ಚಿಕ್ಕಣ್ಣ ತುತ್ತು ಅನ್ನಕ್ಕೂ ಕಷ್ಟಪಟ್ಟು, ಈಗ ಕೋಟಿ ಕೋಟಿ ಗಳಿಸುತ್ತಿದ್ದಾರೆ?

ನಟ ಚಿಕ್ಕಣ್ಣ ಫುಲ್ ಟೈಂ ಹೀರೋ ಆಗಿ ಮಿಂಚುತ್ತಿದ್ದಾರೆ, ಚಿಕ್ಕಣ್ಣ ಹೀರೋ ಆಗಿ ಅಭಿನಯ ಮಾಡಿರುವ ಮೊದಲ ಸಿನಿಮಾ 'ಉಪಾಧ್ಯಕ್ಷ' ಕೋಟಿ ಕೋಟಿ ರೂಪಾಯಿ ಲೂಟಿ ಮಾಡಿದೆ. ಹಾಗಾದರೆ ಈ ಸಿನಿಮಾಗೆ ನಟ ಚಿಕ್ಕಣ್ಣ ಸಂಭಾವನೆ ರೂಪದಲ್ಲಿ ಎಷ್ಟು ಹಣ ಪಡೆದಿದ್ದಾರೆ? ಗೊತ್ತಾ, ಆ ಬಗ್ಗೆ ಸ್ವತಃ ನಿರ್ಮಾಪಕ ಉಮಾಪತಿ ಅವರೇ ಮಾತನಾಡಿದ್ದಾರೆ. ಹಾಗಾದರೆ, ಚಿಕ್ಕಣ್ಣಗೆ ಉಪಾಧ್ಯಕ್ಷ ಸಿನಿಮಾಗಾಗಿ ಕೊಟ್ಟಿದ್ದ ಹಣ ಎಷ್ಟು ಕೋಟಿ ರೂಪಾಯಿ? ಮುಂದೆ ಓದಿ.

ಚಿಕ್ಕಣ್ಣ ಹೀರೋ ಆಗಿ ಮಿಂಚುತ್ತಿದ್ದಾರೆ. 'ಉಪಾಧ್ಯಕ್ಷ' ಸಿನಿಮಾ ಮೂಲಕ ಚಿಕ್ಕಣ್ಣಗೆ ಹುರುಪು ಸಿಕ್ಕಿದೆ. ಚಿಕ್ಕಣ್ಣನ ಮೊದಲ ಸಿನಿಮಾ 'ಉಪಾಧ್ಯಕ್ಷ' ಬಿಡುಗಡೆಯಾಗಿ 3 ವಾರಕ್ಕೆ ಸುಮಾರು 10 ಕೋಟಿಗೂ ಹೆಚ್ಚು ಗಳಿಸಿದೆ ಎಂಬ ಸುದ್ದಿ ಓಡಾಡುತ್ತಿದೆ. ಹೀಗೆ 10 ಕೋಟಿ ರೂಪಾಯಿಗೂ ಹೆಚ್ಚು ಗಳಿಸಿರುವ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಓಡಾಡುತ್ತಿದೆ. ಆದರೆ ಈ ಕುರಿತು ಅಧಿಕೃತ ಮಾಹಿತಿ ಹೊರಬಿದ್ದಿಲ್ಲ ಸೋಷಿಯಲ್ ಮೀಡಿಯಾದಲ್ಲಿ ಉಪಾಧ್ಯಕ್ಷ ಸಿನಿಮಾ ಎಷ್ಟು ಗಳಿಸಿದೆ? ಎಂಬುದರ ಬಗ್ಗೆ ಚರ್ಚೆ ಜೋರಾಗಿದೆ. ಇದೇ ಸಮಯದಲ್ಲಿ ಚಿಕ್ಕಣ್ಣಗೆ ಎಷ್ಟು ಕೋಟಿ ರೂಪಾಯಿ ಕೊಟ್ಟಿದ್ದಾರಂತೆ ಗೊತ್ತಾ?

Discover How Much Remuneration Actor Chikkanna Got For Kannada Movie Upadhyaksha

ಚಿಕ್ಕಣ್ಣಗೆ ಹಣವನ್ನೇ ಕೊಟ್ಟಿಲ್ಲವಂತೆ!

ಹೌದು, ಇದೀಗ ನಿರ್ಮಾಪಕ ಉಮಾಪತಿ ಅವರೇ ಹೇಳಿರುವಂತೆ ಚಿಕ್ಕಣ್ಣ ಅವರಿಗೆ ಇದೀಗ 'ಉಪಾಧ್ಯಕ್ಷ' ಸಿನಿಮಾಗೆ ಹಣವನ್ನೇ ಕೊಟ್ಟಿಲ್ಲವಂತೆ. 'ಉಪಾಧ್ಯಕ್ಷ' ಸಿನಿಮಾ ಈಗಾಗಲೇ, ಇಡೀ ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಅದ್ರಲ್ಲೂ ಹತ್ತಾರು ಸಿನಿಮಾ ಮಂದಿರದಲ್ಲಿ ಈ ಸಿನಿಮಾ ಈಗಲೂ ಹೌಸ್‌ಫುಲ್ ಆಗಿ ಪ್ರದರ್ಶನ ನೀಡುತ್ತಿದೆ. ಇದೆಲ್ಲವೂ ಒಂದು ಕಡೆಯಾದ್ರೆ, 'ಉಪಾಧ್ಯಕ್ಷ' ಸಿನಿಮಾದಲ್ಲಿ ನಟನೆ ಮಾಡಲು ಚಿಕ್ಕಣ್ಣಗೆ ಹಣವನ್ನೇ ನೀಡಿಲ್ಲ ಎಂದು ನಿರ್ಮಾಪಕ ಉಮಾಪತಿ ಹೇಳಿದ್ದಾರೆ. ಹಾಗಾದರೆ ಚಿಕ್ಕಣ್ಣ ಫ್ರೀ ಆಗಿ ಈ ಸಿನಿಮಾದಲ್ಲಿ ನಟನೆ ಮಾಡಿದ್ದಾರಾ? ಬನ್ನಿ ತಿಳಿಯೋಣ.

ಹಣ ಇಲ್ಲ, ಶೇರ್ ಇದೆ!

ಈಗ ನಿರ್ಮಾಪಕ ಉಮಾಪತಿ ಅವರು ನೀಡಿದ ಮಾಹಿತಿ ಪ್ರಕಾರ 'ಉಪಾಧ್ಯಕ್ಷ' ಸಿನಿಮಾಗೆ ಚಿಕ್ಕಣ್ಣ ಒಂದು ರೂಪಾಯಿಯನ್ನೂ ಪಡೆದಿಲ್ಲ. ಆದರೆ ಶೇರ್ ಲೆಕ್ಕದಲ್ಲಿ, ನಟ ಚಿಕ್ಕಣ್ಣಗೆ ದುಡ್ಡು ಹೋಗಲಿದೆಯಂತೆ. ಈ ಬಗ್ಗೆ ನಟ ಚಿಕ್ಕಣ್ಣ ಅವರೇ ಹೇಳಿದ್ದರಂತೆ. ಈ ಸಿನಿಮಾಗೆ ಅಂದ್ರೆ 'ಉಪಾಧ್ಯಕ್ಷ' ಸಿನಿಮಾಗೆ ನನಗೆ ಹಣ ಬೇಡ. ಸಿನಿಮಾ ಗೆಲ್ಲಲಿ, ನಂತರ ನಾವು ಶೇರ್ ಮಾಡಿಕೊಳ್ಳೋಣ ಅಂತಾ ಹೇಳಿದ್ದರಂತೆ ಚಿಕ್ಕಣ್ಣ. ಚಿಕ್ಕಣ್ಣ ಅವರು ಹೇಳಿದ್ದಂತೆ ಇದೀಗ, ನಿರ್ಮಾಪಕ ಉಮಾಪತಿ ಮಾಹಿತಿ ನೀಡಿದ್ದಾರೆ. ನಟ ಚಿಕ್ಕಣ್ಣ ಅವರಿಗೆ ಇದೀಗ ಸಿನಿಮಾದಲ್ಲಿನ ಗೆಲುವಿನಲ್ಲಿ ಪಾಲು ಸಿಗಲಿದೆ.

Discover How Much Remuneration Actor Chikkanna Got For Kannada Movie Upadhyaksha

10 ವರ್ಷದ ನಂತರ ಸಕ್ಸಸ್

2014ರಲ್ಲಿ ಚಿಕ್ಕಣ್ಣ & ಶರಣ್ ಕಾಂಬಿನೇಷನ್ ಸಕ್ಸಸ್ ಕೊಟ್ಟಿತ್ತು 'ಅಧ್ಯಕ್ಷ' ಸಿನಿಮಾ ಮೂಲಕ ಸಕ್ಸಸ್ ಪಡೆದಿದ್ದರು. ಅಧ್ಯಕ್ಷ ಸಿನಿಮಾ ಸೂಪರ್ ಹಿಟ್ ಆಗಿತ್ತು. ಬಾಕ್ಸ್ ಆಫಿಸ್‌ನಲ್ಲೂ ಭರ್ಜರಿ ಸಕ್ಸಸ್ ಪಡೆದಿತ್ತು. 10 ವರ್ಷ ನಂತರ 'ಅಧ್ಯಕ್ಷ' ಸಿನಿಮಾ ಮುಂದುವರಿದ ಭಾಗ 'ಉಪಾಧ್ಯಕ್ಷ' ರಿಲೀಸ್ ಆಗಿದೆ. ಈ ಬಾರಿ ಚಿಕ್ಕಣ್ಣ ಅವರನ್ನೇ ಹೀರೋ ಮಾಡಲಾಗಿದೆ. ಇದೇ ವೇಳೆ ಚಿಕ್ಕಣ್ಣ ಅವರ ಸಂಭಾವನೆ ವಿಚಾರ ಕುಡ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಬಂದಿದೆ.

ಸಿನಿಮಾದಲ್ಲಿ ಏನ್ ಕಾಮಿಡಿ ಗುರೂ

ಚಿಕ್ಕಣ್ಣ ಅಂದ್ರೆ ಕಾಮಿಡಿ, ಕಾಮಿಡಿಗೆ ಮತ್ತೊಂದು ಪದವೇ ಚಿಕ್ಕಣ್ಣ ಎನ್ನುವಂತಾಗಿದೆ. ಈ ಮಾತು ಕನ್ನಡದ ಸಿನಿಮಾಗಳಲ್ಲಿ ಸತ್ಯವೇ ಆಗಿದೆ. ಯಾಕಂದ್ರೆ ಚಿಕ್ಕಣ್ಣ ಎಲ್ಲಿ ಇರುತ್ತಾರೋ ಅಲ್ಲಿ ಕಾಮಿಡಿ ಇದ್ದೇ ಇರುತ್ತೆ ಸ್ಯಾಂಡಲ್‌ವುಡ್‌ನಲ್ಲಿ ಅದ್ಭುತ ಹಾಸ್ಯ ಕಲಾವಿದನಾಗಿ ಮಿಂಚಿದ ಚಿಕ್ಕಣ್ಣ ಈಗ ಉಪಾಧ್ಯಕ್ಷ ಸಿನಿಮಾದಲ್ಲಿ ನಾಯಕ ಅಂದ್ರೆ ಹೀರೋ ಆಗಿದ್ದಾರೆ. ಹೀಗೆ ಮೊದಲ ಸಿನಿಮಾದಲ್ಲೇ ಹೀರೋ ಆಗಿ ನಟ ಚಿಕ್ಕಣ್ಣ ದೊಡ್ಡ ಗೆಲುವು ಸಾಧಿಸಿದ್ದಾರೆ. ಚಿಕ್ಕಣ್ಣ ಹವಾ ಹೇಗಿದೆ ಅಂದ್ರೆ 'ಉಪಾಧ್ಯಕ್ಷ' ಸಿನಿಮಾ ರಿಲೀಸ್ ಆಗಿ ಹತ್ತಿರ ಹತ್ತಿರ ಒಂದು ತಿಂಗಳೇ ಆಗಿದೆ. ಹೀಗಿದ್ದರೂ, ಇಂದಿಗೂ ಹಾಸ್ಯ ನಟ ಚಿಕ್ಕಣ್ಣ ಅವರ ಸಿನಿಮಾ ಧಾಂ ಧೂಂ ಪ್ರದರ್ಶನವನ್ನು ನೀಡುತ್ತಿದೆ. ಈ ಸಿನಿಮಾದಲ್ಲಿ ಮೊದಲ ಬಾರಿಗೆ ನಟಿಯಾಗಿ ಧಾರವಾಹಿಯಲ್ಲಿ ನಟಿಯಾಗಿರುವ ಮಲೈಕಾ ಹೀರೋಯಿನ್ ಪಾತ್ರದಲ್ಲಿ ಕಾಣಿಸಿದ್ದಾರೆ.

2011ರಲ್ಲಿ ಸಿನಿ ಕ್ಷೇತ್ರಕ್ಕೆ ಎಂಟ್ರಿ

ಕನ್ನಡ ಸಿನಿ ಕ್ಷೇತ್ರಕ್ಕೆ ಚಿಕ್ಕಣ್ಣ 2011ರಲ್ಲಿ ಎಂಟ್ರಿ ಕೊಟ್ಟರು. ಅವರು ಕಿರಾತಕ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಬಂದಿದ್ದರು. ಬಳಿಕ ಚಿಕ್ಕಣ್ಣಗೆ, ಸಾಲು ಸಾಲು ಆಫರ್ಸ್ ಬಂದವು. ನೋಡ ನೋಡುತ್ತಲೇ ದೊಡ್ಡದಾಗಿ, ಕನ್ನಡ ಸಿನಿ ರಂಗದಲ್ಲಿ ಬಿಡುವೆ ಇಲ್ಲದ ನಟನಾಗಿ ಬೆಳೆದು ನಿಂತರು ಚಿಕ್ಕಣ್ಣ. ಈ ನಟ ಮೊದಲ ಬಾರಿ ಹೀರೋ ಆಗಿ ನಟಿಸಿದ್ದು ಉಪಾಧ್ಯಕ್ಷ ಮೂಲಕ ಅಬ್ಬರಿಸೋಕೆ ಶುರು ಮಾಡಿದ್ದಾರೆ. ಈ ಸಮಯದಲ್ಲಿ ಚಿಕ್ಕಣ್ಣರ ಕಣ್ಣೀರಿನ ಕಥೆ ಕೂಡ ಜನರಿಗೆ ಭಾರಿ ನೋವು ನೀಡುತ್ತಿದೆ. ಜೀವನದಲ್ಲಿ 45 ರೂಪಾಯಿಗೂ ಪರದಾಡುತ್ತಿದ್ದ ಚಿಕ್ಕಣ್ಣ ಇದೀಗ, ಕೋಟಿ ಕೋಟಿ ರೂಪಾಯಿ ಗಳಿಸುತ್ತಿದ್ದಾರೆ.

ನಟ ಶರಣ್ ಕೂಡ ಹಣ ಪಡೆದಿಲ್ಲ

ಶರಣ್ ಉಪಾಧ್ಯಕ್ಷ ಸಿನಿಮಾದಲ್ಲಿ ಗೆಸ್ಟ್ ರೋಲ್‌ ಮಾಡುವ ಮೂಲಕ ತಮ್ಮ ಸ್ನೇಹಿತ, ಚಿಕ್ಕಣ್ಣಗೆ ಉಡುಗೊರೆ ಕೊಟ್ಟಿದ್ದಾರೆ ಅಂತಿದ್ದಾರೆ ಫ್ಯಾನ್ಸ್. ಹೀಗಾಗಿ ಶರಣ್ ಅವರ ಈ ಕೊಡುಗೆ ಬಗ್ಗೆಯೂ ಭಾರಿ ಪ್ರಶಂಸೆ ಇದೀಗ ವ್ಯಕ್ತವಾಗುತ್ತಿದೆ. ಹಾಗೆ ಜನರು ಕೂಡ ಶರಣ್ & ಚಿಕ್ಕಣ್ಣ ಕಾಂಬಿನೇಷನ್ ಬಗ್ಗೆ ಹೆಮ್ಮೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಮೂಲಕ ಹೀರೋ ಆಗಿ ಮೊದಲ ಪ್ರಯತ್ನದಲ್ಲೇ ಭರ್ಜರಿ ಗೆಲುವು ದಾಖಲಿಸಿದ್ದಾರೆ ನಟ ಚಿಕ್ಕಣ್ಣ. ಮತ್ತೊಂದು ವಿಶೇಷತೆ ಏನು ಅಂದ್ರೆ, ಇದೇ ಸಿನಿಮಾಗೆ ನಟ ಶರಣ್ ಅವರು ಕೂಡ, ಒಂದು ರೂಪಾಯಿ ಸಂಭಾವನೆ ಪಡೆದಿಲ್ಲ. ತನ್ನ ಸ್ನೇಹಿತ ಚಿಕ್ಕಣ್ಣ ಗೆಲುವಿಗಾಗಿ ಹಣವನ್ನೇ ಪಡದೆ ಶರಣ್ ನಟನೆ ಮಾಡಿದ್ದಾರಂತೆ.

ಬೆಂಗಳೂರಿನಲ್ಲಿ ಪರದಾಡಿದ್ದ ಚಿಕ್ಕಣ್ಣ

ಹೀಗೆ ಚಿಕ್ಕಣ್ಣ ಆರಂಭದಲ್ಲಿ ಬೆಂಗಳೂರಿಗೆ ಬಂದಾಗ, ಅವರ ಜೀವನದಲ್ಲಿ ಬದಲಾವಣೆಗಳು ಆಗಲೇ ಇಲ್ಲ. ಬೆಂಗಳೂರಿನಲ್ಲಿ 100 & 200 ರೂಪಾಯಿಗೆ ಗಾರೆ ಕೆಲಸ ಮಾಡುತ್ತಾ, ನಟ ಚಿಕ್ಕಣ್ಣ ಪರದಾಡಿದ್ದರು. ಇದನ್ನೆಲ್ಲಾ ತಡೆಯಲು ಆಗದೆ ಮರಳಿ ತಮ್ಮ ಊರಿಗೆ ಹೋಗಿ, ಅಲ್ಲೇ ವಾಸ ಮಾಡಿದ್ದರಂತೆ. ಆದರೆ ಬೆಂಗಳೂರಿನಲ್ಲಿ ಅವರಿಗೆ ಆದ ಅನುಭವದ ಪರಿಣಾಮ ಮುಂದೆ ನಟನಾ ಕ್ಷೇತ್ರಕ್ಕೆ ಅವರು ಹೆಜ್ಜೆ ಇಟ್ಟರು. ಚಿಕ್ಕಂದಿನಲ್ಲೂ ಅವರು ನಾಟಕಗಳಲ್ಲಿ & ಸ್ಟೇಜ್ ಪ್ರೋಗ್ರಾಮ್ ಮೂಲಕವೂ ನಟನೆ ಕಲಿತಿದ್ದರಂತೆ. ಮುಂದೆ ಏನಾಯ್ತು ಗೊತ್ತಾ?

ರಾಕಿಭಾಯ್ ಯಶ್ ದೊಡ್ಡ ಸಹಾಯ!

ಇನ್ನು ಚಿಕ್ಕಣ್ಣ ಅವರ ಟ್ಯಾಲೆಂಟ್ ಗುರುತಿಸಿದ್ದ ನಟ ರಾಕಿಂಗ್ ಸ್ಟಾರ್ ಯಶ್ ಅವರು, ಈ ನಟ ಅಂದ್ರೆ ಚಿಕ್ಕಣ್ಣನ ಜೊತೆಗೆ ಸಿನಿಮಾ ಮಾಡೋದಕ್ಕೆ ನಿರ್ಧರಿಸಿದ್ದರಂತೆ. ಯಶ್ ಅವರ ಈ ನಿರ್ಧಾರವೇ ನಟ ಚಿಕ್ಕಣ್ಣ ಅವರಿಗೆ ಹೊಸ ಬದುಕು ನೀಡುತ್ತದೆ. ನಟ ಚಿಕ್ಕಣ್ಣ ಅವರಿಗೆ ಯಶ್ ಅವರು ಕಿರಾತಕ ಸಿನಿಮಾದಲ್ಲಿ ಅವಕಾಶ ಕೊಡಿಸಿದ್ದರು. ಮುಂದೆ ಕಿರಾತಕ ಸಿನಿಮಾ ಸೂಪರ್ ಹಿಟ್ ಆಗಿತ್ತು. ಅದರಲ್ಲೂ ಚಿಕ್ಕಣ್ಣ ಅವರ ನಟನೆಗೆ ಪ್ರೇಕ್ಷಕರು ಫಿದಾ ಆಗಿದ್ದರು.

ಚಿಕ್ಕಣ್ಣ ಅವರ ಕಾಲ್‌ಶೀಟ್ ಬೇಡುತ್ತಿದ್ದಾರೆ!

ಚಿಕ್ಕಣ್ಣ ಈಗ ಫುಲ್ ವೈರಲ್, ಕಾಮಿಡಿ ನಟನೊಬ್ಬ ಇದೀಗ ಕನ್ನಡದ ಯಶಸ್ವಿ ಹೀರೋ ಸಾಲಿಗೆ ಬಂದು ನಿಂತಿದ್ದಾರೆ. ಆದರೆ ಚಿಕ್ಕಣ್ಣ ತಾವು 'ಉಪಾಧ್ಯಕ್ಷ' ಸಿನಿಮಾದ ಮೂಲಕ, ತಾವು ಹೀರೋ ಆಗಲು ಹೊರಟಾಗ ಸಾಕಷ್ಟು ಚಾಲೆಂಜ್ ಎದುರಿಸಿದ್ದರಂತೆ. ನಟ ಚಿಕ್ಕಣ್ಣ, ನಾನು ಹೀರೋ ಆಗ್ತಾ ಇದ್ದೀನಿ ಅಂದಾಗ ಕಾಲು ಎಳೆದವರೆ ಜಾಸ್ತಿಯಂತೆ. ಆದರೆ ಎಲ್ಲರ ಕಾಲು ಎಳೆಯುತ್ತೆ ಕಾಲ ಅನ್ನೋ ರೀತಿ, ಅಂದು ಚಿಕ್ಕಣ್ಣ ಅವರ ಕಾಲು ಎಳೆದ ಕೆಲವರು ಈಗ ಅದೇ ಚಿಕ್ಕಣ್ಣ ಅವರ ಕಾಲ್‌ಶೀಟ್ ಬೇಕು ಅಂತಾ ಬೇಡುತ್ತಿದ್ದಾರಂತೆ.

ಹೀಗಾಗಿ ಕನ್ನಡಿಗರಿಗೆ ನಟ ಚಿಕ್ಕಣ್ಣ ಧನ್ಯವಾದವನ್ನ ಅರ್ಪಿಸಿದ್ದಾರೆ. 'ಉಪಾಧ್ಯಕ್ಷ' ಸಿನಿಮಾ ಗೆಲ್ಲಿಸಿದ್ದಕ್ಕೆ ನಟ ಚಿಕ್ಕಣ್ಣ ತುಂಬಾ ಖುಷಿಯಾಗಿದ್ದಾರೆ. ಹಾಗಾದರೆ 'ಉಪಾಧ್ಯಕ್ಷ' ಸಿನಿಮಾಗೆ ಚಿಕ್ಕಣ್ಣ ಹೀರೋ ಆಗಲು ಹೋದಾಗ, ಕನ್ನಡದ ಯಾವ ಯಾವ ಹೀರೋಗಳು ಸಪೋರ್ಟ್ ಮಾಡಿದ್ದರು ಗೊತ್ತಾ? ಅದನ್ನ ಖುದ್ದು ನಟ ಚಿಕ್ಕಣ್ಣ ಅವರೇ ಮನಸ್ಸು ತುಂಬಿ ಹೇಳಿದ್ದಾರೆ. ಈ ಬಗ್ಗೆ ಮಾಹಿತಿಗೆ ಮುಂದೆ ಓದೋಣ ಬನ್ನಿ.

ಚಿಕ್ಕಣ್ಣ ಬೆನ್ನಿಗೆ ನಿಂತ ಕನ್ನಡ ಚಿತ್ರರಂಗ!

ಅಂದಹಾಗೆ ಒಬ್ಬ ಕಾಮಿಡಿ ಸ್ಟಾರ್, ಹೀರೋ ಪಟ್ಟಕ್ಕೆ ಹೋಗುವಾಗ ಸವಾಲುಗಳು ಇದ್ದೇ ಇರುತ್ತವೆ. ಹಾಗೇ ಅಡ್ಡಿ ಮಾಡುವ ಕೆಲವರು ಕೂಡ ಇದ್ದೇ ಇರುತ್ತಾರೆ. ಹೀಗಿದ್ದಾಗ ಕೂಡ ನಟ ಚಿಕ್ಕಣ್ಣಗೆ ಹಲವಾರು ಹೀರೋಗಳು ಸಪೋರ್ಟ್ ಮಾಡಿದ್ದರಂತೆ. ಈ ಪೈಕಿ ಕನ್ನಡಿಗರ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್, ನಟ ದರ್ಶನ್, ಸುದೀಪ್, ಯಶ್, ಧ್ರುವ ಸೇರಿ, ಪ್ರಜ್ವಲ್ ದೇವರಾಜ್, ಅಭಿಷೇಕ್ ಅಂಬರೀಶ್, ಧನ್ವೀರ್, ಹಾಗೇ ಅನೇಕರು ನಟ ಚಿಕ್ಕಣ್ಣಗೆ ಬೆಂಬಲ ನೀಡಿದ್ದರಂತೆ. ಇವರೆಲ್ಲರ ಸಪೋರ್ಟ್‌ಗೆ ಚಿಕ್ಕಣ್ಣ ಖುಷಿಯಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+