Toxic teaser: ಡೇಂಜರ್‌ನಲ್ಲಿ ಧುರಂಧರ್-2: ಯಶ್ ‘ಟಾಕ್ಸಿಕ್' ಟೀಸರ್ ನೋಡಿ ನೆಟ್ಟಿಗರ ಎಚ್ಚರಿಕೆ
ನಟ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ಟಾಕ್ಸಿಕ್ (Toxic) ಟೀಸರ್ ಬಿಡುಗಡೆಗೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಇದೇ ವೇಳೆ "ಧುರಂಧರ್-2" ಚಿತ್ರದೊಂದಿಗೆ ಮಾರ್ಚ್ 19ರಂದು ಬಾಕ್ಸ್‌ಆಫೀಸ್ ಕದನಕ್ಕೆ ವೇದಿಕೆ ಸಿದ್ಧವಾಗಿರುವುದರಿಂದ ಸಿನಿರಸಿಕರ ನಿರೀಕ್ಷೆ ಮತ್ತಷ್ಟು ಏರಿದೆ. ಒಂದೇ ದಿನ ಎರಡೂ ಸಿನಿಮಾಗಳು ರಿಲೀಸ್ ಆಗುತ್ತಿದ್ದು, ಟಾಕ್ಸಿಕ್‌ನಿಂದ "ಧುರಂಧರ್-2" ಡೇಂಜರ್‌ನಲ್ಲಿದೆ ಎಂದು ಜನ ಸೋಷಿಯಲ್ ಮೀಡಿಯಾಗಳಲ್ಲಿ ಎಚ್ಚರಿಸುತ್ತಿದ್ದಾರೆ.
2000 ಕೋಟಿ ಲೋಡ್ ಆಗುತ್ತಿದೆ
ಟೀಸರ್ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ. "ಧುರಂಧರ್ 2 ಅಪಾಯದಲ್ಲಿದೆ", "₹2000 ಕೋಟಿ ಲೋಡ್ ಆಗುತ್ತಿದೆ", "ಬಾಸ್ ಈಸ್ ಬ್ಯಾಕ್", "ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳು ಇಲ್ಲಿ ಸೇರುತ್ತಾರೆ!" ಎಂಬ ಕಾಮೆಂಟ್‌ಗಳು ಹರಿದುಬಂದಿವೆ. ಯಶ್ ಎಂದಿನಂತೆ "World is my territory" ಎಂದೆಲ್ಲ ಹೊಗಳಿದ್ದಾರೆ. ಮಾರ್ಚ್ 19ರಂದು ಎರಡೂ ಸಿನಿಮಾಗಳು ಬಿಡುಗಡೆಯಾಗಲಿರುವ ಹಿನ್ನೆಲೆ, ಬಾಕ್ಸ್‌ಆಫೀಸ್‌ನಲ್ಲಿ ಭರ್ಜರಿ ಪೈಪೋಟಿ ನಡೆಯುವ ನಿರೀಕ್ಷೆ ಇದೆ.

ಟೀಸರ್ ಆರಂಭವೇ ಕತ್ತಲು ಮತ್ತು ಗಂಭೀರ ವಾತಾವರಣದ ದೃಶ್ಯಗಳಿಂದ ಕೂಡಿದ್ದು, ರಾಯ ಪಾತ್ರದಲ್ಲಿ ಯಶ್ ದೃಶ್ಯಗಳು ಕುತೂಹಲ ಮೂಡಿಸಿವೆ. "ಈ ಬಾರಿ ಎದುರಾಳಿ ಬಹಳ ಅಪಾಯಕಾರಿ" ಎಂದು ಎಚ್ಚರಿಸಿದರೂ, ರಾಯ ಹಿಂದೆ ಸರಿಯಲು ಸಿದ್ಧನಾಗುವುದಿಲ್ಲ. "ಆಟ ಮುಗಿಯಬೇಕೆಂದರೆ ನಾನು ಹೇಳುವಾಗ ಮಾತ್ರ ಮುಗಿಯುತ್ತದೆ" ಎಂಬ ಡೈಲಾಗ್‌ಗಳು ಟೀಸರ್‌ಗೆ ಹೈಪ್ ನೀಡಿವೆ.
'ಟಾಕ್ಸಿಕ್ ಚಿತ್ರವನ್ನು ವೆಂಕಟ್ ಕೆ. ನಾರಾಯಣ ಮತ್ತು ಯಶ್ ನಿರ್ಮಿಸುತ್ತಿದ್ದು, ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾಂಸ್ಟರ್ ಮೈಂಡ್ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿದೆ. ಈ ಚಿತ್ರವನ್ನು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಚಿತ್ರೀಕರಿಸಲಾಗಿದ್ದು, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಡಬ್ ಆವೃತ್ತಿಗಳು ಬಿಡುಗಡೆಯಾಗಲಿವೆ. ಚಿತ್ರವನ್ನು ನಿರ್ದೇಶಿಸಿರುವವರು ಗೀತು ಮೋಹನ್‌ದಾಸ್.
ಚಿತ್ರದಲ್ಲಿ ಯಶ್ ಜೊತೆಗೆ ನಯನತಾರಾ, ಹುಮಾ ಖುರೇಷಿ, ಕಿಯಾರಾ ಅಡ್ವಾಣಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಟೀಸರ್ ಬಿಡುಗಡೆಗೂ ಮುನ್ನ ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ಅವರ ಫಸ್ಟ್‌ಲುಕ್ ಪೋಸ್ಟರ್ ಕೂಡ ಬಿಡುಗಡೆ ಮಾಡಲಾಗಿತ್ತು. ಯಶ್ ಅವರ 'ಟಾಕ್ಸಿಕ್' ಟೀಸರ್ ಈಗಾಗಲೇ ಸಿನಿಪ್ರಿಯರಲ್ಲಿ ಭಾರೀ ನಿರೀಕ್ಷೆ ಹುಟ್ಟುಹಾಕಿದ್ದು, ಬಾಕ್ಸ್‌ಆಫೀಸ್‌ನಲ್ಲಿ ಹೊಸ ದಾಖಲೆ ಬರೆಯುವ ಸೂಚನೆ ನೀಡುತ್ತಿದೆ. "ಧುರಂಧರ್-2 ಇನ್ ಡೇಂಜರ್" ಎಂಬ ನೆಟ್ಟಿಗರ ಕಾಮೆಂಟ್ ಈಗ ಸಿನಿರಂಗದಲ್ಲಿ ಹಾಟ್ ಟಾಪಿಕ್ ಆಗಿದೆ.
ಮಾರ್ಚ್ ಮೊದಲ ವಾರದಲ್ಲಿ ಧುರಂಧರ್-2 ಟ್ರೇಲರ್
ಬಾಕ್ಸ್ ಆಫೀಸ್‌ನಲ್ಲಿ ಸಂಚಲನ ಸೃಷ್ಟಿಸಿದ್ದ ಧುರಂಧರ್ ಚಿತ್ರದ ಮುಂದುವರಿದ ಭಾಗ ಧುರಂಧರ್-2 ಟೀಸರ್ ಕೂಡ ಇತ್ತೀಚೆಗೆ ಬಿಡುಗಡೆಯಾಗಿದೆ. ಮೊದಲ ಭಾಗದ ಭರ್ಜರಿ ಯಶಸ್ಸಿನ ಬಳಿಕ ಎರಡನೇ ಭಾಗದ ಮೇಲಿನ ನಿರೀಕ್ಷೆ ಗಗನಕ್ಕೇರಿದೆ. ವಿಶೇಷವಾಗಿ ರಣವೀರ್ ಸಿಂಗ್ ಅಭಿನಯದ ಈ ಚಿತ್ರ ಟ್ರೇಲರ್ ಯಾವಾಗ ಬಿಡುಗಡೆಯಾಗಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.
ವರದಿಗಳ ಪ್ರಕಾರ ಚಿತ್ರದ ಟ್ರೇಲರ್ ಮಾರ್ಚ್ ಮೊದಲ ವಾರದಲ್ಲಿ, ಬಹುತೇಕ ಮಾರ್ಚ್ 5ರ ಸುಮಾರಿಗೆ ಬಿಡುಗಡೆಯಾಗುವ ಸಾಧ್ಯತೆ ಇದೆ. ಈ ಬಿಡುಗಡೆ ಸಮಯವನ್ನು ಚಿತ್ರತಂಡ ಯೋಜಿಸುತ್ತಿದ್ದು, ಈದ್ ಹಬ್ಬದ ವೇಳೆಯಲ್ಲಿ ನಡೆಯಲಿರುವ ಭಾರೀ ಬಿಡುಗಡೆಗೆ ಮುನ್ನ ಸಾಕಷ್ಟು ಹೈಪ್ ಸೃಷ್ಟಿಸುವ ಸಾಧ್ಯತೆ ಇದೆ. ಟೀಸರ್ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದ್ದು, ಟ್ರೇಲರ್ ಬಿಡುಗಡೆಯೊಂದಿಗೆ ಚಿತ್ರದ ಮೇಲೆ ಮತ್ತಷ್ಟು ನಿರೀಕ್ಷೆ ಏರುವ ಸಾಧ್ಯತೆ ಇದೆ. ಈಗ ಎಲ್ಲರ ಕಣ್ಣು ಟ್ರೇಲರ್ ದಿನಾಂಕದ ಅಧಿಕೃತ ಘೋಷಣೆಯತ್ತ ನೆಟ್ಟಿದೆ.












Click it and Unblock the Notifications