ಕದ್ದು ಮುಚ್ಚಿ ಮದುವೆ ಆಗಿದ್ದಾರಾ ಸೀರಿಯಲ್ ನಟಿ ರಜಿನಿ? ಇಲ್ಲಿದೆ ಕ್ಲಾರಿಟಿ
"ಅಮೃತ ವರ್ಷಿಣಿ" ಧಾರಾವಾಹಿಯಲ್ಲಿ ಅಮೃತಾ ಪಾತ್ರದ ಮೂಲಕ ಮನೆಮಾತಾಗಿದ್ದರು ಕಿರುತೆರೆ ನಟಿ ರಜಿನಿ. ಸೀರಿಯಲ್ ಪ್ರಿಯರಿಗೆ ರಜಿನಿ ಅವರ ಅಭಿನಯ ಅಂದ್ರೆ ತುಂಬಾ ಇಷ್ಟ. ಇದೇ ಕಾರಣಕ್ಕೆ ಅವರು ದಶಕಗಳಿಂದಲೂ ಕಿರುತೆರೆಯಲ್ಲಿ ಮಿಂಚುತ್ತಿದ್ದಾರೆ. ಇನ್ನು ಇತ್ತೀಚೆಗೆ "ನೀ ಇರಲು ಜೊತೆಯಲಿ" ಧಾರಾವಾಹಿ ಮೂಲಕ ಮತ್ತೆ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಇತ್ತೀಚೆಗೆ ರಜಿನಿ ಅವರು ಬಾಡಿಬಿಲ್ಡರ್‌ವೊಬ್ಬರ ಜೊತೆ ಸಿಕ್ಕಾಪಟ್ಟೆ ರೀಲ್ಸ್ ಮಾಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಇವರಿಬ್ಬರ ಬಾಂಡಿಂಗ್ ನೋಡಿ ರಜಿನಿ ಅವರು ಗುಟ್ಟಾಗಿ ಮದುವೆ ಆಗಿದ್ದಾರೆ ಎಂಬ ಚರ್ಚೆಯೂ ಶುರುವಾಗಿದೆ. ಈ ಬಗ್ಗೆ ರಜಿನಿ ಅವರೇ ಇತ್ತೀಚಿನ ಸಂದರ್ಶನದಲ್ಲಿ ಅಸಲಿ ವಿಚಾರ ಬಹಿರಂಗಪಡಿಸಿದ್ದಾರೆ.
ಆ ಬಾಡಿ ಬಿಲ್ಡರ್ ಜೊತೆ ರಜಿನಿ ಅವರು ಹಲವು ರೀಲ್ಸ್ ಮಾಡಿದ್ದಾರೆ. ಜಿಮ್‌ನಲ್ಲಿ, ಮನೆ ಸೇರಿ ಹೊರಗಡೆ ಹೋದಾಗಲೆಲ್ಲ ಇಬ್ಬರೂ ರೀಲ್ಸ್‌ಗೆ ಹೆಜ್ಜೆ ಹಾಕಿದ್ದಾರೆ. ಆದರೆ ರಜಿನಿ ಅವರು ಇಲ್ಲಿವರೆಗೆ ಮದುವೆ ಆಗದ ಕಾರಣ ಸದ್ದಿಲ್ಲದೆ ರಜಿನಿ ಅವರು ಈ ಯುವಕನ ಜೊತೆ ಎಂಗೇಜ್ ಆಗಿದ್ದಾರೆ, ಗುಟ್ಟಾಗಿ ಮದುವೆ ಆಗಿದ್ದಾರೆ ಎಂದು ಜನ ಮಾತನಾಡಲು ಶುರು ಮಾಡಿದ್ದಾರೆ. ಈ ಎಲ್ಲ ಉತ್ತರಗಳಿಗೆ ರಜಿನಿ ಅವರೇ ಉತ್ತರ ನೀಡಿದ್ದಾರೆ. ಆ ಹುಡುಗ ಯಾರು? ಮದುವೆ ಆಗಿರೋದು ನಿಜಾನಾ? ಎಂದೂ ಸ್ಪಷ್ಟನೆ ನೀಡಿದ್ದಾರೆ.

'ನಾನು ಕದ್ದುಮುಚ್ಚಿ ಮದುವೆ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ. ನನ್ನ ಹೊಸ ಸೀರಿಯಲ್ ಲಾಂಚ್ ಆಗುತ್ತಿದೆ ಎಂದು ಎಲ್ಲರೂ ಬಂದು ಹರಸುತ್ತಿದ್ದಾರೆ. ಮದುವೆ ಅನ್ನೋದು ತುಂಬಾ ಖುಷಿಯ ವಿಚಾರ, ಎಲ್ಲರೊಂದಿಗೂ ಹಂಚಿಕೊಳ್ಳುವ ವಿಚಾರ. ನನ್ನ ಮದುವೆ ಆಗೋದಾದ್ರೆ ನಾನು ಎಲ್ಲರನ್ನೂ ಕರೆಯುವುದಿಲ್ವಾ? ಹಾಗಾಗಿ ನನ್ನ ಮದುವೆಯೇ ಆಗಿಲ್ಲ, ಆಗದೇ ಇದ್ದರೆ ಎಲ್ಲಿಂದ ಮದುವೆಗೆ ಕರೆಯಲಿ?' ಎಂದು ರಜಿನಿ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.
'ಮದುವೆ ಆದರೆ ತಪ್ಪೇನು?'
'ಇದೆಲ್ಲ ಗಾಸಿಪ್ ಅಷ್ಟೇ, ಗಾಸಿಪ್ ಅನ್ನೋದು ಬೆನ್ನಿಗೆ ಅಂಟಿದ ಭೂತ ಇದ್ದಂತೆ. ಅದು ಎಲ್ಲರ ಲೈಫಲ್ಲೂ ಇರುತ್ತೆ. ಅದೇ ರೀತಿ ನನ್ನ ಲೈಫಲ್ಲೂ ಬಂದಿದೆ. ಹಾಗಾಗಿ ನಾವಿಬ್ಬರೂ ಗಂಡ ಹೆಂಡತಿ ಅಲ್ಲ ಎಂದು ರಜಿನಿ ಸ್ಪಷ್ಟನೆ ನೀಡಿದ್ದಾರೆ. ನಾವಿಬ್ಬರೂ ಫ್ರೆಂಡ್ಸ್ ಅಷ್ಟೇ. ಅವರು ನನಗೆ ವಿಡಿಯೋ ಪಾರ್ಟ್‌ನರ್ ಅಷ್ಟೇ ಎಂದಿದ್ದಾರೆ. ಈಗ ಅವರೇ ನನ್ನ ಪಾರ್ಟ್‌ನರ್ ಆದರೆ ತಪ್ಪೇನು? ಯಾಕಂದರೆ ಸ್ನೇಹಿತರೇ ಚೆನ್ನಾಗಿ ನಮ್ಮನ್ನ ಅರ್ಥ ಮಾಡಿಕೊಳ್ಳೋದು. ಒಬ್ಬರಿಗೊಬ್ಬರು ತುಂಬಾ ಚೆನ್ನಾಗಿ ಬೇಕು ಬೇಡಗಳನ್ನು ಅರ್ಥ ಮಾಡಿಕೊಂಡಿರುತ್ತಾರೆ. ಹಾಗಾಗಿ ಜನ ಹೇಳಿದಂತೆ ನಮ್ಮ ಮದುವೆ ಆದರೂ ತಪ್ಪಿಲ್ಲ, ಬೇರೆಯವರೊಂದಿಗೆ ಆದರೂ ತಪ್ಪಿಲ್ಲ. ಹಾಗಾಗಿ ಅದು ನಿಜವಾದಾಗ ನೋಡೋಣ' ಎಂದು ನಟಿ ರಜಿನಿ ಮತ್ತೆ ಟ್ವಿಸ್ಟ್ ಕೊಟ್ಟಿದ್ದಾರೆ.
'ಅಮೃತವರ್ಷಿಣಿ ಧಾರವಾಹಿ ಇದ್ದಾಗ ನಾನು ಪಿಯುಸಿಯಲ್ಲಿ ಇದ್ದೆ. ಈವಾಗ ಕಾಲೇಜು ಮುಗಿದು 10 ವರ್ಷ ಕಳೆದು ಮದುವೆಯಾಗಿ ಎರಡು ವರ್ಷ ಆಯ್ತು, ನಿಮಗೆ ಇನ್ನೂ ಮದುವೆ ಆಗಿಲ್ವಾ? ಅಯ್ಯೋ ನಾನೂ ಇವರಿಬ್ರೂ ನಿಜವಾಗ್ಲೂ ಗಂಡ ಹೆಂಡತಿ ಅನ್ಕೊಂಡಿದ್ದೆ ಎಂದು ವಿಡಿಯೋಗೆ ಕಾಮೆಂಟ್ ಮಾಡಿದ್ದಾರೆ. ನಾನು ಶಾಲೆಗೆ ಹೋಗ್ಬೇಕಾದ್ರೆ ನಿಮ್ಮ ಧಾರಾವಾಹಿ ನೋಡ್ತಾ ಇದ್ದೆ. ನನ್ನ ಮಕ್ಕಳು ಈಗ ಎಸ್‌ಎಸ್‌ಎಲ್‌ಸಿ ಓದ್ತಾ ಇದ್ದಾರೆ' ಎಂದು ಜೋಕ್ ಮಾಡಿದ್ದಾರೆ.
ಇನ್ನು ಇತ್ತೀಚೆಗಷ್ಟೇ ರಜಿನಿ ಅವರು ನೀ ಇರಲು ಜೊತೆಯಲಿ ಸೀರಿಯಲ್‌ನಲ್ಲಿ ವಿಲನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದ ಅವರು, ನಿಮ್ಮೆಲ್ಲರ ಪ್ರೀತಿ ಪ್ರೋತ್ಸಹದಿಂದ "ನೀ ಇರಲು ಜೊತೆಯಲಿ" ಧಾರಾವಾಹಿ ಮೂಲಕ ʼಉರ್ಮಿಳಾ ದಿವಾನ್ʼ ಪಾತ್ರಧಾರಿ ಆಗಿ ನಿಮ್ಮ ಮುಂದೆ ಬರುತ್ತಿದ್ದೇನೆ. ಹೇಗಿದೆ ನಮ್ಮ ಧಾರಾವಾಹಿ ಪ್ರೊಮೊ? ಹಾಗೆ ನನ್ನ ಪಾತ್ರದ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಇಂತಿ ನಿಮ್ಮ ರಜಿನಿ ಎಂದು ಮನವಿ ಮಾಡಿದ್ದರು.












Click it and Unblock the Notifications