ಯೋಗರಾಜ್ ಭಟ್- ಬೆಳ್ಳುಳ್ಳಿ ಕಬಾಬ್ ಚಂದ್ರು ಅಣ್ಣ-ತಮ್ಮನಾ?: ಪಂಚಾಯಿತಿ ಮಾಡೋದು ಯಾರು?
ಬೆಂಗಳೂರು, ಫೆಬ್ರವರಿ.20: ಇದು ಮಾಧ್ಯಮಗಳಿಗಿಂತ ಸಾಮಾಜಿಕ ಮಾಧ್ಯಮಗಳ ಯುಗ ಎಂದರೆ ಅತಿಶಯೋಕ್ತಿಯಲ್ಲ ಬಿಡಿ. ಯಾವಾಗ.. ಯಾರು.. ಹೇಗೆ.. ಏಕೆ.. ಟ್ರೆಂಡಿಂಗ್‌ಗೆ ಬರುತ್ತಾರೆ ಎನ್ನುವುದೇ ತಿಳಿಯುವುದಿಲ್ಲ. ಯಾವುದೋ ಹಳೆಯ ಹಾಡು, ಒಂದು ಡೈಲಾಗ್ ಈಗ ಟ್ರೆಂಟ್ ಆಗಿಬಿಡುತ್ತದೆ. ಅದಕ್ಕೆ ಕಳೆದರೆಡು ತಿಂಗಳಿನಿಂದ ಸಾಕ್ಷಿಯಾಗಿ ನಿಂತಿದೆ 'ಓ ನಲ್ಲ ನೀನಲ್ಲ ಕರಿಮಣಿ ಮಾಲೀಕ' ಹಾಡು.
ಇದರ ಜೊತೆಗೆ ಇನ್ನೊಂದು ಟ್ರೆಂಡಿಂಗ್‌ನಲ್ಲಿರೋದು ಬೆಳ್ಳುಳ್ಳಿ ಕಬಾಬ್ ಮತ್ತು ರಾಹುಲ್ಲಾ. ಹೌದು... ಸಾಮಾಜಿಕ ಮಾಧ್ಯಮಗಳಲ್ಲಿ ಬೆಳ್ಳುಳ್ಳಿ ಕಬಾಬ್ ಚಂದ್ರು ಮತ್ತು ಅವರ ನೆರವಿಗೆ ಇರುವ ಯುವಕ ರಾಹುಲ್ ಸಕತ್ ಫೇಮಸ್ ಆಗಿದ್ದಾರೆ. ಅಡಿಗೆ ಮಾಡುತ್ತಾ ವಿಭಿನ್ನವಾಗಿ ವಿವರಣೆ ನೀಡುವ ಚಂದ್ರು, ಮಧ್ಯೆ ಮಧ್ಯೆ ರಾಹುಲ್ ಅವರನ್ನು ಕರೆಯುವುದೇ ಜನರಿಗೆ ಇಷ್ಟವಾಗಿತ್ತು. ಇದಕ್ಕೆ ಕರಿಮಣಿ ಮಾಲೀಕ ಕೂಡ ಸೇರಿಕೊಂಡಿತ್ತು. ಇದರ ಜೊತೆಗೆ ಚಂದ್ರು ಅವರನ್ನು ನೋಡಿದ ಅನೇಕರು ಇವರು ಯೋಗರಾಜ್ ಭಟ್ ಅವರ ಅಣ್ಣನಾ, ತಮ್ಮಾನಾ ಎಂದೂ ಕೇಳಿದ್ರು!.

ಚಂದ್ರು ಬೆಳುಳ್ಳಿ ಕಬಾಬ್ ಪರಿಮಳಕ್ಕೆ ಮನಸೋತ್ರಾ ಭಟ್ರು?
ಸೋಶಿಯಲ್ ಮೀಡಿಯಾ ಜಮಾನದಲ್ಲಿ ಯುವಜನತೆಯನ್ನು ಸೆಳೆಯಬೇಕು ಅಂದ್ರೆ ನಾವು ಕೂಡ ಕ್ರಿಯೇಟಿವ್ ಆಗಿ ಯೋಚಿಸೋದು ಮೂಕ್ಯ ಆಗುತ್ತೆ. ಅದಕ್ಕೆ ಬೆಳ್ಳುಳ್ಳಿ ಕಬಾಬ್, ರಾಹುಲ್ಲಾ, ಕರಿಮಣಿ ಮಾಲೀಕ ನಮಗೆ ಈ ಎರಡು ತಿಂಗಳಿಂದ ಸೃಷ್ಟಿಸಿರುವ ಹವಾ ಸಾಕ್ಷಿಯಾಗಿದೆ. ಈಗ ಅಡುಗೆ ಭಟ್ರು ಜೊತೆಗೆ ನಿರ್ದೇಶಕ ಯೋಗರಾಜ್ ಭಟ್ರು ಕೈ ಜೋಡಿಸಿದ್ದಾರೆ. ತಮ್ಮ ಮುಂಬರುವ ಬಹುನಿರೀಕ್ಷಿತ ಸಿನಿಮಾ 'ಕರಟಕ ದಮನಕ' ಪ್ರಚಾರಕ್ಕೆ ಹೊಸ ಐಡಿಯಾ ಮಾಡಿದ್ದಾರೆ.
ಯೋಗರಾಜ್ ಭಟ್ ಆಕ್ಷನ್ ಕಟ್ ಹೇಳಿರುವ ಸಿನಿಮಾದಲ್ಲಿ ನಟ ಶಿವರಾಜ್ ಕುಮಾರ್ ಮತ್ತು ಪ್ರಭುದೇವ ನಟಿಸಿದ್ದಾರೆ. ಚಿತ್ರದ ಪ್ರೋಮೋ ಮತ್ತು ಹಾಡು ಬಿಡುಗಡೆಯಾಗಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಇದರ ನಡುವೆ ಬೆಳುಳ್ಳಿ ಕಬಾಬ್ ಚಂದ್ರು ಜೊತೆ ಕೈ ಜೋಡಿಸಿ ಸಿನಿಮಾ ಪ್ರಚಾರಕ್ಕಾಗಿ ಹೊಸ ಪ್ರಯತ್ನ ಮಾಡುತ್ತಿದ್ದಾರೆ.

'ಕರಟಕ ದಮನಕ + ಬೆಳ್ಳುಳ್ಳಿ ಕಬಾಬ್'
ಶಿವಾನಂದ ಸರ್ಕಲ್‌ನಲ್ಲಿ ಹೋಟೆಲ್ ನಡೆಸುತ್ತಿರುವ ಚಂದ್ರು ಅವರ ಕೈ ರುಚಿಯನ್ನು ನಟ ಪುನೀತ್ ರಾಜ್‌ಕುಮಾರ್ ಸೇರಿದಂತೆ ಅನೇಕ ಸೆಲಬ್ರಿಟಿಗಳು ಮೆಚ್ಚಿದ್ದಾರೆ. ಸದ್ಯದ ಸೋಶಿಯಲ್ ಮಿಡಿಯಾ ಸ್ಟಾರ್ ಆಗಿರುವ ಚಂದ್ರು ಮತ್ತು ನಿರ್ದೇಶಕ ಯೋಗರಾಜ ಭಟ್ ನೋಡಲು ಕೊಂಚ ಮಟ್ಟಿಗೆ ಒಂದೇ ತರ ಕಾಣಿಸುತ್ತಾರೆ. ಹೀಗಾಗಿಯೇ ಕೆಲವು ಟ್ರೋಲ್ ಮತ್ತಿ ಮೀಮ್ ಪೇಜ್‌ಗಳು ಇಬ್ಬರ ಪೋಟೋಗಳನ್ನು ಕೋಲಾಜ್ ಮಾಡಿ ಅಣ್ಣ- ತಮ್ಮ, ತಮ್ಮ- ಅಣ್ಣ, ಒಬ್ರು ಗಾಳಿಪಟ, ಇನ್ನೊಬ್ರು ಚಟ ಪಟ ಎಂದು ಹೇಳಿದ್ದರು. ಇದಕ್ಕೆ ಎನ್‌ಕ್ಯಾಚ್ ಮಾಡಿಕೊಳ್ಳಲು 'ಕರಟಕ ದಮನಕ' ಸಿನಿಮಾ ತಂಡ ಸಿದ್ಧವಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗುತ್ತಿರುವುದನ್ನು ಬಳಸಿಕೊಳ್ಳುತ್ತಿರುವ ಚಿತ್ರತಂಡ, ಇಬ್ಬರನ್ನು ಸೇರಿಸಿ ನಾನ್‌ವೆಜ್ ರೆಸಿಪಿ ವಿಡಿಯೋ ಮಾಡಿದ್ದಾರೆ. ಅದರ ಪ್ರೋಮೊವನ್ನು ಯೋಗರಾಜ್ ಭಟ್ ಹಂಚಿಕೊಂಡಿದ್ದಾರೆ. 2:15 ನಿಮಿಷಗಳ ಪ್ರೋಮೊ ವಿಡಿಯೋ, "ಹಂಗೂ ಹಿಂಗೂ ಹೆಂಗೋ ಇದ್ದೋ, ಹಿಂಗಾಗೋದ್ವಿ ನೋಡೋ ಅಣ್ತಮ್ಮ" ಎಂದು ಯೋಗರಾಜ್ ಭಟ್ ಹಾಡು ಹಾಡುವುದರೊಂದಿಗೆ ಶುರುವಾಗುತ್ತದೆ.
"ನಾವಿಬ್ಬರು ಅಣ್ಣ ತಮ್ಮ, ತಮ್ಮ ಅಣ್ಣ ಎಂದು ಎಲ್ಲಾ ಕಡೆ ಚರ್ಚೆ ನಡೀತಿದೆ. ಆಕ್ಚುವಲಿ ನಾವಿಬ್ಬರು ಏನು? ನಾವಿಬ್ಬರೂ ಹೇಗೆ ಅಣ್ಣಾ ತಮ್ಮ, ಹೌದಾ ಅಲ್ವಾ? ಎಂದು ಎಲ್ಲದನ್ನು ಬಂದು ತಮಗೆ ವಿವರಿಸಿ ಹೇಳ್ತಿವಿ. ನಮ್ಮ ಜೊತೆಗೆ ಇನ್ನೊಬ್ಬರು ದೊಡ್ಡವರು ಪಂಚಾಯಿತಿಗೆ ಬರ್ತಾರೆ. ಏನಂತಿರಿ" ಎಂದು ಚಂದ್ರು ಅವರನ್ನು ಕೇಳಿದ್ದಾರೆ. ಚಂದ್ರು ಕೂಡ ನಾವು ಹೇಗೆ ಅಣ್ಣ- ತಮ್ಮ, ಆ ಪ್ರೀತಿ ಹೇಗೆ ಬಂತು ಎಂದು ಹೇಳ್ತಿವಿ ಕಾಯ್ತಾ ಇರಿ" ಎಂದಿದ್ದಾರೆ.












Click it and Unblock the Notifications