಸಿದ್ದರು. ಹೀಗೆ ತಮ್ಮ ಯೋಗಾಭ್ಯಾಸದ ಭಾಗವಾಗಿ 22 ಅಡಿ ಉದ್ದದ ಬಟ್ಟೆ ನುಂಗುತ್ತಿದ್ದರಂತೆ ನಟ ರಾಜ್‌ಕುಮಾರ್. ಈ ವಿಚಾರನ ವರನಟ ರಾಜ್‌ಕುಮಾರ್ ಕುಟಂಬಕ್ಕೆ ಹತ್ತಿರವಾಗಿದ್ದ ಆದಿತ್ಯ ಚಿಕ್ಕಣ್ಣ ಅವರೇ ಹೊರ ಹಾಕಿದ್ದಾರೆ.

ಬಟ್ಟೆ ನುಂಗಿ ಹೊರಗೆ ತೆಗೆಯುತ್ತಿದ್ದರು
ಡಾ.ರಾಜ್‌ಕುಮಾರ್‌ರ ಸಿನಿಮಾ & ಬದುಕಿನ ಜೊತೆಗೆ ಆದಿತ್ಯ ಚಿಕ್ಕಣ್ಣ ಬೆಳೆದು ಬಂದಿದ್ದರು. ಹೀಗಾಗಿ ಅಭಿಮಾನಿಗಳ ಪ್ರೀತಿಯ ನಟ ಅಣ್ಣಾವ್ರ ಬಗ್ಗೆ ಆದಿತ್ಯ ಚಿಕ್ಕಣ್ಣ ಹೆಚ್ಚಿನ ಮಾಹಿತಿ ಹೊಂದಿದ್ದಾರೆ. ಇವರೇ ಹೇಳಿರುವಂತೆ ಡಾ.ರಾಜ್ ತಮ್ಮ ಯೋಗ ಅಭ್ಯಾಸದ ಭಾಗವಾಗಿ 22 ಅಡಿ ಉದ್ದದ ಬಟ್ಟೆ ನುಂಗುತ್ತಿದ್ದರಂತೆ. ಇದಕ್ಕೆ ಪ್ರಮುಖ ಕಾರಣ ಉದರ ಸ್ವಚ್ಛತೆ. ಈ ಕ್ರಿಯೆಯನ್ನ ಭಾರತದ ಋಷಿ, ಮುನಿಗಳು ಹಾಗೂ ಯೋಗ ಗುರುಗಳು ಮಾಡುತ್ತಿದ್ದರು. ಈ ಪ್ರಕ್ರಿಯೆ ಕಷ್ಟದ್ದಾದರೂ ಡಾ.ರಾಜ್‌ಕುಮಾರ್ ಅಚ್ಚುಕಟ್ಟಾಗಿ ಮಾಡುತ್ತಿದ್ರು ಅಂತಾ ಆದಿತ್ಯ ಚಿಕ್ಕಣ್ಣ ಮಾಹಿತಿ ನೀಡಿದ್ದಾರೆ. ಹಾಗೇ ನುಂಗಿದ ಬಟ್ಟೆಯನ್ನು ಹೊರಗೆ ತೆಗೆಯುತ್ತಿದ್ದರಂತೆ ಡಾ.ರಾಜ್.
ಯೋಗ ಎಂದರೆ ವರನಟನಿಗೆ ಶಿಸ್ತು
ನಟನೆ ಮಾತ್ರವಲ್ಲ, ತಮ್ಮ ಜೀವನದ ಉದ್ದಕ್ಕೂ ಕನ್ನಡ ಭಾಷೆಯ ಉಳಿವಿಗೆ ಡಾ.ರಾಜ್ ಹೋರಾಡಿದ್ದರು. ಅದರಲ್ಲೂ ಗೋಕಾಕ್ ಚಳುವಳಿಗೆ ರಾಜ್ ಎಂಟ್ರಿ ಕೊಡದೇ ಇದ್ದಿದ್ದರೆ, ಇವತ್ತಿಗೆ ಕನ್ನಡ ಶಾಲೆಗಳು ನಾಶವಾಗಿ ಹೋಗುತ್ತಿದ್ದವು ಎಂಬ ಮಾತಿದೆ. ಅಷ್ಟ್ರಮಟ್ಟಿಗೆ ಈ ನಟ ಕನ್ನಡ ಭಾಷೆಯನ್ನ ಗೌರವಿಸಿದ್ದರು. ಗೋಕಾಕ್ ಚಳುವಳಿ ನಡೆದ ಕಾರಣಕ್ಕೆ ಅಂದಿನ ಸರ್ಕಾರ ಕನ್ನಡ ಕಡ್ಡಾಯಕ್ಕೆ ಮನಸ್ಸು ಮಾಡಿತ್ತು. ಇಲ್ಲವಾದಲ್ಲಿ ಕರ್ನಾಟಕದಲ್ಲಿ ಕನ್ನಡ ಮಾತನಾಡುವವರು ಮತ್ತಷ್ಟು ತಬ್ಬಲಿ ಭಾವ ಅನುಭವಿಸುತ್ತಿದ್ದರೋ ಏನೋ ಗೊತ್ತಿಲ್ಲ. ಹೀಗೆ ನಟನೆ, ಚಳುವಳಿ ಎಲ್ಲದರಲ್ಲೂ ಮುಂದಿದ್ದ ಡಾ.ರಾಜ್ ಯೋಗದಲ್ಲಿ ತಮ್ಮ ಶ್ರದ್ಧೆ ಮತ್ತು ಶಿಸ್ತನ್ನು ಕೊನೆಯವರೆಗೂ ಮುಂದುವರಿಸಿಕೊಂಡು ಬಂದರು.

ಅಪ್ಪು ಬಗ್ಗೆಯೂ ಹೇಳಿದ್ದ ಆದಿತ್ಯ ಚಿಕ್ಕಣ್ಣ
ಖಾಸಗಿ ಸಂದರ್ಶನದಲ್ಲಿ ಅಪ್ಪು ಅವರ ವಿಚಾರ ಬಗ್ಗೆಯೂ ಆದಿತ್ಯ ಚಿಕ್ಕಣ್ಣ ಮಾತನಾಡಿದ್ರು. ಅಪ್ಪು ಅವರನ್ನ ದೊಡ್ಡವರಾದ ನಂತರ ನೋಡಿದಾಗ ಆಶ್ಚರ್ಯವಾಗಿತ್ತು. ನಾವು ಕುಟುಂಬ ಸಮೇತ ಅವರ ಮನೆಗೆ ಹೋದಾಗ, ಅಪ್ಪು ಅವರ ಸತ್ಕಾರ ನೋಡಿ ಮನಸ್ಸು ತುಂಬಿ ಬಂತು. ಅದರೆ ಚಿಕ್ಕ ವಯಸ್ಸಿನಲ್ಲಿ ಅಷ್ಟು ಕೋಪಿಷ್ಠರಾಗಿದ್ದ ಅಪ್ಪು ಇಷ್ಟೊಂದು ಬದಲಾಗಿದ್ದು ಹೇಗೆ? ಎಂಬ ಪ್ರಶ್ನೆ ನನ್ನನ್ನು ಈಗಲೂ ಕಾಡುತ್ತಿದೆ. ಅದಕ್ಕೆಲ್ಲಾ ವರನಟ ಡಾ.ರಾಜ್‌ಕುಮಾರ್ ಅವರೇ ಕಾರಣ ಇರಬಹುದು ಎಂದಿದ್ದರು. ಈ ಮೂಲಕ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ತಮ್ಮ ಚಿಕ್ಕ ವಯಸ್ಸಿನಲ್ಲಿ ಹೇಗೆ ಕೋಪ ಮಾಡಿಕೊಳ್ಳುತ್ತಿದ್ದರು ಎಂಬುದನ್ನ ಹೇಳಿದ್ದರು.
ಅಪ್ಪು ಬದಲಾವಣೆಗೆ ಡಾ.ರಾಜ್ ಕಾರಣ?
ಆದಿತ್ಯ ಚಿಕ್ಕಣ್ಣ ಅವರೇ ಹೇಳಿದ್ದಂತೆ, ಪವರ್ ಸ್ಟಾರ್ ತಮ್ಮ ಸಿಟ್ಟಿನಲ್ಲಿ ಬದಲಾವಣೆ ತಂಗಾಳಿ ತರುವುದಕ್ಕೆ ಹಲವು ಕಾರಣ ಇದೆ. ಅದರಲ್ಲಿ ವರನಟ ಡಾ.ರಾಜ್‌ಕುಮಾರ್‌ರ ಪ್ರಭಾವ ಕೂಡ ಇದೆ ಎನ್ನುತ್ತಾರೆ. ತಮ್ಮ ತಂದೆಯ ಜೊತೆ ಬೆರೆಯುವಾಗ ಅಪ್ಪುಗೆ ಸತ್ಯದ ಹಾಗೂ ಪ್ರಪಂಚದ ಅರಿವಾಗಿತ್ತು ಅನಿಸುತ್ತೆ. ಹೀಗಾಗಿ ಅವರು ಬದಲಾಗುತ್ತಾ ಬಂದರು ಕೊನೆಗೆ ದೇವರೇ ಆದರು. ಅಪ್ಪು ಅವರು ನಿಜವಾಗಿ ದೇವತಾ ಮನುಷ್ಯ, ಕೊನೆಗೆ ತಮ್ಮ ತಂದೆಯ ಹೆಸರನ್ನೂ ಮೀರಿಸಿ ಎಲ್ಲರಿಗೂ ಹತ್ತಿರವಾದರು ಎಂದು ದೊಡ್ಮನೆಯ ಆ ದಿನಗಳನ್ನ ಮೆಲುಕು ಹಾಕಿಕೊಂಡಿದ್ದಾರೆ. ಇದರ ಜೊತೆಗೆ ಡಾ.ರಾಜ್‌ಕುಮಾರ್ ಅವರ ಯೋಗದ ರಹಸ್ಯ ರಿವೀಲ್ ಮಾಡಿದ್ದಾರೆ.

ಅಭಿಮಾನಿಗಳ ಪಾಲಿನ ದೇವರು ಅಪ್ಪು
ಅಷ್ಟಕ್ಕೂ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಹೆಸರು ಕೇಳುತ್ತಿದ್ದಂತೆ ಕನ್ನಡ ಕುಲಕೋಟಿ ರೋಮಾಂಚನಗೊಳ್ಳುತ್ತದೆ. ಇನ್ನು ದಿವಂಗತ ಪುನೀತ್ ಸಮಾಧಿ ಸ್ಥಳವನ್ನ ದೇಗುಲದಂತೆ ಜನ ಪೂಜೆಸುತ್ತಾರೆ. ಕನ್ನಡಿಗರು ಮಾತ್ರವಲ್ಲ ದೇಶದ ಮೂಲೆ ಮೂಲೆಯಲ್ಲೂ ಅಪ್ಪು ಅಭಿಮಾನಿ ಬಳಗ ಇದೆ. ಕರ್ನಾಟಕ ರತ್ನ ಅಪ್ಪು ಕೋಟ್ಯಂತರ ಅಭಿಮಾನಿಗಳನ್ನ ಅಗಲಿ ಹೋಗಿದ್ದಾರೆ. ಆದರೆ ಅವರು ಮಾಡಿರುವ ಸಮಾಜಮುಖಿ ಕೆಲಸ ಇಂದಿಗೂ ಅವರನ್ನ ಜೀವಂತವಾಗಿ ಇಟ್ಟಿದೆ. ಹೀಗಾಗಿಯೇ ಅಪ್ಪುರ ಸಮಾಧಿ ಸ್ಥಳಕ್ಕೆ ಇಂದಿಗೂ ನಿತ್ಯ ಸಾವಿರಾರು ಫ್ಯಾನ್ಸ್ ಭಕ್ತರಂತೆ ಭೇಟಿ ನೀಡುತ್ತಾರೆ. ಪುನೀತ್ ಅವರ ಸಮಾಧಿ ಪಕ್ಕದಲ್ಲೇ ಡಾ.ರಾಜ್‌ಕುಮಾರ್ ಅವರ ಸಮಾಧಿ ಕೂಡ ಇದೆ.
-
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ












Click it and Unblock the Notifications