Rashmika Mandanna: 'ನಾಧಿವೆ' ಸಾಹಸ ನೃತ್ಯಗಳು ಭಾವನಾತ್ಮಕ ಕ್ಷಣ! ರಶ್ಮಿಕಾ ಸ್ಪೂರ್ತಿ ಸ್ಟಾರ್ ಎಂದ ದೀಕ್ಷಿತ್ ಶೆಟ್ಟಿ
Actress Rashmika Mandanna: ಪ್ರೇಕ್ಷರಿಗೆ ನೃತ್ಯ, ಸಂಗೀತದ ಮೂಲಕ ಹೊಸತನ ಉಣಬಡಿಸುತ್ತಿರುವ ನಿರ್ದೇಶಕ ರಾಹುಲ್ ರವಿಂದ್ರನ್ ಅವರ ನಿರ್ದೇಶನದ 'ದಿ ಗರ್ಲ್ ಫ್ರೆಂಡ್' ಸಿನಿಮಾ ಮೇಲೆ ಅಪಾರ ನಿರೀಕ್ಷೆಗಳು ಹುಟ್ಟಿವೆ. ಸಿನಿಮಾದ 'ನಾಧಿವೆ' ಹಾಡು ಪಂಚ ಭಾಷೆಗಳಲ್ಲಿ ಇತ್ತೀಚೆಗಷ್ಟೇ ರಿಲೀಸ್ ಆಗಿದೆ. ನಟಿ ರಶ್ಮಿಕಾ ಹಾಗೂ ನಟ ದೀಕ್ಷಿತ್ ಶೆಟ್ಟಿ ಅವರ ನೃತ್ಯ ಆಕರ್ಷಕವಾಗಿದೆ. ಈ ಹಾಡು, ನೃತ್ಯ ಕುರಿತು, ಕೋಸ್ಟಾರ್ ದೀಕ್ಷಿತ್ ಬರೆದುಕೊಂಡಿದ್ದಾರೆ. ನಟಿ ರಶ್ಮಿಕಾ ಇನ್‌ಸ್ಪಿರೇಷನ್ (ಸ್ಪೂರ್ತಿ) ಸ್ಟಾರ್ ಎಂದು ಬಣ್ಣಿಸಿದ್ದಾರೆ.
'ದಿ ಗರ್ಲ್‌ಫ್ರೆಂಡ್' ಚಿತ್ರದ ಮೊದಲ ಹಾಡು 'ನಾಧಿವೆ'ಯಲ್ಲಿ ರಶ್ಮಿಕಾ ಮತ್ತು ದೀಕ್ಷಿತ್ ಉತ್ಸಾಹ ನಟನೆ, ನೃತ್ಯ ಕಾಣಿಸುತ್ತದೆ. ಇದರ ಬಗ್ಗೆ ಅನುಭವ ಹಂಚಿಕೊಂಡಿರುವ ನಟ ದೀಕ್ಷಿತ್ ಶೆಟ್ಟಿ, ಭಾವನಾತ್ಮಕ ಕ್ಷಣಗಳ ಬಗ್ಗೆ ಸ್ಟೇಟಸ್ ಹಾಕಿಕೊಂಡಿದ್ದರು. 'ಒಂದು ಹಾಡಿಗಾಗಿ ವಿನ್ಯಾಸಗೊಳಿಸಿದ್ದ ಬೃಹತ್ ಸೆಟ್‌ನಲ್ಲಿ ನಾನು ಮೊದಲ ಬಾರಿಗೆ ನೃತ್ಯ ಮಾಡಿದ್ದೇನೆ'' ಎಂದಿರುವ ಅವರು ರಶ್ಮಿಕಾ ಜೊತೆಗಿನ ನೃತ್ಯ, ಫೋಟೋ ಹಂಚಿಕೊಂಡಿದ್ದರು. ಇಂದಿನ ಕ್ಷಣಗಳು ಹಲವು ನೆನಪುಗಳನ್ನು ಮರಳಿ ತಂದಿತು. ಇದೊಂದು ಸಣ್ಣ ರೋಲರ್‌ಕೋಸ್ಟರ್ ಸವಾರಿ... ಆದರೆ ಶಕ್ತಿಯುತವಾದದ್ದು ! ಎಂದಿದ್ದಾರೆ.

ಹಾಡಿನ ನೃತ್ಯ ಸುಲಭವಾಗಿರಲಿಲ್ಲ...!
ಸಿನಿಮಾದ ನಿರ್ದೇಶಕ ರಾಹುಲ್ ರವೀಂದ್ರನ್ ಅವರ ದೂರದೃಷ್ಟಿ ಚಿಂತನೆ ಇದೆ. ಸಿನಿಮಾ ವಿಚಾರದಲ್ಲಿ ಅವರು ಒಂದು ಪರಿಧಿ ಮೀರಿಯೇ ಯೋಚಿಸುತ್ತಾರೆ. ಅವರಿಗೆ ವಿಶೇಷ ಧನ್ಯವಾದಗಳು. ಗೀತಾ ಆರ್ಟ್ಸ್ ಜೊತೆಗೆ ನಿರ್ಮಾಪಕರಾದ ವಿದ್ಯಾಕೊಪ್ಪಿನೀಡಿ ಮತ್ತು ಧೀರಜ್ ಮೊಗಿಲಿನೇನಿ ಅವರ ಕೆಲಸವನ್ನು ಶ್ಲಾಘಿಸಿದರು. ಸಿನಿಮಾದಲ್ಲಿ ವಿಶೇಷವಾಗಿ ಈ ಹಾಡು, ನೃತ್ಯಕ್ಕೆ ಬೆಂಬಲಿಸಿದ್ದಾರೆ ಎಂದು ಅಭಿನಂದನೆ ತಿಳಿಸಿದರು.
ನಿಮಗೆ ಸರಳವೆಂಬಂತೆ ಕಾಣುವ ''ನಾಧಿವೆ' ಹಾಡಿನಲ್ಲಿ ಕಾಣುವ ನೃತ್ಯವನ್ನು ಮಾಡುವುದು ಸುಲಭವಾಗಿರಲಿಲ್ಲ. ಈ ನೃತ್ಯ ಕಷ್ಟಕರವಾಗಿತ್ತು. ನೃತ್ಯವನ್ನು ವಿಶ್ವಕಿರಣ್ ಅವರು ಮತ್ತು ತಂಡ ಸಂಯೋಜಿದೆ. ಚಿತ್ರೀಕರಣದ ಉದ್ದಕ್ಕೂ ಸಿಕ್ಕ ಪ್ರೋತ್ಸಾಹ, ಆ ಪಯತ್ನ ಅವಿಸ್ಮರಣಿಯ' ಎಂದರು.

ರಶ್ಮಿಕಾ ಇನ್‌ಸ್ಪಿರೇಷನ್ ಸ್ಟಾರ್: ದೀಕ್ಷಿತ್
ಇದೇ ವೇಳೆ ಕೋಸ್ಟಾರ್ ಬಗ್ಗೆ ಮಾತನಾಡಿರುವ ದೀಕ್ಷಿತ್, ಅತ್ಯಂತ ಹೃದಯಸ್ಪರ್ಶಿ ಹಾಡು-ನೃತ್ಯ ಕ್ಷಣಗಳು ಇವಾಗಿದ್ದರೂ ಸಹಿತ ಹೆಚ್ಚಿನ ಅಪಾಯಕಾರಿ ನೃತ್ಯ ಸಾಹಸಗಳು ಈ ಹಾಡಿನಲ್ಲಿವೆ. ನಟಿ ರಶ್ಮಿಕಾ ಮಂದಣ್ಣ ಅವರಿಗೆ ಸಾಹಸ ದೃಶ್ಯಗಳು ಮೀಸಲಾಗಿತ್ತು. ಅದೆಲ್ಲವನ್ನು ನನ್ನ ಮೇಲೆ ನಂಬಿಕೆ ಇಟ್ಟು ಮಾಡಿದ್ದಕ್ಕಾಗಿ ರಶ್ಮಿಕಾಗೆ ಧನ್ಯವಾದಗಳು...ಈ ನೃತ್ಯದಲ್ಲಿ ರಶ್ಮಿಕಾ ಅವರು ಅಕ್ಷರಶಃ ನೆಲದ ಮೇಲೆ ನಿಂತಿದ್ದಕ್ಕಿಂತ ಗಾಳಿಯಲ್ಲಿ ತೇಲಿದ್ದು ಹೆಚ್ಚು. ಈ ಬಗೆಯ ನೃತ್ಯಗಳನ್ನು ಅವರು ಅತೀ ಸೊಗಸಾಗಿ ಮಾಡಿದ್ದಾರೆ. ನೀವು ಈ ಕಾರಣಗಳಿಂದಾಗಿ ಸ್ಫೂರ್ತಿ ಸ್ಟಾರ್ ಆಗಿದ್ದೀರಿ ಎಂದು ರಶ್ಮಿಕಾ ಧೈರ್ಯ, ಸಮರ್ಪಣೆ ಭಾವವನ್ನು ದೀಕ್ಷಿತ್ ಹೊಗಳಿದರು.
10+ ಮಿಲಿಯನ್ ವೀಕ್ಷಣೆ
ಸದ್ಯ 'ನಾಧಿವೆ' ಹಾಡು 10 ಮಿಲಿಯನ್ಗೂ ಹೆಚ್ಚಿನ ವೀಕ್ಷಣ ಎಪಡೆದುಕೊಂಡಿದೆ. ಎಲ್ಲರು ಹಾಡಿನ ಸಂಗೀತದ ಜೊತೆಗೆ ನೃತ್ಯದ ಕುರಿತು ವಿಶೇಷವಾಗಿ ಮಾತನಾಡುತ್ತಿದ್ದಾರೆ. ಹಾಡು ಆನ್‌ಲೈನ್‌ನಲ್ಲಿ ಟ್ರೆಂಡಿಂಗ್ ಆಗುತ್ತಿದೆ. ಪ್ರೇಕ್ಷಕರಿಂದ ಸಿಕ್ಕ ಅಭೂತಪೂರ್ವ ಸ್ಪಂದನೆಗೆ ಚಿತ್ರತಂಡ, ನಟ ದೀಕ್ಷಿತ್ ಹರ್ಷ ವ್ಯಕ್ತಪಡಿಸಿದ್ದಾರೆ.












Click it and Unblock the Notifications