ಚಿರು-ಮೇಘನಾ ರಾಜ್‌ ಮದುವೆ ಆಗೋದು ಧ್ರುವ ಸರ್ಜಾಗೆ ಇಷ್ಟ ಇರಲಿಲ್ವಾ?

ಸ್ಯಾಂಡಲ್‌ವುಡ್‌ ನಟ ಚಿರಂಜೀವಿ ಸರ್ಜಾ ಹಾಗೂ ನಟಿ ಮೇಘನಾ ರಾಜ್‌ 2018ರಲ್ಲಿ ಮದುವೆಯಾಗಿದ್ದರು. ಕನ್ನಡ ಚಿತ್ರರಂಗದ ಸ್ಟಾರ್‌ ಜೋಡಿಗಳಲ್ಲಿ ಒಂದು ಎನಿಸಿಕೊಂಡಿದ್ದರು. ಎರಡೂ ಕೂಡ ಸಿನಿ ಕುಟುಂಬದ ಹಿನ್ನೆಲೆಯಲ್ಲಿ ಇದ್ದಿದ್ದರಿಂದ ಇವರ ಮದುವೆ ಕೂಡ ಸ್ಟಾರ್‌ಗಳ ಸಮಾಗಮಕ್ಕೆ ಸಾಕ್ಷಿಯಾಗಿತ್ತು. ಇನ್ನು ಚಿರು ಹಾಗೂ ‌ಆಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಸಹೋದರರು. ಚಿಕ್ಕಂದಿನಿಂದಲೂ ಒಟ್ಟಿಗೆ ಬೆಳೆದಿದ್ದ ಅವರ ನಡುವೆ ಒಬ್ಬರನ್ನು ಬಿಟ್ಟು ಮತ್ತೊಬ್ಬರು ಇರಲಾರದಷ್ಟು ಬಾಂಡಿಂಗ್‌ ಇತ್ತು. ಆದರೆ ದಿಢೀರನೆ ಚಿರು-ಮೇಘನಾ ಅವರನ್ನ ಮದುವೆಯಾಗುವ ವಿಚಾರ ಗೊತ್ತಾದಾಗ ಧ್ರುವ ಸರ್ಜಾ ತುಸು ಬೇಜಾರಾಗಿದ್ದರಂತೆ. ಇವರಿಬ್ಬರ ಮದುವೆ ಧ್ರುವಗೆ ಇಷ್ಟ ಇರಲಿಲ್ಲವಾ? ಎಂಬ ವಿಚಾರವನ್ನು ಅವರೇ ಇತ್ತೀಚೆಗೆ ರಿವೀಲ್‌ ಮಾಡಿದ್ದಾರೆ.

ಧ್ರುವ ದಸರಾ ಕಾರ್ಯಕ್ರಮದಲ್ಲಿ ಧ್ರುವ ಸರ್ಜಾ ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಇದೇ ವೇದಿಕೆಗೆ ಅತ್ತಿಗೆ ಮೇಘನಾ ರಾಜ್‌ ಕೂಡ ಬಂದಿದ್ದರು. ಈ ವೇಳೆ ಚಿರು-ಮೇಘನಾ ಮದುವೆ ವಿಚಾರ ಪ್ರಸ್ತಾಪವಾಗಿದ್ದು ಹೇಗೆ? ಆಗ ನಿಜಕ್ಕೂ ಏನೆಲ್ಲ ನಡೆಯಿತು ಎಂದು ಇಬ್ಬರೂ ಬಹಿರಂಗಪಡಿಸಿದ್ದಾರೆ.

Dhruva Sarja Dislike Chiranjeevi Sarja Meghana Raj Marriage Truth Reveals

"ನಾನು ನಮ್ಮ ಅಪ್ಪ-ಅಮ್ಮನಿಗೆ ಒಬ್ಬಳೇ ಮಗಳು. ನನಗೆ ಅಣ್ಣನೋ ತಮ್ಮನೋ ಇರಬೇಕಿತ್ತು, ಇದ್ದಿದ್ರೆ ತುಂಬಾ ಚೆನ್ನಾಗಿರೋದು ಅನ್ನೋ ಆಸೆ ಇತ್ತು. ಜೀವನದಲ್ಲಿ ನಮ್ಮ ತಂದೆ ತಾಯಿಗೆ ಹುಟ್ಟಿದರೆ ಮಾತ್ರ ಅಣ್ಣ-ತಮ್ಮ ಆಗೋದಿಲ್ಲ. ದೇವರು ಅದಕ್ಕಾಗಿ ಯಾರನ್ನಾದರೂ ಒಬ್ಬರನ್ನು ಸೃಷ್ಟಿ ಮಾಡಿ ಕಳಿಸಿರುತ್ತಾನೆ. ಹಾಗಾಗಿ ನನಗೆ ಧ್ರುವ ದೇವರು ಕೊಟ್ಟ ತಮ್ಮ" ಎಂದು ಮೇಘನಾ ರಾಜ್‌ ಹೇಳಿದ್ದಾರೆ.

"ಚಿರು ಜೊತೆ ಎಂಗೇಜ್‌ಮೆಂಟ್‌, ಮದುವೆಗೂ ಮುಂಚೆಯೇ ಒಮ್ಮೆ ಟ್ವಿಟರ್‌ನಲ್ಲಿ ಧ್ರುವಗೆ "ಬಿಲ್‌" ಅಂತ ಹಾಕಿ ವಿಶ್‌ ಮಾಡಿದ್ದೆ. ಆದ್ರೆ ಅದನ್ನ ನೋಡಿ ಎಲ್ಲರೂ ಶಾಕ್‌ ಆಗಿದ್ರು. ಸಡನ್ನಾಗಿ ಏನು ಬಿಲ್‌ ಅಂತ ಮೇಘನಾ ಹಾಕಿದ್ದಾರಲ್ಲ ಅಂತ ತಲೆಕೆಸಿಕೊಂಡ್ರು. ಆಗಲೇ ನಾನು ಮೈದುನ ಎಂದು ಫಿಕ್ಸ್‌ ಆಗಿ ಆಗಲೇ ಕರೆದಿದ್ದೆ" ಎಂದು ಮೇಘನಾ ನೆನೆದಿದ್ದಾರೆ.

Dhruva Sarja Dislike Chiranjeevi Sarja Meghana Raj Marriage Truth Reveals

ಚಿರು ಮದುವೆಯಾದಾಗ ಪೊಸೆಸಿವ್‌ ಆಗಿದ್ದೆ

ಧ್ರುವ ಸರ್ಜಾ ಮಾತನಾಡಿ, "ಅಣ್ಣ ಚಿರು ಒಮ್ಮೆ ನನ್ನ ಕರೆದು ಮೇಘನಾರನ್ನ ಪರಿಚಯ ಮಾಡಿಸಿದ್ರು. ಯಾರೋ ಇದು ಅಂದ್ರೆ ಸಿಲ್ಲು ಅಂದ. ಸಿಲ್ಲು ಅಂದ್ರೆನೋ ಎಂದರೆ, ಸಿಸ್ಟರ್‌ ಇನ್‌ ಲಾ ಅಂದ. ಹಾಗಾಗಿ ಮೇಘನಾ ಅವರು ನನ್ನ ಬಿಲ್‌ ಅಂತ ಕರೀತಾರೆ. ಬಿಲ್‌ ಅಂದ್ರೆ ಬ್ರದರ್‌ ಇನ್‌ ಲಾ ಅಂತ. ನಾನು ಅತ್ತಿಗೆ ಸಿಲ್ಲು (ಮೇಘನಾ) ಬಗ್ಗೆ ಹೇಳಬೇಕು ಅಂದ್ರೆ ಅವ್ರು ತುಂಬಾ ಸ್ಟ್ರಾಂಗ್‌ ವುಮನ್‌. ನಾನು ನಮ್ಮಣ್ಣ ಬೋರ್ಡಿಂಗ್‌ನಲ್ಲೇ ಒಟ್ಟಿಗೆ ಇದ್ದಿದ್ದು. ಆದರೆ ದಿಢೀರನೆ ಮದುವೆ ಆದ ತಕ್ಷಣ ಎಲ್ಲಿ ನಮಗೆಲ್ಲ ಟೈಮ್‌ ಕೊಡೋದಿಲ್ವೋ ಅಂತೆಲ್ಲ ನಾನು ಸಿಕ್ಕಾಪಟ್ಟೆ ಪೊಸೆಸಿವ್‌ ಆಗಿದ್ದೆ" ಎಂದು ಧ್ರುವ ಹೇಳಿದ್ದಾರೆ.

"ಚಿರು ಆಗ ನನ್ನ ಕರೆದು ಹೇಳಿದ. ನಿನ್‌ ತಲೇಲಿ ಏನ್‌ ಓಡ್ತಿದೆ ಅನ್ನೋದು ಗೊತ್ತು. ಹಾಗೆಲ್ಲ ಏನಾಗಲ್ಲ, ಎಲ್ಲರಿಗೂ ಟೈಮ್‌ ಕೊಡ್ತೀನಿ, ಈಗ ತಾನೇ ಮದುವೆ ಆಗಿದೆ ಅಂದ. ಆ ಮೇಲೆ ಅಮ್ಮನಿಗೆ, ನನಗೆ ಇವರನ್ನ ಪರಿಚಯ ಮಾಡಿಸಿ ಅತ್ತಿಗೆ ಅಂದ್ರೆ ಎರಡನೇ ತಾಯಿ ಇದ್ದಂಗೆ ಕಣೋ ಅಂತ ಹೇಳಿದ್ದ. ಆದ್ರೆ ನಾನು ತಾಯಿ ಅಂತ ಕರೆಯೋಕಾಗಲ್ಲ, ಅದಕ್ಕೆ ಸಿಲ್‌ ಅಂತ ಕರೀತೀನಿ. ನಾನು ಯಾವಾಗ ಫೋನ್‌ ಮಾಡಿದ್ರು ಸಿಗ್ತಾರೆ. ಮೇಘನಾ ನನಗೆ ಅಕ್ಕನಿಗಿಂತಲೂ ಹೆಚ್ಚು" ಎಂದಿದ್ದಾರೆ ಧ್ರುವ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+