ದರ್ಶನ್ ಅವರ ಸಿನಿಮಾ ಗೆಲುವು ಯಾರಿಗೆ ಅರ್ಪಣೆ ಗೊತ್ತಾ?
ಕನ್ನಡ ನೆಲದ ಕಥೆಗಳನ್ನು ಕನ್ನಡಿಗ ಎಂದೂ ಕೈಬಿಟ್ಟಿಲ್ಲ, ವರನಟ ಡಾ. ರಾಜ್‌ಕುಮಾರ್ ಕೂಡ ಇದೇ ರೀತಿ ನಮ್ಮ ನೆಲದ ಕಥೆಗಳನ್ನ ಹಿಡಿದು ಕನ್ನಡ ಸಿನಿಮಾ ರಂಗ ಕಟ್ಟಿದ್ದವರು. ಅದೇ ಹಾದಿಯಲ್ಲಿ ಮತ್ತೆ ಕನ್ನಡ ಸಿನಿಮಾ ರಂಗ ಬೆಳೆಯುತ್ತಿದೆ. ಅದರಲ್ಲೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹೊಸ ಸಿನಿಮಾ 'ಕಾಟೇರ' ಅಪ್ಪಟ ಕನ್ನಡ ಮಣ್ಣಿನ ಕಥೆಯಾಗಿದೆ. ಹೀಗಾಗಿ ಕನ್ನಡಿಗರು ಈ ಸಿನಿಮಾ ಅಪ್ಪಿಕೊಂಡು ಮೆಚ್ಚಿದ್ದಾರೆ.
ಕಾಟೇರ ಸಿನಿಮಾ 100 ಕೋಟಿ ಕ್ಲಬ್ ದಾಟೋದು ಪಕ್ಕಾ ಅಂತಿದ್ದಾರೆ ಅಭಿಮಾನಿಗಳು. ಹೀಗಾಗಿ ಸಿನಿಮಾ ಬಗ್ಗೆ ಕುತೂಹಲ ದುಪ್ಪಟ್ಟಾಗಿದ್ದು. ಇನ್ನು ನಟ ದರ್ಶನ್ ಅವರ ಫ್ಯಾನ್ಸ್‌ಗೆ ಇದು ದೊಡ್ಡ ಗಿಫ್ಟ್ ಆಗಿದೆ. 4 ದಿನದಲ್ಲಿ ಕಾಟೇರ ಬರೋಬ್ಬರಿ 77 ಕೋಟಿ ರೂಪಾಯಿಗು ಹೆಚ್ಚು ಹಣ ಗಳಿಸಿದೆ. ಇನ್ನೇನು ಕೆಲ ದಿನದಲ್ಲಿ ಕಾಟೇರ 100 ಕೋಟಿ ಕ್ಲಬ್ ಸೇರುವ ನಿರೀಕ್ಷೆ ಇದೆ. ಇಷ್ಟೆಲ್ಲಾ ದಾಖಲೆ ನಡುವೆ 'ಕಾಟೇರ' ಸಿನಿಮಾ ನಿರ್ದೇಶಕ ತರುಣ್ ಸುಧೀರ್ ಈ ಗೆಲುವನ್ನು ಯಾರಿಗೆ ಅರ್ಪಿಸಿದ್ದಾರೆ ಗೊತ್ತೆ? ಬನ್ನಿ ತಿಳಿಯೋಣ.

ರೈತರಿಗೆ, ಕನ್ನಡಿಗರಿಗೆ ಧನ್ಯವಾದ!
ಈ ಬಗ್ಗೆ ಖುಷಿ ಹಂಚಿಕೊಂಡ 'ಕಾಟೇರ' ನಿರ್ದೇಶಕ ತರುಣ್ ಸುಧೀರ್, 'ಅಭಿಮಾನಿಗಳು, ರೈತರು, ನಮ್ಮ ಕನ್ನಡ ಚಿತ್ರೋದ್ಯಮ ಮತ್ತು ಹಲವಾರು ಮನಗಳಿಗೆ ನಾವು ಸಾಕಷ್ಟು ಋಣಿಯಾಗಿದ್ದೇವೆ. ಹೊಸದೊಂದು ಕಥೆ ಹೇಳುವ ಸಲುವಾಗಿ ಶುರುವಾದ ಪ್ರಯತ್ನ, ಹಲವಾರು ದೈತ್ಯರ ಕೃಷಿ, ನಿಮ್ಮ ಕಾಟೇರ. ಇಂದು ನಾವು ಕಲ್ಪಿಸಿಕೊಂಡದ್ದನ್ನು, ಅರಿತುಕೊಂಡಿರುವುದನ್ನು ನಿಜ ಸ್ವರೂಪದಲ್ಲಿ ಬೆಳ್ಳಿ ಪರದೆಯ ಮೇಲೆ ನೋಡಲು ಬಹಳ ಸಂತೋಷ ಮತ್ತು ಹೆಮ್ಮೆ ಅನಿಸುತ್ತಿದೆ.' ಎಂದಿದ್ದಾರೆ.
♥️♥️♥️ #Kaatera pic.twitter.com/FH7YZWOelF
— Tharun Sudhir (@TharunSudhir) January 2, 2024
'ಪ್ರತಿಯೊಂದು ಹೆಜ್ಜೆಯಲ್ಲೂ ನಮಗೆ ಪ್ರೇರಣೆ'
ಹಾಗೇ ತಮ್ಮ ಮಾತು ಮುಂದುವರಿಸಿರುವ ನಿರ್ದೇಶಕ ತರುಣ್ ಸುಧೀರ್ 'ನಾನು ಹಿಂತಿರುಗಿ ನೋಡಿದಾಗ, ನನಗೆ ಕಾಣುವುದು ನಿಮ್ಮೆಲ್ಲರ ಸತತ ಪ್ರೀತಿ, ಬೆಂಬಲ ಮತ್ತು ಆಶೀರ್ವಾದ ದರ್ಶನ್ ಸರ್, ರಾಕ್‌ಲೈನ್ ಸರ್ ಮತ್ತು ನನ್ನ ತಂಡಕ್ಕೆ ನಾನು ಎಂದೆಂದೂ ಆಭಾರಿ, ನನ್ನ ಮೇಲಿನ ನಿಮ್ಮ ಬಲವಾದ ನಂಬಿಕೆಯಿಂದ ಕಾಟೇರ ಸಾಧ್ಯವಾಯಿತು.

ಸೆಲೆಬ್ರಿಟಿಗಳು. ನೀವು ಪ್ರತಿಯೊಂದು ಹೆಜ್ಜೆಯಲ್ಲೂ ನಮಗೆ ಪ್ರೇರಣೆಯಾಗಿ ನಿಂತಿದ್ದೀರ. ನೀವು ಕಾಟೇರ ಚಿತ್ರವನ್ನು ಪ್ರೀತಿಯಿಂದ ಸ್ವಾಗತಿಸಿದ ರೀತಿ ನಮ್ಮನ್ನು ತುಂಬಾ ಭಾವುಕರನ್ನಾಗಿಸುತ್ತದೆ! ಇದಕ್ಕಿಂತ ಹೆಚ್ಚು ಇನ್ನೇನು ಕೇಳಲು ಸಾಧ್ಯ!! ಮತ್ತೊಮ್ಮೆ ಎಲ್ಲರಿಗೂ ಮನದಾಳದ ಧನ್ಯವಾದಗಳು!' ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.
'ಮಾಧ್ಯಮ ಮಿತ್ರರಿಗೆ ವಿಶೇಷ...'
ಇದಿಷ್ಟೇ ಅಲ್ಲ ಮಾಧ್ಯಮದವರಿಗೂ ವಿಭಿನ್ನವಾಗಿ ಧನ್ಯವಾದ ಅರ್ಪಿಸಿದ್ದಾರೆ 'ಕಾಟೇರ'ದ ನಿರ್ದೇಶಕ ತರುಣ್ ಸುಧೀರ್, 'ಚಿತ್ರದ ಪ್ರತಿ ಹಂತದಲ್ಲೂ ಬೆಂಬಲ ನೀಡಿದ ಮಾಧ್ಯಮ ಮಿತ್ರರಿಗೆ ವಿಶೇಷ ಧನ್ಯವಾದಗಳು ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ಅಭಿಮಾನಿಯ ಕಾಟೇರ, ಅಭಿಮಾನಿಗಳಿಗಾಗಿ, ನಿಮ್ಮ ತರುಣ್ ಕಿಶೋರ್ ಸುಧೀರ್' ಅಂತಾ ಇದೀಗ ಸ್ಪೆಷಲ್ ಟ್ವೀಟ್ ಮಾಡಿದ್ದಾರೆ ಕಾಟೇರ ಡೈರೆಕ್ಟರ್.












Click it and Unblock the Notifications