Actor Darshan: ನಟ ದರ್ಶನ್‌ ಸೀಕ್ರೇಟ್ ರಿವೀಲ್‌ ಮಾಡಿದ ಧನ್ವೀರ್

Actor Darshan Thoogudeep: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಇತ್ತೀಚೆಗಷ್ಟೇ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಜೈಲಿನಲ್ಲಿದಾಗಲೂ ಅವರ ಬೆನ್ನ ಹಿಂದೆ ಧೈರ್ಯವಾಗಿ ನಿಂತಿದ್ದು ಪತ್ನಿ ವಿಜಯಲಕ್ಷ್ಮಿ ಮತ್ತು ಕುಟುಂಬಸ್ಥರು. ಅದನ್ನು ಬಿಟ್ಟರೆ ರಾಮನ ಭಂಟ ಹನುಮಂತನಂತಿದ್ದ ಧನ್ವೀರ್ ಇದೀಗ ದರ್ಶನ್‌ ಅವರ ಸದ್ಯದ ಜೀವನದ ಸೀಕ್ರೇಟ್‌ವೊಂದನ್ನು ರಿವೀಲ್‌ ಮಾಡಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದಾಗಿನಿಂದಲೂ ದರ್ಶನ್‌ ಅವರನ್ನು ಹೊರಗಡೆ ತರಲು ಪತ್ನಿ ವಿಜಯಲಕ್ಷ್ಮಿ ಹಾಗೂ ಅವರ ಕುಟುಂಬಸ್ಥರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ವಿಜಯಲಕ್ಷ್ಮಿ ಅವರು ರಾಜ್ಯದ ಪ್ರಮುಖ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ವ್ರತಗಳನ್ನು ಮಾಡಿದ್ದರು. ಇದಕ್ಕೆ ತಕ್ಕ ಪ್ರತಿಫಲವೆಂಬಂತೆ ನಟ ದರ್ಶನ್‌ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾದರು.

Dhanveer Reveals the Secret About Actor Darshan s Current Life

ಇನ್ನೂ ದರ್ಶನ್‌ ಬಿಡುಗಡೆ ಆಗುವವರೆಗೂ ಧನ್ವೀರ್ ಅವರಿಗೆ ರಾಮನ ಭಂಟ ಹುಮಂತನಂತೆ ಬೆನ್ನೆಲುಬಾಗಿ ನಿಂತಿದ್ದರು. ಇದೀಗ ಧನ್ವೀರ್ ಗೌಡ ಅವರು ಸದ್ಯ ತಮ್ಮ ವಾಮನ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಕಾರ್ಯನಿರತರಾಗಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡುತ್ತಾ ನಟ ಧನ್ವೀರ್ ಗೌಡ ಅವರು, ನಟ ದರ್ಶನ್ ಸದ್ಯದ ಪರಿಸ್ಥಿತಿ ಹಾಗೂ ಜೀವನದ ಬಗ್ಗೆ ಕುತೂಹಲದ ಮಾತುಗಳನ್ನಾಡಿದ್ದಾರೆ.

ಇದೀಗ ಸದ್ಯ ನಟ ದರ್ಶನ್ ಅವರು ಸಂಪೂರ್ಣವಾಗಿ ಬದಲಾಗಿದ್ದಾರೆ. ಅವರಿಗೆ ಜೀವನದಲ್ಲಿ ಎಲ್ಲಾನೂ ಅರ್ಥ ಆಗಿದೆ. ಯಾರನ್ನು ಎಲ್ಲಿ ಇಡಬಕು, ಯಾರನ್ನು ಎಷ್ಟು ನಂಬಬೇಕು, ಯಾರು ತಮ್ಮಿಂದ ಉಪಯೋಗಪಡೆದುಕೊಂಡು ದೂರ ಆಗುತ್ತಾರೆ, ಯಾರು ಯಾವತ್ತೂ ಹತ್ತಿರ ಇರುತ್ತಾರೆ ಎನ್ನುವುದರ ಬಗ್ಗೆ ನಟ ದರ್ಶನ್ ಅವರಿಗೆ ಗೊತ್ತಾಗಿದೆ. ಆದ್ದರಿಂದ ಈಗ ಅವರು ವಿಭಿನ್ನವಾಗಿದ್ದಾರೆ. ಯಾರ ಜೊತೆ ಎಷ್ಟರಬೇಕೋ ಅಷ್ಟು ಮಾತ್ರ ಮಾತುಕತೆ ಆಡಿ ಹೋಗುತ್ತಾರೆ ಎಂದು ಹೇಳಿ ಗಮನ ಸೆಳೆದರು.

ನಟ ದರ್ಶನ್‌ ಅವರೀಗ ಸಂಪೂರ್ಣವಾಗಿ ಬದಲಾಗಿದ್ದಾರೆ. ಕಾರಣ, ಕಷ್ಟಕಾಲದಲ್ಲಿ ಆಗಿದ್ದು ಯಾರು, ಕೈ ಕೊಟ್ಟಿದ್ದು ಯಾರು ಎಲ್ಲವೂ ಅವರಿಗೆ ಓಗ ಅರ್ಥ ವಆಗಿದೆ. ಸದ್ಯ ಅವರ ಆರೋಗ್ಯ ಸಹ ಸರಿಯಿಲ್ಲ. ಆದ್ದರಿಂದ ಅವರು ಸದ್ಯ ಆರೋಗ್ಯ ಹಾಗೂ ಕೆಲಸದ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಹೊರಗಡೆ ಕಾರ್ಯಕ್ರಮಗಳಿಗೆ ಹೋಗುವುದು ಸದ್ಯಕ್ಕೆ ಅವರ ಆದ್ಯತೆ ಅಲ್ಲ ಎಂದು ಹೇಳಿದ್ದಾರೆ.

ಇದರ ಅರ್ಥ ನಟ ದರ್ಶನ್ ಸದ್ಯ ಸಾರ್ವಜನಿಕವಾಗಿ ಈ ಎಲ್ಲಾ ಕಾರಣಗಳಿಂದ ಕಾಣಿಸಿಕೊಳ್ಳುವುದಿಲ್ಲ. ಅಲ್ಲದೆ, ಅವರಿಗೆ ಜೀವನ ಹೊಸ ಪಾಠವನ್ನು ಕಲಿಸಿದೆ. ಅದರಂತೆತೇ ಅವರ ನಡೆ ಕೂಡ ಬದಲಾಗಿದೆ. ಹಾಗೂ, ಮಂದೆ ಕೂಡ ಸಂಪೂರ್ಣವಾಗಿ ಬದಲಾಗಲಿದೆ ಎಂದು ಹೇಳಿದ್ದಾರೆ ಎನ್ನಲಾಗುತ್ತಿದೆ.

ಮತ್ತೊಂದೆಡೆ ಪತಿ ದರ್ಶನ್‌ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ ಪತ್ನಿ ವಿಜಯಲಕ್ಷ್ಮಿ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ. ಆಗಾಗ ಉತ್ತಮ ಸಂದೇಶದ ಜೊತೆಗೆ ಪೋಸ್ಟರ್‌ಗಳನ್ನು ಹಂಚಿಕೊಳ್ಳುವ ಮೂಲಕ ಗಮನ ಸೆಳೆಯುತ್ತಿದ್ದಾರೆ.

ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ್ದಾನೆ ಎನ್ನುವ ಕಾರಣಕ್ಕೆ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿಯನ್ನು ಬೆಂಗಳೂರಿನ ಪಟ್ಟಣಗೆರೆ ಶೆಡ್‌ಗೆ ಕರೆದೊಯ್ದು ನಟ ದರ್ಶನ್‌ ಮತ್ತು ಗ್ಯಾಂಗ್‌ ಭೀಕರವಾಗಿ ಹಲ್ಲೆಗೈದು ಕೊಲೆ ಮಾಡಿತ್ತು ಎಂದು ಪೊಲೀಸ್‌ ದಾಖಲೆಗಳಲ್ಲಿ ಉಲ್ಲೇಖವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+