Darshan Thoogudeepa: ಪವಿತ್ರಾಗೌಡ ದರ್ಶನ್‌ನನ್ನು ಪ್ರೀತಿಯಿಂದ ಏನೆಂದು ಕರೆಯುತ್ತಿದ್ದಳು?-ರಿವೀಲ್ ಆಯ್ತು ಆ ಹೆಸರು
Darshan Thoogudeepa: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಮುಕ್ತಾಯದ ಹಂತಕ್ಕೆ ಬಂದು ತಲುಪಿದ್ದು, ಪೊಲೀಸರು ಈಗಾಗಗಲೇ ಚಾರ್ಜ್ ಶೀಟ್ ಸಲ್ಲಿಕೆಗೆ ಭರ್ಜರಿ ಸಿದ್ದತೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ನಡುವೆಯೇ ದರ್ಶನ್ ನ ಹಳೆಯ ಒಂದೊಂದೇ ವಿಡಿಯೋಗಳು ಇದೀಗ ಹೊರಬರುತ್ತಿವೆ. ಇನ್ನು ಹುಟ್ಬಬ್ಬದ ಆಚರಣೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾಗೌಡ & ಗ್ಯಾಂಗ್ ಜೈಲು ಸೇರಿದೆ. ಈ ಪ್ರಕರಣದ ತನಿಖೆ ಈಗಾಗಲೇ ಬಹುತೇಕ ಮುಗಿದಿದ್ದು, ಪೊಲೀಸರು ಮಹತ್ವದ ಸಾಕ್ಷ್ಯಗಳನ್ನು ಸಂಗ್ರಹ ಮಾಡಿದ್ದಾರೆ. ಹೈದರಾಬಾದ್‌ನಿಂದ ಬಂದ ಎಫ್‌ಎಸ್‌ಎಲ್ ರಿಪೋರ್ಟ್ ಸೇರಿದಂತೆ ಹಲವು ಪ್ರಮುಖ ಸಾಕ್ಷ್ಯಗಳನ್ನು ಚಾರ್ಜ್ ಶೀಟ್‌ನಲ್ಲಿ ಉಲ್ಲೇಖ ಮಾಡಲಿದ್ದಾರೆ. ಅಲ್ಲದೆ ಪವಿತ್ರಾ ಗೌಡಗೆ ಇದ್ದ ಎ1 ಆರೋಪಿ ಪಟ್ಟವನ್ನು ದರ್ಶನ್‌ಗೆ ಬಡ್ತಿ ನೀಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಪವಿತ್ರಾಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ್ದಾರೆ ಎಂಬ ಕಾರಣಕ್ಕೆ ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಬೆಂಗಳೂರಿನ ಪಟ್ಟಣಗೆರೆ ಶೆಡ್‌ಗೆ ಕರೆದುಕೊಂದು ಬಂದು ಆತನನ್ನು ದರ್ಶನ್ & ಗ್ಯಾಂಗ್ ಭೀಕರವಾನಿ ಹತ್ಯೆ ಮಾಡಿದೆ. ಇನ್ನೂ ಈ ವೇಳೆ ಹತ್ಯೆಗೆ ಯಾವೆಲ್ಲ ಉಪಕರಣಗಳನ್ನು ಬಳಸಿದ್ದರು ಹಾಗೂ ಯಾರೆಲ್ಲ ಇದ್ದರು ಎನ್ನುವ ಅಂಶಗಳನ್ನು ಕೂಡ ಚಾರ್ಚಜ್ ಶೀಟ್‌ನಲ್ಲಿ ಉಲ್ಲೇಖಿಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ವಿಡಿಯೋ ಭಾರೀ ವೈರಲ್: ಇದರ ನಡುವೆಯೇ ದರ್ಶನ್ ಹಾಗೂ ಪವಿತ್ರಾ ಗೌಡಳ ಹಳೆಯ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಪೈಕಿ ದರ್ಶನ್‌ನ್‌ನ್ನು ಪವಿತ್ರಾಗೌಡ ಏನೆಂದು ಕರೆಯುತ್ತಿದ್ದರು ಎಂದು ಕೇಕ್‌ನ ಮೇಲೆ ಬರೆಸಲಾಗಿದ್ದು, ಈ ವಿಡಿಯೋ ಇದೀಗ ಭಾರೀ ಸದ್ದು ಮಾಡುತ್ತಿದೆ. ಅಷ್ಟಕ್ಕೂ ಕೇಕ್‌ನ ಮೇಲೆ ಏನು ಬರೆಯಲಾಗಿದೆ ಎಂದು ಇಲ್ಲಿ ತಿಳಿಯಿರಿ.
ಕೇಕ್ ಮೇಲೆ ಬರೆಸಿದ್ದೇನು?: ಪವಿತ್ರಾಗೌಡ ದರ್ಶನ್‌ಗೆ ಪ್ರೀತಿಯಿಂದ ಸಿಬ್ಬ ಎಂದು ಕರೆಯುತ್ತಿದ್ದರು. ಅಷ್ಟೇ ಅಲ್ಲದೆ, ದರ್ಶನ್ ಹುಟ್ಟುಹಬ್ಬದ ದಿನದಂದು ಸುಬ್ಬಾ ಎಂದು ಕೇಕ್‌ನ ಮೇಲೆ ಬರೆಸಿ ತಂದಿದ್ದರು ಎನ್ನುವ ವಿಡಿಯೋವೊಂದು yekanth mb ಫೇಸ್‌ಬುಕ್ ಖಾತೆ.. RK Creative ಎಂಬ ಫೇಸ್‌ಬುಕ್ ಪೇಜ್‌ನಲ್ಲಿ ಹಂಚಿಕೊಳ್ಳಲಾಗಿದ್ದು, ಇದು ಭಾರೀ ವೈರಲ್ ಆಗುತ್ತಿದೆ.











Click it and Unblock the Notifications